Tirupati: ಒಂದೇ ದಿನದಲ್ಲಿ ಹತ್ತಿರತ್ತಿರ 8 ಕೋಟಿ ರೂ. ಹುಂಡಿ ಹಣ ಕಂಡ ತಿರುಪತಿ!
ತಿರುಮಲ ತಿರುಪತಿ ದೇವಸ್ಥಾನದಲ್ಲಿ ಭಕ್ತರ ಕಾಣಿಕೆ ಹೆಚ್ಚೇ ಇರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಒಂದೇ ದಿನಕ್ಕೆ ಸುಮಾರು 8 ಕೋಟಿ ರೂ. ಸಂಗ್ರಹವಾಗಿರುವುದು ಇದೇ ಮೊದಲು. ಹೌದು, ಒಂದೇ ದಿನದಲ್ಲಿ ಹುಂಡಿ ಆದಾಯದಲ್ಲಿ ತಿರುಪತಿ ದೇವಾಲಯ ದಾಖಲೆಯ ಸಾಧನೆ ಮಾಡಿದೆ.
ತಿರುಮಲ ತಿರುಪತಿ ದೇವಸ್ತಾನವು ಹೊಸ ವರ್ಷವನ್ನು ಅತ್ಯಧಿಕ ಹುಂಡಿ ಆದಾಯದೊಂದಿಗೆ ಶುಭಾರಂಭ ಮಾಡಿದೆ. ಜನವರಿ 2, ವೈಕುಂಠ ಏಕಾದಶಿಯಂದು ತಿರುಮಲ ಇತಿಹಾಸದಲ್ಲಿ ಇದುವರೆಗಿನ ಅತಿ ಹೆಚ್ಚು ಹುಂಡಿ ಹಣ ಸಂಗ್ರಹವಾಗಿದೆ. ಮೊದಲೇ ವಿಶ್ವದ ಶ್ರೀಮಂತ ದೇವಸ್ಥಾನ ಎಂಬ ಖ್ಯಾತಿ ಪಡೆದಿರುವ ಹಾಗೂ ಸದಾ ದಾಖಲೆಯ ಭಕ್ತರನ್ನು ಹಾಗೂ ಕಾಣಿಕೆಯನ್ನು ಕಾಣುವ ತಿರುಪತಿ ಈ ಬಾರಿ ಇದುವರೆಗಿನ ಎಲ್ಲ ದಾಖಲೆಗಳನ್ನು ಮುರಿದು, ಒಂದೇ ದಿನದಲ್ಲಿ ಬರೋಬ್ಬರಿ 7.6 ಕೋಟಿ ರೂ. ಹುಂಡಿ ಹಣ ಕಂಡಿದೆ.
ಏಡುಕೊಂಡಲ ಭಗವಂತನ ದೈವಿಕ ಆಶೀರ್ವಾದದೊಂದಿಗೆ ಹೊಸ ವರ್ಷವನ್ನು ಅತ್ಯಂತ ಮಂಗಳಕರ ರೀತಿಯಲ್ಲಿ ಪ್ರಾರಂಭಿಸಲು ಡಿಸೆಂಬರ್ 31ರಿಂದ ಸಾವಿರಾರು ಭಕ್ತರು ತಿರುಮಲಕ್ಕೆ ಬಂದು ತಮ್ಮಪ್ಪನ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದರಿಂದ ಯಾತ್ರಾರ್ಥಿಗಳ ದಟ್ಟಣೆಯು ತಿರುಮಲದಲ್ಲಿ ಉತ್ತುಂಗಕ್ಕೇರಿತ್ತು.
ಈ ಹಿಂದಿನ ದಾಖಲೆ
ಹೊಸ ವರ್ಷವು ವೈಕುಂಠ ಏಕಾದಶಿ ಉತ್ಸವಗಳೊಂದಿಗೆ ಸೇರಿಕೊಳ್ಳುವುದರಿಂದ, ತಿರುಮಲ ದೇವಸ್ಥಾನವು ಸೋಮವಾರದಂದು ಅತಿ ಹೆಚ್ಚು ಏಕದಿನ ಹುಂಡಿ ಸಂಗ್ರಹ ಕಂಡಿದೆ. ಈ ಮೊದಲು, 2022ರ ಅಕ್ಟೋಬರ್ 23ರಂದು, 6.3 ಕೋಟಿ ರೂ.ಗಳ ಒಂದು ದಿನದ ಅತಿ ಹೆಚ್ಚು ಹುಂಡಿ ಸಂಗ್ರಹವನ್ನು ದಾಖಲಿಸಲಾಗಿದೆ ಎಂದು ಟಿಟಿಡಿ ಮೂಲಗಳು ತಿಳಿಸಿವೆ.
ಇದು ಮೊಲದ ವರ್ಷ! ಚೈನೀಸ್ ಜ್ಯೋತಿಷ್ಯದ ಪ್ರಕಾರ ನಿಮ್ಮ ವರ್ಷ, ಭವಿಷ್ಯ ಇಲ್ಲಿದೆ ನೋಡಿ!
