Asianet Suvarna News Asianet Suvarna News

Lunar Eclipse 2022: ಈ ಚಂದ್ರಗ್ರಹಣವು 3 ರಾಶಿಯವರ ಅದೃಷ್ಟ ಬದಲಿಸುತ್ತೆ..!

2022ರ ಮೊದಲ ಚಂದ್ರಗ್ರಹಣವು ಇದೇ ಮೇ 16ರಂದು ಕಾಣಿಸಿಕೊಳ್ಳಲಿದೆ. ಇದು ಭಾರತದಲ್ಲಿ ಕಾಣಿಸಿಕೊಳ್ಳದಿದ್ದರೂ ಈ ಗ್ರಹಣದ ಪ್ರಭಾವ ಏನಾದರೂ ಬೀಳಲಿದೆಯೆ ಎಂಬ ಕುತೂಹಲ ಸಹಜವಾಗಿ ಎಲ್ಲರಿಗೂ ಇರುತ್ತದೆ. ಇನ್ನು ಚಂದ್ರಗ್ರಹಣದಿಂದ ಒಳಿತಾಗುವ ಹಾಗೂ ಲಾಭವಾಗು ಮೂರು ರಾಶಿಗಳಿದ್ದು, ಆ ರಾಶಿಗಳು ಯಾವುವು..? ಯಾವ ಯಾವ ಲಾಭವನ್ನು ಪಡೆಯಬಹುದು ಎಂಬುದನ್ನು ನೋಡೋಣ...
 

This Lunar Eclipse will change the fortunes of 3 zodiac signs
Author
Bangalore, First Published May 13, 2022, 6:27 PM IST

ವರ್ಷದ ಮೊದಲ ಚಂದ್ರಗ್ರಹಣವು (Lunar Eclipse) ಇದೇ ಮೇ ಮಾಸದ ಮಧ್ಯಭಾಗದಲ್ಲಿ ಅಂದರೆ ಮೇ 16ರಂದು ಕಾಣಿಸಿಕೊಳ್ಳುತ್ತಿದೆ. ಒಂದು ಸಮಾಧಾನಕರ ವಿಷಯವೆಂದರೆ ಈ ಗ್ರಹಣವು ಭಾರತದಲ್ಲಿ (India) ಗೋಚಾರವಾಗುವುದಿಲ್ಲ. ಹಾಗಾಗಿ ಇಲ್ಲಿ ನಮ್ಮ ಭಾರತೀಯರಿಗೆ ಸೂತಕದ ಛಾಯೆ ಇರುವುದಿಲ್ಲ. ಆದರೆ, ರಾಶಿ ಚಕ್ರಗಳ ಮೇಲೆ ಇದರ ಪ್ರಭಾವ ಇರಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ (Astrology) ಹೇಳುತ್ತದೆ. ಗ್ರಹಣವು ಭಾರತದಲ್ಲಿ ಕಾಣಿಸಿಕೊಳ್ಳದೇ ಇದ್ದರೂ ಕೆಲವು ರಾಶಿಯವರಿಗೆ ಈ ಬಾರಿಯ ಚಂದ್ರಗ್ರಹಣವು ಅದೃಷ್ಟವನ್ನು ತಂದುಕೊಡಲಿದೆ. ಈ ಗ್ರಹಣದ ಪರಿಣಾಮವು (Effects) ಕೆಲವರಿಗೆ ಕೆಟ್ಟದ್ದನ್ನು ಮಾಡಿದರೂ ಮತ್ತೆ ಕೆಲವರಿಗೆ ಒಳಿತು ಹಾಗೂ ಮಿಶ್ರ ಫಲವನ್ನು ನೀಡಲಿದೆ. 

