ಮಕ್ಕಳ ಓದಿನ ಪ್ರಗತಿಗೆ Vastu Tips

ಮಕ್ಕಳ ಓದಿನ ಬಗ್ಗೆ ಪೋಷಕರಿಗೆ ಚಿಂತೆ ಇದ್ದೇ ಇರುತ್ತದೆ. ಅವರು ಜೀವನದಲ್ಲಿ ಒಳ್ಳೇ ಹೆಸರನ್ನು ಮಾಡಬೇಕೆಂಬ ಕನಸು ಕಂಡಿರುತ್ತಾರೆ. ಅದಕ್ಕಾಗಿ ಕಷ್ಟಪಟ್ಟು ಓದಿಸುತ್ತಾರೆ ಕೂಡ. ಆದರೆ, ಕೆಲವೊಮ್ಮೆ ಮಕ್ಕಳಿಗೆ ಓದು ತಲೆಗೆ ಹತ್ತುವುದಿಲ್ಲ. ಇದಕ್ಕೆ ವಾಸ್ತು ದೋಷವೂ ಒಂದು ಕಾರಣವಾಗಿರುತ್ತದೆ. ಹಾಗಾಗಿ ಮನೆಯಲ್ಲಿ ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳಿ...

Vastu tips for childrens education and progress

ಪ್ರತಿಯೊಬ್ಬ ಪೋಷಕರಿಗೆ (Parent) ತಮ್ಮ ಮಕ್ಕಳ ಓದಿನ ಚಿಂತೆ ಇದ್ದೇ ಇರುತ್ತದೆ. ಎಷ್ಟೇ ಪ್ರಯತ್ನಪಟ್ಟರೂ ತಮ್ಮ ಮಕ್ಕಳು ಓದಿನಲ್ಲಿ (Reading) ಚುರುಕಿಲ್ಲ ಎಂಬ ಕೊರಗು ಕಾಡುವವರು ಸಹ ಸಾಕಷ್ಟು ಇದ್ದಾರೆ. ಮಕ್ಕಳ ಓದಿಗಾಗಿ ಅವರು ಮಾಡದ ಖರ್ಚುವೆಚ್ಚಗಳಿಲ್ಲ, ದೇವರಲ್ಲಿ (God) ಹರಕೆ ಕಟ್ಟಿಕೊಳ್ಳದೆಯೂ ಇರುವುದಿಲ್ಲ. ಇಷ್ಟಾದರೂ ಅವರ ಓದಿನಲ್ಲಿ ಪ್ರಗತಿ ಕಾಣುವುದಿಲ್ಲ. 

ಇನ್ನು ಕೆಲವು ಸಂದರ್ಭದಲ್ಲಿ ಮಕ್ಕಳಿಗೆ ಎಷ್ಟೇ ಹೇಳಿದರೂ ಪುಸ್ತಕವನ್ನೇ (Book) ಹಿಡಿಯುವುದಿಲ್ಲ. ಒಮ್ಮೆ ಪುಸ್ತಕವನ್ನು ಹಿಡಿದು ಕುಳಿತರೂ ಗಮನಕೊಟ್ಟು ಓದುತ್ತಿಲ್ಲ ಎಂಬ ಸಮಸ್ಯೆ. ಇದಕ್ಕೆ ಹಲವಾರು ಕಾರಣಗಳಿದ್ದರೂ ವಾಸ್ತು ದೋಷ (Vastu Dosha) ಸಹ ಒಂದು ಕಾರಣ ಆಗಿರಬಹುದು. ಮಗುವಿನ ಪ್ರತಿ ಚಟುವಟಿಕೆಯಲ್ಲಿಯೂ ವಾಸ್ತುವಿನ ಪ್ರಭಾವ ಇದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. 

