Tirupati ಲಡ್ಡುಗಳ ತೂಕ ಇಳಿಸಿಲ್ಲ: ಟಿಟಿಡಿ ಸ್ಪಷ್ಟನೆ

ತಿರುಪತಿ ಲಡ್ಡುಗಳ ತೂಕದಲ್ಲಿ ವ್ಯತ್ಯಾಸ ಮಾಡಿಲ್ಲ ಎಂದು ಟಿಟಿಡಿ ಸ್ಪಷ್ಟನೆ ನೀಡಿದೆ. 180 ಗ್ರಾಂ ತೂಕ 70 ಗ್ರಾಂಗೆ ಇಳಿಕೆ ಎಂಬ ವಿಡಿಯೋ ಬಗ್ಗೆ ಟಿಟಿಡಿ ಈ ಸ್ಪಷ್ಟನೆ ನೀಡಿದೆ. 

ttd responds after viral video claims laddus are under weight ash

ತಿರುಪತಿ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ (Social Media) ತಿರುಮಲ ತಿರುಪತಿ ದೇವಸ್ಥಾನದ (Tirumala Tirupati Devasthanam) ಲಡ್ಡುಗಳ (Laddu) ತೂಕವನ್ನು (Weight) 180 ಗ್ರಾಂನಿಂದ 70 ಗ್ರಾಂಗೆ ಕಡಿಮೆ ಮಾಡಲಾಗಿದೆ ಎನ್ನುವ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಟಿಟಿಡಿ (TTD) ಲಡ್ಡುಗಳ ಗಾತ್ರ, ತೂಕ ಅಥವಾ ಗುಣಮಟ್ಟದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ‘ಲಡ್ಡುವನ್ನು ‘ಪೋಟು’ ಸಿಬ್ಬಂದಿ ತಮ್ಮ ಕೈಯಿಂದಲೇ ತಯಾರಿಸುತ್ತಿದ್ದು ಇದರ ಗಾತ್ರದಲ್ಲಿ ಅಥವಾ ಗುಣಮಟ್ಟದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಪ್ರತಿ ಲಡ್ಡು ನಿಗದಿ ಪಡಿಸಿದಂತೆ 160 ರಿಂದ 180 ಗ್ರಾಂ ತೂಗುತ್ತದೆ. ಹೀಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಲಾಗುತ್ತಿರುವ ಗಾಳಿ ಸುದ್ದಿಯನ್ನು ನಂಬಬೇಡಿ’ ಎಂದು ಟಿಟಿಡಿ ಭಕ್ತಾದಿಗಳಲ್ಲಿ ಮನವಿ ಮಾಡಿದೆ.

‘ಲಡ್ಡುಗಳನ್ನು ಟ್ರೇನಲ್ಲಿಟ್ಟು ಮಾರಾಟ ಮಾಡುವ ಮುನ್ನ ತೂಕ ಪರೀಕ್ಷಿಸಲಾಗುತ್ತದೆ. ತೂಕ ಯಂತ್ರದ ತಾಂತ್ರಿಕ ದೋಷದಿಂದಾಗಿ ಒಂದು ಕೌಂಟರ್‌ನಲ್ಲಿ ಲಡ್ಡು ತೂಕ 70 ಗ್ರಾಂಗಿಂತ ಕಡಿಮೆ ಇರುವುದಾಗಿ ತೋರಿಸಿದೆ. ಭಕ್ತರು ಇದನ್ನು ದೇವಾಲಯದ ಸಿಬ್ಬಂದಿ ಗಮನಕ್ಕೆ ತರದೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಈ ಮೂಲಕ ದೇವಾಲಯದ (Temple) ಪ್ರತಿಷ್ಠೆಗೆ ಧಕ್ಕೆ ತರಲು ಯತ್ನಿಸಿದ್ದು ವಿಷಾದನೀಯ’ ಎಂದು ಟಿಟಿಡಿ ಹೇಳಿದೆ.

