Asianet Suvarna News Asianet Suvarna News

ಪಾದಯಾತ್ರೆ ಹೊರಟಿದ್ದ ಶಿವ ಭಕ್ತರಿಗೆ ಬೀರ್ ನೀಡಿದವನ ಬಂಧನ

ಉತ್ತರಪ್ರದೇಶದ ಅಲಿಘರ್‌ನಲ್ಲಿ ಶಿವರಾತ್ರಿ ಭಾಗವಾಗಿ ಪಾದಯಾತ್ರೆ ಹೊರಟಿದ್ದ  ಭಕ್ತರಿಗೆ(Kanwariyas) ಯುವಕನೊಬ್ಬ ಬೀರ್ ನೀಡಲು ಮುಂದಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ಹೀಗೆ ಬೀರ್ ನೀಡಲು ಮುಂದಾದ ಯುವಕನನ್ನು ಬಂಧಿಸಿದ್ದಾರೆ. 

Uttar Pradesh man arrested who offer alchohal to Lord Shiva devotees who performing Kanwar Yatra for shivaratri akb
Author
First Published Feb 19, 2023, 11:58 AM IST | Last Updated Feb 19, 2023, 11:58 AM IST

ಅಲಿಘರ್‌: ಶಿವರಾತ್ರಿ ವೇಳೆ ದೇಶಾದ್ಯಂತ ಭಕ್ತರು, ತಮ್ಮ ಸಮೀಪದ ಅಥವಾ ದೂರದ  ಶಿವಶಕ್ತಿ ಕೇಂದ್ರಗಳಿಗೆ, ಶಿವ ದೇಗುಲಗಳಿಗೆ ಪಾದಯಾತ್ರೆ ತೆರಳುತ್ತಾರೆ. ಶಿವರಾತ್ರಿಗೆ ಕೆಲ ದಿನಗಳಿರುವಾಗಲೇ ಪಾದಯಾತ್ರೆ ಆರಂಭಿಸುವ ಇವರು ಶಿವರಾತ್ರಿಯಂದು ಸರಿಯಾಗಿ ತಮ್ಮ ನೆಚ್ಚಿನ ದೇಗುಲ ತಲುಪುತ್ತಾರೆ. ಹೀಗೆ ಪಾದಯಾತ್ರೆ ಹೊರಟ ಭಕ್ತರಿಗೆ ದಾರಿ ಮಧ್ಯೆ ರಸ್ತೆ ಬದಿಗಳಲ್ಲಿ ಅನೇಕರು ಆಹಾರ, ಪಾನೀಯ ನೀಡಿ ಸಹಕರಿಸುತ್ತಾರೆ.  ಹೀಗೆಯೇ ಉತ್ತರಪ್ರದೇಶದ ಅಲಿಘರ್‌ನಲ್ಲಿ ಶಿವರಾತ್ರಿ ಭಾಗವಾಗಿ ಪಾದಯಾತ್ರೆ ಹೊರಟಿದ್ದ  ಭಕ್ತರಿಗೆ(Kanwariyas) ಯುವಕನೊಬ್ಬ ಬೀರ್ ನೀಡಲು ಮುಂದಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ಹೀಗೆ ಬೀರ್ ನೀಡಲು ಮುಂದಾದ ಯುವಕನನ್ನು ಬಂಧಿಸಿದ್ದಾರೆ. 

ಶಿವರಾತ್ರಿಗೆ (Shivaratri) ಬಹಳ ದೂರ ದೂರದಿಂದ ಭಕ್ತರು ಶಿವನ ದರ್ಶನಕ್ಕಾಗಿ ಪಾದಯಾತ್ರೆ ಮಾಡುತ್ತಾರೆ. ಇಂತಹ ಭಕ್ತರಿಗೆ ಹಣ್ಣು ನೀರು ಆಹಾರ ನೀಡಿ ದಾರಿ ಬದಿ ಜನ ಸಹಕರಿಸುತ್ತಾರೆ. ಆದರೆ ಯಾರು ಮದ್ಯ, ಸರಾಬು ಅಥವಾ ಮತ್ತು ಬರಿಸುವ ಪಾನೀಯವನ್ನು ಯಾರೂ ನೀಡುವುದಿಲ್ಲ. ಆದರೆ ಇಲ್ಲೊಬ್ಬ ಕಿಡಿಗೇಡಿ ಶಿವಭಕ್ತರಿಗೆ ಬೀರು ನೀಡಲು ಮುಂದಾಗಿದ್ದು, ಇದಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಆತನನ್ನು ಸಮರ್ಥಿಸಿಕೊಂಡಿದ್ದಾರೆ. 

