Asianet Suvarna News Asianet Suvarna News

ಉಡುಪಿ: ಕರಾವಳಿಯಲ್ಲಿ ಇದೇ ಮೊದಲ ಬಾರಿಗೆ ಅತಿರುದ್ರ ಮಹಾಯಾಗ

ಜಿಲ್ಲೆಯಲ್ಲಿ ಮೊದಲ ಬಾರಿಗೆ 4 ಕೋಟಿ ರೂ. ವೆಚ್ಚದಲ್ಲಿ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ಮತ್ತು ಅತಿರುದ್ರ ಮಹಾಯಾಗ ಸಮಿತಿ ಆಶ್ರಯದಲ್ಲಿ ಶಿವಪಾಡಿ ದೇವಸ್ಥಾನದಲ್ಲಿ ಫೆ. 22 ರಿಂದ ಮಾ.5ರವರೆಗೆ  121 ಋತ್ವಿಜರ ನೇತೃತ್ವದಲ್ಲಿ 11 ಕುಂಡಗಳಲ್ಲಿ 12 ದಿನ ಅತಿರುದ್ರ ಮಹಾಯಾಗ ಜರಗಲಿದೆ ಎಂದು ಯಾಗ ಸಮಿತಿ ಅಧ್ಯಕ್ಷ ಶಾಸಕ ಕೆ. ರಘುಪತಿ ಭಟ್(MLA K Raghupati bhat) ತಿಳಿಸಿದರು.

This is the first time that Atirudra Mahayaga in coast at udupi rav
Author
First Published Feb 23, 2023, 2:19 PM IST | Last Updated Feb 23, 2023, 2:19 PM IST

ಉಡುಪಿ (ಫೆ.23) : ಜಿಲ್ಲೆಯಲ್ಲಿ ಮೊದಲ ಬಾರಿಗೆ 4 ಕೋಟಿ ರೂ. ವೆಚ್ಚದಲ್ಲಿ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ಮತ್ತು ಅತಿರುದ್ರ ಮಹಾಯಾಗ ಸಮಿತಿ ಆಶ್ರಯದಲ್ಲಿ ಶಿವಪಾಡಿ ದೇವಸ್ಥಾನದಲ್ಲಿ ಫೆ. 22 ರಿಂದ ಮಾ.5ರವರೆಗೆ  121 ಋತ್ವಿಜರ ನೇತೃತ್ವದಲ್ಲಿ 11 ಕುಂಡಗಳಲ್ಲಿ 12 ದಿನ ಅತಿರುದ್ರ ಮಹಾಯಾಗ ಜರಗಲಿದೆ ಎಂದು ಯಾಗ ಸಮಿತಿ ಅಧ್ಯಕ್ಷ ಶಾಸಕ ಕೆ. ರಘುಪತಿ ಭಟ್(MLA K Raghupati bhat) ತಿಳಿಸಿದರು.

ಅವರು ಶಿವಪಾಡಿ ದೇವಸ್ಥಾನ(Shivapadi temple)ದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ವಿವರಿಸಿದರು. ಯಾಗಕ್ಕೆ ಆಗಮಿಸುತ್ತಿರುವ 180 ಋತ್ವಿಜರು ವಾಸ ಮಾಡಲು ಎಲ್ಲಾ ವ್ಯವಸ್ಥೆಯುಳ್ಳ ಈಶಾವಾಸ್ಯಂ ವಸತಿಗೃಹ ನಿರ್ಮಿಸಲಾಗಿದೆ. 12 ದಿನಗಳ ಕಾಲ ಜರಗುವ ಯಾಗದಲ್ಲಿ 1 ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದ್ದು, ಭಕ್ತಾಧಿಗಳಿಗೆ ಅನ್ನ ಸಂತರ್ಪಣೆಗೆ ಬೇಕಾಗುವ ಭೋಜನ ವ್ಯವಸ್ಥೆಗೆ ’’ಸೀತಾರಸೊಯಿ’ ಪಾಕಶಾಲೆ, ಅನ್ನಪೂರ್ಣ ಭೋಜನ ಶಾಲೆ, ಉಗ್ರಾಣ ಸಜ್ಜಾಗಿದೆ. ಪ್ರತೀ ದಿನ ಸಾಯಂಕಾಲ 5 ಗಂಟೆಯಿಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಸುಮಾರು 3,000 ಜನರು ಆಸಿನರಾಗಲು ಭಾರತೀತೀರ್ಥ ಸಭಾ ಮಂಟಪದ ರಚನೆಯಾಗಿದೆ. ಪ್ರತೀದಿನ ಸಾಯಂಕಾಲ 4 ರಿಂದ ಗ್ರಾಮವಾರು ಹೊರೆ ಕಾಣಿಕೆ ಸಮರ್ಪಣೆ ನಡೆಯಲಿದೆ ಎಂದು ಹೇಳಿದರು.

