Asianet Suvarna News Asianet Suvarna News

ಜೋಡಿಯಾಗಿರೋ ಕಾಗೆ ಕಂಡ್ರೆ ಅಪಶಕುನವೇ? ಇದರರ್ಥವೇನು?

ಗುಂಪು ಗುಂಪಾಗಿ ಕಿರುಚಾಡುವ ಕಾಗೆಗಳನ್ನು ನಾವು ನೋಡಿರ್ತೇವೆ. ಕೆಲ ಬಾರಿ ಮನೆ ಸುತ್ತ ಒಂದು ಕಾಗೆಯೂ ಕಾಣೋದಿಲ್ಲ. ಮತ್ತೆ ಕೆಲವೊಮ್ಮೆ ಎರಡು ಕಾಗೆ ಮಾತ್ರ ಒಟ್ಟಿಗೆ ಕುಳಿತಿರೋದು ಕಾಣಿಸುತ್ತೆ. ಈ ಜೋಡಿ ಕಾಗೆ ಬಗ್ಗೆ ಅನೇಕ ನಂಬಿಕೆ ನಮ್ಮಲ್ಲಿದೆ.
 

Two Crows Spiritual Meaning
Author
First Published Dec 14, 2022, 2:50 PM IST

ಮನೆ ಸುತ್ತಮುತ್ತ ಕಾಗೆ ಹಾರಾಡೋದನ್ನು ನಾವು ಪ್ರತಿ ದಿನ ನೋಡ್ತೇವೆ. ಕೆಲವೊಮ್ಮೆ ಎರಡು ಕಾಗೆಗಳು ಚಾವಣಿ ಮೇಲೆ ಕುಳಿತು ಕೂಗ್ತಿರುತ್ತವೆ. ಹಿಂದೂ ಧರ್ಮದಲ್ಲಿ ಪ್ರಾಣಿ, ಪಕ್ಷಿಗಳಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಬಣ್ಣದಲ್ಲಿ ಕಪ್ಪಿರುವ, ಬಹುತೇಕರಿಗೆ ಇಷ್ಟವಾಗದ ಕಾಗೆಗೂ ಆಧ್ಯಾತ್ಮದಲ್ಲಿ ಮಹತ್ವ ನೀಡಲಾಗಿದೆ. ಕಾಗೆಯನ್ನು ಪೂರ್ವಜರಿಗೆ ಹೋಲಿಕೆ ಮಾಡಲಾಗುತ್ತದೆ. ಪೂರ್ವಜರ ಶ್ರಾದ್ಧದಲ್ಲಿ ಕಾಗೆಗೆ ಎಡೆ ನೀಡಲಾಗುತ್ತದೆ. ಕಾಗೆಗೆ ಸಂಬಂಧಿಸಿದಂತೆ ಅನೇಕ ಶಾಸ್ತ್ರಗಳಿವೆ. ಹಾಗೆಯೇ ಎರಡು ಕಾಗೆ ಒಟ್ಟಿಗೆ ಕಾಣಿಸಿಕೊಂಡ್ರೆ ಏನು ಅರ್ಥ ಎಂಬುದನ್ನು ಕೂಡ ಶಾಸ್ತ್ರದಲ್ಲಿ ಹೇಳಲಾಗಿದೆ. ಎರಡು ಕಾಗೆಗಳು ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅನೇಕ ಸೂಚನೆಗಳನ್ನು ನಿಮಗೆ ನೀಡುತ್ತವೆ. ಅದೃಷ್ಟದಿಂದ ಸಾವಿನವರೆಗೆ ಅನೇಕ ಅರ್ಥಗಳು ಇದಕ್ಕಿವೆ. ನಾವಿಂದು ಎರಡು ಕಾಗೆ ಕಾಣಿಸಿಕೊಂಡು ಏನು ಸೂಚನೆ ನೀಡುತ್ತವೆ ಎಂಬುದನ್ನು ನಿಮಗೆ ಹೇಳ್ತೆವೆ.

