Zodiac signs: ಇವರಲ್ಲಿ ಸಹಾಯ ಮಾಡುವ ಮನೋಭಾವ ಅತೀ ಹೆಚ್ಚು!
ಸಹಾಯ ಮಾಡುವ ಮನೋಭಾವ ಎಲ್ಲರಲ್ಲಿಯೂ ಇರುವುದಿಲ್ಲ ಆದರೆ, ಇಲ್ಲಿರುವ ಕೆಲವು ರಾಶಿಯ ಜನರಿಗೆ ಇತರರಿಗೆ ಕಾಳಜಿ ತೋರಿಸುವುದು, ಸಹಾಯ ಮಾಡುವುದು ಎಂದರೆ ಎಲ್ಲಿಲ್ಲದ ಆಸಕ್ತಿ!
ಪ್ರತಿಯೊಬ್ಬ ವ್ಯಕ್ತಿಯೂ ಜಗತ್ತನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ನೋಡುತ್ತಾರೆ. ಕೆಲವರು ತಾವು ನೋಡುವ ಎಲ್ಲೆಡೆ ಸಕಾರಾತ್ಮಕತೆಯನ್ನು (Positive) ಕಂಡರೆ, ಇನ್ನೂ ಕೆಲವು ಜನರ ನೈಜತೆಗಳಲ್ಲಿ ದುಃಖವನ್ನು ಕಾಣುವ ಸಹಾನುಭೂತಿಯ (Sympathetic) ಹೆಚ್ಚಿನ ಅಂಶವನ್ನು ಹೊಂದಿರುತ್ತಾರೆ. ಎಲ್ಲಾ ಜನರು ಬಡತನ ಅನುಭವಿಸುತ್ತಾ ಇರುವವರಿಗೆ ಸಹಾಯ ಮಾಡುವ ಗುಣ ಹೊಂದಿರುವುದಿಲ್ಲ, ಭಿಕ್ಷೆ ಬೇಡುವ ಜನರಿಗೆ ಭಿಕ್ಷೆ ನೀಡುವುದನ್ನು ನಂಬುವುದಿಲ್ಲ, ಆದರೆ ಕೆಲವು ಜನರು ಇತರರಿಗೆ ಒಳಿತನ್ನು ಬಯಸುತ್ತಾರೆ, ಅವರ ಈ ವ್ಯಕ್ತಿತ್ವಕ್ಕೆ (Personality) ಅವರ ರಾಶಿಯು ಕಾರಣವಾಗಿರಬಹುದು. ಹಾಗಾದರೆ, ಜಗತ್ತಿನಲ್ಲಿ ಒಳ್ಳೆಯದನ್ನು ಮಾಡಲು ಉದ್ದೇಶಪೂರ್ವಕವಾಗಿ ಹೊರಟ ಕೆಲವು ರಾಶಿಚಕ್ರ ಚಿಹ್ನೆಗಳನ್ನು ನೋಡೋಣ.
ವೃಷಭ ರಾಶಿ (Taurus)
ವೃಷಭ ರಾಶಿಯು ಕೆಲಸಕ್ಕೆ ಇಳಿಯುವಾಗ ಅಥವಾ ತನ್ನ ಸ್ನೇಹಿತನನ್ನು ನೋಡಲು ಹೋಗುವಾಗ, ವೃಷಭ ರಾಶಿಯು ಚಿಕ್ಕ ಮಗು (Child) ಅಥವಾ ವಯಸ್ಸಾದ ವ್ಯಕ್ತಿಯನ್ನು ಬಡ ಸ್ಥಿತಿಯಲ್ಲಿ ನೋಡಿ ಹಾಗೆ ಸುಮ್ಮನೆ ಹಾದುಹೋಗಲು ಸಾಧ್ಯವೇ ಇರುವುದಿಲ್ಲ. ಅವರು ಯಾವಾಗಲೂ ಹಣವನ್ನು (Money) ನೀಡುವುದಿಲ್ಲವಾದರೂ, ಈ ಭೂಮಿಯ ಚಿಹ್ನೆಯ ಕೋಮಲ ಹೃದಯವು ಸಹಾನುಭೂತಿಯಿಂದ ಕೂಡಿರುತ್ತದೆ ಇತರರ ಕಷ್ಟಗಳಿಗೆ ಬಹುಬೇಗ ಮಣಿದುಬಿಡುತ್ತಾರೆ. ಅವರು ಯಾವಾಗಲೂ ಅಗತ್ಯವಿರುವ ಜನರಿಗೆ ಸಾಧ್ಯವಾಗುವಷ್ಟು ಬೇಗ ಆಹಾರವನ್ನು ಇಲ್ಲವೇ ಆಹಾರ ತಯಾರಿಸಲು ಬೇಕಾಗುವ ದಿನಸಿ ಸಾಮಗ್ರಿಗಳನ್ನು ಖರೀದಿಸಿ ಕೊಡುತ್ತಾರೆ. ಪೂರ್ಣ ಪ್ರಮಾಣದಲ್ಲಿ ಅವರ ಹಸಿವನ್ನು ನೀಗಿಸಲು ಸಾಧ್ಯವಾಗಿಲ್ಲ ಎಂದರೂ ಅವರಿಂದ ಸಾಧ್ಯವಾಗುವಷ್ಟು ಸಹಾಯ ಮಾಡುತ್ತಾರೆ.
ಇದನ್ನೂ ಓದಿ:ಅಬ್ಬಾ, ಈ ರಾಶಿಯವರಿಗೆ ತಿನ್ನೋದೇ ಕಾಯಿಲೆ, ಸುಮ್ ಸುಮ್ನೆ ತಿಂತಾರೆ!