ಉಡುಪಿ: ಕಡಿಯಾಳಿ ದೇಗುಲದ ನೂತನ ಧ್ವಜಸ್ತಂಭದ ಪಾದುಕೆ ಶಿಲಾನ್ಯಾಸ, ಯಾಗ ಶಾಲೆ ಉದ್ಘಾಟನೆ

ಸುದ್ದಿಗೋಷ್ಠಿಯಲ್ಲಿ ಆಡಳಿತ ಮೊಕ್ತೇಸರ ದಿನೇಶ್ ಪ್ರಭು, ಉಮಾಮಹೇಶ್ವರ ದೇವಸ್ತಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮಹೇಶ ಠಾಕೂರ್, ಟ್ರಸ್ಟಿ ಸಂಜಯ ಪ್ರಭು, ಮಹಾಯಾಗ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕುಕ್ಕೆಹಳ್ಳಿ, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಮದ್ದೋಡಿ, ಸಾಂಸ್ಕೃತಿಕ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ, ಕಾರ್ಯಾಲಯ ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು, ಕೋಶಾಧಿಕಾರಿ ಸತೀಶ್ ಪಾಟೀಲ್ ಉಪಸ್ಥಿತರಿದ್ದರು.

ಕಾರ್ಯಕ್ರಮಗಳ ವಿವರ

ಫೆ.22ರಂದು ದೇವಸ್ಥಾನದ ಪ್ರಾಂಗಣದಲ್ಲಿ ಬೆಳಗ್ಗೆ 7 ರಿಂದ ಫಲನ್ಯಾಸಪೂರ್ವಕ ಪ್ರಾರ್ಥನೆ, ಅರಣೀ ಮಥನಪೂರ್ವಕ ಅಗ್ನಿ ಜನನ, ಸಪರಿವಾರ ಉಮಾಮಹೇಶ್ವರ(Umamaheshwar god) ದೇವರಿಗೆ ನವಕಪ್ರಧಾನ ಹೋಮಪುರಸ್ಸರ ನವಕಲಶ ಅಭಿಷೇಕ, ಪ್ರಸನ್ನಪೂಜೆ, ಮಹಾಪೂಜೆ, ಅತಿರುದ್ರ ಯಾಗಮಂಟಪದಲ್ಲಿ ಬೆಳಗ್ಗೆ 7:30 ರಿಂದ ಋತ್ವಿಜರಿಂದ ಮಹಾನ್ಯಾಸಪೂರ್ವಕ ರುದ್ರ ಪುರಶ್ಚರಣ, ಸಾಯಂಕಾಲ 6 ರಿಂದ ರುದ್ರಕ್ರಮಪಾಠ, ಮಹಾಪೂಜೆ, ಅಷ್ಟಾವಧಾನ ಸೇವೆ ನಡೆಯಲಿವೆ.  

ಫೆಬ್ರವರಿ 23ರಂದು ಅತಿರುದ್ರ ಯಾಗಮಂಟಪದಲ್ಲಿ ಬೆಳಗ್ಗೆ 7:30 ರಿಂದ ಋತ್ವಿಜರಿಂದ ಮಹಾನ್ಯಾಸಪೂರ್ವಕ ರುದ್ರ ಪುರಶ್ಚರಣ, ಸಾಯಂಕಾಲ 6 ರಿಂದ  ರುದ್ರಕ್ರಮಪಾಠ, ಮಹಾಪೂಜೆ, ಅಷ್ಟಾವಧಾನ ಸೇವೆ ನಡೆಯಲಿವೆ. ನಾಗದೇವರ ಸನ್ನಿಧಿಯಲ್ಲಿ ಬೆಳಗ್ಗೆ 8:30 ರಿಂದ ಆಶ್ಲೇಷ ಬಲಿ, ತಿಲಹೋಮ, ಪವಮಾನ ಹೋಮ, ಕೂಷ್ಮಾಂಡ ಹೋಮ, ನವಕಪ್ರಧಾನ ಹೋಮಪುರಸ್ಸರ ನವಕಲಶ ಅಭಿಷೇಕ, ವಟು ಆರಾಧನೆ, ಪ್ರಸನ್ನಪೂಜೆ, ಶ್ರೀ ಕ್ಷೇತ್ರಪಾಲ ಸನ್ನಿಧಿಯಲ್ಲಿ ಏಕ ಕಲಶಾಭಿಷೇಕ ನೆರವೇರಲಿವೆ.

