ಕಾಳ ಸರ್ಪದೋಷಕ್ಕೆ ಪರಿಹಾರ ಮಾಡಿಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ
ಪ್ರಕೃತಿ ಹಾಗೂ ಮನುಷ್ಯನ ಕಾಮನೆಯ ಸಂಕೇತವಾದ ನಾಗರಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನಮಾನವಿದೆ. ಹಾವನ್ನೇ ದೇವರೆಂದು ಪೂಜಿಸುವ ಹಿಂದೂಗಳು, ಶ್ರಾವಣ ಮಾಸದಲ್ಲಿ ನಾಗರ ಪಂಚಮಿಯನ್ನು ಆಚರಿಸುತ್ತಾರೆ. ನಾಗರ ಹಾವು ಹಾಗೂ ಕಾಳ ಸರ್ಪಕ್ಕೆ ಜ್ಯೋತಿಷ್ಯದಲ್ಲಿಯೂ ವಿಶೇಷ ಸ್ಥಾನಮಾನವಿದ್ದು, ಹಾವನ್ನು ಸಾಯಿಸುವುದಾಗಲಿ, ಹಿಂಸಿಸುವುದಾಗಲಿ ಮಾಡಿದರೆ, ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಭಯವಿದೆ. ಹಾವಿನ ದ್ವೇಷ 12 ವರ್ಷವೆನ್ನುತ್ತಾರೆ. ಅಲ್ಲದೇ ಜನ್ಮ ಕುಂಡಲಿಯಲ್ಲಿ ರಾಹು-ಕೇತುವಿನ ಸ್ಥಾನದಿಂದ ಕಾಣಿಸಿಕೊಳ್ಳವ ದೋಷವೇ ಕಾಳ ಸರ್ಪ ದೋಷ. ಅನಂತ, ವಾಸುಕಿ, ಪದ್ಮನಾಭ, ಕುಳಿಕ, ಶಂಕಪಾಲ, ಮಹಾ ಪದ್ಮ, ತಕ್ಷಕ, ಶೇಷ, ಘಟಕ ಎನ್ನುವ 9 ಬಗೆಯ ಸರ್ಪಗಳಿವೆ. ರಾಹು ಕೇತುಗಳು ಇರುವ ಮನೆಗಳಿಗೆ ಅನುಗುಣವಾಗಿ ಯಾವ ಸರ್ಪ ದೋಷ ಎಂದು ಗುರುತಿಸಲಾಗುವುದು. ಇವುಗಳಲ್ಲಿ ಹಲವು ವಿಧವಿದ್ದು, ದೋಷಕ್ಕೆ ಪರಿಹಾರವೇನು?
27 ವರ್ಷಗಳ ಕಾಲ ಬಾಧಿಸುವ ಇದು ದೀರ್ಘಾವಧಿಯ ಕಾಳ ಸರ್ಪ ಯೋಗ. ರಾಹು ಒಂದನೇ ಮನೆಯಲ್ಲಿ ಹಾಗೂ ಕೇತು ಏಳನೇ ಮನೆಯಲ್ಲಿ ಇದ್ದರೆ ಅನಂತ ಕಾಳ ಸರ್ಪಯೋಗ ಕಾಡುತ್ತೆ. ಕೀಳು ಮನೋಭಾವ ಹೊಂದಿರುವ ಈ ದೋಷಿಗಳು, ಅನಾರೋಗ್ಯ, ದಾಂಪತ್ಯ ವಿರಸ, ಉದ್ಯೋಗ ತೊಂದರೆ ಅನುಭವಿಸುತ್ತಾರೆ.
ಕುಂಡಲಿಯ 9ನೇ ಮನೆಯಲ್ಲಿ ಕೇತು, 3ನೇ ಮನೆಯಲ್ಲಿ ರಾಹುವಿದ್ದರೆ ಈ ದೋಷ ಕಾಡುತ್ತದೆ. ಈ ದೋಷ ಇರುವವರು ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ. ಹಣದ ಸಮಸ್ಯೆ, ಸಂಬಂಧಗಳಲ್ಲಿ ತೊಂದರೆ ಅನುಭವಿಸುತ್ತಾರೆ.
5ನೇ ಮನೆಯಲ್ಲಿ ರಾಹು ಮತ್ತು 11ನೇ ಮನೆಯಲ್ಲಿ ಕೇತುವಿನ ಆಡಳಿತ ಇರೋ ಕುಂಡಲಿಯಲ್ಲಿ ಈ ದೋಷ 48 ವರ್ಷಗಳು ಇರುತ್ತದೆ. ಸಂತಾನ ಹೀನತೆಯಿಂದ ಬಳಲುವ ಇವರು, ಮಕ್ಕಳ ಬಗ್ಗೆಯೇ ಚಿಂತಿಸಿ, ಅನಾರೋಗ್ಯಕ್ಕೆ ತುತ್ತಾಗುತ್ತಾರೆ.
