Asianet Suvarna News Asianet Suvarna News

ಸಂಬಂಧವನ್ನೇ ಹೊರೆ ಎಂದೇ ಭಾವಿಸುತ್ತಾರೆ ಈ ರಾಶಿ ಜನರು!

ಸಂಬಂಧಗಳನ್ನು ನಿಭಾಯಿಸೋದು ಒಂದು ಹೊರೆ ಎಂದು ಭಾವಿಸುವ ರಾಶಿ ಚಕ್ರಗಳ ಅಡಿಯಲ್ಲಿ ಜನಿಸಿರುವ ಜನಗಳಿವರು. ಇವರಿಗೆ ದಿನಗಳು ಉರುಳಿದಂತೆ ಸಂಬಂಧದ ಬಗೆಗಿನ ಆಸಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ..

These zodiac signs feels relationships as burden
Author
First Published Dec 22, 2022, 12:17 PM IST

ಕೆಲವು ರಾಶಿಚಕ್ರದ ಜನರು ಅವರು ಹಿಂದಿರುವ ಸಂಬಂಧಗಳನ್ನು ನಿಜವಾಗಿಯೂ ಗೌರವಿಸುತ್ತಾರೆ. ಹಾಗೂ ಅದನ್ನು ಉಳಿಸಿಕೊಳ್ಳಲು ಶ್ರಮ ವಹಿಸುತ್ತಾರೆ. ಆದರೆ, ಇನ್ನುಳಿದ ಕೆಲವು ರಾಶಿಯ ಜನರು ಸಂಬಂಧಗಳನ್ನು ಒಂದು ಹೊರೆ ಅನ್ನುವಂತೆ ನೋಡುತ್ತಾರೆ. ಅವರು ಸಂಬಂಧದ ಹೊಸತರಲ್ಲಿ ಅದರ ನವೀನತೆಯಲ್ಲಿ ಮುಳುಗಿರುತ್ತಾರೆ ತಮ್ಮ ಸಂಗಾತಿಯ ಪ್ರತಿ ವಿಚಾರಗಳ ಕುರಿತು ಕುತೂಹಲ ಹೊಂದಿರುತ್ತಾರೆ, ಆದರೆ ನಂತರ, ಸಂಬಂಧಗಳ ಬಗ್ಗೆ ಇರುವ ಗಮನ ಹಳಸಿ ಹೋಗಬಹುದು. ಪ್ರಾರಂಭದಲ್ಲಿ, ತಮ್ಮ ಸಂಗಾತಿಯ ಬೇಡಿಕೆಗಳಿಗೆ ಅತಿಯಾಗಿ ಗಮನಹರಿಸುತ್ತಿರುವಾಗ ಅವರು ತಮ್ಮ ಸ್ವಂತ ಬೇಕು ಬೇಡಗಳನ್ನು ಕೂಡಾ ನಿರ್ಲಕ್ಷಿಸುತ್ತಿರುತ್ತಾರೆ. ಆದರೆ, ಸಮಯ ಸರಿದಂತೆ ಅವರ ಆಸೆ ಆಕಾಂಕ್ಷೆಗಳು ಬದಲಾಗಬಹುದು. ಅಂತಹ ಕೆಲವು ರಾಶಿಚಕ್ರ ಚಿಹ್ನೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಇವರು ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಾರೆ.

ಮೇಷ ರಾಶಿ (Aries)
ಮೇಷ ರಾಶಿಯವರು ತಮ್ಮ ಹಠದ ಪ್ರವೃತ್ತಿ ಮತ್ತು ತಮಗೆ ಇಚ್ಛೆ ಬಂತಂತೆ ವರ್ತಿಸುವವರು ಹೆಸರುವಾಸಿಯಾಗಿದ್ದಾರೆ (Famous). ಇದು ಅವರ ಪ್ರಣಯ ಸಂಬಂಧಗಳಿಗೂ ವಿಸ್ತರಿಸುತ್ತದೆ. ಅವರು ಸಂಬಂಧಕ್ಕೆ ಬಂದ ತಕ್ಷಣ, ಅವರು ತಮ್ಮ ಸಂಗಾತಿಯಿಂದ ಹೆಚ್ಚು ಹೆಚ್ಚು ಅನುಭವಿಸಲು ಪ್ರಾರಂಭಿಸುತ್ತಾರೆ. ದಾಂಪತ್ಯ ಸಂಬಂಧಕ್ಕೆ ಬದ್ಧರಾಗಿ ಇರಲು ಬೇಕಾದ ಪ್ರಯತ್ನವನ್ನು ಮಾಡುವುದಕ್ಕಿಂತ ಸ್ವತಂತ್ರವಾಗಿರುವುದು, ತಮಗೆ ಬೇಕಾದ ಕೆಲಸ ಮಾಡಿಕೊಂಡು ಇರುವುದು ಉತ್ತಮ ಹಾಗೂ ಇದೆ ಸುಖ (Happy) ಜೀವನ ನಡೆಸಲು ಇರುವ ಸೀಕ್ರೆಟ್ ಎಂದು ತಮಗೆ ತಾವೇ ನಿರ್ಧರಿಸಿ ಬಿಡುತ್ತಾರೆ. ಅದಕ್ಕಾಗಿಯೇ ನಿಧಾನವಾಗಿ ಸಂಗಾತಿಯಿಂದ ಸ್ವಲ್ಪ ಸ್ವಲ್ಪವೇ ದೂರಾಗುವ ಸಾಧ್ಯತೆಯೂ ಇರುತ್ತದೆ.

