Asianet Suvarna News Asianet Suvarna News

Astrology Tips: ಈ ರಾಶಿಗಳ ಜನ ಒಳ್ಳೆ ಜೋಡಿ ಆಗೋದೇ ಇಲ್ಲ, ಜಗಳವೇ ಹೆಚ್ಚು

ಕೆಲ ಜನರೊಂದಿಗೆ ಯಾವುದೇ ಕಾರಣಕ್ಕೂ ಹೊಂದಾಣಿಕೆ ಉಂಟಾಗುವುದಿಲ್ಲ. ಕಾರ್ಯಕ್ಷೇತ್ರದಲ್ಲಿರಲಿ, ಖಾಸಗಿ ಜೀವನದಲ್ಲಿರಲಿ. ಇದು ಆಯಾ ರಾಶಿಗಳ ನಡುವಿನ ವ್ಯತ್ಯಾಸದಿಂದಾಗಿ ಕಂಡುಬರುತ್ತದೆ. ಇಂಥವರು ಸಂಗಾತಿಯಾಗಿಬಿಟ್ಟರೆ ಉತ್ತಮ ಸಂಬಂಧ ಸಾಧ್ಯವಾಗುವುದಿಲ್ಲ. ಅಂಥ ಕೆಲವು ರಾಶಿಗಳ ಬಗ್ಗೆ ಅರಿಯಿರಿ. 
 

Some zodiac signs may not become good couple
Author
First Published Apr 2, 2023, 5:28 PM IST | Last Updated Apr 2, 2023, 5:28 PM IST

ನಿತ್ಯವೂ ನಾವು ಹಲವರನ್ನು ಭೇಟಿ ಮಾಡುತ್ತಿರುತ್ತೇವೆ. ಭೇಟಿಯಾದ ಎಲ್ಲರೊಂದಿಗೂ ಹಿತವಾದ ಅನುಭವ ಆಗುವುದಿಲ್ಲ. ಕೆಲವರೊಂದಿಗೆ ನಿರ್ಲಿಪ್ತ ಭಾವನೆ ಮೂಡಬಹುದು, ಕೆಲವರು ಖುಷಿ ಎನಿಸಬಹುದು, ಕೆಲವರು ಮರೆಯಲಾಗದ ಪ್ರಭಾವ ಬೀರಬಹುದು. ಹಾಗೆಯೇ, ಕೆಲವರ ಬಗ್ಗೆ ವಿನಾಕಾರಣ ಕಿರಿಕಿರಿ ಎನಿಸಬಹುದು. ಅವರ ಯಾವುದೇ ಹಾವಭಾವ ಇಷ್ಟವಾಗದೆ ಅಲ್ಲಿಂದ ಹೊರಟುಹೋಗೋಣ ಎಂದೆನಿಸಬಹುದು. ಹೌದು, ಇವೆಲ್ಲ ಕೆಲವು ರಾಶಿಗಳು ಪರಸ್ಪರ ಎದುರಾದಾಗ ಆಗುವ ಸಮಸ್ಯೆಗಳು. ಸಾಮಾನ್ಯ ಭೇಟಿಯಲ್ಲೇ ಹೀಗಾಗುವಾಗ ಇಂಥವರು ಸಂಗಾತಿಯಾಗಿಬಿಟ್ಟರೆ? ದೇವರೇ ಗತಿ. ಏಕೆಂದರೆ, ಕೆಲವು ರಾಶಿಗಳ ಮಧ್ಯೆ ಮೊದಮೊದಲು ಏನೋ ಆಕರ್ಷಣೆ ಏರ್ಪಟ್ಟರೂ ದೀರ್ಘಕಾಲದ ಸಂಬಂಧ ಸಾಧ್ಯವಾಗುವುದಿಲ್ಲ. ಅವರು ಜೋಡಿಯಾಗಿಬಿಟ್ಟರೆ ದಿನವೂ ಜಗಳ, ವೈಮನಸ್ಸು ತಪ್ಪಿದ್ದಲ್ಲ.

ಹೀಗಾಗಿ, ಸಂಗಾತಿಯಾಗುವ ಮುನ್ನ ಒಮ್ಮೆ ಯೋಚಿಸುವುದು ಒಳಿತು. ಆರಂಭದ ಆಕರ್ಷಣೆ ಕಳೆದುಕೊಂಡ ಬಳಿಕವೂ ಸಂಬಂಧ ಚೆನ್ನಾಗಿರಬೇಕು ಎಂದರೆ ಇಬ್ಬರಲ್ಲೂ ಹಾರ್ದಿಕವಾದ ಬಂಧವಿರಬೇಕು, ಹೊಂದಾಣಿಕೆ ಇರಬೇಕು. ಅದೇ ಸಾಧ್ಯವಾಗುವುದಿಲ್ಲ ಎಂದಾದರೆ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ. ಅಂತಹ ಯಾವ ರಾಶಿಗಳು ಪರಸ್ಪರ ಹೊಂದಾಣಿಕೆಯಾಗುವುದಿಲ್ಲ ಎಂದು ನೋಡಿಕೊಳ್ಳಿ.