ಕರ್ಕಾಟಕ ರಾಶಿ (Cancer)
ಪ್ರಾಣಿಗಳ ಕಲ್ಯಾಣಕ್ಕಾಗಿ (Wilfare) ಅವರು ನಾನಾರೀತಿಯ ಉತ್ತಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವಷ್ಟು ಸಹಾನುಭೂತಿಯನ್ನು ಕರ್ಕಾಟಕ ರಾಶಿಯ ಜನರು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಈ ಸೂಕ್ಷ್ಮ ನೀರಿನ ಚಿಹ್ನೆಯು ಧ್ವನಿಯಿಲ್ಲದವರ ಪರವಾಗಿ ಮಾತನಾಡಬೇಕು ಎಂಬತಹ ಉತ್ತಮ ಧ್ಯೇಯ ಹೊಂದಿರುತ್ತಾರೆ. ಮನುಷ್ಯರ ಸಂಕಟ (Struggle) ಕೆಲವೊಮ್ಮೆ ಅವರ ಗಮನಕ್ಕೆ ಬಾರದೆ ಹೋದರೂ ಮೂಕಪ್ರಾಣಿಯ ನೋವನ್ನು ಅವರು ಎಂದಿಗೂ ಅಲ್ಲಗಳೆಯಲಾರರು. ಗಾಯಗೊಂಡ ಪ್ರಾಣಿಗಳಿಗೆ ವೈದ್ಯಕೀಯ ನೆರವು ಪಡೆಯಲು ಅಥವಾ ಹಸಿವಿನಿಂದ ಬಳಲುತ್ತಿರುವ ಬೀದಿ ನಾಯಿಗಳಿಗೆ ಆಹಾರವನ್ನು ನೀಡಲು ಸಹಾಯ ಮಾಡುವುದು ಇವರ ಗುಣವಾಗಿರುತ್ತದೆ. ಪ್ರಾಣಿಗಳಿಗಾಗಿ ಬಹು ಬೇಗ ಮಿಡಿಯುವ ಹೃದಯ (Heart) ಕರ್ಕಾಟಕ ರಾಶಿಯವರಿಗೆ ಇರುತ್ತದೆ.
ಇದನ್ನೂ ಓದಿ:Zodiac signs: ಇವರು Break-up ಸನ್ನಿವೇಶವನ್ನು ನಾಜೂಕಾಗಿ ನಿರ್ವಹಿಸುತ್ತಾರೆ!
ಮೀನ ರಾಶಿ (Pisces)
ತಮ್ಮ ಬಗ್ಗೆ ಯೋಚಿಸುವುದಕ್ಕಿಂತ ಇತರರ ಬಗ್ಗೆ ಹೆಚ್ಚು ಯೋಚಿಸುವ ಮತ್ತೊಂದು ರಾಶಿಚಕ್ರದ ಚಿಹ್ನೆ ಎಂದರೆ ಅದು ಮೀನ. 'ಮನುಷ್ಯನಿಗೆ ಮೀನು ಹಿಡಿಯಲು ಕಲಿಸಿ ಮತ್ತು ಅವನು ಜೀವನಪೂರ್ತಿ ತನ್ನನ್ನು ತಾನೇ ಪೋಷಿಸುತ್ತಾನೆ' ಎಂಬ ತತ್ವವನ್ನು (Philosophy) ಅವರು ನಂಬುತ್ತಾರೆ. ಆದ್ದರಿಂದ, ಅವರು ಕರಪತ್ರಗಳನ್ನು ನೀಡದಿದ್ದರೂ, ಅವರು ನಕ್ಷೆ ತಯಾರಕರಿಂದ ನಕ್ಷೆಯನ್ನು ಖರೀದಿಸುವವರಲ್ಲಿ ಮೊದಲಿಗರು. ಅಂದರೆ ಹಸಿವು ಇರುವವರಿಗೆ ತಾವೇ ಊಟ ತಯಾರಿಸಿ ಕೊಡುವ ಬದಲು ಅವರ ಊಟವನ್ನು ಅವರು ತಯಾರಿಸಿಕೊಳ್ಳಲು ತಮ್ಮಿಂದ ಸಾಧ್ಯವಾಗುವಷ್ಟು ಸಹಾಯ (Help) ಮಾಡಬೇಕು ಎಂಬ ತತ್ವವನ್ನು ನಂಬಿರುತ್ತಾರೆ ಇವರು ತಮಗೆ ಇಲ್ಲದಿದ್ದರೂ ಪರವಾಗಿಲ್ಲ ಇತರರಿಗೆ ಹಂಚಬೇಕು ಎಂಬ ಉತ್ತಮ ಮನೋಭಾವವನ್ನು ಹೊಂದಿರುತ್ತಾರೆ. ಇಂತಹ ಮನಸ್ಸು ಎಲ್ಲರಿಗೂ ಇರಲು ಸಾಧ್ಯವಿಲ್ಲ. ಇದು ಇವರ ರಾಶಿ ಚಕ್ರದಲ್ಲಿರುವ ಗುಣವಾಗಿರುತ್ತದೆ.
ಈ ಮೇಲಿನ ರಾಶಿಯವರು ತಮ್ಮ ಕಷ್ಟಗಳಿಗಿಂತ ಇತರರ ನೋವುಗಳನ್ನು ದೂರ ಮಾಡುವ ಬಗ್ಗೆ ಹೆಚ್ಚು ಕಾಳಜಿ ತೋರುತ್ತಾರೆ. ಇದು ಅವರ ರಾಶಿ ಚಕ್ರದಿಂದ ಬಂದಿರುವ ಗುಣವಾಗಿರುತ್ತದೆ.