ಫೆಬ್ರವರಿ 24ರಂದು, ಅತಿರುದ್ರ ಯಾಗ(atirudra yaga)ಮಂಟಪದಲ್ಲಿ ಬೆಳಗ್ಗೆ 7:30 ರಿಂದ ಋತ್ವಿಜರಿಂದ ಮಹಾನ್ಯಾಸಪೂರ್ವಕ ರುದ್ರ ಪುರಶ್ಚರಣ, ಸಾಯಂಕಾಲ 6 ರಿಂದ ರುದ್ರಕ್ರಮಪಾಠ, ಮಹಾಪೂಜೆ, ಅಷ್ಟಾವಧಾನ ಸೇವೆ, ಗಣಯಾಗ ಮಂಟಪದಲ್ಲಿ ಸಾಯಂಕಾಲ 5 ರಿಂದ, ವಾಸ್ತು ಹೋಮ, ರಾಕ್ಷೋಘ್ನ ಹೋಮ, ಪ್ರಸಾದ ಶುದ್ಧಿ, ಯಾಗಕುಂಡ ಸಂಸ್ಕಾರ ಹೋಮ ನೆರವೇರಲಿವೆ.

ಫೆಬ್ರವರಿ 25ರಂದು ಅತಿರುದ್ರ ಯಾಗಮಂಟಪದಲ್ಲಿ ಬೆಳಗ್ಗೆ 7:30 ರಿಂದ ಋತ್ವಿಜರಿಂದ ಮಹಾನ್ಯಾಸಪೂರ್ವಕ ರುದ್ರ ಪುರಶ್ಚರಣ, ಸಾಯಂಕಾಲ 6 ರಿಂದ ರುದ್ರಕ್ರಮಪಾಠ, ಮಹಾಪೂಜೆ, ಅಷ್ಟಾವಧಾನ ಸೇವೆ, ಗಣಯಾಗಮಂಟಪದಲ್ಲಿ ಬೆಳಗ್ಗೆ 8 ರಿಂದ ಅಷ್ಟೋತ್ತರಸಹಸ್ರ ನಾಳಿಕೇರ ಗಣಯಾಗ ಆರಂಭ, ಬೆಳಗ್ಗೆ 11:45 ರಿಂದ ಗಣಯಾಗದ ಪೂರ್ಣಾಹುತಿ, ಬ್ರಹ್ಮಚಾರಿ ಆರಾಧನೆ, ಕನ್ನಿಕಾ ಆರಾಧನೆ, ದಂಪತಿ ಪೂಜೆ, ಆಚಾರ್ಯ ಪೂಜೆ, ದೇವರಿಗೆ ಮಹಾಪೂಜೆ, ಮಹಾಸಂತರ್ಪಣೆ ನೆರವೇರಲಿವೆ.

ಫೆಬ್ರವರಿ 26ರಂದು ಅತಿರುದ್ರ ಯಾಗಮಂಟಪದಲ್ಲಿ ಬೆಳಗ್ಗೆ 7:30 ರಿಂದ ಋತ್ವಿಜರಿಂದ ಮಹಾನ್ಯಾಸಪೂರ್ವಕ ರುದ್ರ ಪುರಶ್ಚರಣ, ಸಾಯಂಕಾಲ 6 ರಿಂದ ರುದ್ರಕ್ರಮಪಾಠ, ಮಹಾಪೂಜೆ, ಅಷ್ಟಾವಧಾನ ಸೇವೆ, ದೇವಸ್ಥಾನದ ಪ್ರಾಂಗಣದಲ್ಲಿ ಬೆಳಗ್ಗೆ 8 ರಿಂದ ಆಚಾರ್ಯಾದಿ ಋತ್ವಿಗ್ವರಣ, 10 ಋತ್ವಿಜರಿಂದ ಸಪ್ತಶತೀ ಪಾರಾಯಣ,ಶ್ರೀಸೂಕ್ತ ಹೋಮ ನೆರವೇರಲಿವೆ.

