ನಾಗರ ಪಂಚಮಿ: ಹಾವುಗಳ ಕುರಿತ ಈ ವಿಷ್ಯ ಕೇಳಿದ್ರೆ ಅಚ್ಚರಿ ಪಡ್ತೀರಾ..
ಹಾವಿಗೆ ಎಷ್ಟು ಕಾಲುಗಳಿವೆ ಗೊತ್ತಾ? ಹಾವಿನ ವಯಸ್ಸು ಎಷ್ಟು? ಹಾವುಗಳಿಗೆ ಎಷ್ಟು ಮರಿಗಳು? ಇಂದು ಹಾವುಗಳಿಗೆ ಸಂಬಂಧಿಸಿದ ಕೆಲವು ರಹಸ್ಯಗಳನ್ನು ಹೇಳಲಿದ್ದೇವೆ, ಅದರ ಬಗ್ಗೆ ಭವಿಷ್ಯ ಪುರಾಣದಲ್ಲಿ ಮಾಹಿತಿಯನ್ನು ನೀಡಲಾಗಿದೆ.
ನಾಗಪಂಚಮಿ ಎಂದರೆ ಶ್ರಾವಣದ ಹಬ್ಬಗಳ ಸರಮಾಲೆಯ ಆರಂಭ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಅಣ್ಣ ತಂಗಿಯರ ಹಬ್ಬವೆಂದೇ ಜನಜನಿತವಾಗಿರುವ ನಾಗಪಂಚಮಿಯು ಈ ಬಾರಿ ಆಗಸ್ಟ್ 2ರಂದು ಬರುತ್ತಿದೆ. ನಾಗಪಂಚಮಿಯ ದಿನ ದೇವಾಲಯಗಳಲ್ಲಿ ನಾಗರಕಲ್ಲಿಗೆ ಹಾಲೆರೆದು ಪೂಜಿಸಲಾಗುತ್ತದೆ. ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ. ಭಕ್ತರು ಈ ದಿನ ಉಪವಾಸ ಆಚರಿಸುತ್ತಾರೆ.
ಸರ್ಪಗಳನ್ನು ಕೂಡಾ ದೇವರೆಂದು ಪೂಜಿಸುವವರು ನಾವು. ಪುರಾಣಗಳಲ್ಲಿ ಸರ್ಪಗಳಿಗೆ ವಿಶೇಷ ಸ್ಥಾನವಿದೆ. ಸರ್ಪವು ಶಿವನ ಕೊರಳಲ್ಲೂ ಇದೆ, ಗಣಪತಿಯ ಹೊಟ್ಟೆಯನ್ನೂ ಬಿಗಿದಪ್ಪಿದೆ. ವಿಷ್ಣುವಂತೂ ಮಂಚದಂತೆ ಮಲಗುವುದೇ ನಾಗನ ಮೇಲೆ. ಆತನ ಅತ್ಯಾಪ್ತ ಈ ಶೇಷ. ಇನ್ನು ಪಾತಾಳ ಲೋಕದ ಕತೆಗಳಿಗೆ ನಮ್ಮಲ್ಲಿ ಬರವೇ ಇಲ್ಲ. ಅವೆಲ್ಲವೂ ಹಾವುಗಳಿಗೆ ಸಂಬಂಧಿಸಿದವೇ ಆಗಿವೆ. ನಾಗರಪಂಚಮಿಗೂ ಮುನ್ನ ಭವಿಷ್ಯ ಪುರಾಣದಲ್ಲಿ ವಿವರಿಸಲಾದ ಹಾವುಗಳಿಗೆ ಸಂಬಂಧಿಸಿದ ಇನ್ನೂ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ತಿಳಿಯೋಣ. ಈ ಭವಿಷ್ಯ ಪುರಾಣವು ಹ18 ಪುರಾಣಗಳಲ್ಲೊಂದಾಗಿದ್ದು, ಸಂಸ್ಕೃತದಲ್ಲಿದೆ.
1. ಭವಿಷ್ಯ ಪುರಾಣದ ಪ್ರಕಾರ, ಮಳೆಗಾಲದ ನಾಲ್ಕು ತಿಂಗಳು ಹಾವುಗಳು(Snakes) ಗರ್ಭ ಧರಿಸುತ್ತವೆ. ಕಾರ್ತಿಕ ಮಾಸದಲ್ಲಿ, ಹಾವುಗಳು ಸುಮಾರು ಇನ್ನೂರ ನಲವತ್ತು ಮೊಟ್ಟೆಗಳನ್ನು ಇಡುತ್ತವೆ, ಅವುಗಳಲ್ಲಿ ಕೆಲವು ಪ್ರತಿದಿನ ತಮ್ಮ ಮೊಟ್ಟೆಯನ್ನು ತಾವೇ ತಿನ್ನುತ್ತವೆ. ಅಲ್ಲೊಂದು ಇಲ್ಲೊಂದು ಮೊಟ್ಟೆಗಳು(eggs) ಮಾತ್ರ ಮರಿಯಾಗಿ ಬದುಕುತ್ತವೆ.
