Asianet Suvarna News Asianet Suvarna News

ನೀವು ಬಯಸಿದ್ದು ಪಡೆಯೋಕೆ ಒಂದು ಪದ ಸಾಕು! ಇದು ಸ್ವಿಚ್‌ವರ್ಡ್ಸ್‌ ಮಹಾತ್ಮೆ!

ನಿಮಗೆ ಸ್ವಿಚ್‌ವರ್ಡ್‌ಗಳ ಮಹಾತ್ಮೆ ಗೊತ್ತೇ? ಮಂತ್ರಗಳನ್ನು ನಿಮ್ಮ ಸಿದ್ಧಿಗಾಗಿ ಉಪಯೋಗಿಸಿದಂತೆ ಈ ಪದಗಳನ್ನೂ ಉಪಯೋಗಿಸಬಹುದು ಎನ್ನುತ್ತದೆ ನ್ಯೂಮರಾಲಜಿ. ಹಾಗಿದ್ದರೆ ಏನಿವು ಸ್ವಿಚ್‌ವರ್ಡ್? ಯಾವುದನ್ನು ಬಳಸಬಹುದು? ತಿಳಿಯೋಣ.

 

Use these keywords wisely to get what you like skr
Author
First Published Oct 16, 2022, 1:24 PM IST

ನೀವು ಬಳಸುವ ಪದಗಳು ನಿಮ್ಮನ್ನು ರೂಪಿಸುತ್ತವೆ, ನಿಮ್ಮ ಭವಿಷ್ಯವನ್ನೂ ಬದಲಾಯಿಸುತ್ತವೆ. ನಿಮ್ಮ ಮಾತುಗಳು ಕ್ರಿಯೆಯಾಗುತ್ತವೆ. ಇದೊಂದು ರಹಸ್ಯ ಸತ್ಯ. ಹೀಗಾಗಿಯೇ ನೀವು ಏನನ್ನೂ ಹೇಳುವ ಮುನ್ನ ಹತ್ತು ಬಾರಿ ಯೋಚಿಸಬೇಕು ಎಂದು ಹೇಳುವುದು. ಏಕೆಂದರೆ ನೀವು ಹೇಳುತ್ತಿರುವುದನ್ನು ಇಡೀ ಜಗತ್ತು ಆಲಿಸುತ್ತದೆ. ನಿಮ್ಮ ಪದಗಳನ್ನು ಈ ವಿಶ್ವ ನಿಮ್ಮ ಕ್ರಿಯೆಗಳಾಗಿ ಪರಿವರ್ತಿಸುತ್ತದೆ.

ಸ್ವಿಚ್ ಪದಗಳೆಂದರೇನು? (switchwords)
ಸ್ವಿಚ್ ಪದಗಳು ಮಂತ್ರಗಳಿದ್ದಂತೆ. ಹಿಂದಿನ ಕಾಲದಲ್ಲಿ ಮಂತ್ರಗಳನ್ನು ಉಚ್ಚರಿಸುವ ಮೂಲಕ ಅಲೌಕಿಕ ಸಾಧನೆಗಳನ್ನು ಮಾಡುತ್ತಿದ್ದರು. ಈಗ ಅದನ್ನು ಸ್ವಿಚ್‌ವರ್ಡ್‌ ಮೂಲಕ ಸಾಧಿಸಬಹುದು. ಇದು ನ್ಯೂಮರಾಲಜಿ ಪ್ರಕಾರ ಸರಳವಾಗಿ ನಿಮ್ಮ ಎನರ್ಜಿಯನ್ನು ಹೆಚ್ಚಿಸುವ ಪದ. ಪದಗಳು ನಿಮ್ಮ ಚೈತನ್ಯವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿವೆ ಎಂದರ್ಥ.