ಫೆಬ್ರವರಿ 27ರಂದು ಅತಿರುದ್ರ ಯಾಗಮಂಟಪದಲ್ಲಿ ಬೆಳಗ್ಗೆ 7:30 ರಿಂದ ಋತ್ವಿಜರಿಂದ ಮಹಾನ್ಯಾಸಪೂರ್ವಕ ರುದ್ರ ಪುರಶ್ಚರಣ, ಸಾಯಂಕಾಲ 6 ರಿಂದ ರುದ್ರಕ್ರಮಪಾಠ, ದೇವಸ್ಥಾನದ ಪ್ರಾಂಗಣದಲ್ಲಿ ಬೆಳಗ್ಗೆ 8:30 ರಿಂದ ಋತ್ವಿಜರಿಂದ ಸಪ್ತಶತೀ ಪಾರಾಯಣ, ಮಹಾಮೃತ್ಯುಂಜಯ ಹೋಮ ನೆರವೇರಲಿವೆ.

ಫೆಬ್ರವರಿ 28ರಂದು, ಅತಿರುದ್ರ ಯಾಗಮಂಟಪದಲ್ಲಿ ಬೆಳಗ್ಗೆ 7:30 ರಿಂದ ಋತ್ವಿಜರಿಂದ ಮಹಾನ್ಯಾಸಪೂರ್ವಕ ರುದ್ರ ಪುರಶ್ಚರಣ, ಸಾಯಂಕಾಲ 6 ರಿಂದ  ರುದ್ರಕ್ರಮಪಾಠ, ದೇವಸ್ಥಾನದ ಪ್ರಾಂಗಣದಲ್ಲಿ ಬೆಳಗ್ಗೆ 8:30 ರಿಂದ ಸಪ್ತಶತೀ ಪಾರಾಯಣ, ಶ್ರೀಭಾಗ್ಯಸೂಕ್ತ ಹೋಮ ನೆರವೇರಲಿವೆ.

ಮಾ.1ರಂದು, ಅತಿರುದ್ರ ಯಾಗಮಂಟಪದಲ್ಲಿ ಬೆಳಗ್ಗೆ 7:30 ರಿಂದ ಋತ್ವಿಜರಿಂದ ಮಹಾನ್ಯಾಸಪೂರ್ವಕ  ರುದ್ರ ಪುರಶ್ಚರಣ, ಸಾಯಂಕಾಲ 6 ರಿಂದ  ರುದ್ರಕ್ರಮಪಾಠ, ದೇವಸ್ಥಾನದ ಪ್ರಾಂಗಣದಲ್ಲಿ ಬೆಳಗ್ಗೆ 8:30 ರಿಂದ ಋತ್ವಿಜರಿಂದ ಸಪ್ತಶತೀ ಪಾರಾಯಣ, ಪುರುಷಸೂಕ್ತ ಹೋಮ ಮತ್ತು ಶತಚಂಡಿಕಾ ಯಾಗಮಂಟಪದಲ್ಲಿ ಸಾಯಂಕಾಲ 5 ರಿಂದ ವಾಸ್ತು ಹೋಮ, ರಾಕ್ಷೋಘ್ನ ಹೋಮ, ಪ್ರಸಾದ ಶುದ್ಧಿ, ಕುಂಡ ಸಂಸ್ಕಾರ ಹೋಮ ನೆರವೇರಲಿವೆ.

ಮಾ.2ರಂದು, ಅತಿರುದ್ರ ಯಾಗಮಂಟಪದಲ್ಲಿ ಬೆಳಗ್ಗೆ 7:30 ರಿಂದ ಋತ್ವಿಜರಿಂದ ಮಹಾನ್ಯಾಸಪೂರ್ವಕ ರುದ್ರ ಪುರಶ್ಚರಣ, ಸಾಯಂಕಾಲ 6 ರಿಂದ ರುದ್ರಕ್ರಮಪಾಠ, ಶತಚಂಡಿಕಾ ಯಾಗಮಂಟಪದಲ್ಲಿ ಬೆಳಗ್ಗೆ 6:30 ರಿಂದ ಶತಚಂಡಿಕಾ ಯಾಗ, ಬೆಳಗ್ಗೆ 11:45 ಕ್ಕೆ ಪೂರ್ಣಾಹುತಿ, ಸುವಾಸಿನಿ ಆರಾಧನೆ, ಕನ್ನಿಕಾ ಆರಾಧನೆ, ದಂಪತಿ ಪೂಜೆ, ಆಚಾರ್ಯ ಪೂಜೆ, ದೇವರಿಗೆ ಮಹಾಪೂಜೆ, ಮಹಾಸಂತರ್ಪಣೆ ನೆರವೇರಲಿವೆ.

