Asianet Suvarna News Asianet Suvarna News

ವಿದ್ಯೆ ಇಲ್ಲದಿದ್ದರೆ ಬದುಕು ಸಾಗೋದು ಹೇಗೆ? ದೇವಿ ಸರಸ್ವತಿಯನ್ನು ಪೂಜಿಸೋದು ಹೇಗೆ?

ವಿದ್ಯಾ ದೇವತೆ ಎಂದೇ ಸರಸ್ವತಿಯನ್ನು ಪೂಜಿಸಲಾಗುತ್ತದೆ. ಸರಸ್ವತಿ ಪೂಜೆಯನ್ನು ಭಕ್ತರು ಭಕ್ತಿಯಿಂದ ಮಾಡಿ, ವಿದ್ಯೆ ಕರುಣಿಸುವಂತೆ ಪ್ರಾರ್ಥಿಸುತ್ತಾರೆ. ಸರಸ್ವತಿ ಪೂಜೆ ಮನೆಯಲ್ಲಿ ಮಾತ್ರವಲ್ಲ ಶಾಲೆ – ಕಾಲೇಜಿನಲ್ಲೂ ನಡೆಯುತ್ತದೆ. ಸರಸ್ವತಿ ಪೂಜೆಗೆ ಯಾವೆಲ್ಲ ವಸ್ತು ಬೇಕು ಎಂಬುದನ್ನು ನಾವಿಂದು ಹೇಳ್ತೆವೆ.
 

Use These Things While Worshiping Saraswati
Author
First Published Jan 14, 2023, 1:55 PM IST

ಸರಸ್ವತಿ ಎಂದಾಕ್ಷಣ ಮೊದಲು ನೆನಪಾಗುವುದು ವಿದ್ಯೆ. ಹಿಂದೂ ಧರ್ಮದಲ್ಲಿ ಸರಸ್ವತಿಯನ್ನು ಜ್ಞಾನ ಕಲೆಗಳಿಗೆ ದೇವತೆಯೆಂದು ಹೇಳುತ್ತಾರೆ. ಶ್ವೇತ ವಸ್ತ್ರಧಾರಿಯಾದ ಸರಸ್ವತಿಯನ್ನು ವಾಗ್ದೇವತೆ, ವಿದ್ಯಾದೇವತೆ, ಜ್ಞಾನದೇವತೆ ಎಂದು ಕೂಡ ಬಣ್ಣಿಸಲಾಗಿದೆ. ಚತುರ್ಭುಜಳಾಗಿ ವೀಣೆಯನ್ನು ಹಿಡಿದಿರುವ ಸರಸ್ವತಿಯನ್ನು ವೀಣಾದರೆ ಎಂದು ಕೂಡ ವರ್ಣಿಸಲಾಗುತ್ತದೆ. ಎಲ್ಲ ವಿದ್ಯೆಗಳಿಗೆ ಮೂಲ ಕಾರಣಳಾದ ಈ ಸರಸ್ವತಿಯನ್ನು ಎಲ್ಲರೂ ವಿದ್ಯಾರಂಭದಲ್ಲಿ ಪೂಜಿಸುತ್ತಾರೆ. ಮಕ್ಕಳಿಗೆ ವಿದ್ಯೆ ಕಲಿಸುವ ಮೊದಲು ಓಂ ಎಂದು ಬರೆಸಿ ನಂತ್ರ ಪಾಠ ಶುರು ಮಾಡುವ ಪದ್ಧತಿ ಹಿಂದಿನಿಂದಲೂ ಬಂದಿದೆ. ಹಿಂದೂ ಸಂಸ್ಕೃತಿಯಲ್ಲಿ ಬಹಳ ಹಿಂದೆ ಅಂದರೆ ಗುರುಕುಲ ಪದ್ಧತಿ ಇರುವಾಗಿನಿಂದ ಇಂದಿನವರೆಗೂ ಸರಸ್ವತಿಯ ಪೂಜೆ ನಡೆಯುತ್ತ ಬಂದಿದೆ.