ಇದು ಹೇಗೆ ಕೆಲಸ ಮಾಡುತ್ತದೆ?
ಪದಗಳನ್ನು ಬದಲಾಯಿಸಿದರೆ ಬದುಕನ್ನೇ ಬದಲಾಯಿಸಿದಂತೆ. ಕೆಲವು ಶಕ್ತಿಯುತ ಪದಗಳು ನಿಮ್ಮ ಸುಪ್ತಪ್ರಜ್ಞೆಯೊಂದಿಗೆ ನೇರವಾಗಿ ಮಾತನಾಡುತ್ತವೆ. ಹಣ, ಸೃಜನಶೀಲತೆ, ಕ್ರಿಯಾಶೀಲತೆ, ವೃತ್ತಿ, ಉದ್ಯಮ ಇತ್ಯಾದಿಗಳ ಸಾಮರ್ಥ್ಯವನ್ನು ಸಕ್ರಿಯಗೊಳಿಸುತ್ತದೆ. ನಾವೆಲ್ಲರೂ ವೈಯಕ್ತಿಕವಾದ ಮತ್ತು ವೃತ್ತಿಪರವಾದ ಸಾಧನೆಯ ಆಸೆಗಳನ್ನು ಮತ್ತು ಕನಸುಗಳನ್ನು ಹೊಂದಿದ್ದೇವೆ. ಆ ಕನಸುಗಳನ್ನು ವಾಸ್ತವಕ್ಕೆ ಪರಿವರ್ತಿಸುವ ಕೀಲಿಕೈ ನಮ್ಮ ಮಾತುಗಳಲ್ಲಿ ಇದೆ.

ಸ್ವಿಚ್ ಪದಗಳು ಇಂಗ್ಲಿಷ್‌ನಲ್ಲಿ ನಮ್ಮ ಸಾಧನೆಯ ಬೀಜ ಮಂತ್ರಗಳು. ಹಿಂದೂ ಧರ್ಮ ಮತ್ತು ಬೌದ್ಧ ಧರ್ಮದಲ್ಲಿ, ಬೀಜ ಮಂತ್ರಗಳ ಸಹಾಯದಿಂದ ರಚಿಸಲಾದ ಅನೇಕ ಮಂತ್ರಗಳಿವೆ. ಉದಾ: ಗಣೇಶ ಮಂತ್ರದಲ್ಲಿ ‘ಔಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ಗಂ ಗಣಪತಯೇ ವರ ವರದ ಸರ್ವ ಜನಮ್ಮೇ ವಶಮಾನಾಯ ಸ್ವಾಹಾ’ ಎಂಬುದರಲ್ಲಿ ಶ್ರೀಂ, ಹ್ರೀಂ, ಕ್ಲೀಂ ಮುಂತಾದವು ಬೀಜ ಮಂತ್ರಗಳಾಗಿವೆ. ಈ ಬೀಜ ಮಂತ್ರಗಳು ಇಂಗ್ಲಿಷ್‌ನಲ್ಲಿ ಸ್ವಿಚ್ ಪದಗಳಾಗಿವೆ ಎನ್ನಬಹುದು.

ಮನೆಯಲ್ಲಿ ಹಾಕಿ ಮಿಸ್ಟಿಕಲ್ ನಾಟ್… ಗಂಡ, ಹೆಂಡ್ತಿ ನಡುವೆ ಜಗಳಾನೇ ಆಗಲ್ಲ

ಇವುಗಳನ್ನು ಫಲಪ್ರದವಾಗಿ ಬಳಸುವುದು ಹೇಗೆ?
ಸ್ವಿಚ್ ಪದಗಳನ್ನು ಬಳಸಲು ಹಲವು ಮಾರ್ಗಗಳಿವೆ. ನೀವು ಅವುಗಳನ್ನು ನಿಮ್ಮ ಡೈರಿಯಲ್ಲಿ ಬರೆಯಬಹುದು, ಪದಗಳನ್ನು ಧ್ಯಾನಿಸಬಹುದು, ದಿನವಿಡೀ ಅವುಗಳನ್ನು ಗುನುಗುನಿಸುತ್ತಿರಬಹುದು ಅಥವಾ ಮಾತಿನಲ್ಲಿ ಆಗಾಗ ಬಳಸುತ್ತಿರಬಹುದು. ನಿಮಗೆ ಅಗತ್ಯವಿರುವಾಗ ಅವುಗಳನ್ನು ಸರಳವಾಗಿ ಬಳಸಿ. ಇವುಗಳನ್ನು ಮಂತ್ರದಂತೆ ಇಂತಿಷ್ಟೇ ಬಾರಿ ಬಳಸಬೇಕೆಂಬ ನಿಯಮವಿಲ್ಲ. ದಿನದಲ್ಲಿ ಎಷ್ಟು ಬಾರಿಯಾದರೂ ಉದ್ಗರಿಸಬಹುದು.

