Zodiac signs: ಇವರು Break-up ಸನ್ನಿವೇಶವನ್ನು ನಾಜೂಕಾಗಿ ನಿರ್ವಹಿಸುತ್ತಾರೆ!
Zodiac sign and relationship: ಜಗಳ ಹಾಗೂ ಮನಸ್ತಾಪ ಹೆಚ್ಚಾಗಿ ಒಬ್ಬರಿಂದ ಇನ್ನೊಬ್ಬರು ವಿಘಟನೆ ಹೊಂದುವ ಸಂಭವ ಎದುರಾದಾಗ ಇಲ್ಲಿರುವ ರಾಶಿಯ ಜನರು ಅದನ್ನು ಸಮಾದಾನದಿಂದ ನಿರ್ವಹಿಸುತ್ತಾರೆ..
ದಂಪತಿಗಳ ನಡುವಿನ ಸಂಬಂಧದಲ್ಲಿ (Relationship) ಪ್ರೀತಿ ಹಾಗೂ ಕಲಹ ಎರಡೂ ಇದ್ದೇ ಇರುತ್ತದೆ. ಕೆಲವೊಮ್ಮೆ ಜಗಳಗಳು ಹೆಚ್ಚಾದಾಗ ಒಬ್ಬರನ್ನು ಒಬ್ಬರು ಬಿಟ್ಟು ಬಿಡಬೇಕು ಎಂಬ ನಿರ್ಧಾರಗಳಿಗೆ ಬರುವುದೂ ಉಂಟು. ಹಾಗಂದ ಮಾತ್ರಕ್ಕೆ ಎಲ್ಲಾ ವಿಘಟನೆಗಳು (Breakup) ತಪ್ಪು ಎಂದು ಹೇಳಲೂ ಸಾಧ್ಯವಿಲ್ಲ.ಏಕೆಂದರೆ, ಕೆಲವು ರಾಶಿಚಕ್ರದ ಚಿಹ್ನೆಗಳು ಇಂತಹ ಸನ್ನಿವೇಶಗಳನ್ನು ಅತ್ಯಂತ ಪ್ರಬುದ್ಧತೆಯಿಂದ ನಿರ್ವಹಿಸುತ್ತವೆ. ವಾಸ್ತವವಾಗಿ, ಅನೇಕರು ರಾಶಿಚಕ್ರದಲ್ಲಿರುವ ಗಾಳಿಯ ಚಿಹ್ನೆ ಸೂಚಿಸುವ ಹಾಗೆ ನಾಟಕ (Drama) ಮುಕ್ತ ವಿಘಟನೆಯನ್ನು ಹೊಂದಲು ಆಶಿಸಬಹುದು. ಆದ್ದರಿಂದ, ಕುಂಭ ರಾಶಿಯಿಂದ ತುಲಾ ರಾಶಿಯವರೆಗೆ ಅವರು ಪ್ರೀತಿಸುವ ವ್ಯಕ್ತಿಯೊಂದಿಗೆ ಇಂತಹ ವಿಭಿನ್ನ ಸನ್ನಿವೇಶ ಎದುರಾದಾಗ ಅದನ್ನು ಹೇಗೆ ನಿರ್ವಹಿಸುತ್ತಾರೆ ಎಂದು ನೋಡೋಣ ಬನ್ನಿ.
ಕುಂಭ ರಾಶಿ (Aquarius)
ಕುಂಭ ರಾಶಿಯ ಜನರು ಯಾರಾದರೂ ತಮ್ಮನ್ನು ಕಟ್ಟಿ ಹಾಕಿದವರ (Tied Down) ಹಾಗೆ ನೋಡುವುದನ್ನು ಸಹಿಸುವುದಿಲ್ಲ. ಅಂದರೆ ಸದಾಕಾಲ ಅವರು ಹೇಳಿದ ಹಾಗೆ ವರ್ತಿಸಬೇಕು ಎಂದೆಲ್ಲಾ ಒತ್ತಡ ಹೇರಿದರೆ ಅದನ್ನು ಇವರು ಇಷ್ಟ ಪಡುವುದಿಲ್ಲ ಅಂತಹವರಿಂದ ದೂರ ಹೋಗುವ ನಿರ್ಧಾರ ಮಾಡುತ್ತಾರೆ. ವಿಘಟನೆಯ ಸಮಯದಲ್ಲಿ ಅವರು ಯಾವುದೇ ನಾಟಕವನ್ನು ಉಂಟುಮಾಡುವ ಸಾಧ್ಯತೆಯಿಲ್ಲ, ಏಕೆಂದರೆ ಅವರು ಬಹುಶಃ ಎರಡನೇ ಬಾರಿಗೆ ಸಂಬಂಧದಲ್ಲಿರುವ ಕಲ್ಪನೆಯನ್ನು ಮೊದಲೇ ಊಹಿಸುತ್ತಾರೆ. ಸಂಬಂಧದ ವೈಫಲ್ಯಗಳನ್ನು ತಮ್ಮ ಪಾಲುದಾರರು (Partner) ಮುಂಚಿತವಾಗಿಯೇ ಮುಂಗಾಣುತ್ತಾರೆ ಮತ್ತು ಆಗಾಗ್ಗೆ ಅದನ್ನು ತಾವಾಗಿಯೇ ಕೊನೆಗೊಳಿಸಲು ಇಚ್ಛಿಸುತ್ತಾರೆ. ಆದ್ದರಿಂದ, ಕುಂಭ ರಾಶಿಯ ಜನರು ತ್ವರಿತವಾಗಿ (Immidiate) ಮುಂದೆ ಚಲಿಸುತ್ತದೆ ಮತ್ತು ಇಂತಹ ವಿಚಾರಗಳಿಗೆ ಹೆಚ್ಚು ಹೃದಯಾಘಾತ ಮಾಡಿಕೊಳ್ಳುವುದಿಲ್ಲ.
