Asianet Suvarna News Asianet Suvarna News

ಜಾತಕದಲ್ಲಿ ಶುಕ್ರ ದುರ್ಬಲನಾಗಿದ್ರೆ ಈ ತಪ್ಪೆಲ್ಲಾ ಮಾಡ್ಬೇಡಿ!

ನಿತ್ಯದ ಜೀವನದಲ್ಲಿ ಎಷ್ಟೇ ಪ್ರಯತ್ನ ಮಾಡಿದ್ರೂ ಕೆಲವೊಮ್ಮೆ ಸಂತೋಷ ಸಿಗೋದಿಲ್ಲ. ಕೆಲಸವೆಲ್ಲ ವಿಳಂಬವಾಗುತ್ತದೆ. ಮದುವೆ, ದಾಂಪತ್ಯದಲ್ಲಿ ಸಮಸ್ಯೆ ಕಾಡುತ್ತದೆ. ಇದಕ್ಕೆ ಕಾರಣ ಶುಕ್ರ ಗ್ರಹವೂ ಇರಬಹುದು. ನಿಮ್ಮ ಜಾತಕದಲ್ಲೂ ಸಮಸ್ಯೆಯಿದ್ರೆ ಕೆಲ ಟ್ರಿಕ್ಸ್ ಫಾಲೋ ಮಾಡಿ.
 

Things To Avoid If Venus Is Weak In Horoscope
Author
First Published Apr 3, 2023, 2:37 PM IST | Last Updated Apr 3, 2023, 2:37 PM IST

ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳನ್ನು ನಮ್ಮ ಜೀವನದ ಜೊತೆ ಸಂಬಂಧ ಹೊಂದಿದೆ ಎನ್ನಲಾಗಿದೆ.  ಗ್ರಹಗಳ ಬದಲಾವಣೆ, ಚಲನೆ ನಮ್ಮ ಜೀವನದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತವೆ. ಗ್ರಹಗಳ ದೋಷ ನಮ್ಮ ಜೀವನದಲ್ಲಿ ಸಾಕಷ್ಟು ಅಡೆತಡೆಗಳನ್ನು ಉಂಟು ಮಾಡುತ್ತದೆ. ನಮ್ಮ ಯಶಸ್ಸಿಗೆ ಇದು ಅಡ್ಡಿಯುಂಟು ಮಾಡುತ್ತದೆ. 

ಜ್ಯೋತಿಷ್ಯ (Astrology) ಶಾಸ್ತ್ರದ ಪ್ರಕಾರ, ಒಂಬತ್ತು ಗ್ರಹಗಳ ಸ್ಥಾನ ಜಾತಕ (Horoscope) ದಲ್ಲಿ ಮುಖ್ಯವಾಗಿರುತ್ತವೆ. ಎಲ್ಲಾ 9 ಗ್ರಹಗಳು ತಮ್ಮದೇ ಆದ ಸ್ವಭಾವ ಮತ್ತು ಗುಣಗಳನ್ನು ಹೊಂದಿರುತ್ತವೆ. ತಮ್ಮ ಸ್ವಭಾವಕ್ಕೆ ಅನುಗುಣವಾಗಿ ಅವು ನಮಗೆ ಫಲಿತಾಂಶಗಳನ್ನು ನೀಡುತ್ತವೆ. ಎಲ್ಲಾ ಗ್ರಹಗಳಂತೆ    ಶುಕ್ರ ಗ್ರಹಕ್ಕೂ ಹೆಚ್ಚಿನ ಮಹತ್ವವಿದೆ. ಶುಕ್ರ (Venus) ಗ್ರಹವನ್ನು ಸಂತೋಷ, ಸಂಪತ್ತು ಮತ್ತು ಐಶ್ವರ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ.