ಕೆಲವು ಸಾಮಾನ್ಯ ಸ್ವಿಚ್ ಪದಗಳು
Find, divine, count, done, scheme, Wealth- ಇವುಗಳನ್ನು ಉಚ್ಚರಿಸುವುದರಿಂದ ಸಂಪತ್ತು ಪಡೆಯಲು ಪೂರಕವಾದ ಚೈತನ್ಯವನ್ನು ಪಡೆಯಬಹುದು.
Together- ಇದು ಯಾವುದೇ ಕೆಲಸಕ್ಕೆ ಮುಂದಾಗುವ ಮೊದಲು ಇದನ್ನು ಉದ್ಗರಿಸುವುದರಿಂದ ಇದು ನಿಮ್ಮ ಎನರ್ಜಿಯನ್ನು ಅದರಲ್ಲಿ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ.
Bring-  ಇದೊಂದು ಶಕ್ತಿಯುತವಾದ ಸ್ವಿಚ್‌ಪದ. ಜೀವನದಲ್ಲಿ ನೀವು ಏನನ್ನು ಬಯಸುತ್ತೀರೋ ಅದನ್ನು ಸಾಧಿಸಲು ಇದನ್ನು ಹಾಗೆಯೇ ಅಥವಾ ಇತರ ಪದಗಳೊಂದಿಗೆ ಬಳಸಬಹುದು.
Love, Rejoice, Divine, Happy- ನಿಮ್ಮ ಜೀವನದಲ್ಲಿ ಹೆಚ್ಚಿನ ಪ್ರೀತಿ, ಸುಖ, ಆನಂದವನ್ನು ಕಂಡುಕೊಳ್ಳಲು, ಆಕರ್ಷಿಸಲು ಈ ಪದಗಳನ್ನು ಬಳಸಿ.
Adjust- ಇದು ನಿಮ್ಮ ಬದುಕಿನಲ್ಲಿ ಸಮತೋಲನವನ್ನು ಸೃಷ್ಟಿಸುತ್ತದೆ. ಕಷ್ಟಕರ ಮತ್ತು ಅಹಿತಕರ ಸಂದರ್ಭಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ.

ಧನಾತ್ಮಕ ಸ್ವಿಚ್‌ವರ್ಡ್‌ಗಳಿದ್ದಂತೆ ನೆಗೆಟಿವ್‌ ಸ್ವಿಚ್‌ವರ್ಡ್‌ಗಳೂ ಇವೆ. ಅವುಗಳನ್ನು ಬಳಸಬಾರದು ಅಥವಾ ಆದಷ್ಟು ಕಡಿಮೆ ಮಾಡಬೇಕು. ಇವು ಮನಸ್ಸಿಗೆ ಬಾರದಂತೆ, ಬಂದರೂ ಉಚ್ಚರಿಸದಂತೆ ಟ್ಯೂನ್‌ ಮಾಡಿಕೊಳ್ಳಬೇಕು. ಆಗ ನಿಮ್ಮನ್ನು ಕಾಡುವ ಸಂಕಷ್ಟಗಳು ದೂರವಾಗುತ್ತವೆ. ಅಂಥ ಕೆಲವು ಪದಗಳು- Negative, Minus, depression, Blank.

Astrology Tips : ಮನೆಯ ಈ ಜಾಗದಲ್ಲಿರಲಿ ಕಾಮಧೇನು ಮೂರ್ತಿ
 

Follow Us:
Download App:
  • android
  • ios