Hanuman Jayanti: ಇಂದು ಅಂಜನಾದ್ರಿ ಬೆಟ್ಟದಲ್ಲಿ ವೈಭವದ ಹನುಮ ಜಯಂತಿ

*  40 ಸಾವಿರಕ್ಕೂ ಹೆಚ್ಚು ಭಕ್ತರಿಂದ ಹನುಮಮಾಲೆ ವಿಸರ್ಜನೆ ನಿರೀಕ್ಷೆ
*  ಪೊಲೀಸ್‌ ಬಿಗಿ ಭದ್ರತೆ
*  ಭಕ್ತರಿಗೆ ಪ್ರಸಾದದ ವ್ಯವಸ್ಥೆ 

Hanuman Jayanti Will Be Celebrate on April 16th Anjanadri Hill in Koppal grg

ರಾಮಮೂರ್ತಿ ನವಲಿ

ಗಂಗಾವತಿ(ಏ.16):  ತಾಲೂಕಿನ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದ(Anjadri Hill) ಆಂಜನೇಯಸ್ವಾಮಿ ದೇವಸ್ಥಾನದಲ್ಲಿ(Anjaneyaswamy Temple) ಏ. 16ರಂದು ಹನುಮ ಜಯಂತ್ಯುತ್ಸವ ಅದ್ಧೂರಿಯಾಗಿ ನಡೆಯುತ್ತಿದ್ದು, ವಿವಿಧ ಜಿಲ್ಲೆಗಳಿಂದ 40 ಸಾವಿರಕ್ಕೂ ಹೆಚ್ಚು ಹನುಮ ಮಾಲಾಧಾರಿಗಳು ಆಗಮಿಸುವ ನಿರೀಕ್ಷೆ ಇದೆ. ತಾಲೂಕು ಆಡಳಿತ ಮತ್ತು ಪೊಲೀಸ್‌ ಇಲಾಖೆ ಸಕಲ ಸಿದ್ಧತೆ ಕೈಗೊಂಡಿದೆ. ಕಳೆದ ಮೂರು ದಿನಗಳ ಹಿಂದೆ ಹನುಮ ಜಯಂತಿ ಅಂಗವಾಗಿ ಕಾಶಿ, ಅಯೋಧ್ಯೆ, ವಾರಣಾಸಿ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಂದ ಆಗಮಿಸಿದ್ದ ಸಾಧು- ಸಂತರು ಋುಷಿಮುಖ ಬೆಟ್ಟದಿಂದ ಅಂಜನಾದ್ರಿಯ ವರೆಗೆ ಕುಂಭ ಮೆರವಣಿಗೆ ಮಾಡಿ ಕುಂಭದಲ್ಲಿ ತಂದಿದ್ದ ತುಂಗಭದ್ರೆಯ ಜಲದಿಂದ ಹನುಮನ ಮೂರ್ತಿಗೆ ಜಲಾಭಿಷೇಕ ಮಾಡಿದರು.

ಶನಿವಾರ ಹನುಮ ಜಯಂತಿ(Hanuma Jayanyti) ಅಂಗವಾಗಿ ದೇವಸ್ಥಾನದ ಮುಂಭಾಗದಲ್ಲಿ ಪವಮಾನ ಹೋಮ ಸೇರಿದಂತೆ ವಿವಿಧ ಹೋಮಗಳು, ಅಭಿಷೇಕ ಸೇರಿದಂತೆ ಸಂಕೀರ್ತನೆ ನಡೆಯಲಿದೆ. ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಕೊರೋನಾ ಹಿನ್ನೆಲೆ ಅದ್ಧೂರಿ ಹನುಮ ಜಯಂತಿ ಆಚರಣೆಗೆ ನಿಯಂತ್ರಣ ಹೇರಲಾಗಿತ್ತು. ಈಗ ಕೊರೋನಾ ನಿಯಂತ್ರಣದಲ್ಲಿ ಇರುವುದರಿಂದ ಅದ್ಧೂರಿ ಹನುಮ ಜಯಂತಿಗೆ ಭಕ್ತರು(Devotees) ಮುಂದಾಗಿದ್ದಾರೆ.