ಭಾರತದಲ್ಲಿ ಗೋಚರವಾಗಲಿರುವ ವರ್ಷದ ಮೂರನೇ ಗ್ರಹಣ, ಯಾವಾಗ ಗೊತ್ತಾ?
2. ಚಿನ್ನದಂತೆ ಹೊಳೆಯುವ ಹಾವುಗಳ ಮೊಟ್ಟೆಗಳಲ್ಲಿ ಗಂಡು, ಉದ್ದವಾದ ಗೆರೆಗಳಿರುವ ಮೊಟ್ಟೆಗಳಲ್ಲಿ ಹೆಣ್ಣು ಹಾವುಗಳಿರುತ್ತವೆ. ಹಾವು ಈ ಮೊಟ್ಟೆಗಳಿಗೆ ಆರು ತಿಂಗಳ ಕಾಲ ಕಾವು ಕೊಡುತ್ತದೆ. ಅದರ ನಂತರ ಹಾವುಗಳು ಹೊರ ಬರುತ್ತವೆ.
3. ಹಾವಿನ ಜೀವನವು ನೂರ ಇಪ್ಪತ್ತು ವರ್ಷಗಳವರೆಗೆ ಇರುತ್ತದೆ. ಅವುಗಳಿಗೆ ನವಿಲು, ಮನುಷ್ಯ, ಚಕೋರ ಪಕ್ಷಿ, ಬೆಕ್ಕು, ನಕುಲ, ಹಂದಿ, ಚೇಳು, ಹಸು, ಎಮ್ಮೆ, ಕುದುರೆ, ಒಂಟೆ ಇತ್ಯಾದಿಗಳಿಂದ ಎಂಟು ವಿಧದ ಸಾವುಗಳು ಸಂಭವಿಸಬಹುದು.
4. ಹಾವಿನ ಮೊಟ್ಟೆಯಿಂದ ಹೊರಬಂದ ಏಳು ದಿನಗಳ ನಂತರ ಹಾವಿನ ಹಲ್ಲುಗಳು ಬೆಳೆದು 21 ದಿನಗಳ ನಂತರ ವಿಷ(venom)ವು ಹಲ್ಲುಗಳಲ್ಲಿ ಬರುತ್ತದೆ. ಹಾವಿನೊಂದಿಗೆ ಚಲಿಸುವ ಹಾವನ್ನು ಬಾಲ ಹಾವು ಎಂದು ಕರೆಯಲಾಗುತ್ತದೆ. ಇಪ್ಪತ್ತೈದು ದಿನಗಳಲ್ಲಿ ಆ ಬಾಲ ಹಾವು ಇತರ ಜೀವಿಗಳ ಪ್ರಾಣ ತೆಗೆಯುವ ಸಾಮರ್ಥ್ಯ ಹೊಂದುತ್ತದೆ. ಆರು ತಿಂಗಳ ನಂತರ, ಹಾವು ಪೊರೆಯನ್ನು ಕಳಚುತ್ತದೆ.
5. ಹಾವಿಗೆ ಎಷ್ಟು ಕಾಲುಗಳಿವೆ ಗೊತ್ತಾ? ಇದನ್ನು ಭವಿಷ್ಯ ಪುರಾಣದಲ್ಲಿಯೂ ವಿವರಿಸಲಾಗಿದೆ. ಹಾವಿಗೆ ಇನ್ನೂರು ಕಾಲುಗಳಿವೆ. ಆದರೆ, ಆ ಕಾಲುಗಳು ತುಂಬಾ ಚಿಕ್ಕದಾಗಿದೆ. ಆದ್ದರಿಂದ ಕಾಣಿಸುವುದಿಲ್ಲ. ಹಾವು ಚಲಿಸಿದಾಗ, ಅದು ಹೊರಬರುತ್ತದೆ ಮತ್ತು ಉಳಿದ ಸಮಯದಲ್ಲಿ ಒಳಗೆ ಇರುತ್ತದೆ.
Name Astrology: ಈ ಹೆಸರಿನ ಹುಡುಗೀರು ಸಾಧಿಸ್ತಾರೆ ಗಂಡನ ಮೇಲೆ ಪ್ರಾಬಲ್ಯ
6. ಸಮಯ ಪೂರ್ಣಗೊಳ್ಳದೆ ಹುಟ್ಟಿದ ಹಾವುಗಳ ವಿಷವು ಕಡಿಮೆ ಇರುತ್ತದೆ ಮತ್ತು ಅವುಗಳ ಆಯುಷ್ಯವೂ ಚಿಕ್ಕದಾಗಿದೆ. ಅಂಥ ಹಾವುಗಳು 45 ವರ್ಷಗಳವರೆಗೆ ಮಾತ್ರ ಬದುಕಬಲ್ಲವು. ಹಲ್ಲುಗಳು ಕೆಂಪು, ಹಳದಿ, ಬಿಳಿ ಇದ್ದು, ವಿಷದ ವೇಗವು ನಿಧಾನವಾಗಿರುತ್ತದೆ. ಅವು ಅಲ್ಪಾಯುಷ್ಯದವೂ, ತುಂಬಾ ಅಂಜುಬುರುಕವೂ ಆಗಿರುತ್ತವೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.