ವೃಷಭ ರಾಶಿ ಮತ್ತು ತುಲಾ ರಾಶಿಯ ಅಧಿಪತಿ ಶುಕ್ರನೆಂದು ಹೇಳಲಾಗುತ್ತದೆ.  ಯಾರ ಜಾತಕದಲ್ಲಿ ಶುಕ್ರ ಬಲಶಾಲಿಯಾಗಿ ಇರುತ್ತಾನೋ ಆ ರಾಶಿಯ ಜನರು ಸಂತೋಷ ಮತ್ತು ಸಮೃದ್ಧಿಯ ಜೀವನವನ್ನು ನಡೆಸುತ್ತಾರೆ ಎಂದು ನಂಬಲಾಗಿದೆ. ನಿಮ್ಮ ಜಾತಕದಲ್ಲಿ ಶುಕ್ರನು ಉಚ್ಚ ಸ್ಥಾನದಲ್ಲಿದ್ದರೆ ನಿಮಗೆ ಯಾವುದೇ ಸಮಸ್ಯೆ ಕಾಡುವುದಿಲ್ಲ. ಅದೇ ಆತ ನೀಚ ಸ್ಥಾನದಲ್ಲಿದ್ದರೆ ನಿಮಗೆ ಒಂದಿಲ್ಲೊಂದು ಸಮಸ್ಯೆ ಕಾಡಿ, ಖುಷಿ ಮರೀಚಿಕೆಯಾಗುತ್ತದೆ. ನಿಮ್ಮ ಜಾತಕದಲ್ಲಿ ಶುಕ್ರ ದುರ್ಬಲನಾಗಿದ್ದು, ಆತ ಬಲಪಡೆಯಬೇಕೆಂದ್ರೆ ಕೆಲ ಉಪಾಯ ಮಾಡಬೇಕು. 

Temple Entry Rules: ದೇವಾಲಯದ ಮೆಟ್ಟಿಲನ್ನು ಮುಟ್ಟಿ ಒಳ ಪ್ರವೇಶಿಸುವುದೇಕೆ?

ಶುಕ್ರ ದುರ್ಬಲನಾಗಿದ್ದರೆ ಹೀಗೆ ಮಾಡ್ಬೇಡಿ : 
ಬಿಳಿ ವಸ್ತು ದಾನ ಪಡೆಯಬೇಡಿ :
ಜಾತಕದಲ್ಲಿ ಶುಕ್ರ ದುರ್ಬಲ ಸ್ಥಾನದಲ್ಲಿದ್ದರೆ, ಆತ ನೀಡುವ ಕಷ್ಟದಿಂದ ರಕ್ಷಣೆ ಬೇಕು ಎನ್ನುವವರು ನೀವಾಗಿದ್ದರೆ ನೀವು ಬಿಳಿ ವಸ್ತುವನ್ನು ದಾನ ಪಡೆಯಬೇಡಿ. ಅದ್ರಲ್ಲೂ ಶುಕ್ರವಾರ ನೀವು ಬಿಳಿ ವಸ್ತುಗಳನ್ನು ದಾನ ಪಡೆಯಲೇಬಾರದು.  ಬಿಳಿ ವಸ್ತುವನ್ನು ಉಡುಗೊರೆ ರೂಪದಲ್ಲೂ ಪಡೆಯಬಾರದು. ಆದ್ರೆ ನೀವು ಶುಕ್ರವಾರ ಬಿಳಿ ವಸ್ತುಗಳನ್ನು ದಾನ ಮಾಡಬೇಕು. ಶುಕ್ರವಾರ ನೀವು ಅಕ್ಕಿ ಸೇರಿದಂತೆ ಬಿಳಿಯ ಯಾವುದೇ ವಸ್ತುವನ್ನು ದಾನದ ರೂಪದಲ್ಲಿ ನೀಡಬಹುದು.