ಪದೆ ಪದೇ ಸಂಭವಿಸುವ ಅಪಘಾತಗಳು, ಆರ್ಥಿಕ ನಷ್ಟ ಅನ್ಯರಿಂದ ತೊಂದರೆ ಉಂಟಾಗುತ್ತಿದ್ದರೆ, ಅದಕ್ಕೆ ಕುಳಿಕ ಕಾಳ ಸರ್ಪ ಯೋಗವೇ ಕಾರಣ. 2ನೇ ಮನೆಯಲ್ಲಿ ರಾಹು ಮತ್ತು 8ನೇ ಮನೆಯಲ್ಲಿ ಕೇತು ಇದ್ದರೆ ಈ ದೋಷ ಕಾಣಿಸಿಕೊಳ್ಳುತ್ತದೆ.
4ನೇ ಮನೆಯಲ್ಲಿ ರಾಹು ಹಾಗೂ 10ನೇ ಮನೆಯಲ್ಲಿ ಕೇತು ಇದ್ದರೆ, ಕಾಡುವ ಶಂಕಪಾಲ ಕಾಳ ಸರ್ಪ ಯೋಗ 42 ವರ್ಷಗಳ ಕಾಲ ಇರುತ್ತದೆ. ಈ ದೋಷ ಇರುವವರು ಆತಂಕ ಹಾಗೂ ಒತ್ತಡದ ಬದುಕು ಸಾಗಿಸುತ್ತಾರೆ.
ಜಾತಕದಲ್ಲಿ ರಾಹು 6ನೇ ಮನೆಯಲ್ಲಿ ಹಾಗೂ ಕೇತು 12ನೇ ಮನೆಯಲ್ಲಿದ್ದವರಿಗೆ ಈ ಯೋಗ ಇರುತ್ತದೆ. ಸಿಕ್ಕಾಪಟ್ಟೆ ಶತ್ರುಗಳನ್ನ ಕಟ್ಟಿಕೊಳ್ಳುವ ಈ ದೋಷಿಗಳಿಗೆ ನೂರಾರು ಕಾಯಿಲೆಗಳಿರುತ್ತವೆ.
ಕುಂಡಲಿಯ 7ನೇ ಮನೆಯಲ್ಲಿ ರಾಹು ಮತ್ತು 1ನೇ ಮನೆಯಲ್ಲಿ ಕೇತು ಇದ್ದವರು ಬೇಡದ ಚಟಗಳಿಗೆ ಬಲಿಯಾಗುತ್ತಾರೆ. ಸಹಜವಾಗಿ ಆರ್ಥಿಕ ಸಮಸ್ಯೆ ಎದುರಿಸಬೇಕಾಗುತ್ತದೆ.
ಬದುಕಲ್ಲಿ ಬರೀ ದುರಾದೃಷ್ಟಗಳೇ ಎದುರಾಗುವ, ಸದಾ ಅನಾರೋಗ್ಯದಿಂದ ಬಳಲುವವರ ಕುಂಡಲಿಯ 12ನೇ ಮನೆಯಲ್ಲಿ ರಾಹು, 6ನೇ ಮನೆಯಲ್ಲಿ ಕೇತು ಇರುತ್ತಾನೆ. ಅಂಥವರಿಗೆ ಶೇಷ ಕಾಳಸರ್ಪ ಯೋಗ ಇರುತ್ತದೆ.
ಬೇರೆ ಬೇರೆ ಕಾರಣಗಳಿಂದ ವ್ಯಕ್ತಿ ಸುಖಾ ಸುಮ್ಮನೆ ಜೀವನದಲ್ಲಿ ಶಿಕ್ಷೆ ಅನುಭವಿಸುತ್ತಿದ್ದರೆ, ಅಂಥವರಿಗೆ ಈ ದೋಷವಿದೆ ಎಂದರ್ಥ. ಜಾತಕದ 10ನೇ ಮನೆಯಲ್ಲಿ ರಾಹು ಮತ್ತು 4ನೇ ಮನೆಯಲ್ಲಿ ಕೇತು ಇದ್ದರೆ ಘಟಕ ಕಾಳ ಸರ್ಪಯೋಗ ಕಾಡುತ್ತದೆ.
ಕಾಳ ಸರ್ಪ ಯೋಗಕ್ಕೆ ಪರಿಹಾರ ಕ್ರಮಗಳು
ರಾಹು ಬೀಜ ಮಂತ್ರ ಪಠಣ, ನಾಗ ದೇವಸ್ಥಾನಕ್ಕೆ ಭೇಟಿ ನೀಡುವುದು ಮುಂತಾದ ನಾಗ ಸಂಬಂಧ ಪೂಜೆಗಳಿದೆ ಇಂಥ ಕಾಳ ಸರ್ಪ ದೋಷದಿಂದ ಮುಕ್ತರಾಗಬಹುದು.