Chikkamagaluru: ಉರಿ ಬಿಸಿಲಿನಲ್ಲಿ ಕಾಲ್ನಡಿಗೆಯಲ್ಲಿ ಬರುವ ಧರ್ಮಸ್ಥಳ ಭಕ್ತರಿಗೆ ಕಾಫಿನಾಡು ಯುವಕರ ತಂಡದಿಂದ ಆತಿಥ್ಯ

ಉತ್ತರ ಭಾರತದಲ್ಲಿ ಕೆಲವು ಶಿವಭಕ್ತರು ಗಂಗೆಯಿಂದ ನೀರನ್ನು ತಂದು ಅದನ್ನು ಬಿಂದಿಗೆಯಲ್ಲಿ ತುಂಬಿ ಹೆಗಲ ಮೇಲೆ ಇರಿಸಿಕೊಂಡು ಪಾದಯಾತ್ರೆ ಮೂಲಕ ಸಾಗಿ ಅದನ್ನು ಶಿವನಿಗೆ ಶಿವರಾತ್ರಿಯಂದು ಅಭಿಷೇಕ ಮಾಡುವ ಸಂಪ್ರದಾಯವಿದೆ.  ಕೆಲವರು ತಮ್ಮ ಸಮೀಪದ ಶಿವ ದೇಗುಲಕ್ಕೆ ಅರ್ಪಣೆ ಮಾಡಿದರೆ ಮತ್ತೆ ಕೆಲವರು ಪ್ರಸಿದ್ಧ ಶಿವ ದೇಗುಲಕ್ಕೆ ತೆಗೆದುಕೊಂಡು ಹೋಗಿ ಅರ್ಪಣೆ ಮಾಡುತ್ತಾರೆ.  ಇಂತಹ ಶಿವಭಕ್ತರ ಪಾದಯಾತ್ರೆಯ ಹಾದಿ ಕಷ್ಟಕರವಾಗಿರುತ್ತದೆ. ಹೀಗಾಗಿ ಅನೇಕರು ದಾರಿಮಧ್ಯೆ ಇವರಿಗೆ ಹಣ್ಣು ಆಹಾರ ನೀಡಿ ನೆರವಾಗುತ್ತಾರೆ. ಹಾಗೆಯೇ ಉತ್ತರಪ್ರದೇಶದ ಅಲಿಘರ್‌ನಲ್ಲಿ ಯುವಕನೋರ್ವ ಹೀಗೆ ಬಂದ ಭಕ್ತರಿಗೆ ಬೀರು ನೀಡಲು ಮುಂದಾಗಿದ್ದಾನೆ. ಅನೇಕ ಭಕ್ತರು ಇದನ್ನು ತಿರಸ್ಕರಿಸಿ ಮುಂದೆ ಸಾಗಿದರೆ ಕೆಲವರು ಸ್ವೀಕರಿಸಿದ್ದಾರೆ. 

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಉತ್ತರ ಪ್ರದೇಶ ಪೊಲೀಸರು (Uttar Pradesh Police)ಆತನನ್ನು ಅಬಕಾರಿ ಕಾಯ್ದೆಯಡಿ ಬಂಧಿಸಿದ್ದಾರೆ.  ಈ ವಿಡಿಯೋವನ್ನು ಪತ್ರಕರ್ತ ಪಿಯೂಷ್ ರೈ (Piyush Rai) ಎಂಬುವವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

Mandya: 30 ವರ್ಷ ದಾಟಿ ಮದುವೆಯಾಗದ ಹಿನ್ನೆಲೆ, ಮಹದೇಶ್ವರ ಬೆಟ್ಟಕ್ಕೆ ಬ್ರಹ್ಮಚಾರಿಗಳ ಪಾದಯಾತ್ರೆ