ಇದನ್ನೂ ಓದಿ: ಈ Zodiac Sign ನವರು ಎಂಥದ್ದೇ ಪರಿಸ್ಥಿತಿಯನ್ನೂ ಸುಲಭವಾಗಿ ನಿಭಾಯಿಸುತ್ತಾರೆ!

ವೃಷಭ ರಾಶಿ (Taurus)
ವೃಷಭ ರಾಶಿಯು ಮೊಂಡುತನದ ಚಿಹ್ನೆ, ಆದ್ದರಿಂದ ಅವರ ಆಸೆಗಳನ್ನು ಇತರರು ಪೂರೈಸದಿದ್ದಾಗ, ಅವರು ತಮ್ಮ ಆ ಸಂಬಂಧವು ಒಂದು ಹೊರೆ ಎಂದು ಭಾವಿಸುತ್ತಾರೆ. ಅವರು ಏನನ್ನಾದರೂ ಆಯ್ಕೆ ಮಾಡಿದ ಬಳಿಕ ತಮ್ಮ ಅಭಿಪ್ರಾಯಗಳನ್ನು (Opinion) ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ. ಅದರ ನಂತರ, ಅವರ ಮನಸ್ಸನ್ನು ಗೆಲ್ಲಲು ಅವರ ಸಂಗಾತಿ (Partner) ಏನು ಮಾಡಿದರೂ, ಎಷ್ಟೇ ಪ್ರಯತ್ನಿಸಿದರೂ ಇವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಒಮ್ಮೆ ಅವರ ಅಹಂಕಾರವು (Ego) ಪ್ರಚೋದಿತವಾದರೆ, ಅವರು ಸಂಬಂಧವನ್ನು ಉಳಿಸಿಕೊಳ್ಳಲು ಹೆಣಗಾಡ ಬೇಕಾಗುತ್ತದೆ.

 ಮಿಥುನ ರಾಶಿ (Gemini)
ಏರಿಳಿತದ ರಾಶಿಚಕ್ರ ಚಿಹ್ನೆಗಳಲ್ಲಿ ಜೆಮಿನಿಸ್ ಕೂಡಾ ಒಂದು. ಈ ರಾಶಿಯಲ್ಲಿ ಜನಿಸಿದವರು ನಿರಂತರವಾಗಿ ಚಲಿಸುತ್ತಿರುತ್ತಾರೆ ಮತ್ತು ಸುಲಭವಾಗಿ ವಿಚಲಿತರಾಗುತ್ತಾರೆ, ಇದು ಸಾಂದರ್ಭಿಕವಾಗಿ ಅವರ ಪ್ರಣಯ ಸಂಪರ್ಕವನ್ನು ನಿರ್ಲಕ್ಷಿಸಲು (Ignore) ಕಾರಣವಾಗಬಹುದು. ಇವರ ಸಂಗಾತಿಯು ಇವರಿಂದ ಸಾಂದರ್ಭಿಕವಾಗಿ ಗಮನವನ್ನು ಪಡೆಯಲು ನಿರೀಕ್ಷಿಸುತ್ತಾರೆ, ಆದರೆ, ಈ ಚಿಹ್ನೆಯಲ್ಲಿ ಜನಿಸಿದವರು ಅದಕ್ಕಾಗಿ ಹೆಚ್ಚಿನ ಸಮಯವನ್ನು (Time) ನೀಡಲು ವಿಫಲಗೊಳ್ಳುತ್ತಾರೆ ಮತ್ತು ಆಗಾಗ ಅವರ ಸಂಗಾತಿಯ ಬೇಡಿಕೆಗಳನ್ನು ಈಡೇರಿಸುವುದು ಇವರಿಗೆ ಹೊರೆ ಎಂದು ಅನಿಸುತ್ತದೆ.

ಇದನ್ನೂ ಓದಿ: ನೀವು ಹಾಕಿಸಿಕೊಳ್ಳುವ ಟ್ಯಾಟೂನಲ್ಲೇ ಅಡಗಿರುತ್ತಾ ನಿಮ್ಮ ಜನ್ಮರಾಶಿಯ ರಹಸ್ಯ?

ಕನ್ಯಾರಾಶಿ (Virgo)
ಕನ್ಯಾರಾಶಿಯು ಹೆಚ್ಚು ಪ್ರಾಯೋಗಿಕ (Practical) ಚಿಹ್ನೆಗಳಲ್ಲಿ ಒಂದಾಗಿರುವುದರಿಂದ, ಅವರು ಸಂಬಂಧದಲ್ಲಿ ಬಿದ್ದ ನಂತರ, ಸುಗಮವಾಗಿ ಮುಂದುವರಿಯಬೇಕೆಂದು ಬಯಸುತ್ತಾರೆ. ಅವರು ಸ್ವತಂತ್ರ ಜೀವನವನ್ನು ನಡೆಸಲು ಬಯಸುತ್ತಾರೆ ಮತ್ತು ತಮ್ಮ ಸಂಗಾತಿಯ ಮೇಲೆ ಭಾವನಾತ್ಮಕವಾಗಿ (Emotional) ಅವಲಂಬಿತರಾಗಲು ಇಷ್ಟಪಡುವುದಿಲ್ಲ. ಕನ್ಯಾ ರಾಶಿಯವರು ತಮ್ಮ ಸಂಗಾತಿಯು ತಮ್ಮ ಆದರ್ಶ ಕಲ್ಪನೆ ಬದಲಾಗಿ ವಿಭಿನ್ನವಾಗಿ ವರ್ತಿಸಿದರೆ ಆಗ ಆ ಸಂಬಂಧವು ಹೋರೆಯೆಂದು ಭಾವಿಸಲು ಪ್ರಾರಂಭಿಸುತ್ತಾರೆ.

Follow Us:
Download App:
  • android
  • ios