ಇದನ್ನು ಓದಿ: Tirupati ದರ್ಶನಕ್ಕಾಗಿ 48 ಗಂಟೆ ಕ್ಯೂ: ಭಕ್ತರ ಸರತಿ ಸಾಲು 4 ಕಿ.ಮೀ. ಗೂ ಉದ್ದ..!

ಲಡ್ಡು ಪ್ರಸಾದ ತಯಾರಿಕೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳುತ್ತೇವೆ ಎಂದೂ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಗುರುವಾರ ಸ್ಪಷ್ಟವಾಗಿ ಸ್ಪಷ್ಟಪಡಿಸಿವೆ. ಲಡ್ಡುಗಳ ಗುಣಮಟ್ಟ ಮತ್ತು ಪ್ರಮಾಣದ ಬಗ್ಗೆ ಭಕ್ತರಿಗೆ ಯಾವುದೇ ಅನುಮಾನ ಬೇಡ ಎಂದೂ ದೇವಸ್ಥಾನದ ಟ್ರಸ್ಟ್ ಕೋರಿದೆ.

ಇತ್ತೀಚೆಗೆ ಭಕ್ತರೊಬ್ಬರು ಲಡ್ಡುವಿನ ತೂಕ ಇರುವುದಕ್ಕಿಂತ ಕಡಿಮೆ ಇದೆ ಎಂದು ದೂರಿದ ನಂತರ TTDಯ ಜಾಹೀರಾತುಗಳು ಸ್ಪಷ್ಟೀಕರಣವನ್ನು ನೀಡಿವೆ. 160-180 ಗ್ರಾಂ ತೂಕ ಇರಬೇಕಾದ ಲಡ್ಡುಗಳು 90-110 ಗ್ರಾಂ ತೂಗುತ್ತಿದ್ದ ವಿಡಿಯೋ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿತ್ತು.

ಇದನ್ನೂ ಓದಿ: ತಿರುಪತಿಯಲ್ಲಿ ನವೆಂಬರ್‌ನಿಂದ ವಿಐಪಿ ದರ್ಶನ ವೇಳೆ ಬದಲಾವಣೆ

ಗುತ್ತಿಗೆ ಕಾರ್ಮಿಕರಿಗೆ ಈ ಬಗ್ಗೆ ತಿಳುವಳಿಕೆ ಇಲ್ಲದಿರುವುದರಿಂದ ಗೊಂದಲ ಉಂಟಾಗಿದೆ ಎಂದು ದೇವಸ್ಥಾನದ ಟ್ರಸ್ಟ್ ಸಮರ್ಥಿಸಿಕೊಂಡಿದೆ. ವದಂತಿಗಳನ್ನು ನಂಬಬೇಡಿ ಎಂದು ಭಕ್ತರಿಗೆ ಮನವಿ ಮಾಡಿದ ಟಿಟಿಡಿ ಅಧಿಕಾರಿಗಳು, “ಭಕ್ತರು ಸಾಮಾಜಿಕ ಮಾಧ್ಯಮದಲ್ಲಿ ಸಮಸ್ಯೆಯನ್ನು ವರದಿ ಮಾಡಲು ಆಯ್ಕೆ ಮಾಡಿಕೊಂಡಿರುವುದು ಅಹಿತಕರ ಮತ್ತು ಲಕ್ಷಾಂತರ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ” ಎಂದು ಹೇಳಿದರು.

ಇದನ್ನೂ ಓದಿ: ತಿಮ್ಮಪ್ಪನಿಗೆ ದೇಶದ ಎಷ್ಟು ಕಡೆ ಆಸ್ತಿ ಇದೆ: ಇರುವ ಬಂಗಾರವೆಷ್ಟು? ಬ್ಯಾಂಕಲ್ಲಿರುವ ದುಡ್ಡೆಷ್ಟು ಗೊತ್ತಾ?

Latest Videos
Follow Us:
Download App:
  • android
  • ios