Rahu Transit : ಈ ಮೂರು ರಾಶಿಯವರಿಗೆ ಬಂಪರ್ ಲಾಭ!

ಗ್ರಹಗಳ ಗೋಚಾರದಿಂದ ಕೆಲವು ರಾಶಿಯವರಿಗೆ ಸಂಕಷ್ಟವಾದರೆ ಮತ್ತೆ ಕೆಲವು ರಾಶಿಯವರು ಉತ್ತಮ ಫಲವನ್ನು ಪಡೆಯುತ್ತಾರೆ. ಈ ಬಾರಿಯ ರಾಹು ಗ್ರಹದ ರಾಶಿ ಪರಿವರ್ತನೆಯಿಂದ ಮೂರು ರಾಶಿಯ ವ್ಯಕ್ತಿಗಳಿಗೆ ಶುಭ ಪ್ರಾಪ್ತವಾಗುತ್ತದೆ ಎಂದು ಹೇಳಲಾಗುತ್ತದೆ.  ಮೂರು ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.

Rahu is going to give benefits to these 3 zodiac signs

ಪ್ರತಿ ಗ್ರಹಗಳು (Planet) ತಮ್ಮ ನಿಶ್ಚಿತ ಸಮಯಕ್ಕೆ ರಾಶಿ ಪರಿವರ್ತನೆ (Transit) ಹೊಂದುತ್ತವೆ. ಈ ಬಾರಿ ರಾಹು ಗ್ರಹವು ಇದೇ ಏಪ್ರಿಲ್ ತಿಂಗಳಿನಲ್ಲಿ ಮೇಷ (Aries) ಮತ್ತು ತುಲಾ (Libra) ರಾಶಿಗೆ (Zodiac) ಪ್ರವೇಶಿಸಿದೆ. ಇದರ ಪರಿಣಾಮವಾಗಿ ಅನೇಕ ರಾಶಿಗಳಿಗೆ ರಾಹುವಿನ (Rahu) ಕೆಟ್ಟ ಪರಿಣಾಮವನ್ನು (Effect) ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಪಾಪ ಗ್ರಹವೆಂದೇ ಕರೆಯಲಾಗುವ ರಾಹು ಗ್ರಹದಿಂದ ಲಾಭವೂ ಇದೆ ಎಂದು ಹೇಳಲಾಗುತ್ತದೆ.

ಹೌದು. ಪಾಪ ಗ್ರಹವೆಂದೇ ಕರೆಯಲಾಗುವ ರಾಹು ಗ್ರಹವು ಕೇವಲ ಕೆಟ್ಟ ಪರಿಣಾಮಗಳನ್ನು, ತೊಂದರೆ ತಾಪತ್ರಯಗಳನ್ನು ಮತ್ತು ಅಪಘಾತ (Accident) – ಅನಾರೋಗ್ಯ ಮುಂತಾದ ಕಷ್ಟಗಳನ್ನೇ ಕೊಡುವ ಗ್ರಹವೆಂದು ಹೇಳಲಾಗುತ್ತದೆ. ಈ ಬಾರಿ ರಾಹು ಗ್ರಹದ ರಾಶಿ ಪರಿವರ್ತನೆಯಿಂದಾಗಿ ಕೆಲ ರಾಶಿಯವರಿಗೆ ಕೆಟ್ಟದ್ದಾದರೆ ಮತ್ತೆ ಕೆಲ ರಾಶಿಯವರಿಗೆ ಉತ್ತಮ (Good) ಪರಿಣಾಮಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಕೇವಲ ಕೆಟ್ಟದ್ದನ್ನೇ ಮಾಡುವವನಾದ ರಾಹುಗ್ರಹವು ಈ ಬಾರಿ ಯಾವ್ಯಾವ ರಾಶಿಯವರಿಗೆ ಒಳಿತನ್ನು ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ...

ಮಿಥುನ ರಾಶಿ (Gemini) : ರಾಹು ಗ್ರಹವು ವೃಷಭ (Taurus) ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸಿದೆ. ಇದರ ಪರಿಣಾಮವಾಗಿ ಮಿಥುನ ರಾಶಿಯವರಿಗೆ ಉತ್ತಮ ಫಲಗಳು ದೊರೆಯುತ್ತವೆ ಎಂದು ಹೇಳಲಾಗುತ್ತದೆ. ಆರ್ಥಿಕ  ಪರಿಸ್ಥಿತಿ (Economic situation) ಮೊದಲಿಗಿಂತ ಅತ್ಯಂತ ಉತ್ತಮವಾಗಲಿದೆ. ಉದ್ಯೋಗ (Job) ಮತ್ತು ವ್ಯಾಪಾರದಲ್ಲಿ (Business) ಧನಲಾಭವಾಗುವ ಸಂಭವ ಹೆಚ್ಚಿರುತ್ತದೆ. ಆದಾಯದ (Income) ಮೂಲ ಹೆಚ್ಚುತ್ತದೆ. ಪ್ರಯಾಣಗಳಿಂದ ಉತ್ತಮ ಲಾಭ (Profit) ಸಿಗಲಿದೆ. ಕಾರ್ಯಸ್ಥಳದಲ್ಲಿ ಪ್ರಶಂಸೆಗೆ ಪಾತ್ರರಾಗುವ ಯೋಗವಿರುತ್ತದೆ. ಅಷ್ಟೇ ಅಲ್ಲದೆ ಹೆಚ್ಚಿಸ ಸಂಬಳ ಮತ್ತು ಬಡ್ತಿ ದೊರಕುವ ಸಾಧ್ಯತೆ ಇದೆ. ಮನೆಯಲ್ಲಿ ನೆಮ್ಮದಿ ಮತ್ತು ಸಂತೋಷ (Happy) ನೆಲೆಸಿರುತ್ತದೆ.