ಮಕ್ಕಳು ಶ್ರಮ ವಹಿಸಿದರೂ ಸಿಗದ ಫಲ
ತಮ್ಮ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ (Study) ಕಲಿತು ಜೀವನದಲ್ಲಿ ಹೆಸರು ಮಾಡಬೇಕು. ಒಳ್ಳೇ ನೌಕರಿ ಪಡೆಯಬೇಕೆಂಬ ಕನಸು ಪ್ರತಿ ತಂದೆ – ತಾಯಿಗಳಿಗೆ (Father and Mother) ಇರುತ್ತದೆ. ಇದಕ್ಕೆ ತಕ್ಕಂತೆ ಒಳ್ಳೇ ಶಾಲೆಗಳಿಗೆ (School) ಸೇರಿಸುವುದು, ಟ್ಯೂಶನ್ ಕೊಡಿಸುವುದು ಎಲ್ಲವನ್ನೂ ಮಾಡುತ್ತಾರೆ. ಮಕ್ಕಳು ಸಹ ನಿರಂತರವಾಗಿ ಓದಿಕೊಳ್ಳುತ್ತಲೇ ಇದ್ದರೂ ಅಷ್ಟಾಗಿ ಪ್ರಗತಿ ಕಾಣುತ್ತಿಲ್ಲವಾದರೆ ಮನೆಯಲ್ಲಿ ಕೆಲವು ಬದಲಾವಣೆಯನ್ನು ಮಾಡಿಕೊಳ್ಳಬೇಕು. ವಾಸ್ತುವಿನ ಪ್ರಕಾರ ನಡೆದುಕೊಂಡರೆ ತಾಪತ್ರಯಗಳು ನಿವಾರಣೆಯಾಗಿ ಮಕ್ಕಳ ಓದಿನಲ್ಲಿ ಪ್ರಗತಿಯನ್ನು ಕಾಣಬಹುದಾಗಿದೆ. ಹಾಗಾದರೆ ನೀವೇನು ಮಾಡಬೇಕು ಎಂಬುದನ್ನು ನೋಡೋಣ ಬನ್ನಿ.

ಇದನ್ನು ಓದಿ: Chanakya Neeti: ಇಂಥ ಸಂಗಾತಿ ಇದ್ದರೆ ದುರದೃಷ್ಟವೂ ಅದೃಷ್ಟವಾಗುತ್ತೆ..

ಸೂರ್ಯನ ಕಿರಣ ಬರುವಂತಿರಲಿ (ಸೂರ್ಯನ ಕಿರಣ ಬರುವಂತಿರಲಿ) 
ಮಕ್ಕಳು ಮುಂಜಾನೆ ಎದ್ದು ಓದಿದರೆ ಚೆನ್ನಾಗಿ ತಲೆಯೊಳಗೆ ಕೂರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಮಕ್ಕಳು ಓದುವ ಕೊಠಡಿಯೊಳಗೆ ಸೂರ್ಯನ ಕಿರಣಗಳು ತಾಕುವಂತಿರಬೇಕು. ಹಾಗಾಗಿ ಕಿಟಕಿಗಳನ್ನೂ  (Window) ತೆರೆದಿಡಬೇಕು. ಸೂರ್ಯನ ಸಕಾರಾತ್ಮಕ (Positive) ಶಕ್ತಿಯು ಮಕ್ಕಳ ಓದಿಗೆ ಸಹಕರಿಸುತ್ತದೆ. 

ಈ ದಿಕ್ಕಿನಲ್ಲಿರಲಿ ಮಕ್ಕಳ ಕೋಣೆ (Children Room)
ಮಕ್ಕಳು ಮಲಗುವ ಕೋಣೆ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿದ್ದರೆ (In the direction of east, north or northeast)  ಓದಿನಲ್ಲಿ ಮಕ್ಕಳು ಚುರುಕಾಗಿರುತ್ತಾರೆ. ಈ ದಿಕ್ಕಿನಲ್ಲಿ ಮಕ್ಕಳ ಕೋಣೆ ಇದ್ದರೆ, ಸೂರ್ಯ, ಬುಧ ಮತ್ತು ಗುರು ಗ್ರಹದ ಕೃಪೆಗೆ ಮಕ್ಕಳು ಪಾತ್ರರಾಗುತ್ತಾರೆ.