ಎರಡು ಕಾಗೆ (Crow) ಒಟ್ಟಿಗೆ ಕಾಣಿಸಿಕೊಳ್ಳುವುದು ಸಾಮಾನ್ಯವೇ? : 
ಎರಡು ಕಪ್ಪು ಕಾಗೆಗಳನ್ನು ಒಟ್ಟಿಗೆ ನೋಡುವುದು ಅಸಾಮಾನ್ಯವೇನಲ್ಲ. ಕಪ್ಪು ಕಾಗೆಗಳು ಸಾಮಾನ್ಯವಾಗಿ ಮೂಢನಂಬಿಕೆಗಳೊಂದಿಗೆ ಸಂಬಂಧ ಹೊಂದಿದ್ದರೂ ಎರಡು ಕಾಗೆ ಒಂದೇ ಪ್ರದೇಶದಲ್ಲಿ ಕಾಣುವುದು ತುಂಬಾ ಸಾಮಾನ್ಯವಾಗಿದೆ. 

Peacock feather: ಶನಿ ದೋಷದಿಂದ ಮುಕ್ತರಾಗಲು ನವಿಲುಗರಿ ಬಳಸಿ!

ಪ್ರದೇಶ ಅಥವಾ ಋತುವಿನ ಆಧಾರದ ಮೇಲೆ ಕಾಗೆಗಳ ಹಿಂಡನ್ನು ನಾವು ಕಾಣಬಹುದು. ಕಾಗೆಗಳು ಸಂಯೋಗಕ್ಕಾಗಿ ಜೋಡಿಯಾಗುತ್ತವೆ. ಏಕ ಪತ್ನಿ ಸಂಬಂಧಗಳಲ್ಲಿ ವರ್ಷಪೂರ್ತಿ ಒಟ್ಟಿಗೆ ಇರುತ್ತವೆ. ನೀವು ಎರಡು ಕಾಗೆಗಳನ್ನು ಒಟ್ಟಿಗೆ ನೋಡಿದ್ರೆ ಅವು ದಂಪತಿ ಎನ್ನಬಹುದು. ಸಂತೋಷ (Happiness) ದಿಂದ ಮದುವೆಯಾಗಿದ್ದಾರೆ ಅಥವಾ ಪರಸ್ಪರ ಪ್ರೀತಿ (Love) ಸುತ್ತಿದ್ದಾರೆ ಎಂದುಕೊಳ್ಳಬಹುದು. ಕಾಗೆ ಸಾಮಾಜಿಕ ಜೀವಿಗಳಾಗಿವೆ. ಆಹಾರ (Food) ವನ್ನು ಹುಡುಕಲು ಮತ್ತು ತಮ್ಮ ಗೂಡುಗಳ ಮೇಲೆ ನಿಗಾ ಇಡಲು ಇತರ ಕಾಗೆಗಳ ಜೊತೆ ಗುಂಪುಗೂಡುತ್ತವೆ.  

ಎರಡು ಕಾಗೆಯನ್ನು ಒಟ್ಟಿಗೆ ನೋಡುವುದ್ರ ಅರ್ಥವೇನು? : 
ಎರಡು ಕಾಗೆಗಳನ್ನು ನೋಡುವುದು ಸಾಮಾನ್ಯವಾಗಿ ದುರದೃಷ್ಟದ ಸಂಕೇತವೆಂದು ಭಾವಿಸಲಾಗುತ್ತದೆ. ಕೆಲವರಿಗೆ ಇದು ಅಶಾಂತಿಯನ್ನು ಉಂಟು ಮಾಡುತ್ತದೆ ಎಂದು ನಂಬಲಾಗಿದೆ. ಅಮೆರಿಕನ್ ಸಂಸ್ಕೃತಿ ಸೇರಿದಂತೆ ಅನೇಕ ಸಂಸ್ಕೃತಿಗಳಲ್ಲಿ ಎರಡು ಕಾಗೆಗಳನ್ನು ನೋಡುವುದನ್ನು ಸಕಾರಾತ್ಮಕ ಸಂಕೇತವೆಂದು ಪರಿಗಣಿಸುತ್ತವೆ. ಎರಡು ಕಾಗೆಯನ್ನು ಒಟ್ಟಿಗೆ ನೋಡುವುದು ಅದೃಷ್ಟ ತರುತ್ತದೆ ಎಂದು ಅವರು ನಂಬುತ್ತಾರೆ. ಜೀವನದ ಪ್ರಮುಖ ಬದಲಾವಣೆಗೆ ಇದು ನಾಂದಿಯಾಗುತ್ತದೆ ಎನ್ನಲಾಗುತ್ತದೆ. ಎರಡು ಕಾಗೆಗಳು ನಿಮ್ಮ ಕಣ್ಣಿಗೆ ಬಿದ್ರೆ ಅದು ಸಾಮರಸ್ಯವನ್ನು ಸಹ ಸೂಚಿಸುತ್ತದೆ.  ಎರಡು ಕಾಗೆಗೆ ಸಂಬಂಧಿಸಿದಂತೆ ಬೇರೆ ಬೇರೆ ಕಡೆ ಬೇರೆ ಬೇರೆ ನಂಬಿಕೆಯಿದೆ. 