•    ಮಕರ-ಮೇಷ (Capricorn-Aries)
ಉತ್ತಮ ವಿಚಾರವುಳ್ಳ, ಆಯ್ಕೆಗಳಲ್ಲಿ ತಮ್ಮದೇ ವಿಚಾರ ಹೊಂದಿರುವ ಮಕರ ರಾಶಿಯವರು ಹಾಗೂ ತಾಳ್ಮೆಯಿಲ್ಲದ ಮೇಷ ರಾಶಿಯವರಿಗೆ ಎಂದಿಗೂ ಹೊಂದಾಣಿಕೆ ಸಾಧ್ಯವಾಗುವುದಿಲ್ಲ. ಸಂಗಾತಿಯನ್ನು ನಿಯಂತ್ರಿಸುವ ಗುಣ ಹೊಂದಿರುವ ಮೇಷ ರಾಶಿಯವರನ್ನು ಮಕರ ರಾಶಿಯವರು ತೀವ್ರ ಸಮಸ್ಯೆಗೆ ತುತ್ತಾಗುತ್ತಾರೆ.

Hanuman Jayanti 2023: 4 ರಾಶಿಗಳ ಮೇಲೆ ಹನುಮ ಕೃಪೆ, ತೆರೆಯಲಿದೆ ಅವಕಾಶಗಳ ಬಾಗಿಲು

•    ಕುಂಭ-ವೃಷಭ (Aquarius-Taurus)
ಕುಂಭ ರಾಶಿಯವರು ಸ್ವಲ್ಪ ಜಿದ್ದು, ಸ್ವತಂತ್ರ (Free) ವಿಚಾರಧಾರೆಯುಳ್ಳವರು. ಇವರು ವೃಷಭ ರಾಶಿ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಒಂದೊಮ್ಮೆ ಇವರಿಬ್ಬರು ಜೋಡಿಯಾದರೆ ಚಿಕ್ಕ ಚಿಕ್ಕ ವಿಚಾರಕ್ಕೂ ಸಿಕ್ಕಾಪಟ್ಟೆ ಕಿತ್ತಾಡಿಕೊಳ್ಳುತ್ತಾರೆ.

•    ಮೀನ-ಮಿಥುನ (Pisces-Gemini)
ಮೀನ ರಾಶಿಯವರು ನೇರವಾದ ಸ್ವಭಾವದವರು, ಇವರಿಗೆ ಮಿಥುನ ರಾಶಿಯವರು ಎಂದಿಗೂ ಅರ್ಥವಾಗುವುದಿಲ್ಲ. ಮಿಥುನ ರಾಶಿಯ ಜನ ಕೇವಲ ತಮ್ಮ ಬಗ್ಗೆ ಮಾತ್ರ ಯೋಚಿಸಿದರೆ, ಮೀನ ರಾಶಿಯವರು ಇತರರ ಬಗ್ಗೆ ಯೋಚಿಸುವುದು ಹೆಚ್ಚು. ಇಬ್ಬರ ಧೋರಣೆಯಲ್ಲೂ ವಿಪರೀತ ವ್ಯತ್ಯಾಸ ಉಂಟಾಗಿ ಒಳ್ಳೆಯ ಜೋಡಿಯಾಗುವುದಿಲ್ಲ.

•    ಮೇಷ-ಕರ್ಕಾಟಕ (Aries-Cancer)
ಮೇಷ ರಾಶಿಯವರು ಅಬ್ಬರದವರಾಗಿದ್ದು, ಯಾವುದೇ ಜನರ ಸಂಪರ್ಕಕ್ಕೆ ಬಂದರೂ ಕಿರಿಕಿರಿಗೆ ಒಳಗಾಗುವುದು ಸಾಮಾನ್ಯ. ಕರ್ಕಾಟಕ ರಾಶಿಯವರು ಮತ್ತೊಬ್ಬರ ಬಗ್ಗೆ ಕಾಳಜಿ ವಹಿಸುವ ರಾಶಿಯಾಗಿದ್ದು, ಅಂತರ್ಮುಖಿಯಾಗಿರುತ್ತಾರೆ. ಇವರಿಬ್ಬರೂ ಸಂಗಾತಿಯಾದರೆ ಹೊಂದಾಣಿಕೆ ಉಂಟಾಗುವುದು ಕಷ್ಟ.

•    ವೃಷಭ-ಸಿಂಹ (Taurus-Leo)
ಈವೆರಡೂ ರಾಶಿಗಳ ಜನರು ಸ್ವಭಾವದಿಂದ ಹಠಮಾರಿಗಳಾಗಿರುತ್ತಾರೆ. ಸಿಂಹದವರು ತಮ್ಮ ಬಗ್ಗೆ ಯೋಚಿಸುವುದು ಹೆಚ್ಚು. ಆದರೆ, ವೃಷಭದವರು ಹಾಗಲ್ಲ. ಸಿಂಹ ರಾಶಿಯವರಿಗೆ ಯಾವಾಗಲೂ ಮಿಂಚಬೇಕೆಂಬ ಆಸೆಯಿದ್ದರೆ, ವೃಷಭದವರು ಇದಕ್ಕೆ ದೂರ. ಹೀಗಾಗಿ, ಇಬ್ಬರ ನಡುವೆ ಸಮಸ್ಯೆ ಉಂಟಾಗುತ್ತದೆ.