Koppal: ಹನುಮ ಮಾಲೆ ಧರಿಸಿ ವ್ರತ ಕೈಗೊಂಡ ಮುಸ್ಲಿಂ ಯುವಕ

ಮುಕ್ತ ಅವಕಾಶ:

ಅಂಜನಾದ್ರಿ ಬೆಟ್ಟಕ್ಕೆ ತೆರಳಲು ಭಕ್ತರಿಗೆ ತಾಲೂಕು ಆಡಳಿತ ಮತ್ತು ಪೊಲೀಸ್‌(Police) ಇಲಾಖೆ ಮುಕ್ತ ಅವಕಾಶ ಕಲ್ಪಿಸಿದೆ. ಯಾವುದೇ ನಿರ್ಬಂಧ ಇಲ್ಲದೆ ನೇರವಾಗಿ ಆಯಾ ಜಿಲ್ಲೆಗಳಿಂದ ಬರುವ ಭಕ್ತರು ಅಂಜನಾದ್ರಿ ಬೆಟ್ಟಏರಲು ಆನೆಗೊಂದಿ-ಮುನಿರಾಬಾದ್‌ ಮಾರ್ಗವಾಗಿ ಹೋಗಲು ಅವಕಾಶ ನೀಡಿದೆ. ಬೆಟ್ಟ ಏರಲು ಇಕ್ಕಟ್ಟಾದ ಮಾರ್ಗ ಇರುವುದರಿಂದ ಭಕ್ತರು ನಿಧಾನವಾಗಿ ಬೆಟ್ಟ ಏರಿ ದರ್ಶನ ಪಡೆದ ನಂತರ ಚಿಕ್ಕರಾಂಪುರ ಮಾರ್ಗವಾಗಿ ತೆರಳಲು ಅವಕಾಶ ನೀಡಿದೆ. ಚಿಕ್ಕರಾಂಪುರ ಸನಿಹದಲ್ಲಿ ಬರುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ.

ಹನುಮ ಮಾಲಾಧಾರಿಗಳು(Hanuma Maladhari) ನೇರವಾಗಿ ಬೆಟ್ಟಕ್ಕೆ ತೆರಳಿ ಮಾಲಾ ವಿಸರ್ಜನೆ ಮಾಡಲು ಸೂಚಿಸಿದೆ. ಈ ಬಾರಿ ಅಂಜನಾದ್ರಿ ಬೆಟ್ಟದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಮಾಲೆ ವಿಸರ್ಜನೆ ಮಾಡುತ್ತಿದ್ದು, ಕಟ್ಟುನಿಟ್ಟಿನ ಕ್ರಮಕ್ಕೆ ತಾಲೂಕು ಆಡಳಿತ ಮುಂದಾಗಿದೆ.

ಪೊಲೀಸ್‌ ಬಿಗಿ ಭದ್ರತೆ:

ಶಾಂತಿ ಸೂವ್ಯಸ್ಥೆಗಾಗಿ ಪೊಲೀಸ್‌ ಇಲಾಖೆ 200ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿದೆ. ಐಆರ್‌ಬಿ 3 ತುಕಡಿ, ಕೆಎಸ್‌ಆರ್‌ಪಿ 3, ಡಿಆರ್‌ಪಿ 6, ಪಿಎಸ್‌ಐ 20 ಅಧಿಕಾರಿಗಳು, ಡಿವೈಎಸ್ಪಿ 1 ಹಾಗೂ 200ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ವಾಹನಗಳ ನಿಲುಗಡೆಗೆ ಮುನಿರಾಬಾದ್‌, ಸಣ್ಣಾಪುರ ಮತ್ತು ಪಂಪಾ ಸರೋವರ ಬಳಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ.

ಹರಿಹರಪುರ ಕುಂಭಾಭಿಷೇಕಕ್ಕೆ ಶುಭಕೋರಿ ಸೌಹಾರ್ದತೆ ತೋರಿದ ಮುಸ್ಲಿಂ ಬಾಂಧವರು

ಅಂಜನಾದ್ರಿ ಬೆಟ್ಟದಲ್ಲಿ ಹನುಮ ಜಯಂತಿ ಅಂಗವಾಗಿ ಮಾಲಾಧಾರಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಭಕ್ತರಿಗೆ ವೇದಪಾಠಾ ಶಾಲೆಯ ಬಳಿ ಪ್ರಸಾದ ಮತ್ತು ಪಂಚಾಮೃತ ವ್ಯವಸ್ಥೆ ಕೈಗೊಳ್ಳಲಾಗಿದೆ. ಬೆಟ್ಟಏರಲು ಮತ್ತು ಇಳಿಯಲು ಒನ್‌ ವೇ ಮಾಡಲಾಗಿದೆ ಅಂತ ಗಂಗಾವತಿ ತಹಸೀಲ್ದಾರ್‌ ನಾಗರಾಜ ತಿಳಿಸಿದ್ದಾರೆ. 

ಅಂಜನಾದ್ರಿ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವ ಹಿನ್ನೆಲೆ 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲಾಗಿದೆ. ಪಾರ್ಕಿಂಗ್‌ ವ್ಯವಸ್ಥೆ ಸೇರಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಅಂತ ಗಂಗಾವತಿ ಡಿವೈಎಸ್ಪಿ, ರುದ್ರೇಶ ಉಜ್ಜನಕೊಪ್ಪ ಹೇಳಿದ್ದಾರೆ.  
 

Latest Videos
Follow Us:
Download App:
  • android
  • ios