ತಿರುಮಲದಲ್ಲಿ ವಸತಿ ಕೊಠಡಿಗಳ ಬಾಡಿಗೆ ದರ ಭಾರಿ ಹೆಚ್ಚಳ
ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಬರುವ ಭಕ್ತರ ವಸತಿ ಕೊಠಡಿಗಳ ಬಾಡಿಗೆ ದರವನ್ನು ಟಿಟಿಡಿ ಹೆಚ್ಚಳ ಮಾಡಿದೆ. ನಂದಕಂ, ಪಾಂಚಜನ್ಯಂ, ಕೌಸ್ತುಭಂ ಮತ್ತು ವಕುಳಮಾತಾ ಅತಿಥಿಗೃಹಗಳ ಕೊಠಡಿಗಳ ಬಾಡಿಗೆ ದರವನ್ನು 500-600 ರು.ಗಳಿಂದ 1000 ರು.ಗಳಿಗೆ ಏರಿಕೆ ಮಾಡಿದೆ.
ತಿರುಮಲ: ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಬರುವ ಭಕ್ತರ ವಸತಿ ಕೊಠಡಿಗಳ ಬಾಡಿಗೆ ದರವನ್ನು ಟಿಟಿಡಿ ಹೆಚ್ಚಳ ಮಾಡಿದೆ. ನಂದಕಂ, ಪಾಂಚಜನ್ಯಂ, ಕೌಸ್ತುಭಂ ಮತ್ತು ವಕುಳಮಾತಾ ಅತಿಥಿಗೃಹಗಳ ಕೊಠಡಿಗಳ ಬಾಡಿಗೆ ದರವನ್ನು 500-600 ರು.ಗಳಿಂದ 1000 ರು.ಗಳಿಗೆ ಏರಿಕೆ ಮಾಡಿದೆ. ನಾರಾಯಣ ಗಿರಿ ವಿಶ್ರಾಂತಿ ಗೃಹದ 1,2,3 ನೇ ಬ್ಲಾಕ್‌ನ ಬಾಡಿಗೆಯನ್ನು 1500 ರು.ಗಳಿಂದ 1700 ರು.ಗೆ ಏರಿಕೆ ಮಾಡಲಾಗಿದೆ. ವಿಶ್ರಾಂತಿ ಗೃಹ-4ರ ಬಾಡಿಗೆ 750 ರಿಂದ 1700 ರು.ಗೆ ಏರಿಕೆಯಾಗಿದೆ. ಕಾರ್ನರ್ ಸೂಟ್‌ಗಳ ದರ ಜಿಎಸ್‌ಟಿ ಸೇರಿ 2200 ರು.ಗಳಾಷ್ಟಗಿದ್ದು, ವಿಶೇಷ ಕೊಠಡಿಗಳ ಬಾಡಿಗೆ ದರ 2800 ರು.ಗೆ ಏರಿಕೆಯಾಗಿದೆ. ಭಕ್ತಾದಿಗಳು ಬಾಡಿಗೆಯೊಂದಿಗೆ ಠೇವಣಿಯನ್ನು ಕೂಡ ಪಾವತಿಸಬೇಕಾಗಿದೆ.
Tirupati: ಒಂದೇ ದಿನದಲ್ಲಿ ಹತ್ತಿರತ್ತಿರ 8 ಕೋಟಿ ರೂ. ಹುಂಡಿ ಹಣ ಕಂಡ ತಿರುಪತಿ!
ತಿರುಪತಿ ಗರ್ಭಗುಡಿ ಮುಚ್ಚಲ್ಲ: ಮುಖ್ಯ ಅರ್ಚಕ ಸ್ಪಷ್ಟನೆ