Vijayapura: ಡ್ರೋನ್ ಕಣ್ಣಲ್ಲಿ ಸೆರೆಯಾದ ದಿಗಂಬರೇಶ್ವರ ರಥೋತ್ಸವ!
ಕೋವಿಡ್ ತಣ್ಣಗಾದ ಮೇಲೆ 2022ರಲ್ಲಿ ನಡೆಯುತ್ತಿರುವ ಜಾತ್ರೆಗಳೆಲ್ಲ ಅದ್ದೂರಿಯಾಗಿ ಸಾಗ್ತೀವೆ. ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ದಿಗಂಬರೇಶ್ವರ ಜಾತ್ರೆ ಅದ್ದೂರಿಯಾಗಿ ನಡೆದಿದೆ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ (ಏ.18): ಕೋವಿಡ್ (Covid19) ತಣ್ಣಗಾದ ಮೇಲೆ 2022ರಲ್ಲಿ ನಡೆಯುತ್ತಿರುವ ಜಾತ್ರೆಗಳೆಲ್ಲ (Jatre) ಅದ್ದೂರಿಯಾಗಿ ಸಾಗ್ತೀವೆ. ವಿಜಯಪುರ (Vijayapura) ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ದಿಗಂಬರೇಶ್ವರ ಜಾತ್ರೆ (Digambareshwara Jatre) ಅದ್ದೂರಿಯಾಗಿ ನಡೆದಿದೆ. ಅದರಲ್ಲೂ ಸಾವಿರಾರು ಭಕ್ತರು (Devotees) ಸೇರಿ ದಿಗಂಬರೇಶ್ವರ ತೇರು ಎಳೆದಿದ್ದು ಕಣ್ಮನ ಸೆಳೆಯಿತು.
ತೇರು ಎಳೆಯಲು ಹಗ್ಗ ತಂದ ಡವಳೇಶ್ವರ ಗ್ರಾಮಸ್ಥರು: ಮೊದಲಿಗೆ ದಿಗಂಬರೇಶ್ವರ ಮಠದ ರಥದ ಕಳಸಾರೋಹಣ ನಡೆಯಿತು. ಬಳಿಕ ಸಾಯಂಕಾಲ ಭರ್ಜರಿ ರಥೋತ್ಸವ ಸಾಗಿತು. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಡವಳೇಶ್ವರ ಗ್ರಾಮದ ಭಕ್ತರು ತಂದ ತೇರಿನ ಹಗ್ಗದ ಮೆರವಣಿ ನಡೆಯಿತು. ಕೊಲ್ಹಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಠಕ್ಕೆ ಆಗಮಿಸಿದ ನಂತರ ಭಕ್ತರ ಜಯಘೋಷ ಮುಗಿಲು ಮುಟ್ಟಿತು. ದಿಗಂಬರೇಶ್ವರ ಮಠದ ಪೀಠಾಧಿಕಾರಿಗಳಾದ ಕಲ್ಲಿನಾಥ ದೇವರು ಮೂರ್ತಿಯೊಂದಿಗೆ ರಥದಲ್ಲಿ ಕುಳಿತುಕೊಂಡ ಬಳಿಕ ತೇರು ಎಳೆಯುವ ಕಾರ್ಯಕ್ರಮ ಅದ್ಧೂರಿಯಾಗಿ ಸಾಗಿತು.
ಕುಮಾರಸ್ವಾಮಿಯಿಂದ ಜೆಡಿಎಸ್ ವಿಸರ್ಜನೆಯ ಸವಾಲು..!
ಡ್ರೋನ್ ಕ್ಯಾಮರಾದಲ್ಲಿ ಅದ್ಭುತ ದೃಶ್ಯ ಸೆರೆ: ವಿಜೃಂಬನೆಯಿಂದ ನಡೆದ ದಿಗಂಬರೇಶ್ವರ ರಥೋತ್ಸವದ ದೃಶ್ಯಗಳನ್ನ ಡ್ರೋನ್ ನಲ್ಲಿ ಸೆರೆಹಿಡಿಯಲಾಯಿತು. ಒಟ್ಟೊಟ್ಟಿಗೆ ಸಾವಿರಾರು ಭಕ್ತರು ತೇರು ಎಳೆದು ದೃಶ್ಯಗಳು ಮನಮೋಹಕವಾಗಿ ಮೂಡಿ ಬಂದವು. ಡ್ರೋನ್ ಕ್ಯಾಮರಾದಲ್ಲಿ (Drone Camera) ಮೂಡಿ ಬಂದ ತೇರು ಎಳೆಯುವ ಅದ್ಭುತ ದೃಶ್ಯಗಳು ಎಲ್ಲರ ಕಣ್ಮನ ಸೆಳೆದಿದ್ದು ವಿಶೇಷವಾಗಿತ್ತು.
