Asianet Suvarna News Asianet Suvarna News

ನಿಮಗೆ ಅಪಘಾತ ದುರ್ದೆಶೆಯಿದೆಯೇ? ಹೇಗೆ ತಿಳಿಯುವುದು? ಪರಿಹಾರ ಹೇಗೆ?

ಕುಲದೇವರ ಕೋಪ, ಗ್ರಹಗಳ ವಕ್ರಗತಿ, ಕೆಟ್ಟ ವಂಶವಾಹಿ ಎಲ್ಲವೂ ಅಪಘಾತಗಳಿಗೆ, ಅನಾರೋಗ್ಯಕ್ಕೆ ಕಾರಣವಾಗುತ್ತವೆ. ಇದನ್ನು ಜನ್ಮರಾಶಿಗನುಗುಣವಾಗಿ ಮೊದಲೇ ತಿಳಿಯಬಹುದು! ಅದು ಹೇಗೆ? ಏನು ಪರಿಹಾರ?

Do you have accident dasha in your zodiac how to know it
Author
First Published Jan 13, 2023, 1:08 PM IST

ಎಲ್ಲರೂ ತುಂಬು ಬದುಕನ್ನು, ನೂರು ವರ್ಷಗಳವರೆಗೆ ತುಂಬು ಬದುಕನ್ನು, ಪೂರ್ಣಾಯುಸ್ಸನ್ನು (full life) ಬಾಳಬೇಕು ಎಂದು ಆಸೆಪಡುತ್ತಾರೆ. ಆದರೆ ಕೆಲವರಿಗಷ್ಟೇ ಅದು ಸಾಧ್ಯವಾಗುತ್ತದೆ. ಗ್ರಹಗಳ (planets) ಯೋಗ್ಯ ಗತಿ, ಕುಲದೇವರ ಆಶೀರ್ವಾದ, ಶುಭಕಾರಕ ಜಾತಕ, ಒಳ್ಳೆಯ ವಂಶವಾಹಿ (gene) ಎಲ್ಲವೂ ಇದ್ದರೆ ತುಂಬು ಬಾಳು ಸಾಧ್ಯವಾಗುತ್ತದೆ. ಆದರೆ ಕೆಲವರಿಗೆ ಮಧ್ಯೆಯೇ ಅಪಘಾತ ಕಾಡಬಹುದು. ಅಪಘಾತ ಎಂದರೆ ರಸ್ತೆ ಅಪಘಾತ ಎಂದಷ್ಟೇ ಅರ್ಥವಲ್ಲ. ಆಕಸ್ಮಿಕವಾಗಿ ಸಂಭವಿಸಿ ಕೇಡುಂಟುಮಾಡುವ ಘಟನೆಗಳೂ ಅಪಫಾತಗಳೇ. ಇಂಥ ಅಪಘಾತಗಳು ಯಾವ ರಾಶಿಗೆ ಹೇಗೆ ಬರುತ್ತವೆ? ಇವುಗಳ ಸೂಚನೆ ಏನು? ಏನು ಮಾಡಿದರೆ ಇದನ್ನು ತಡೆಯಬಹುದು? ಇಲ್ಲಿದೆ ನೋಡಿ ವಿವರ. 

ಮೇಷ ರಾಶಿ (Aries) 
ಮೇಷ ಎಂದರೆ ಟಗರು. ಟಗರುಗಳಿಗೆ ಜಿದ್ದು ಜಾಸ್ತಿ. ಹಾಗಂತ ರಸ್ತೆಯಲ್ಲಿ ಇನ್ನೊಬ್ಬರ ಮೇಲೆ ಜಿದ್ದು ಸಾಧಿಸಿ ರ್ಯಾಷ್ ಡ್ರೈವಿಂಗ್ ಮಾಡಲು ಹೋಗಬಾರದು. ಅಂಥ ಮನಸ್ಥಿತಿಯೇ ಅಪಾಯಕಾರಿ. ತಲುಪಬೇಕಾದ ಸ್ಥಳಕ್ಕೆ ನಿಗದಿತ ಸಮಯಕ್ಕಿಂತ ಸಾಕಷ್ಟು ಮುಂಚಿತವಾಗಿಯೇ ಹೊರಡಬೇಕು. ಸಾಮಾನ್ಯವಾಗಿ ನೀವು ತುಂಬು ಬದುಕನ್ನು ಬದುಕುತ್ತೀರಿ. ಭಗವಂತ ನಿಮಗೆ ಪೂರ್ಣಾಯುಸ್ಸನ್ನು ಕೊಟ್ಟಿರುತ್ತಾನೆ. ನಿಮ್ಮ ಕುಲದೇವತೆಯ ಆರಾಧನೆಯಿಂದ ಎಲ್ಲ ಬಗೆಯ ಆತಂಕಗಳು ದೂರಾಗುತ್ತವೆ. ಕುಲದೇವರು ಯಾರು ಎಂದು ತಿಳಿಯದಿದ್ದರೆ ಗಣಪತಿಯ ಆರಾಧನೆ ಮಾಡಬಹುದು.