ಆದರೆ ಆತನನ್ನು ಬಂಧಿಸಿರುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಆತ ಬೀರ್ ಅನ್ನು ಮಾರಾಟ ಮಾಡಿರಲಿಲ್ಲ. ಉಚಿತವಾಗಿ ನೀಡಿದ್ದ ಹೀಗಿದ್ದೂ ಆತನನ್ನು ಬಂಧಿಸಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ದೇವರಲ್ಲಿಗ ಪ್ರಾರ್ಥನೆ ಸಲ್ಲಿಸಲು ಹೋಗುವ ವೇಳೆ ಯಾರಾದರೂ ಇದನ್ನು ಸ್ವೀಕರಿಸುತ್ತಾರೆಯೇ? ಹೀಗಿರುವಾಗ ಆತ ಇದನ್ನು ಪಾದಯಾತ್ರಿಗಳಿಗೆ ನೀಡಲು ಬಯಸಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. 

ಅನೇಕ ವಿಡಿಯೋಗಳಲ್ಲಿ ಹೀಗೆ ಪಾದಯಾತ್ರೆ ತೆರಳುವ ಶಿವಭಕ್ತರು ಗಾಂಜಾ ಎಳೆಯುವುದನ್ನು ನೋಡಿದ್ದೇನೆ. ಬೀರ್ ಅದೇ ರೀತಿ ಅದಕ್ಕಿಂತಲೂ ಕಡಿಮೆ ಅಮಲು ನೀಡುವ ಪಾನೀಯವಾಗಿದೆ. ಅದನ್ನು ನೀಡಿರುವುದರಲ್ಲಿ ತಪ್ಪೇನಿದೆ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಬೀರ್ ಕೊಟ್ಟವನನ್ನು ಮಾತ್ರ ಬಂಧಿಸಿದ್ದೇಕೆ? ಬೀರು ಪಡೆದವರನ್ನು ಕೂಡ ಬಂಧಿಸಬೇಕಿತ್ತು ಎಂದು ಅನೇಕರು ಪ್ರಶ್ನಿಸಿದ್ದಾರೆ.  ಅಲ್ಲದೇ ದೇವರಲ್ಲಿಗೆ ಹೋಗುವಾಗ ಯಾರೂ ಕೂಡ ಸರಾಯಿ ಕುಡಿಯುವುದಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ. 

ಶಿವರಾತ್ರಿ ಪಾದಯಾತ್ರೆ ದಾರಿಯಲ್ಲಿ ಮದ್ಯ ಸೇವಿಸಿ ಅವಾಂತರ, ಚಾರ್ಮಾಡಿ ಘಾಟಿಯಲ್ಲಿ ಕಿರಿಕ್!


ಇತ್ತ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಲಿಘರ್ ಪೊಲೀಸರು ಆರೋಪಿ ಯೋಗೇಶ್ (Yogesh) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.  ಪ್ರತಿ ಶುಕ್ಲ ಪಕ್ಷದ ಹದಿನಾಲ್ಕನೆಯ ದಿನ ಅಥವಾ ಅಮಾವಾಸ್ಯೆಯ ಹಿಂದಿನ ದಿನವನ್ನು ಶಿವರಾತ್ರಿ ಎಂದು ಕರೆಯಲಾಗುತ್ತದೆ. ಒಂದು ಕ್ಯಾಲೆಂಡರ್ ವರ್ಷದಲ್ಲಿ ಒಟ್ಟು ಹನ್ನೆರಡು ಶಿವರಾತ್ರಿಗಳಿದ್ದು, ಫೆಬ್ರವರಿ-ಮಾರ್ಚ್‌ನಲ್ಲಿ ಬರುವ ಹಬ್ಬವನ್ನು ಮಹಾಶಿವರಾತ್ರಿ (Mahashivratri) ಎಂದು ಕರೆಯಲಾಗುತ್ತದೆ. ಅಂದು ಭಕ್ತರು ಇಡೀ ರಾತ್ರಿ ಜಾಗರಣೆ, ಉಪವಾಸ ಮತ್ತು ಶಿವನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.

 

 

Latest Videos
Follow Us:
Download App:
  • android
  • ios