ಬೆಳ್ಳುಬ್ಬಿ ಶಾಸಕರಾಗಲೆಂದು ಬಾಳೆ ಹಣ್ಣು ಎಸೆದ ಅಭಿಮಾನಿ: ಒಂದೆಡೆ ಭಕ್ತರು ದಿಗಂಬರೇಶ್ವರ ತೇರು ಎಳೆಯುತ್ತಿದ್ದರೇ ಹರಕೆ ಕಟ್ಟುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗೆ ತೇರಿಗೆ ಬಾಳೆಹಣ್ಣು ಹಾರಿಸುವ ಪದ್ದತಿ ರೂಢಿಯಲ್ಲಿದೆ. ಬಾಳೆ ಹಣ್ಣು, ಉತ್ತತ್ತಿ ಎಸೆಯುವ ಮೂಲಕ ತಮ್ಮ ಬೇಡಿಕೆ ಇಡೇರಲಿ ಎಂದು ಭಕ್ತರು ದಿಗಂಬರೇಶ್ವರನಲ್ಲಿ ಬೇಡಿಕೊಳ್ತಾರೆ. ಹಾಗೇ ಮಾಜಿ ಸಚಿವ ಬೆಳ್ಳುಬ್ಬಿ ಅಭಿಮಾನಿಯೊಬ್ಬ ಬಾಳೆಹಣ್ಣಿನ ಮೇಲೆ ನಮ್ಮ ಮುಂದಿನ ಬಸವನ ಬಾಗೇವಾಡಿ ಶಾಸಕರಾಗಿ ಎಸ್ ಕೆ ಬೆಳ್ಳುಬ್ಬಿ ಆಯ್ಕೆಯಾಗಬೇಕು ಎಂದು ಬರೆದು ಬಾಳೆಹಣ್ಣು ಎಸೆದಿದ್ದಾನೆ. ಈ ದೃಶ್ಯಾವಳಿಯನ್ನ ಮೊಬೈಲ್ ನಲ್ಲಿ ಸೆರೆ ಹಿಡಿದ್ದಾನೆ. ಈ ವಿಡಿಯೋಗಳಿಗ ವೈರಲ್ ಆಗಿವೆ.
Karnataka Politics: ಅಧಿಕಾರಕ್ಕೆ ಬರಲು ಕಾಂಗ್ರೆಸ್ ಹಗಲುಗನಸು ಕಾಣ್ತಿದೆ: ಸಿ.ಟಿ.ರವಿ
ದೀರ್ಘದಂಡ ನಮಸ್ಕಾರ ಹಾಕಿದ ಸಾವಿರಾರು ಭಕ್ತರು: ನಸುಕಿನ ಜಾವ 4 ಗಂಟೆಯಿಂದ ಮುಂಜಾನೆ 9 ಗಂಟೆಯವರೆಗೆ ತಮ್ಮ ಇಷ್ಟಾರ್ಥ ಸಿದ್ದಿಸಿದ್ದಕ್ಕಾಗಿ ಹಾಗೂ ಹರಕೆಯನ್ನ ತೀರಿಸಲು ಧೀರ್ಘದಂಡ ಪ್ರಣಾಮ ಸೇವೆಯನ್ನು ಸಲ್ಲಿಸಿದರು. ಕಳೆದ ವರ್ಷ ಜಾತ್ರೆಯಲ್ಲಿ ಹರಕೆ ಕಟ್ಟಿಕೊಂಡರೇ ಹರಕೆ ತೀರಿದ ಮೇಲೆ ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ಇಡೇರಿಸುವ ಪದ್ದತಿಯು ಇಲ್ಲಿ ರೂಡಿಯಲ್ಲಿದೆ. ಈ ಜಾತ್ರೆಯಲ್ಲಿ ಮಠಾಧಿಶರು, ಶಾಸಕ ಶಿವಾನಂದ ಪಾಟೀಲ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಕಲ್ಲು ದೇಸಾಯಿ, ಮಲ್ಲು ಬೆಳ್ಳುಬ್ಬಿ ಸೇರಿದಂತೆ ವಿವಿಧ ಪಕ್ಷಗಳ ರಾಜಕೀಯ ದುರೀಣರು, ಗಣ್ಯರು ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.