ವೃಷಭ ರಾಶಿ (Taurus)
ಮನೆಯ ಹಿರಿಯರು ಮನೆಯಲ್ಲಿ ಸದಾ ನಿಮಗೆ ಶಾಪ ಹಾಕುತ್ತಿರುತ್ತಾರೆಯೇ? ಹಾಗಿದ್ದರೆ ತಿದ್ದಿಕೊಳ್ಳಿ. ನೀವು ವೃಷಭದಂತೆ ಎಷ್ಟೇ ಕಾಲ ಬದುಕಿದರೂ ಯಾರಿಗೂ ಬಗ್ಗದೆ ತಲೆ ತಗ್ಗದೆ ಸ್ವಾಭಿಮಾನ ವರ್ಚಸ್ಸಿನಿಂದ ಬದುಕುವವರು. ಆದರೆ ಭಗವಂತನ ಮುಂದೆ, ಗುರುಹಿರಿಯರ ಮುಂದೆ ತಲೆಬಾಗಬೇಕಾಗುತ್ತದೆ. ಎಲ್ಲ ಬಗೆಯ ಮೃತ್ಯುಭಯ ತಪ್ಪಿಸಲು ನೀವು ಪ್ರತಿದಿನ ಕನಿಷ್ಠ ನೂರೆಂಟು ಬಾರಿ ಶಿವಪಂಚಾಕ್ಷರಿ ಮಂತ್ರವನ್ನು ಪಠಿಸಬೇಕು. ಸಾಧ್ಯವಾದರೆ ಮನೆಯಲ್ಲಿ ಅಥವಾ ದೇಗುಲದಲ್ಲಿ ಶಿವಪೂಜೆ ಮಾಡಿಸಿ.

ಮಿಥುನ ರಾಶಿ (Gemini)
ನೀವು ಮಂಗಳಗ್ರಹ ಹಾಗೂ ರಾಹುಗ್ರಹಗಳ ಚಲನೆಯ ಮೇಲೆ ಒಂದು ಕಣ್ಣು ಇಟ್ಟಿರುವುದು ಒಳ್ಳೆಯದು. ಮಂಗಳಗ್ರಹನು ನಿಮ್ಮ ಪ್ರೇಮವನ್ನೂ, ರಾಹು ನಿಮ್ಮ ಆರೋಗ್ಯವನ್ನೂ ನಿಯಂತ್ರಿಸುತ್ತಾನೆ. ಅಂದರೆ ಪ್ರೇಮಕಲಹವೂ ನಿಮಗೆ ಆತಂಕಕಾರಿಯಾಗಬಹುದು. ಈ ಗ್ರಹಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿರುವ ಕೈಲಾಸವಾಸಿ ಪರಮಶಿವನ ಆರಾಧನೆ ಮಾಡಬೇಕು. ಶಿವದೇವಾಲಯಗಳಿಗೆ ಭೇಟಿ ಕೊಡಿ.

ಕಟಕ ರಾಶಿ (Cancer)
ಮೂರು ಕೇಡುಕಾರಕ ಗ್ರಹಗಳು ಒಟ್ಟಾಗಿ ಒಂದೇ ಮನೆಯಲ್ಲಿ ಬಂದರೆ ನಿಮಗೆ ಅಪಘಾತ ಯೋಗವಿರುತ್ತದೆ. ಆದ್ದರಿಂದ ವಾಹನ ಚಾಲನೆ ಮಾಡುವಾಗ, ವಾಹನದಲ್ಲಿ ಹೋಗುವಾಗ ಜಾಗರೂಕತೆ ಇರಲಿ. ಇದು ತಿಳಿಯುವುದು ಹೇಗೆ? ನೀವು ಚಲಾಯಿಸುವ ವಾಹಾನ ಆಗಾಗ ಕೈ ಕೊಡುತ್ತಿದ್ದರೆ ಎಚ್ಚರವಾಗಬೇಕು. ಗಣಪತಿ ಹಾಗೂ ಆಂಜನೇಯನ ಆರಾಧನೆ ತಪ್ಪಿಸಬೇಡಿ. ಹನುಮಾನ್‌ ಚಾಲೀಸಾ ತಪ್ಪದೆ ಪಠಿಸಿ. ಹನುಮನ ಗುಡಿಗೆ ಭೇಟಿ ಕೊಡುತ್ತಿರಿ.

