Asianet Suvarna News Asianet Suvarna News

ತಿರುಪತಿ ವಿಐಪಿ ದರ್ಶನ ಸಮಯ ಬದಲಿನಿಂದ ವಸತಿ ಸಮಸ್ಯೆ

ಇಲ್ಲಿನ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿನ ವಿಐಪಿ ದರ್ಶನದ ಸಮಯ ಬದಲಾವಣೆಯಿಂದಾಗಿ ಇದೀಗ ವಸತಿ ಸಮಸ್ಯೆ ತಲೆದೋರಿದೆ. ಡಿ.1ರಿಂದ ಟಿಟಿಡಿಯು ವಿಐಪಿ ದರ್ಶನ ಅವಧಿಯನ್ನು ಬೆಳಗ್ಗೆ 8:30 ರಿಂದ 11:30 ರವರೆಗೆ ನಿಗದಿಪಡಿಸಿತ್ತು.

Accommodation problem due to change of Tirupati VIP darshan time akb
Author
First Published Dec 18, 2022, 10:56 AM IST

ತಿರುಪತಿ: ಇಲ್ಲಿನ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿನ ವಿಐಪಿ ದರ್ಶನದ ಸಮಯ ಬದಲಾವಣೆಯಿಂದಾಗಿ ಇದೀಗ ವಸತಿ ಸಮಸ್ಯೆ ತಲೆದೋರಿದೆ. ಡಿ.1ರಿಂದ ಟಿಟಿಡಿಯು ವಿಐಪಿ ದರ್ಶನ ಅವಧಿಯನ್ನು ಬೆಳಗ್ಗೆ 8:30 ರಿಂದ 11:30 ರವರೆಗೆ ನಿಗದಿಪಡಿಸಿತ್ತು. ಇದಕ್ಕೂ ಮುನ್ನ ವಿಐಪಿ ದರ್ಶನ ಸಮಯವು ಬೆಳಗ್ಗೆ 8 ಗಂಟೆಗೆ ಮುಕ್ತಾಯವಾಗುತ್ತಿದ್ದು, 10 ಗಂಟೆಗೆ ವಿಐಪಿ ಯಾತ್ರಾರ್ಥಿಗಳು ಅತಿಥಿ ಗೃಹಗಳಿಂದ ತೆರಳುತ್ತಿದ್ದರು. ಇದರಿಂದ ಬೇರೆಯವರಿಗೆ ಕೊಠಡಿ ನೀಡಬಹುದಿತ್ತು. ಆದರೆ ಆದರೀಗ ದರ್ಶನ ಅವಧಿ ತಡವಾಗಿರುವುದರಿಂದ ವಿಐಪಿ ಯಾತ್ರಿಕರು ಮಧ್ಯಾಹ್ನದ ಬಳಿಕವೇ ಅತಿಥಿಗೃಹ ಖಾಲಿ ಮಾಡುತ್ತಾರೆ. ಇದರಿಂದ ಎಲ್ಲರಿಗೆ ವಸತಿ ವ್ಯವಸ್ಥೆ ದೊರಕುತ್ತಿಲ್ಲ. ಮುಂಗಡ ಬುಕ್ಕಿಂಗ್‌ ಮತ್ತು ಆಗಮನದ ಸೂಚನೆಯ ಹೊರತಾಗಿಯೂ, ಭಕ್ತರು ಪದ್ಮಾವತಿ ಅತಿಥಿಗೃಹದ ವಿಚಾರಣ ಕಚೇರಿಯ ಬಳಿಗೆ ತಲುಪುವುದು ಕಷ್ಟಕರವಾಗಿದೆ ಎಂದು ಮೂಲಗಳು ತಿಳಿಸಿವೆ.

ಸಮಯ ಬೆ.5.30ರ ಬದಲು 8 ರಿಂದ ದರ್ಶನ

ಇದೇ ಡಿಸೆಂಬರ್ 1 ರಿಂದ ಬೆಳಗ್ಗೆ 5.30 ರ ಬದಲು 8 ಗಂಟೆಗೆ  ವಿಐಪಿ (VIP Darshan) ಮಂದಿಗೆ ದರ್ಶನ ನೀಡಲು  ತಿರುಪತಿ ತಿರುಮಲ ದೇವಸ್ಥಾನ(TTD) ಸಮಿತಿ ನಿರ್ಧರಿಸಿತ್ತು. ಸಾಮಾನ್ಯ ಭಕ್ತರಿಗೂ ಸಹ ಬೆಳಗ್ಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲು ಸಮಯ ಬದಲಾವಣೆ ಮಾಡಲಾಗಿತ್ತು. ಪ್ರಾಯೋಗಿಕವಾಗಿ ದರ್ಶನದ ಸಮಯ ಬದಲು ಮಾಡಿದ್ದು, ಯಶಸ್ವಿಯಾದರೆ ಮಾತ್ರ ಕಾಯಂ ಸಮಯ ಬದಲು ಮಾಡಲಾಗುವುದು ಎಂದು ದೇವಸ್ಥಾನ ಸಮಿತಿ ತಿಳಿಸಿತ್ತು. ಆದರೆ ಈಗ ಈ ಬದಲಾವಣೆಯಿಂದ ವಸತಿ ಸಮಸ್ಯೆ ಆಗಿರುವ ಹಿನ್ನೆಲೆಯಲ್ಲಿ ಮತ್ತೆ ಹಳೆ ಸಮಯವೇ ಜಾರಿಗೆ ಬರಲಿದೆಯೋ ಎಂಬುದು ಕಾದು ನೋಡಬೇಕಿದೆ.

ತಿಮ್ಮಪ್ಪನಿಗೆ ದೇಶದ ಎಷ್ಟು ಕಡೆ ಆಸ್ತಿ ಇದೆ: ಇರುವ ಬಂಗಾರವೆಷ್ಟು? ಬ್ಯಾಂಕಲ್ಲಿರುವ ದುಡ್ಡೆಷ್ಟು ಗೊತ್ತಾ?

ತಿರುಪತಿಯಲ್ಲಿ ನವೆಂಬರ್‌ನಿಂದ ವಿಐಪಿ ದರ್ಶನ ವೇಳೆ ಬದಲಾವಣೆ

Follow Us:
Download App:
  • android
  • ios