ಕಪ್ಪು ಬಟ್ಟೆ ಧರಿಸ್ಬೇಡಿ : ನಿಮ್ಮ ಜಾತಕದಲ್ಲಿ ಶುಕ್ರ ದುರ್ಬಲನಾಗಿದ್ದರೆ ನಿಮ್ಮ ಮದುವೆ ವಿಳಂಬವಾಗಬಹುದು. ನಿಮ್ಮ ದಾಂಪತ್ಯದಲ್ಲಿ ಕೆಲವು ತೊಂದರೆಗಳು ಕಾಡುವ ಸಾಧ್ಯತೆಯಿರುತ್ತದೆ. ದಾಂಪತ್ಯ ಮುರಿದು ಬೀಳುವ ಸಂಭವವಿರುತ್ತದೆ. ಶುಕ್ರ ಜಾತಕದಲ್ಲಿ ದುರ್ಬಲನಾಗಿದ್ದರೆ ನೀವು ಶುಕ್ರವಾರ ಕಪ್ಪು ಬಟ್ಟೆಗಳನ್ನು ಧರಿಸಬೇಡಿ. ನೀವು ಶುಕ್ರವಾರವಿರಲಿ ಇಲ್ಲ ಬೇರೆ ಯಾವುದೇ ಶುಭ ಸಂದರ್ಭವಿರಲಿ, ಆ ದಿನ ಬಿಳಿ ಬಟ್ಟೆಯನ್ನು ಧರಿಸಿ. ಆಗ ನಿಮ್ಮ ದಾಂಪತ್ಯದಲ್ಲಿ ಬದಲಾವಣೆ ಕಾಣಬಹುದು. 

Astrology Tips: ಈ ರಾಶಿಗಳ ಜನ ಒಳ್ಳೆ ಜೋಡಿ ಆಗೋದೇ ಇಲ್ಲ, ಜಗಳವೇ ಹೆಚ್ಚು

ಮಾಂಸ ಆಹಾರ (Non Veg) ಬೇಡ : ಜಾತಕದಲ್ಲಿ ಶುಕ್ರ ದುರ್ಬಲನಾಗಿದ್ದರೆ ಮಾಂಸ, ಮದ್ಯ ಸೇವನೆ ಮಾಡ್ಬೇಡಿ. ವಿಶೇಷವಾಗಿ ಮಂಗಳವಾರ, ಗುರುವಾರ ಹಾಗೂ ಶುಕ್ರವಾರ ಮಾಂಸ ಮತ್ತು ಮದ್ಯದಿಂದ ದೂರವಿರಿ. ಮಾಂಸ ಹಾಗೂ ಮದ್ಯ ಸೇವನೆ ಮಾಡಿದ್ರೆ ಜೀವನದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ.  

ಇವರನ್ನು ನೋಯಿಸ್ಬೇಡಿ : ಶುಕ್ರ ದುರ್ಬಲವಾಗಿದ್ದರೆ ಬಡವರು, ಮುಗ್ದ ಪ್ರಾಣಿಗಳನ್ನು ಹಿಂಸಿಸಬಾರದು. ಶುಕ್ರ ಮತ್ತಷ್ಟು ದುರ್ಬಲನಾಗಿ ಕಷ್ಟಗಳನ್ನು ನೀಡ್ತಾನೆ. ಬಡವರಿಗೆ ದಾನ ಮಾಡೋದ್ರಿಂದ ಶುಕ್ರ ಬಲ ಪಡೆಯುತ್ತಾನೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.   

ಈ ಮಂತ್ರ ಜಪಿಸಿ : ನೀವು ಓಂ ಶುಕ್ರಾಯ ನಮಃ ಮಂತ್ರವನ್ನು ಜಪಿಸುತ್ತಿರಬೇಕು. ಈ ಮಂತ್ರ ಜಾತಕದಲ್ಲಿ ಶುಕ್ರನ ಸ್ಥಾನವನ್ನು ಬಲಪಡಿಸುತ್ತದೆ. ಸಮಸ್ಯೆಯಿಂದ ಪರಿಹಾರ ಸಿಗುತ್ತದೆ. ಬಡವನಿಗೆ ಆಹಾರ ನೀಡಿ ಮತ್ತು ತುಪ್ಪ ಮತ್ತು ಬೆಲ್ಲ ಬೆರೆಸಿದ ರೊಟ್ಟಿಯನ್ನು ನೀಡಿ. ಮನೆಯಲ್ಲಿರುವ ಮಹಿಳೆಯರನ್ನು ಗೌರವಿಸಬೇಕು. ಅವರ ಮನಸ್ಸಿಗೆ ನೋವಾಗುವಂತೆ ಎಂದಿಗೂ ನಡೆದುಕೊಳ್ಳಬಾರದು.
 

Latest Videos
Follow Us:
Download App:
  • android
  • ios