ಈ ಗ್ರಹಣವು ಸಂಪೂರ್ಣ ಚಂದ್ರಗ್ರಹಣವಾಗಿದ್ದರೂ ವಿದೇಶದ (Abroad) ಹಲವು ಕಡೆ ಕೆಟ್ಟ ಪ್ರಭಾವವನ್ನು ಬೀರಲಿದೆ ಎಂದು ಹೇಳಲಾಗಿದೆ. ಜ್ಯೋತಿಷ್ಯದ ಅನುಸಾರ, ವರ್ಷದ ಮೊದಲ ಚಂದ್ರಗ್ರಹಣವು ವೃಶ್ಚಿಕ ರಾಶಿಯಲ್ಲಿ (Scorpio) ಆಗಲಿದೆ. ಈ ಕಾರಣದಿಂದಾಗಿ ಈ ರಾಶಿಚಕ್ರದ ವ್ಯಕ್ತಿಗಳು ಸ್ವಲ್ಪ ಜಾಗರೂಕತೆಯನ್ನು ಹೊಂದಬೇಕಾಗುತ್ತದೆ. ಏಕೆಂದರೆ ಗ್ರಹಣದ ಅತ್ಯಂತ ನಕಾರಾತ್ಮಕ (Negative) ಪರಿಣಾಮವು ಈ ರಾಶಿಚಕ್ರ ಚಿಹ್ನೆಯ ಮೇಲೆ ಇರುತ್ತದೆ. ಈ ರಾಶಿಚಕ್ರದ ವ್ಯಕ್ತಿಗಳು, ಮಾನಸಿಕ (Mental), ದೈಹಿಕ (Physical) ಮತ್ತು ಆರ್ಥಿಕ (Economic) ಸಮಸ್ಯೆಗಳನ್ನು (Problem) ಎದುರಿಸಬೇಕಾಗಬಹುದು. ಇದಲ್ಲದೆ, ಕೆಲವು ರಾಶಿಚಕ್ರ ಚಿಹ್ನೆಗಳಿಗೆ, ಈ ಗ್ರಹಣವು ಸಾಕಷ್ಟು ಶುಭ ಫಲವನ್ನು ತಂದುಕೊಡಲಿದೆ. 12 ರಾಶಿಚಕ್ರ ಚಿಹ್ನೆಗಳಲ್ಲಿ, ಮೂರು ರಾಶಿಯವರ ಭವಿಷ್ಯವು (Future) ಉಜ್ವಲವಾಗಲಿದೆ. ಈ ರಾಶಿಯವರು ಮಾಡುವ ಯಾವುದೇ ಕೆಲಸದಲ್ಲಿ ಯಶಸ್ಸನ್ನು (Success) ಗಳಿಸಬಹುದಾಗಿದ್ದು, ಮುಟ್ಟಿದ್ದೆಲ್ಲವೂ ಚಿನ್ನವಾಗುವ, ಚೆನ್ನವಾಗುವ ಶಕ್ತಿ – ಸಾಮರ್ಥ್ಯವನ್ನು ಇವರು ಹೊಂದಲಿದ್ದಾರೆ. ಹಾಗಾದರೆ ಈ ರಾಶಿಗಳು ಯಾವುವು..? ಅವುಗಳ ಪರಿಣಾಮ ಏನು ಎಂಬ ಬಗ್ಗೆ ನೋಡೋಣ...

ಇದನ್ನು ಓದಿ : Vastu Tips: ಆರ್ಥಿಕ ಮುಗ್ಗಟ್ಟು, ಪ್ರಗತಿ ಕಾಣದಿರಲು ಇವೇ ಕಾರಣ!

ಮೇಷ ರಾಶಿ (Aries)
ವರ್ಷದ ಮೊದಲ ಚಂದ್ರ ಗ್ರಹಣವು ಮೇಷ ರಾಶಿಯ ಜನರಿಗೆ ಮಂಗಳಕರ ಎಂದು ಹೇಳಲಾಗಿದೆ. ಈ ರಾಶಿಯ ವ್ಯಕ್ತಿಗಳಿಗೆ ಧನ ಲಾಭ (Monetary gains) ಉಂಟಾಗುವುದಲ್ಲದೆ, ಸಮಾಜದಲ್ಲಿ ಗೌರವಯುತ ಸ್ಥಾನಮಾನವನ್ನು ಪಡೆಯುತ್ತಾರೆ. ಇವರು ಯಾವುದೇ ಕೆಲಸ ಮಾಡಲಿ, ಅದರಲ್ಲಿ ಖಂಡಿತವಾಗಿಯೂ ಯಶಸ್ಸನ್ನು ಗಳಿಸಲಿದ್ದಾರೆ. ಇನ್ನು ವೃತ್ತಿ ಕ್ಷೇತ್ರದ (Career) ವಿಷಯಕ್ಕೆ ಬಂದರೆ ಅಲ್ಲೂ ಸಹ ಇವರಿಗೆ ಉತ್ತಮ ಫಲ ಇದ್ದು, ಉದ್ಯೋಗದಲ್ಲಿ ಬಡ್ತಿ (Promotion) ಪಡೆಯುವ ಎಲ್ಲ ಸಾಧ್ಯತೆಗಳೂ ಇವೆ. ವೈವಾಹಿಕ ಜೀವನವೂ (Marriage Life) ಉತ್ತಮವಾಗಿ ಸಾಗಲಿದ್ದು, ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ. 

