Asianet Suvarna News Asianet Suvarna News

ತಿರುಪತಿ ಹುಂಡಿಗೆ ಎಂಟೇ ತಿಂಗಳಲ್ಲಿ 1000 ಕೋಟಿ ರೂ. ಗೂ ಅಧಿಕ ಹಣ ಸಂಗ್ರಹ..!

ಕೋವಿಡ್‌ ಸಾಂಕ್ರಾಮಿಕದಿಂದಾಗಿ ತಿರುಪತಿ ದೇವಸ್ಥಾನದ ಹುಂಡಿ ಹಣ 2020-21ರಲ್ಲಿ 731 ಕೋಟಿ ರೂ. ಹಾಗೂ 2021-22ರಲ್ಲಿ 933 ಕೋಟಿ ರೂ.ಗೆ ಇಳಿಕೆಯಾಗಿತ್ತು. ಈ ಹಣಕಾಸು ವರ್ಷದಲ್ಲಿ ಕೋವಿಡ್‌ ಕಾಲಕ್ಕೆ ಹೋಲಿಸಿದರೆ ಹುಂಡಿ ಹಣದಲ್ಲಿ ಶೇ.32ರಷ್ಟು ಏರಿಕೆಯಾಗಿದೆ.

tirumala hundi registers roaring income post covid nets over 1000 crore in 8 months ash
Author
First Published Dec 25, 2022, 8:15 AM IST

ತಿರುಮಲ: ಕೋವಿಡ್‌ (COVID) ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ವಿಧಿಸಲಾಗಿದ್ದ ನಿರ್ಬಂಧಗಳನ್ನು(Restrictions) ತೆಗೆದ ಬಳಿಕ ತಿರುಪತಿ ದೇವಸ್ಥಾನದ (Tirupati Temple) ಹುಂಡಿಯಲ್ಲಿ (Hundi) ದಾಖಲೆ ಮೊತ್ತದ ಹಣ ಸಂಗ್ರಹವಾಗಿದೆ (Collection). ಕೇವಲ 8 ತಿಂಗಳುಗಳಲ್ಲಿ 1 ಸಾವಿರ ಕೋಟಿ ರೂ.ಗೂ ಹೆಚ್ಚು ಹುಂಡಿ ಹಣ ಭಕ್ತರಿಂದ (Devotees) ಬಂದಿದೆ ಎಂದು ದೇವಸ್ಥಾನ ಮಂಡಳಿ (Temple Board) ತಿಳಿಸಿದೆ. ಕೋವಿಡ್‌ ಸಾಂಕ್ರಾಮಿಕದಿಂದಾಗಿ ತಿರುಪತಿ ದೇವಸ್ಥಾನದ ಹುಂಡಿ ಹಣ 2020-21ರಲ್ಲಿ 731 ಕೋಟಿ ರೂ. ಹಾಗೂ 2021-22ರಲ್ಲಿ 933 ಕೋಟಿ ರೂ.ಗೆ ಇಳಿಕೆಯಾಗಿತ್ತು. ಈ ಹಣಕಾಸು ವರ್ಷದಲ್ಲಿ ಕೋವಿಡ್‌ ಕಾಲಕ್ಕೆ ಹೋಲಿಸಿದರೆ ಹುಂಡಿ ಹಣದಲ್ಲಿ ಶೇ.32ರಷ್ಟು ಏರಿಕೆಯಾಗಿದೆ. ಅಂದರೆ ಈ ವರ್ಷದ ಏಪ್ರಿಲ್‌ನಿಂದ ತಿರುಮಲ ದೇವಸ್ಥಾನದಲ್ಲಿ ದಿನಕ್ಕೆ  4 ಕೋಟಿ ರೂ. ಗೂ ಅಧಿಕ ಸಂಗ್ರಹವಾಗಿದೆ.