ಏಪ್ರಿಲ್‌ನಲ್ಲಿ ನಿಮ್ಮ ರೊಮ್ಯಾಂಟಿಕ್‌ ಲೈಫ್‌ ಹೇಗಿರುತ್ತೆ? ನಿಮ್ಮ ಜನ್ಮರಾಶಿ ಪ್ರಕಾರ ನೋಡಿ

•    ಮಿಥುನ-ಕನ್ಯಾ (Gemini-Virgo)
ಉತ್ಸಾಹ ಮತ್ತು ಜಿಜ್ಞಾಸೆ ಸ್ವಭಾವದ ಮಿಥುನ ರಾಶಿಯ ಜನ ಅಗತ್ಯಕ್ಕಿಂತ ಹೆಚ್ಚು ಪ್ರಾಕ್ಟಿಕಲ್‌ (Practical) ಆಗಿರುತ್ತಾರೆ. ಇವರಿಗೆ ಕನ್ಯಾ ರಾಶಿಯ ಜನ ಬೋರಿಂಗ್‌ ಎನಿಸುತ್ತಾರೆ. ಮಿಥುನ ರಾಶಿಯವರು ಮನೋರಂಜನೆಯಲ್ಲಿ ಆಸಕ್ತಿ ವಹಿಸಿದರೆ, ಕನ್ಯಾ ರಾಶಿಯವರು ಕೆಲಸಕ್ಕೆ ಮೊದಲು ಪ್ರಾಧಾನ್ಯತೆ ನೀಡುತ್ತಾರೆ. 

•    ಕರ್ಕ-ತುಲಾ (Cance-Libra)
ಕರ್ಕಾಟಕ ರಾಶಿಯ ಜನ ಪ್ರಾಮಾಣಿಕತೆ, ಸಂಬಂಧ, ಉದಾರ ಬುದ್ಧಿ, ಸಂವೇದನಾಶೀಲರಾಗಿರುತ್ತಾರೆ. ಆದರೆ, ತುಲಾ ರಾಶಿಯವರು ಸಿಕ್ಕಾಪಟ್ಟೆ ತೋರಿಕೆ ಸ್ವಭಾವ ಹೊಂದಿರುತ್ತಾರೆ. ಆಡಂಬರದ ಜೀವನ ಬಯಸುತ್ತಾರೆ. 

•    ಧನು-ಮೀನ (Sagittarius-Pisces)
ಧನು ರಾಶಿಯ ಜನ ನೈತಿಕ ಹಾಗೂ ದಾರ್ಶನಿಕ ವಿಚಾರಗಳಿಗೆ ಹೆಸರು. ತಮ್ಮ ಸುತ್ತಲ ಜಗತ್ತನ್ನು ಖುಷಿಯಾಗಿಡಲು ಪ್ರಾಮಾಣಿಕವಾಗಿ ಯತ್ನಿಸುತ್ತಾರೆ. ಆದರೆ, ಕನ್ಯಾ ರಾಶಿಯ ಜನ ತಮ್ಮೊಳಗೇ ತಾವಿರುತ್ತಾರೆ, ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಅಗತ್ಯಕ್ಕಿಂತ ಹೆಚ್ಚು ಭಾವುಕರಾಗಿದ್ದು, ಧನು ರಾಶಿಯವರಿಗೆ ಇವರು ಅರ್ಥವೇ ಆಗುವುದಿಲ್ಲ.

•    ಸಿಂಹ-ವೃಶ್ಚಿಕ (Leo-Scorpio)
ನಗು, ವಿನೋದದ ಬುದ್ಧಿಯುಳ್ಳ ಸಿಂಹ ರಾಶಿಯ ಜನರಿಗೆ, ಹಠಮಾರೀ ಧೋರಣೆಯುಳ್ಳ ವೃಶ್ಚಿಕದವರೊಂದಿಗೆ ಏಗುವುದು ಕಷ್ಟವಾಗುತ್ತದೆ.

ಹಾಗೆಯೇ, ಕನ್ಯಾ ಮತ್ತು ಧನು ರಾಶಿ, ತುಲಾ ಮತ್ತು ಮಕರ ರಾಶಿ, ವೃಶ್ಚಿಕ ಮತ್ತು ಕುಂಭ ರಾಶಿಯ ಜನರೊಂದಿಗೆ ತಾಳಮೇಳ ಉಂಟಾಗುವುದು ಸಾಧ್ಯವಿಲ್ಲ. 

Latest Videos
Follow Us:
Download App:
  • android
  • ios