ದುರಾದೃಷ್ಟ : ಎರಡು ಕಾಗೆ ಒಟ್ಟಿಗೆ ಕಾಣಿಸಿಕೊಂಡ್ರೆ ದುರದೃಷ್ಟ ಬರುತ್ತದೆ. ಹಾಗಾಗಿ ಜಾಗರೂಕರಾಗಿರಬೇಕು ಎಂದು ಯುರೋಪಿಯನ್ನರು ನಂಬುತ್ತಾರೆ. 16ನೇ ಶತಮಾನದಿಂದ ಯುರೋಪಿನ ಜನರು ಎರಡು ಕಾಗೆಯನ್ನು ಒಟ್ಟಿಗೆ ನೋಡಿದ್ರೆ ಅಪಶಕುನ ಎಂದು ನಂಬಲು ಶುರು ಮಾಡಿದ್ರು.

ಕನಸಿನಲ್ಲಿ ಕಾಗೆ : ಇನ್ನು ಕನಸಿನಲ್ಲಿ ಎರಡು ಕಾಗೆ ಕಣ್ಣಿಗೆ ಕಂಡ್ರೆ ಅದನ್ನು ಅದೃಷ್ಟವೆಂದು ನಂಬುವ ಜನರಿದ್ದಾರೆ. ದೊಡ್ಡ ಸಂಪತ್ತು ಶೀಘ್ರವೇ ಲಭಿಸುತ್ತದೆ ಎನ್ನಲಾಗುತ್ತದೆ.

ಋತು ಬದಲಾವಣೆ : ಎರಡು ಕಾಗೆ ಒಟ್ಟಿಗೆ ಕಾಣಿಸುವುದು ಋತು ಬದಲಾವಣೆಯನ್ನು ಸೂಚಿಸುತ್ತದೆ. ಹತ್ತಿರದಲ್ಲಿ 2 ಕಾಗೆಗಳನ್ನು ನೋಡುವುದು ಹೊಸ ಋತುವಿನ ಸೂಚನೆ ಎಂದು ಕೆಲವರು ನಂಬುತ್ತಾರೆ. ಇದನ್ನು ಹೊಸ ಆರಂಭ ಅಥವಾ ಬೆಳವಣಿಗೆಗೆ ಅವಕಾಶ ಎಂದು ತಿಳಿಯಬಹುದು.

ನೋಟು ಎಣಿಸುವಾಗ ಎಂಜಲು ತಾಗಿಸಿದ್ರೆ ಲಕ್ಷ್ಮೀ ದೇವಿಗೆ ಬರುತ್ತಂತೆ ಕೋಪ

ರಕ್ಷಣೆ : ಎರಡು ಕಾಗೆಗಳು ಮೇಲಕ್ಕೆ ಹಾರಿದಾಗ ನೀವು ಒಬ್ಬಂಟಿಯಾಗಿಲ್ಲ ಎಂಬ ಸಂಕೇತವೆಂದು ಅರ್ಥೈಸಬಹುದು. ಕೆಲವು ನಂಬಿಕೆಗಳ ಪ್ರಕಾರ, ಎರಡು ಕಾಗೆಗಳು ಒಟ್ಟಿಗೆ ಹಾರಿದಾಗ ಅದು ರಕ್ಷಣೆ ಮತ್ತು ಒಡನಾಟದ ಸಂಕೇತವಾಗಿ ಕಂಡುಬರುತ್ತದೆ. ಇದನ್ನು ಜೀವನದ ದ್ವಂದ್ವ ಎಂದು ನಂಬುವವರೂ ಇದ್ದಾರೆ.
 

Follow Us:
Download App:
  • android
  • ios