ಈ ವರ್ಷದ ಮಾರ್ಚ್‌ನಲ್ಲಿ ಕೋವಿಡ್ ಪ್ರೋಟೋಕಾಲ್‌ಗಳ ಸಂಪೂರ್ಣ ಸಡಿಲಿಕೆಯ ಬಳಿಕ ತಿರುಮಲದ ವೆಂಕಟೇಶ್ವರ ದೇವಸ್ಥಾನದಲ್ಲಿರುವ 'ಹುಂಡಿ' ಆದಾಯದಲ್ಲಿ ಅಪಾರ ಹೆಚ್ಚಳವನ್ನು ದಾಖಲಿಸುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 8 ತಿಂಗಳ ಅವಧಿಯಲ್ಲಿ ₹ 1,000 ಕೋಟಿಯ ಗಡಿ ದಾಟಿರುವುದು ದೇವಸ್ಥಾನದ ಹುಂಡಿಯಿಂದ ಆಗುತ್ತಿರುವ ಲಾಭವನ್ನು ದೃಢೀಕರಿಸಿದೆ.

ಇದನ್ನು ಓದಿ: ತಿರುಪತಿ ವಿಐಪಿ ದರ್ಶನ ಸಮಯ ಬದಲಿನಿಂದ ವಸತಿ ಸಮಸ್ಯೆ

ಆರ್ಥಿಕ ವರ್ಷದಲ್ಲಿ ನವೆಂಬರ್‌ವರೆಗೆ ಸತತ 8 ತಿಂಗಳ ಕಾಲ ಪ್ರತಿ ತಿಂಗಳಲ್ಲಿ ₹ 100 ಕೋಟಿ ಗೂ ಅಧಿಕ ಹುಂಡಿಗೆ ಸಂಗ್ರಹವಾಗುವ ಮೂಲಕ ದಾಖಲೆಯನ್ನು ಸೃಷ್ಟಿದೆ. ಪ್ರಸಕ್ತ ತಿಂಗಳಲ್ಲೂ ದಾಖಲೆ ಮುಂದುವರೆಸುವ ನಿರೀಕ್ಷೆಯಿದ್ದು, ಈಗಾಗಲೇ ಡಿಸೆಂಬರ್ 21 ರವರೆಗೆ ಆದಾಯ 88 ಕೋಟಿ ರೂ. ದಾಟಿದೆ ಎಂದೂ ತಿಳಿದುಬಂದಿದೆ. ಒಂದೇ ದಿನದಲ್ಲಿ ಹುಂಡಿ ₹ 6 ಕೋಟಿ ದಾಟುವ ಮೂಲಕ ದೇವಾಲಯದ ಇತಿಹಾಸದಲ್ಲಿ ಹೊಸ ಪುಟ ಬರೆಯುವುದಕ್ಕೆ ಈ ವರ್ಷ ಸಾಕ್ಷಿಯಾಗಿದೆ. ಈ ವರ್ಷ ಜುಲೈ 4 ರಂದು ಹುಂಡಿಯು ₹ 6.18 ಕೋಟಿ ಆದಾಯ ಗಳಿಸಿದ್ದು, ಏಪ್ರಿಲ್ 1, 2012 ರಂದು ಹಿಂದಿನ ದಾಖಲೆಯ ₹ 5.73 ಕೋಟಿಯನ್ನು ಮೀರಿಸಿದೆ.

ಕೋವಿಡ್‌ ಪೂರ್ವ 2019-20ರಲ್ಲಿ 1,150 ಕೋಟಿ ರೂ. ಸಂಗ್ರಹವಾಗಿತ್ತು. ಆದರೆ ಈ ವರ್ಷ ನವೆಂಬರ್‌ವರೆಗೆ ಸಂಗ್ರಹ 1,033 ಕೋಟಿ ರೂ. ಗೆ ಏರಿಕೆಯಾಗಿದೆ. ಹೀಗಾಗಿ 2019-20ರ ದಾಖಲೆಯನ್ನು ಇದು ಮುರಿಯುವ ಸಾಧ್ಯತೆ ಇದೆ. ಏಪ್ರಿಲ್‌ನಲ್ಲಿ 127.66 ಕೋಟಿ ರೂ., ಮೇ (129.93), ಜೂನ್‌ (123.76), ಜುಲೈ (139.47), ಆಗಸ್ಟ್‌ (140.34), ಸೆಪ್ಟೆಂಬರ್‌ (122.18), ಅಕ್ಟೋಬರ್‌ (122.83) ಮತ್ತು ನವೆಂಬರ್‌ನಲ್ಲಿ 127.31 ಕೋಟಿ ರೂ. ಸಂಗ್ರಹವಾಗಿದೆ. 

