ರಾಮ್‌ಚರಣ್ ಡೆಬ್ಯುಟ್ ಸಿನಿಮಾ ಮಾಡಲು ರಾಜಮೌಳಿ ನಿರಾಕರಿಸಿದ್ದೇಕೆ?
ರಾಮ್‌ಚರಣ್ ತೆಲುಗು ಮೆಗಾ ಸ್ಟಾರ್ ಚಿರಂಜೀವಿ ಪುತ್ರನಾಗಿದ್ದರೂ. ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ರಾಮ್‌ಚರಣ್ ಅವರ ಚೊಚ್ಚಲ ಚಿತ್ರವನ್ನು ನಿರ್ದೇಶನ ಮಾಡಲು ನಿರಾಕರಿಸಿದ್ದರು ಎಂಬ ವಿಚಾರ ನಿಮಗೆ ಗೊತ್ತಾ?

ಮೆಗಾ ಪವರ್ ಸ್ಟಾರ್ ರಾಮ್ ಚರಣ್ 'ಚಿರುತ' ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು. ಚಿರಂಜೀವಿ ಪುತ್ರನಾಗಿ ಮೊದಲ ಸಿನಿಮಾದಲ್ಲೇ ಎಲ್ಲರನ್ನೂ ಮೆಚ್ಚಿಸಿದರು. ಡ್ಯಾನ್ಸ್, ಫೈಟ್ಸ್ ವಿಷಯದಲ್ಲಿ ಫ್ಯಾನ್ಸ್ ನಿರೀಕ್ಷೆಗೆ ತಕ್ಕಂತೆ ಇದ್ದರು. ಹೀಗೆ ರಾಮ್‌ಚರಣ್‌ಗೆ ಗ್ರ್ಯಾಂಡ್ ಎಂಟ್ರಿ ಸಿಕ್ಕಿತು. ಆದರೆ ರಾಮ್ ಚರಣ್ ಮೊದಲ ಸಿನಿಮಾ ರಾಜಮೌಳಿ ನಿರ್ದೇಶನದಲ್ಲಿರಬೇಕಿತ್ತು. ಆದರೆ ಚರಣ್ ಬಾಡಿ ಲ್ಯಾಂಗ್ವೇಜ್ ನೋಡಿದ ರಾಜಮೌಳಿ ಮೊದಲ ಸಿನಿಮಾದ ಬದಲು ಎರಡನೇ ಸಿನಿಮಾ ಮಾಡ್ತೀನಿ ಅಂತ ಚಿರುಗೆ ಹೇಳಿದ್ರಂತೆ.
ಆದರೆ 'ಚಿರುತ'ದಲ್ಲಿ ರಾಮ್ ಚರಣ್ ಸೀರಿಯಸ್ ಲುಕ್ಸ್ ರಾಜಮೌಳಿಗೆ ಇಷ್ಟ ಆಗಿದೆ. ಇದಾದ ನಂತರ ಬಿಗ್ ಬಜೆಟ್ ಸಿನಿಮಾ ಕೂಡ ಮಾಡಬಲ್ಲ ಅನ್ನೋ ನಂಬಿಕೆ ಬಂದಿದೆ. ಹೀಗೆ ಇದಾದ ನಂತರವೇ 'ಮಗಧೀರ' ಶುರು ಆಯ್ತು. ಹೇಗಿದೆ ನೋಡಿ ಸ್ಟಾರ್ ನಟನ ಪುತ್ರನಾದರೂ ರಾಮ್ ಚರಣ್‌ರ ಮೇಲೆ ರಾಜಮೌಳಿಗೆ ನಂಬಿಕೆ ಇರಲಿಲ್ಲ, ಅಲ್ಲದೇ ರಾಮ್‌ಚರಣ್ ಅವರನ್ನು ಮೊದಲ ಬಾರಿಗೆ ನೋಡಿದಾಗ ರಾಜಮೌಳಿ ಪತ್ನಿ ರಮಾ ರಾಜಮೌಳಿ ರಿಯಾಕ್ಷನ್ ಹೇಗಿತ್ತು ಅಂತ ನೋಡೋಣ.
ರಮಾ ರಾಜಮೌಳಿ ಒಂದು ಇಂಟರ್ವ್ಯೂನಲ್ಲಿ, ರಾಮ್ ಚರಣ್ ಜೊತೆ ಹಾರ್ಸ್ ರೈಡಿಂಗ್, ಫೈಟ್ಸ್ ಇರೋ ಬಿಗ್ ಬಜೆಟ್ ಸಿನಿಮಾ ಮಾಡ್ತಿದ್ದೀವಿ ಅಂತ ಹೇಳಿದ್ರು. ನಾನು ಚರಣ್‌ರನ್ನ 'ಚಿರುತ'ದಲ್ಲಿ ಮೊದಲ ಬಾರಿಗೆ ನೋಡಿದೆ. ಆವರ ಕಣ್ಣುಗಳು ತುಂಬಾ ಪವರ್‌ಫುಲ್ ಅನ್ಸಿತು. ಸ್ಕ್ರೀನ್ ಪ್ರಸೆನ್ಸ್ ಚೆನ್ನಾಗಿರುತ್ತೆ ಅಂತ ಅಂದುಕೊಂಡೆ ಎಂದಿದ್ದರು.
'ಮಗಧೀರ' ಸಿನಿಮಾದ ಸ್ಕ್ರೀನ್ ಟೆಸ್ಟ್‌ಗೆ ಚರಣ್‌ರನ್ನ ಮೊದಲ ಬಾರಿಗೆ ಭೇಟಿ ಆದೆ. ಆವರ ಕೂದಲು ತುಂಬಾ ಚೆನ್ನಾಗಿತ್ತು. ರಾಜಮೌಳಿಗೆ, ಹಾರ್ಸ್ ರೈಡಿಂಗ್ ಸೀನ್ಸ್‌ನಲ್ಲಿ ಕೂದಲು ಗಾಳಿಯಲ್ಲಿ ಹಾರುತ್ತಾ ಇದ್ರೆ ಸ್ಟೈಲಿಶ್ ಆಗಿ ಇರುತ್ತೆ ಅಂತ ಹೇಳಿದೆ. ರಾಜಮೌಳಿ ಕೂಡ ಕೂದಲು ಚೆನ್ನಾಗಿ ಬೆಳೆಸೋಣ ಅಂದ್ರು.
ಹೀಗೆ 'ಮಗಧೀರ'ದಲ್ಲಿ ರಾಮ್ ಚರಣ್ ಲಾಂಗ್ ಹೇರ್ ಲುಕ್ ಫೈನಲ್ ಆಯ್ತು. ಚರಣ್ ವಾರಿಯರ್ ಆಗಿರೋದ್ರಿಂದ ಆರ್ಮರ್ ಡಿಸೈನಿಂಗ್‌ಗೆ ಸ್ಪೆಷಲ್ ಕೇರ್ ತಗೊಂಡ್ವಿ ಅಂತ ರಮಾ ರಾಜಮೌಳಿ ಹೇಳಿದ್ರು. 'ಮಗಧೀರ'ಗೆ ಅವರು ಕಾಸ್ಟ್ಯೂಮ್ ಡಿಸೈನರ್ ಆಗಿದ್ರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.