ಸಿಂಹ ರಾಶಿ (Leo)
ಸಿಂಹ ರಾಶಿಯ ವ್ಯಕ್ತಿಗಳಿಗೆ ಈ ಗ್ರಹಣವು ಶುಭ ಫಲವನ್ನು ಹೊತ್ತು ತರಲಿದೆ. ಈ ರಾಶಿಯವರಿಗೆ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಸಿಗಲಿದ್ದು, ಅವರು ದೃಢ ಮನಸ್ಸಿನಿಂದ ಹೆಜ್ಜೆಯನ್ನಿಡಬೇಕು ಎಂದು ಹೇಳಲಾಗಿದೆ. ಇನ್ನು ಇವರು ಹೂಡಿಕೆ ಕ್ಷೇತ್ರದಲ್ಲಿ (Investment) ಆಸಕ್ತಿಯನ್ನು ಹೊಂದಿದ್ದರೆ ಹೂಡಿಕೆ ಮಾಡಲು ಸಹ ಇದು ಸಕಾಲ. ಇವರು ಯಾವುದೇ ಕ್ಷೇತ್ರದಲ್ಲಿ ಹೂಡಿಕೆಯನ್ನು ಮಾಡಿದರೂ ಸಹ ಅದರಲ್ಲಿ ಯಶಸ್ಸು ಮತ್ತು ಲಾಭ ಸಿಗುತ್ತದೆ. ಇನ್ನು ಸಂಗಾತಿ ಜೊತೆಗೆ ಇವರ ಸಂಬಂಧ ಇನ್ನಷ್ಟು ಬಲಗೊಳ್ಳುತ್ತದೆ. 

ಇದನ್ನು ಓದಿ : ಶುಕ್ರ ಗೋಚಾರದಿಂದ ಈ ರಾಶಿಯವರಿಗೆ ಶುಭವೋ ಶುಭ..

ಧನುಸ್ಸು (Sagittarius)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಚಂದ್ರಗ್ರಹಣವು ಧನು ರಾಶಿಯ ವ್ಯಕ್ತಿಗಳಿಗೆ ಬಹಳವೇ ಲಾಭದಾಯಕವಾಗಿದೆ. ಈ ರಾಶಿಯವರು ವ್ಯವಹಾರದಲ್ಲಿ (Business) ಪ್ರಗತಿಯನ್ನು ಕಾಣಬಹುದಾಗಿದ್ದು, ಹೂಡಿಕೆ ಮಾಡಿದರೂ ಸಹ ಲಾಭವನ್ನು ಗಳಿಸಲಿದ್ದಾರೆ. ಇನ್ನು ಇವರು ಉದ್ಯೋಗದಲ್ಲಿ (Job) ಬಡ್ತಿ ಪಡೆಯುವ ಸಾಧ್ಯತೆಗಳೂ ದಟ್ಟವಾಗಿವೆ. ಈ ರಾಶಿಯ ವ್ಯಕ್ತಿಗಳಿಗೆ ಎಲ್ಲೆಡೆ ಸುಖ – ಶಾಂತಿ – ನೆಮ್ಮದಿಯು ದೊರೆಯುತ್ತದೆ. 

Follow Us:
Download App:
  • android
  • ios