ಇದನ್ನೂ ಓದಿ: Tirupati ಲಡ್ಡುಗಳ ತೂಕ ಇಳಿಸಿಲ್ಲ: ಟಿಟಿಡಿ ಸ್ಪಷ್ಟನೆ

1950 ರ ದಶಕದಲ್ಲಿ ದಿನಕ್ಕೆ ₹ 1 ಲಕ್ಷಕ್ಕಿಂತ ಕಡಿಮೆ ಇದ್ದ ಹುಂಡಿ ಸಂಗ್ರಹವು ಮೊದಲ ಬಾರಿಗೆ 1958 ರಲ್ಲಿ ಗಡಿ ದಾಟಿತು ಮತ್ತು 3 ದಶಕಗಳ ನಂತರ 1990 ರ ದಶಕದಲ್ಲಿ ದಿನಕ್ಕೆ ₹ 1 ಕೋಟಿ ಗಡಿಯನ್ನು ಮುಟ್ಟಿತು ಮತ್ತು ಇದುವರೆಗೆ ₹ 3 ಕೋಟಿಗೆ ಸೀಮಿತವಾಗಿತ್ತು. ಸಾಂಕ್ರಾಮಿಕ ರೋಗದ ವಿರಾಮ ಮತ್ತು ಈ ವರ್ಷದ ಏಪ್ರಿಲ್ ಆರಂಭದಿಂದ ದಿನಕ್ಕೆ ₹ 4 ಕೋಟಿಗಳಷ್ಟು (ಸರಾಸರಿಯಾಗಿ) ಹಣ ಸಂಗ್ರಹವಾಗಿದೆ.

ಇದೇ ರೀತಿಯ ಮುಂದುವರಿದರೆ ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ವಾರ್ಷಿಕ ಹುಂಡಿ ಆದಾಯವು ದಾಖಲೆಯ ₹1,500-ಕೋಟಿ ಗಡಿ ದಾಟಲಿದೆ ಎಂದು ಟಿಟಿಡಿ ಅಧಿಕಾರಿಗಳು ಆಶಾವಾದ ವ್ಯಕ್ತಪಡಿಸಿದ್ದಾರೆ. ನಿರಂತರವಾಗಿ ಬೆಳೆಯುತ್ತಿರುವ ಹುಂಡಿ ಆದಾಯದ ಜೊತೆಗೆ, ಟಿಟಿಡಿಯು ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸ್ಥಿರ ಠೇವಣಿಗಳ ರೂಪದಲ್ಲಿ ₹ 16,000 ಕೋಟಿಗಳನ್ನು ಹೊಂದಿದೆ ಮತ್ತು ವಾರ್ಷಿಕವಾಗಿ ಈ ಠೇವಣಿಗಳ ಮೇಲಿನ ಬಡ್ಡಿಯ ರೂಪದಲ್ಲಿ ಬರುವ ಆದಾಯವು ಪೀಠಾಧಿಪತಿಯ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಇದನ್ನೂ ಓದಿ: ತಿಮ್ಮಪ್ಪನಿಗೆ ದೇಶದ ಎಷ್ಟು ಕಡೆ ಆಸ್ತಿ ಇದೆ: ಇರುವ ಬಂಗಾರವೆಷ್ಟು? ಬ್ಯಾಂಕಲ್ಲಿರುವ ದುಡ್ಡೆಷ್ಟು ಗೊತ್ತಾ?

Follow Us:
Download App:
  • android
  • ios