ಇದನ್ನೂ ಓದಿ:Zodiac signs: ಇವರಿಗೆ ಸಂಬಂಧಗಳಲ್ಲಿ ಆತಂಕ, ಒತ್ತಡ ಹೆಚ್ಚು
ಮಿಥುನ ರಾಶಿ (Gemini)
ಮಿಥುನ ರಾಶಿಯವರು ತಮ್ಮ ಸಂಗಾತಿಯನ್ನು ಬಿಡಲು ಕಠಿಣ (Tough) ಪ್ರಯತ್ನ ಮಾಡುತ್ತಾರೆ. ಆ ಸಮಯವನ್ನು ಕಷ್ಟದಲ್ಲಿ ಕಳೆಯುತ್ತಾರೆ ಆದರೂ, ಅವರು ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಪ್ರೇಮಿಯ ಸಂತೋಷವನ್ನು (Happiness) ಗೌರವಿಸುತ್ತಾರೆ. ವಿರಾಮದ (Break) ಸಮಯದಲ್ಲಿ ಅವರು ಯಾವುದೇ ತೊಂದರೆಗಳನ್ನು ಉಂಟುಮಾಡುವುದಿಲ್ಲ ಮತ್ತು ಈ ಸೌಮ್ಯ ಆತ್ಮಗಳೊಂದಿಗೆ ನೀವು ಮಾತಿನ ಯುದ್ಧವನ್ನು ಹೊಂದಿರುವುದಿಲ್ಲ. ಅವರು ತಮ್ಮ ಮಾನಸಿಕ ಶಾಂತಿಯನ್ನು ಗೌರವಿಸುತ್ತಾರೆ, ಆದ್ದರಿಂದ ಅವರು ಹೆಚ್ಚಿನ ಭಾವನೆಗಳು ಅಥವಾ ಕಣ್ಣೀರು ಹೊಂದಿರುವ ಯಾವುದೇ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳುತ್ತಾರೆ. ಅವರು ತಮ್ಮ ಪ್ರೀತಿಯ ನಷ್ಟವನ್ನು (Loss) ಮಾತ್ರ ದುಃಖಿಸಲು ಬಯಸುತ್ತಾರೆ. ಇಂತಹ ಪರಿಸ್ಥಿತಿಯನ್ನು ಬಹಳ ಶಾಂತತೆಯಿಂದ (Patience) ನಿಭಾಯಿಸುತ್ತಾರೆ.
ತುಲಾ ರಾಶಿ (Libra)
ತುಲಾ ರಾಶಿಯವರು ಕುಟುಂಬಕ್ಕೆ (Family) ಹೆಚ್ಚಿನ ಒತ್ತು ನೀಡುತ್ತಾರೆ. ಆದ್ದರಿಂದ, ಹೆಚ್ಚಾಗಿ ಅವರ ಪೋಷಕರು (Parents) ಇವರ ಸಂಬಂಧಕ್ಕೆ ಒಪ್ಪಿಗೆ ನೀಡುವುದಿಲ್ಲ ಎಂಬ ಕಾರಣಕ್ಕೆ ಸಂಬಂಧವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಾರೆ. ಆದಾಗ್ಯೂ, ಯಾರಾದರೂ ತುಲಾ ರಾಶಿಯೊಂದಿಗೆ ತಮ್ಮ ಸಂಬಂಧ ಮುರಿದುಹೋದಾಗ ತುಲಾ ರಾಶಿಯವರು, ಅವರ ಕುಟುಂಬದ ಹತ್ತಿರದ ಸದಸ್ಯರ ಕಡೆಗೆ ಆಕರ್ಷಿತವಾಗುತ್ತಾರೆ (Attract) ಮತ್ತು ಕುಟುಂಬ ಸದಸ್ಯರು ವಿಘಟನೆಯಿಂದ ಬರುವ ಹತಾಶೆಯ ಭಾವನೆಗಳಿಂದ ಅವರನ್ನು ಹೊರತರುತ್ತಾರೆ ಎಂಬ ಭರವಸೆಯೊಂದಿಗೆ ಅವರ ಭಾವನೆಗಳನ್ನು ಒಪ್ಪಿಕೊಳ್ಳುತ್ತಾರೆ.
ಇದನ್ನೂ ಓದಿ: ಹಠಮಾರಿ, ಕೋಪಿಷ್ಠ ಎನಿಸಿದರೂ ಈ ನಾಲ್ಕು ರಾಶಿಗಳ ಮನಸ್ಸು ಮಾತ್ರ ಮಕ್ಕಳಂತೆ!
ಹೀಗೆ ಒಂದೊಂದು ರಾಶಿಯ ಜನರು ತಮ್ಮ ವಿಘಟನೆಯನ್ನು ಒಂದೊಂದು ರೀತಿಯಲ್ಲಿ ಎದುರಿಸುತ್ತಾರೆ. ಇದು ಅವರ ರಾಶಿ ಚಕ್ರದ ಆಧಾರದ ಮೇಲೆ ನಿರ್ಧರಿತವಾಗುತ್ತದೆ. ನಿಮ್ಮ ರಾಶಿ ಅಥವಾ ನಿಮ್ಮ ಸಂಗಾತಿಯ ರಾಶಿಯು ಈ ಸಾಲಿನಲ್ಲಿ (List) ಇದ್ದರೆ, ನೀವೂ ಕೂಡ ಹೀಗೆ ಮಾಡಬಹುದು..