ತಿರುಮಲದಲ್ಲಿರುವ ದೇವಸ್ಥಾನದ ಹೊರತಾಗಿ, ಟಿಟಿಡಿ ದೇಶಾದ್ಯಂತ ಐದು ಡಜನ್‌ಗಿಂತಲೂ ಹೆಚ್ಚು ದೇವಾಲಯಗಳನ್ನು ನಿರ್ವಹಿಸುತ್ತಿದೆ. ಟಿಟಿಡಿ ತನ್ನ ದೇವಾಲಯಗಳಲ್ಲಿನ ಹುಂಡಿ ಸಂಗ್ರಹದಲ್ಲಿ ಮಾದರಿ ಬದಲಾವಣೆಯನ್ನು ಕಂಡಿದೆ. 2012-2022ರ ನಡುವಿನ ದಶಕದಲ್ಲಿ ಹುಂಡಿಯ ಆದಾಯ ಬಹುತೇಕ ದುಪ್ಪಟ್ಟಾಗಿದೆ. ಒಂದು ತಿಂಗಳಲ್ಲಿ ಇತರ ಪ್ರಮುಖ ಹಿಂದೂ ದೇಗುಲಗಳಲ್ಲಿ ಪಡೆದ ಸರಾಸರಿ ಹುಂಡಿ ಸಂಗ್ರಹ/ಕಾಣಿಕೆಗಳು ಸರಿಸುಮಾರು ರೂ. 4-5 ಕೋಟಿ ಅಥವಾ ಅದಕ್ಕಿಂತ ಕಡಿಮೆ, ತಿರುಮಲ ದೇವಸ್ಥಾನದಲ್ಲಿ ಒಂದು ದಿನದ ಸರಾಸರಿ ಹುಂಡಿ ಸಂಗ್ರಹವು ಸುಮಾರು ರೂ. 4 ರಿಂದ 6 ಕೋಟಿ ರೂ.
ಪ್ರತಿ ದಿನ ತಿರುಮಲಕ್ಕೆ ಬರುವ ಭಕ್ತರು, ಅವರು ನೀಡುವ ಹುಂಡಿ ಅವರ ಆದಾಯ ಮತ್ತು ಕಾಣಿಕೆಗಳ ಆಧಾರದ ಮೇಲೆ ಸ್ವಲ್ಪ ಬದಲಾಗುತ್ತದೆ. ಅದಕ್ಕಾಗಿಯೇ ಟಿಟಿಡಿ ಇತರ ದೇವಾಲಯಗಳಿಗಿಂತ ಭಿನ್ನವಾಗಿದೆ. ಇದಲ್ಲದೆ, ಭಕ್ತರು ತಮ್ಮ ಪ್ರೀತಿಯ ದೇವರನ್ನು ಭೇಟಿ ಮಾಡಲು ಅನೇಕ ಕಷ್ಟಗಳನ್ನು ಸಹಿಸಿಕೊಂಡ ನಂತರ ಇಲ್ಲಿಗೆ ತಲುಪುತ್ತಾರೆ. ತಿರುಪತಿ ಬಾಲಾಜಿಯನ್ನು ನೋಡಲು ಆತನಿಂದ ಕರೆ ಬರಬೇಕು ಎಂಬ ನಂಬಿಕೆಯೂ ಇದೆ.
ಕೋವಿಡ್ -19ರ ಪ್ರಭಾವದ ಮೊದಲು, ತಿರುಮಲ ದೇವಸ್ಥಾನದಲ್ಲಿ ಸರಾಸರಿ ಮಾಸಿಕ ಹುಂಡಿ ಸಂಗ್ರಹವು ಸುಮಾರು ರೂ. 90 ರಿಂದ 115 ಕೋಟಿ ರೂ. ಮತ್ತು ಏಪ್ರಿಲ್‌ನಲ್ಲಿ ಕೋವಿಡ್ -19 ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕಿದ ನಂತರ, ಭಗವಾನ್ ಬಾಲಾಜಿ ದೇವಸ್ಥಾನದ ಮಾಸಿಕ ಹುಂಡಿ ಸಂಗ್ರಹವು ಹೆಚ್ಚಿನ ಮಟ್ಟದಲ್ಲಿದೆ.
Siddeshwara Sri Quotes: 'ಅಕ್ಷರ ಕಲಿತವ ಭ್ರಷ್ಟನಾಗಬಹುದು, ಸಂಸ್ಕಾರವಂತ ಭ್ರಷ್ಟನಾಗಲಾರ'
ಟಿಟಿಡಿ ಮೌಲ್ಯ
ಅಂದ ಹಾಗೆ, ಕಳೆದ ನವೆಂಬರ್‌ನ ಅಂಕಿಸಂಖ್ಯೆಯಂತೆ ತಿರುಪತಿ ತಿರುಮಲ ಟ್ರಸ್ಟ್‌ನ ನಿವ್ವಳ ಮೌಲ್ಯ ಬರೋಬ್ಬರಿ ₹2.26 ಲಕ್ಷ ಕೋಟಿ. 2019ರಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಸ್ಥಿರ ಠೇವಣಿ ರೂಪದಲ್ಲಿ ಟಿಟಿಡಿಯ ಹೂಡಿಕೆಯು ₹ 13,025 ಕೋಟಿ. ಅದು ಈಗ ₹ 15,938 ಕೋಟಿಗೆ ಏರಿಕೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಹೂಡಿಕೆಯಲ್ಲಿ ₹2,900 ಕೋಟಿ ಹೆಚ್ಚಳವಾಗಿದೆ
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.