ಎಲ್ಲ ಪೂಜೆ (Worship) ಗಳಿಗೂ ಅದರದೇ ಆದ ಪೂರ್ವ ತಯಾರಿಗಳು ಮತ್ತು ನಿಯಮ (Rule) ಗಳು ಇರುತ್ತವೆ. ಹಾಗೆಯೇ ಸರಸ್ವತಿ (Saraswati ) ಪೂಜೆಯಲ್ಲೂ ಕೂಡ ಅದರದೇ ಆದ ಪೂರ್ವ ತಯಾರಿಗಳು ಮತ್ತು ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನಾವಿಂದು ಸರಸ್ವತಿ ಪೂಜೆ ಮುನ್ನ ಏನು ಮಾಡ್ಬೇಕು ಎನ್ನುವ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಸರಸ್ವತಿ ಪೂಜೆ ವೇಳೆ ಹೀಗಿರಲಿ ತಯಾರಿ : 
ಯಾವುದೇ ಪೂಜೆಯನ್ನು ಮಾಡುವಾಗ ಮೊದಲನೆಯದಾಗಿ ಆ ಸ್ಥಳವನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಪೂಜೆಯ ಹಿಂದಿನ ದಿನವೇ ಮನೆಯನ್ನು ಅಥವಾ ಪೂಜೆಯ ಸ್ಥಳವನ್ನು ಸ್ವಚ್ಛಗೊಳಿಸಬೇಕು. ಸರಸ್ವತಿಯ ಪೂಜೆಗೆ ಬೇಕಾಗುವ ಸಾಮಗ್ರಿಗಳನ್ನು ಮುಂಚಿತವಾಗಿಯೇ ತಂದುಕೊಳ್ಳಬೇಕು. ಏಕೆಂದರೆ ಪೂಜೆಯ ದಿನ ಅದು ನಿಮಗೆ ಮಾರುಕಟ್ಟೆಯಲ್ಲಿ ಸಿಗದೇ ಇರಬಹುದು.

ಸರಸ್ವತಿ ಪೂಜೆಗೆ ಹಳದಿ ಬಣ್ಣದ ಹೂವು, ಪೂಜೆಗೆ ಬೇಕಾದಷ್ಟು ತೆಂಗಿನಕಾಯಿ, ಹಳದಿ ಬಣ್ಣದ ಹೂವಿನ ಮಾಲೆ, ಸರಸ್ವತಿಗೆ ಹಾಕಲು ಹಳದಿ ಬಣ್ಣದ ದೊಡ್ಡ ಬಟ್ಟೆ, ಹಳದಿ ವಸ್ತ್ರ, ದೀಪದ ಎಣ್ಣೆ, ಬತ್ತಿ, ಬಿಳಿ ಎಳ್ಳಿನ ಉಂಡೆ, ಹಾಲಿನಿಂದ ತಯಾರಿಸಿದ ಖೋವಾದ ಸಿಹಿ ತಿಂಡಿ, ಅಕ್ಕಿ,  ವೀಳ್ಯದೆಲೆ ಹಾಗೂ ಅಡಿಕೆ ಹಾಗೂ ನೈವೇದ್ಯಕ್ಕೆ ಬಾಳೆಹಣ್ಣು ಮುಂತಾದವುಗಳನ್ನು ನೀವು ಮೊದಲೇ ಸಿದ್ಧಪಡಿಸಿಟ್ಟುಕೊಳ್ಳಬೇಕು. ಕೆಲವು ಕಡೆ ಸರಸ್ವತಿಯ ಪೂಜೆ ಮಾಡುವಾಗ ಪೆನ್ನು, ಪುಸ್ತಕ ಮತ್ತು ಅವರ ಕಾರ್ಯಕ್ಷೇತ್ರಕ್ಕೆ ಸಂಬಂಧಪಟ್ಟ ಉಪಕರಣಗಳನ್ನು ಸಹ ಇಡುತ್ತಾರೆ.

ದಿನ ನೋಡಿ ತಲೆ ಸ್ನಾನ ಮಾಡಿ, ನಿಮ್ಮ ಕಾಲ ಬಳಿಯೇ ಬಿದ್ದಿರುತ್ತಾಳೆ ಲಕ್ಷ್ಮಿ!