ಸಿಂಹ ರಾಶಿ (Leo)
ಆಗೀಗ ನಿಮಗೆ ಅಕ್ಕಪಕ್ಕದಲ್ಲಿ ಎಲ್ಲೂ ಇಲ್ಲದ ಮೃಗಗಳು, ಪ್ರಾಣಿಗಳು, ಪಕ್ಷಿಗಳು ಕೂಗಿದಂತೆ ಕೇಳಿಸಿದಂತಾಗುತ್ತಿದ್ದರೆ ಎಚ್ಚರ ವಹಿಸಿ. ಅದು ಮುಂಬರಲಿರುವ ಅನಾರೋಗ್ಯದ ಸೂಚನೆ ಇರಬಹುದು. ನೀವು ಆಯುಷ್ಯಪೂರ್ತಿ ಆಗುವವರೆಗೂ ಸಿಂಹದಂತೆ ಗಾಂಭೀರ್ಯದಿಂದ ಹಾಗೂ ಯಾರದೇ ಆರೈಕೆಯ ಅಗತ್ಯ ಬೀಳದೆ ಬದುಕುವವರು. ನೀವು ಕರ್ಮಸಿದ್ದಾಂತಿಗಳಾಗಿರುವುದರಿಂದ ಅಗತ್ಯ ಕರ್ಮಗಳನ್ನೇ ಯಜ್ಞದಂತೆ ಮಾಡಬೇಕು. ಜೀವನದ ಯಾವ್ಯಾವ ಹಂತದಲ್ಲಿ ಯಾವ ದೇವತೆಗೆ ಏನನ್ನು ಕೊಡಬೇಕೋ ಅದನ್ನು ಕೊಟ್ಟರೆ ನಿಮ್ಮ ಆರೋಗ್ಯಕ್ಕೆ ಕಂಟಕವಿಲ್ಲ.

ಕನ್ಯಾ ರಾಶಿ (virgo)
ತುಂಬಾ ಆಳದಲ್ಲಿರುವ ನೀರಿಗೆ ಯಾವತ್ತೂ ಇಳಿಯಲು ಹೋಗಬೇಡಿ. ಯಾಕೆಂದರೆ ನಿಮಗೆ ನೀರಿನಿಂದ ಆತಂಕವಿದೆ. ನೀವು ನೀರಿನ ದೇವತೆ ವರುಣನನ್ನು ಕೋಪಗೊಳಿಸಬಾರದು. ದೇವರ ತೀರ್ಥವನ್ನು ಎಲ್ಲೂ ವ್ಯರ್ಥ ಮಾಡಬೇಡಿ. ತೀರ್ಥಕ್ಷೇತ್ರಗಳಿಗೆ ಹೋದಾಗ ತಪ್ಪದೆ ಅಭಿಷೇಚನ ಮಾಡಿಸಿಕೊಳ್ಳಿ. ಮುಖ್ಯವಾಗಿ ಮಹಾವಿಷ್ಣುವಿನ ಕ್ಷೇತ್ರಗಳಲ್ಲಿ ವಿಷ್ಣುಪಾದ ಸಮುದ್ಭವೆ ಎನಿಸಿದ ಗಂಗೆಯನ್ನು ಸ್ಮರಿಸಿ ದೇಹಶುದ್ಧಿ ಮಾಡಿಕೊಳ್ಳಿ. 

ತುಲಾ ರಾಶಿ (libra)
ದೇವರ ಮೂರ್ತಿ ನೋಡಿದಾಗ ಅದು ಮುಖ ತಿರುಗಿಸಿದಂತೆ ಅನುಭವ ಆಗಿದೆಯೇ? ಹಾಗಿದ್ದರೆ ನಿಮಗೆ ಬೆಂಕಿಯಿಂದ ಭಯವಿದೆ. ಬೆಂಕಿಯ ದೇವರು ಅಗ್ನಿಯಾದರೂ, ಆತನನ್ನು ನಿಯಂತ್ರಿಸುವವನು ಪರಮೇಷ್ಠಿ ಎನಿಸಿದ ಲಯಕರ್ತ ಶಿವ. ಇವನು ಭೈರವರೂಪ. ಶಿವನ ರುದ್ರರೂಪವನ್ನು ನೀವು ಅರ್ಚಿಸಬೇಕು. ರುದ್ರಾಭಿಷೇಕ ಮಾಡಿಸುವುದರಿಂದ ಲಿಂಗವು ತಾಪವನ್ನು ಕಳೆದುಕೊಂಡು ತಣ್ಣಗಾಗಿ ಅಗ್ನಿಯನ್ನೂ ತಂಪು ಮಾಡುತ್ತದೆ.