ಇದನ್ನು ಓದಿ : ವ್ಯಾಪಾರದಲ್ಲಿ ಸಕ್ಸಸ್ ಆಗಬೇಕೆಂದರೆ ಪಾಲಿಸಿ ಈ Vastu ಸೂತ್ರ!

ಕನ್ಯಾ ರಾಶಿ (Virgo) : ರಾಹು ಗ್ರಹದ ರಾಶಿ ಪರಿವರ್ತನೆಯು ಕನ್ಯಾ ರಾಶಿಯವರಿಗೂ ಸಹ ಲಾಭವನ್ನು ತಂದುಕೊಡುತ್ತದೆ ಎಂದು ಹೇಳಲಾಗುತ್ತದೆ. ಆರ್ಥಿಕವಾಗಿ ಹೆಚ್ಚಿನ ಬಲ ಬರಲಿದೆ. ಆರ್ಥಿಕ ಸ್ಥಿತಿ ಮತ್ತಷ್ಟು ಸುಧಾರಿಸಲಿದ್ದು, ಆದಾಯದ ಮೂಲ ಹೆಚ್ಚಲಿದೆ. ವಿದೇಶ (Foreign) ಪ್ರಯಾಣದ ಕನಸು ಕಂಡಿದ್ದರೆ ಈ ಬಾರಿ ರಾಹು ಗ್ರಹದ ಪ್ರಭಾವದಿಂದ ಈಡೇರಲಿದೆ. ರೋಗಗಳಿಂದ (Disease) ಮುಕ್ತಿ ದೊರೆಯಲಿದೆ. ಸಂಗಾತಿಯೊಂದಿಗಿನ (Partner) ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ.  ಮಕ್ಕಳ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರಗತಿ ಕಾಣಬಹುದಾಗಿದೆ.

ಇದನ್ನು ಓದಿ : Vastu Tips: ಮನೆ ನಿರ್ಮಾಣಕ್ಕೆ ಶುಭ ಮುಹೂರ್ತ ಯಾವುದು ಗೊತ್ತಾ?

ವೃಶ್ಚಿಕ ರಾಶಿ (Scorpio) : ರಾಹು ಗ್ರಹದ ಗೋಚಾರವು ವೃಶ್ಚಿಕ ರಾಶಿಯ ವ್ಯಕ್ತಿಗಳಿಗೆ ಲಾಭವನ್ನು ತಂದುಕೊಡಲಿದೆ. ಆದಾಯ ಹೆಚ್ಚಲಿದೆ ಅಷ್ಟೇ ಅಲ್ಲದೆ ಉನ್ನತ ಪದವಿ ಪ್ರಾಪ್ತವಾಗಲಿದೆ. ಅಷ್ಟೇ ಅಲ್ಲದೆ ಎಲ್ಲ ಕೆಲಸಗಳಲ್ಲೂ ಸಫಲತೆ (Success) ದೊರಕಲಿದೆ. ಕಾರ್ಯಸ್ಥಳದಲ್ಲಿನ ಸಮಸ್ಯೆಗಳು ನಿವಾರಣೆಯಾಗಲಿವೆ. ತುಂಬಾ ಸಮಯದಿಂದ ಉದ್ಯೋಗವನ್ನು ಅರಸುತ್ತಿರುವವರಿಗೆ ಒಳ್ಳೆಯ ಉದ್ಯೋಗ ಸಿಗುವ ಯೋಗ ಈಗ ಕೂಡಿ ಬರಲಿದೆ. ಒಳ್ಳೆಯ ಪದವಿ ಪ್ರಾಪ್ತವಾಗಲಿದೆ. ಈ ಬಾರಿ ರಾಹು ಗೋಚಾರದಿಂದ ಅದೃಷ್ಟದ (Luck) ಸಾಥ್ ಈ ರಾಶಿಯವರ ಜೊತೆಗಿರಲಿದೆ.

ಯಾವ್ಯಾವ ರಾಶಿಯವರಿಗೆ ಕಾದಿದೆ ಸಂಕಷ್ಟ (Difficulties) 
ರಾಹು ಗ್ರಹದ ರಾಶಿ ಪರಿವರ್ತನೆಯಿಂದ ಐದು (Five) ರಾಶಿಯ ವ್ಯಕ್ತಿಗಳು ಜಾಗರೂಕರಾಗಿರುವುದು ಉತ್ತಮ. ಅವುಗಳಾದ ಮೇಷ, ತುಲಾ, ಧನು, ಮಕರ ಮತ್ತು ಕುಂಭ ರಾಶಿಯ ವ್ಯಕ್ತಿಗಳಿಗೆ ಈ ಪರಿವರ್ತನೆಯ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ. ಹಾಗಾಗಿ ಅದರ ನಿವಾರಣೆಗೆ ರಾಹುಗೆ ಸಂಬಂಧಿಸಿದ ಮಂತ್ರಗಳನ್ನು ಮತ್ತು ಶಿವ ಪಂಚಾಕ್ಷರಿ ಮಂತ್ರವನ್ನು ಹೇಳಿಕೊಳ್ಳುವುದು ಉತ್ತಮ.

Latest Videos
Follow Us:
Download App:
  • android
  • ios