ಮಾ. 3ರಂದು ಅತಿರುದ್ರ ಯಾಗಮಂಟಪದಲ್ಲಿ ಬೆಳಗ್ಗೆ 7:30 ರಿಂದ ಋತ್ವಿಜರಿಂದ ಮಹಾನ್ಯಾಸಪೂರ್ವಕ ರುದ್ರ ಪುರಶ್ಚರಣ, ಸಾಯಂಕಾಲ 6 ರಿಂದ ರುದ್ರಕ್ರಮಪಾಠ, ಮಹಾಪೂಜೆ, ದೇವಸ್ಥಾನದ ಪ್ರಾಂಗಣದಲ್ಲಿ ಸಾಯಂಕಾಲ 6 ರಿಂದ ಸಾಮೂಹಿಕ ನಮಃ ಶಿವಾಯ ಮಹಾಮಂತ್ರದ ಪುರಶ್ಚರಣ,  ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ನೆರವೇರಲಿವೆ.

ಮಾ. 4ರಂದು, ಅತಿರುದ್ರ ಯಾಗಮಂಟಪದಲ್ಲಿ ಬೆಳಗ್ಗೆ 7:30 ರಿಂದ ಋತ್ವಿಜರಿಂದ ಮಹಾನ್ಯಾಸಪೂರ್ವಕ ರುದ್ರ ಪುರಶ್ಚರಣ, ಸಾಯಂಕಾಲ 6 ರಿಂದ  ರುದ್ರಕ್ರಮಪಾಠ, ಮಹಾಪೂಜೆ, ಸಾಯಂಕಾಲ 5:15 ರಿಂದ ಶ್ರೀಕ್ಷೇತ್ರ ಶಿವಪಾಡಿಗೆ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಆಗಮನ ಮತ್ತು ಸಭಾಮಂಟಪದಲ್ಲಿ ಸಾಯಂಕಾಲ 5:30 ರಿಂದ ಧೂಳಿಪಾದ ಪೂಜೆ, ಸಭಾಕಾರ್ಯಕ್ರಮ, ಜಗದ್ಗುರುಗಳ ಅನುಗ್ರಹ ಭಾಷಣ, ರಾಮಾನಂದ ಸ್ಮೃತಿ ಮಂಟಪದಲ್ಲಿ ಶ್ರೀಗಳಿಂದ ಚಂದ್ರಮೌಳೀಶ್ವರಸ್ವಾಮಿಗೆ ಪೂಜೆ ನೆರವೇರಲಿವೆ.

ಅಘೋರಿಗಳಿಂದ ಅಪಮೃತ್ಯು ಹರಣ ಮಹಾಮೃತ್ಯುಂಜಯ ಯಾಗ! ಏನಿದರ ಉದ್ದೇಶ?

ಮಾ.5ರಂದು  ಅತಿರುದ್ರ ಯಾಗಮಂಟಪದಲ್ಲಿ ಬೆಳಗ್ಗೆ 6:30 ರಿಂದ ಏಕಾದಶ ಕುಂಡಗಳಲ್ಲಿ ಅತಿರುದ್ರ ಮಹಾಯಾಗ, ಬೆಳಗ್ಗೆ 11:30 ಕ್ಕೆ ಶೃಂಗೇರಿ ಶ್ರೀಗಳ ಸಾನಿಧ್ಯದಲ್ಲಿ ಪೂರ್ಣಾಹುತಿ, ಮಧ್ಯಾಹ್ನ 12ಕ್ಕೆ ಶ್ರೀಗಳಿಂದ ದೇವರಿಗೆ ಕಲಶಾಭಿಷೇಕ, ಪ್ರಸನ್ನಪೂಜೆ, ಮಹಾಪೂಜೆ, ಫಲಮಂತ್ರಾಕ್ಷತೆ, ಮಧ್ಯಾಹ್ನ 12:30ಕ್ಕೆ ಪಲ್ಲಪೂಜೆ, ಮಹಾಸಂತರ್ಪಣೆ ನೆರವೇರಲಿವೆ.

Latest Videos
Follow Us:
Download App:
  • android
  • ios