ವೃಶ್ಚಿಕ ರಾಶಿ (scorpio)
ಇದ್ದಕ್ಕಿದ್ದಂತೆ ದಿಕ್ಕುಗಳು ಮರೆತುಹೋಗುತ್ತಿವೆಯೇ? ಆಹಾರದಿಂದ ನಿಮಗೆ ಒಳ್ಳೆಯದೂ ಇದೆ, ಕೆಟ್ಟದೂ ಇದೆ. ಆಹಾರ ಸಂಬಂಧಿತ ಕಾಯಿಲೆಗಳು ನಿಮ್ಮನ್ನು ಬಾಧಿಸಬಹುದು. ಆಹಾರಕ್ಕೆ ಮೂಲವಸ್ತುಗಳು ಸಿದ್ಧವಾಗುವುದು ಭೂಮಿಯಲ್ಲಿ. ಭೂಮಿಯನ್ನು ಹೊತ್ತವನು ವರಾಹರೂಪಿಯಾದ ವಿಷ್ಣು. ಆದ್ದರಿಂದ ನೀವು ಭೂದೇವಿ ಸಮೇತನಾದ ಮಹಾವಿಷ್ಣುವನ್ನು ಅರ್ಚಿಸಬೇಕು. ಇಬ್ಬರ ಮೂರ್ತಿಯನ್ನು ಮನೆಯಲ್ಲಿ ಇಟ್ಟುಕೊಂಡು ನಿತ್ಯ ಪೂಜಿಸಿ.

ಊಟ ಮಾಡುವಾಗ ರೂಲ್ಸ್ ಫಾಲೋ ಮಾಡಿದ್ರೆ ನಿರೋಗಿ ಆಗ್ತಿರಾ..

ಧನು ರಾಶಿ (sagittarius)
ಪ್ರತೀ ದಿನ ಮುಂಜಾನೆ ಕೆಟ್ಟ ಕಣ್ಣುಗಳಿರುವ ಜೀವಿಯನ್ನು ನೋಡಿದಂತೆ ಸ್ವಪ್ನಗಳು ಬೀಳುತ್ತವಾ? ಹಾಗಿದ್ದರೆ ಡಯಾಬಿಟಿಸ್, ಹೃದಯ ಕಾಯಿಲೆಯಂಥ ದೀರ್ಘಾವಧಿ ರೋಗಗಳ ಬಗ್ಗೆ ನಿಮಗೆ ಎಚ್ಚರ ಇರಬೇಕು. ಒಳಗೊಳಗೇ ದೇಹವನ್ನು ಕೊರೆಯುವ ರೋಗಗಳು ನಮಗೆ ತಿಳಿಯದಂತೆಯೇ ಅಟ್ಯಾಕ್ ಮಾಡುತ್ತವೆ. ಆದ್ದರಿಂದ ಅಂತರಂಗ ಬಹಿರಂಗ ಶುದ್ಧಿಗಳೆರಡೂ ನಮಗೆ ಅಗತ್ಯ. ನಿತ್ಯವೂ ದುರ್ಗೆಯ ಆರಾಧನೆ ಮಾಡಿ. ಪ್ರಕೃತಿಯ ಮಾತೆಯಾದ ದುರ್ಗೆಯು ದೇಹಪ್ರಕೃತಿಯನ್ನು ಕೂಡ ಚೆನ್ನಾಗಿ ಇರುವಂತೆ ನೋಡಿಕೊಳ್ಳುವವಳು. ತಾಯಿ ಒಲಿದರೆ ಸದಾ ಆರೋಗ್ಯ.