ಹಸಿರು ಬಣ್ಣ 
ಮಕ್ಕಳು ಚಂಚಲ ಮನಸ್ಥಿತಿಯುಳ್ಳವರಾಗಿದ್ದರೆ, ಓದಲು ಸೋಮಾರಿತನ ಮಾಡುತ್ತಿದ್ದರೆ ಅಂತಹ ಮಕ್ಕಳ ಕೊಠಡಿಗೆ ಹಸಿರು ಬಣ್ಣ (Green Color) ಬಳಿಯಬೇಕು. ಕೊಠಡಿಯನ್ನು ಬಿಳಿ ಬಣ್ಣದಿಂದ (White color) ಪೇಂಟಿಂಗ್ ಮಾಡಿದ್ದರೆ ಮಕ್ಕಳು ಆಯಾಸ ಹೊಂದಿರುವಂತೆ ಕಾಣುತ್ತಾರೆ. 

ಈ ಫೋಟೋ ಬೇಡ
ಮಕ್ಕಳ ಓದಿಗೆ ಸಂಬಂಧಪಡದ ಫೋಟೋಗಳು (Photo) ಅವರ ರೂಮಿನಲ್ಲಿರಬಾರದು. ಅಲ್ಲದೆ, ಹಳೆಯ ಫೋಟೋಗಳಿದ್ದರೆ ತೆಗೆಯುವುದು ಒಳಿತು. ಕಾರಣ, ಅಲ್ಲಿರುವ ಫೋಟೋಗಳು ಮಕ್ಕಳ ಮನಸ್ಸಿನ ಮೇಲೆ ಪರಿಣಾಮವನ್ನು ಬೀರುತ್ತಿರುತ್ತದೆ.

ಸರಸ್ವತಿ ಭಾವಚಿತ್ರ (Goddess Saraswati)
ನಿಮ್ಮ ಮಗು ಇರುವ ಸ್ಥಳದಲ್ಲಿ ಸರಸ್ವತಿಯ ಭಾವಚಿತ್ರ ಇದ್ದರೆ ಬಹಳ ಒಳ್ಳೆಯದು. ಓದಲು ಶುರು ಮಾಡುವುದಕ್ಕಿಂತ ಮುಂಚಿತವಾಗಿ ಸರಸ್ವತಿಗೆ ನಮಸ್ಕರಿಸಿ ಪ್ರಾರಂಭಿಸುವ ಪರಿಪಾಠ ಬೆಳೆಸಬೇಕು. ಪ್ರಾತಃಕಾಲದಲ್ಲಿ ಸರಸ್ವತಿ ಮಂತ್ರವನ್ನು ಜಪಿಸಿದರೆ ಇನ್ನೂ ಒಳ್ಳೆಯದು.

ಓದಿನ ಕೋಣೆಯಲ್ಲಿರಲಿ ಇಂಥ ಗಿಡ (Tree)
ಓದಿನ ಕೋಣೆಯಲ್ಲಿ ಗಿಡಗಳನ್ನು ಇಟ್ಟರೆ ಬಹಳ ಶುಭ. ಪೂರ್ವ ದಿಕ್ಕಿನಲ್ಲಿ ಕಿಟಕಿಯಿದ್ದರೆ ಅಂಥ ಕಡೆ ಮೊನಿಪ್ಲಾಂಟ್‌ಗಳಂತಹ ಗಿಡಗಳನ್ನು ಬೆಳೆಸಬಹುದು.

ಇದನ್ನು ಓದಿ: Planet prediction: ಈ ಗ್ರಹಗಳ ಸಾಥ್‌ ಇಲ್ಲಾಂದ್ರೆ ಬೇಗ ಮದುವೆ ಆಗಲ್ಲ..!

ನೇರ ಕಿರಣ ಒಳ್ಳೇದಲ್ಲ
ಮಗು ಕೊಠಡಿಯಲ್ಲಿ ಓದುತ್ತಿರುವಾಗ ಸೂರ್ಯಕಿರಣಗಳು ನೇರವಾಗಿ ಪುಸ್ತಕದ ಮೇಲೆ ಬೀಳುವುದು ಒಳ್ಳೆಯದಲ್ಲ. ಕಿರಣಗಳು ಈ ರೀತಿ ಬೀಳದಂತೆ ಪರ್ಯಾಯ ಮಾರ್ಗವನ್ನು ಅನುಸರಿಸಬಹುದು.

Latest Videos
Follow Us:
Download App:
  • android
  • ios