ಸಾಮಾನ್ಯ ದಿನದ ಹೊರತಾಗಿ ಹಬ್ಬಗಳಲ್ಲಿ ಕೂಡ ಸರಸ್ವತಿಯ ಪೂಜೆಯನ್ನು ಮಾಡಲಾಗುತ್ತದೆ. ಉದಾಹರಣೆಗೆ ದಕ್ಷಿಣ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತಮಿಳನಾಡು ಮುಂತಾದೆಡೆ ನವರಾತ್ರಿಯಲ್ಲಿ ಮೂರು ದಿವಸ ಸರಸ್ವತಿ ಪೂಜೆಯನ್ನು ಮಾಡುತ್ತಾರೆ.  ವಸಂತ ಪಂಚಮಿಯಂದು ಸರಸ್ವತಿ ಪೂಜೆ ಮಾಡುವವರಿದ್ದಾರೆ. ಕೇರಳದಲ್ಲಿ ನವರಾತ್ರಿಯ ಕೊನೆಯ ದಿನ ಅಂದರೆ ದಸರಾ ಹಬ್ಬದ ದಿನ ಸರಸ್ವತಿಯ ಆರಾಧನೆ ಮಾಡಲಾಗುತ್ತದೆ.

ಹಬ್ಬದ ದಿನದ ಹೊರತಾಗಿ ಶಾಲೆ, ಕಾಲೇಜು, ಕಚೇರಿ ಮುಂತಾದ ಕಡೆಗಳಲ್ಲೂ ಸರಸ್ವತಿಯ ಪೂಜೆ ಆಗಾಗ ನಡೆಯುತ್ತದೆ. ಹೀಗೆ ಸರಸ್ವತಿಯ ಪೂಜೆಯನ್ನು ನೀವು ನಿಶ್ಚಿತ ದಿನದಂದೇ ಮಾಡುತ್ತೀರಿ ಎಂದಾದರೆ ಹೂವು ಹಣ್ಣುಗಳನ್ನು ಮೊದಲೇ ಖರೀದಿಸಬೇಕಾಗುತ್ತದೆ. ಎಲ್ಲ ಕಡೆ ಪೂಜೆ, ಉತ್ಸವಗಳು ನಡೆಯುವಾಗ ಹೂವು, ಹಣ್ಣು, ವಸ್ತ್ರಗಳ ದರವೂ ಏರಿಕೆಯಾಗಿರುತ್ತದೆ. ಸಮಯಕ್ಕೆ ಸರಿಯಾಗಿ ಎಲ್ಲವೂ ಸಿಗದೆ ಹೋಗಬಹುದು.

ನಿಮಗೆ ಅಪಘಾತ ದುರ್ದೆಶೆಯಿದೆಯೇ? ಹೇಗೆ ತಿಳಿಯುವುದು? ಪರಿಹಾರ ಹೇಗೆ?

ಈಗಿನ ದಿನಗಳಲ್ಲಿ ಪಂಡಿತರಿಗೆ ಎಲ್ಲ ಜವಾಬ್ದಾರಿ ಕೊಡುವವರಿದ್ದಾರೆ. ನೀವೂ ಹಾಗೆ ಮಾಡಿದ್ರೆ ಪೂಜೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಭಕ್ತಿ ಭಾವದಿಂದ ಸರಸ್ವತಿಯ ಪೂಜೆಯನ್ನು ಮಾಡಿದವರಿಗೆ ವಿದ್ಯೆ, ಬುದ್ಧಿ ಹಾಗೂ ಎಲ್ಲ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ. ವಿದ್ಯೆಯಿಂದ ವಿನಯ, ವಿನಯದಿಂದ ಒಳ್ಳೆಯ ಸ್ಥಾನ, ಒಳ್ಳೆಯ ಸ್ಥಾನದಿಂದ ಧನಸಂಪತ್ತು ಹೀಗೆ ಎಲ್ಲವೂ ವೃದ್ಧಿಯಾಗುತ್ತದೆ ಎಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ. 
 

Follow Us:
Download App:
  • android
  • ios