ಮಕರ ರಾಶಿ (Capricorn)
ಗಾಯವೇ ಇಲ್ಲ. ಆದರೆ ದೇಹದಲ್ಲಿ ರಕ್ತದ ಕಲೆ ಕಾಣಿಸುತ್ತಿದೆ! ಅಂದರೆ ನೀವು ರಕ್ತಕ್ಕೆ ಸಂಬಂಧಿಸಿದ ಅನಾರೋಗ್ಯ, ಅಪಘಾತಗ ಬಗ್ಗೆ ಎಚ್ಚರವಾಗಿರಿ. ಹರ ಮುನಿದರೆ ಗುರು ಕಾಯುವನು ಎಂಬ ಮಾತನ್ನು ನೀವು ಕೇಳಿಸಿಕೊಂಡಿರಬಹುದು. ಗುರುವಿನಿಂದ ನಿಮಗೆ ಯಾವುದಾದರೂ ಮಂತ್ರೋಪದೇಶ ಆಗಿದ್ದರೆ, ಅದನ್ನು ಯಾವತ್ತೂ ಕೈಬಿಡಬೇಡಿ. ಅದು ಗಾಯತ್ರಿ ಆಗಿರಲಿ, ಮೃತ್ಯುಂಜಯ ಮಂತ್ರವಾಗಿರಲಿ- ಅದರಲ್ಲೇ ನಿಮ್ಮ ಸೋಕ್ಷ ಮೋಕ್ಷಗಳೆರಡೂ ಅಡಗಿರುತ್ತವೆ. ಮಂತ್ರದಿಂದ ಜೀವನ ಪಾವನ.

ಕುಂಭ ರಾಶಿ (Aquarius)
ಆಹರದಲ್ಲಿ ಪದೇ ಪದೇ ಕಲ್ಲು ಸಿಗುತ್ತಿದೆಯಾ> ಆಹಾರದ ಬಗ್ಗೆಯೇ ಎಚ್ಚರವಾಗಿರಿ. ಆಹಾರ ಕೆಲವೊಮ್ಮೆ ವಿಷವಾಗುತ್ತದೆ ಎಂಬುದನ್ನು ಮರೆಯಬೇಡಿ. ಸಿಕ್ಕಸಿಕ್ಕಲ್ಲಿ ಆಹಾರ ಸೇವಿಸುವುದು, ತಂಗಳು ಸೇವಿಸುವುದು ಮಾಡಬೇಡಿ. ಆಹಾರವನ್ನು ನಮಗೆ ಒದಗಿಸುವ ಅನ್ನಪೂರ್ಣಾದೇವಿಯ ಒಂದು ಸಣ್ಣ ಬೆಳ್ಳಿಯ ವಿಗ್ರಹವನ್ನು ಮನೆಯಲ್ಲಿ ಇಟ್ಟುಕೊಂಡು ಸದಾ ಆಕೆಗೆ ಒಂದು ಅರ್ಚನೆಯನ್ನು ಮಾಡುತ್ತಿರಿ. ನಿಮ್ಮ ಆರೋಗ್ಯವನ್ನು ಆಕೆ ಕಾಪಾಡುತ್ತಾಳೆ.

ಮೀನ ರಾಶಿ (Pisces)
ನಾನು ಸತ್ತುಹೋದರೆ ಕುಟುಂಬದವರು ಅನಾಥರಾಗುತ್ತಾರೆ ಎಂಬ ಭಾವನೆ ಪದೇ ಪದೇ ಮನಸ್ಸಿಗೆ ಬರುತ್ತಿದೆಯೇ? ಹಾಗಾದರೆ ಶತ್ರುಗಳಿಂದ ನಿಮಗೆ ಜೀವಭಯವಿರಬಹುದು. ಆದರೆ ಅದರಿಂದ ದೂರಾಗಲು ಹಲವು ದಾರಿಗಳು ಉಂಟು. ಉದಾಹರಣೆಗೆ ಮೃತ್ಯುಂಜಯ ಮಂತ್ರದ ಪಠನ, ಹನುಮಾನ್ ಚಾಲಿಸಾ ಪಠಣ, ಹಾಗೇ ಅಷ್ಟಾದಶಾಕ್ಷರಿ ಮಂತ್ರವನ್ನು ಪಠಿಸಿ. ನಿತ್ಯ ಮುಂಜಾನೆ ಈ ಮೂರೂ ಮಂತ್ರಗಳ ಪುನಶ್ಚರಣದಿಂದ ಜೀವಭಯ ದೂರವಾಗಿ ಸೌಖ್ಯ ಉಂಟಾಗುತ್ತದೆ.

ಯಶ್‌, ರಿಷಬ್‌, ರಕ್ಷಿತ್, ಸುದೀಪ್....‌ ಕನ್ನಡದ ತಾರೆಯರ ಈ ವರ್ಷದ ಚೈನೀಸ್‌ ಭವಿಷ್ಯವಿದು!
 

Follow Us:
Download App:
  • android
  • ios