Asianet Suvarna News Asianet Suvarna News

Zodiac Sign: ಈ ರಾಶಿಯವರು ಸಂಬಂಧಗಳಿಗೆ ತುಂಬಾ ಬೆಲೆ ನೀಡುತ್ತಾರೆ

Zodiac Sign and behavioral prediction: ಸಂಬಂಧ ಉತ್ತಮವಾಗಲು ನಮ್ಮ ಪ್ರಯತ್ನ ಬೇಕಾಗುತ್ತದೆ. ನಿರಂತರವಾದ ಪರಿಶ್ರಮ ಇದ್ದಾಗಲೇ ಸಂಬಂಧಗಳು ಯಶಸ್ವಿಯಾಗುತ್ತವೆ. ಸಂಗಾತಿಯೆಡೆಗೂ ಪ್ರೀತಿ ಇದ್ದರಷ್ಟೇ ಸಾಲದು, ಸಂಬಂಧ ಬಲವರ್ಧನೆಗೆ ಶ್ರಮಿಸಬೇಕಾಗುತ್ತದೆ. ಕೆಲವೇ ರಾಶಿಗಳ ಜನ ಈ ಗುಣ ಹೊಂದಿರುತ್ತಾರೆ.
 

These zodiac signs tries to strengthen relation
Author
First Published Sep 13, 2022, 6:01 PM IST

ಬದುಕಿನಲ್ಲಿ ಉತ್ತಮ ಸಂಬಂಧಗಳಿಲ್ಲದೆ ಸಾರ್ಥಕತೆ ಇರುವುದಿಲ್ಲ. ನೆಮ್ಮದಿ, ಸುರಕ್ಷಿತ ಭಾವ ನೀಡುವ ಸಂಬಂಧಗಳಿಂದ ಮನುಷ್ಯನ ಜೀವನ ಒಂದಿಷ್ಟು ಸಾರ್ಥಕವೆನಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಸಂಬಂಧಗಳು ತನ್ನಿಂತಾನೇ ಯಶಸ್ವಿ ಆಗುವುದಿಲ್ಲ ಅಥವಾ ಯಶಸ್ವಿ ಎನಿಸಿಕೊಳ್ಳುವುದಿಲ್ಲ. ಅವುಗಳನ್ನು ಉಳಿಸಿಕೊಳ್ಳಲು, ಬೆಳೆಸಿಕೊಳ್ಳಲು ನಾವೂ ಪ್ರಯತ್ನ ಪಡಬೇಕಾಗುತ್ತದೆ. ಪ್ರಯತ್ನ ಇಲ್ಲದಿದ್ದರೆ ಯಾವ ಸಂಬಂಧವೂ ಉತ್ತಮವಾಗಿ ಉಳಿಯುವುದಿಲ್ಲ. ಹಾಗೆಯೇ, ಉತ್ತಮ ಸಂಬಂಧ ಹೊಂದಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಕೆಲವು ಜನ ತಮ್ಮ ಸಂಬಂಧಗಳನ್ನು ಹೇಗೆ ಬೇಕೋ ಹಾಗೆ ನಡೆಸಿಕೊಳ್ಳುತ್ತಾರೆ, ಟೇಕನ್ ಫಾರ್ ಗ್ರಾಂಟೆಡ್ ಥರ ಟ್ರೀಟ್ ಮಾಡುತ್ತಾರೆ. ಸಂಬಂಧಗಳನ್ನು ಅವುಗಳ ಪಾಡಿಗೆ ಬಿಟ್ಟುಬಿಡುತ್ತಾರೆ. ಆದರೆ, ಕೆಲವರು ಮಾತ್ರವೇ ಉತ್ತಮ ಸಂಬಂಧ ಹೊಂದುವಲ್ಲಿ ಅತ್ಯಂತ ಯಶಸ್ವಿ ಎನಿಸಿಕೊಳ್ಳುತ್ತಾರೆ. ಅವರು ತಮ್ಮ ಸಂಬಂಧದ ಬಲವರ್ಧನೆಗೆ ಪ್ರಾಮಾಣಿಕವಾಗಿ ಯತ್ನಿಸುತ್ತಾರೆ, ಶ್ರಮಿಸುತ್ತಾರೆ. ಸ್ನೇಹವಾಗಲಿ, ಪ್ರೇಮವಾಗಲಿ, ಪತಿ-ಪತ್ನಿ, ಸಹೋದರತ್ವ, ಹಿರಿಯರು, ಪಾಲಕರು ಹೀಗೆ ಯಾರೊಂದಿಗಾದರೂ ಸಂಬಂಧವನ್ನು ಹಿತವಾಗಿಟ್ಟುಕೊಳ್ಳಲು ಬಯಸುತ್ತಾರೆ. ತಮ್ಮ ಸಂಗಾತಿಯ ಬಗ್ಗೆಯೂ ಅತೀವ ಕಾಳಜಿ ವಹಿಸುತ್ತಾರೆ. ಅವರೊಂದಿಗಿನ ತಮ್ಮ ಬಾಂಧವ್ಯ ಸದೃಢವಾಗಲು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಇಂತಹ ಜನರನ್ನು ಈ ನಾಲ್ಕು ರಾಶಿಗಳಲ್ಲಿ ಕಾಣಬಹುದು.

•    ವೃಷಭ (Taurus)
ಈ ರಾಶಿಯ (Zodiac Sign) ಜನ ಅತ್ಯಂತ ಸೌಜನ್ಯಶೀಲರು. ಶುಕ್ರ (Venus) ಅಧಿಪತಿಯಾಗಿರುವ ಈ ರಾಶಿಯ ಜನ ಪ್ರೀತಿ (Love) ಮತ್ತು ಭಾವನೆಗಳಿಂದ (Feelings) ಕೂಡಿರುತ್ತಾರೆ. ತಮ್ಮ ಬಾಂಧವ್ಯಕ್ಕೆ ಬದ್ಧತೆ (Commit) ಹೊಂದಿದ್ದೇವೆ ಎನ್ನುವುದನ್ನು ಸಂಗಾತಿಗೆ (Partner) ತೋರ್ಪಡಿಸಲು ಇಷ್ಟಪಡುತ್ತಾರೆ. ಜೀವನದ ಕಷ್ಟದ ಅಥವಾ ಒತ್ತಡದಾಯಕ (Stressful) ಪರಿಸ್ಥಿತಿಯಲ್ಲೂ ತಮ್ಮ ಸಂಬಂಧಗಳನ್ನು ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಯತ್ನಿಸುತ್ತಾರೆ. ತಮಗೇನು ಸಾಧ್ಯವೋ ಅದನ್ನು ನಿರ್ವಂಚನೆಯಿಂದ ನಿಭಾಯಿಸುತ್ತಾರೆ. ಕಷ್ಟದ ಸಮಯದಲ್ಲಿ ಸಂಗಾತಿಗೆ ಸಾಕಷ್ಟು ಬೆಂಬಲ ನೀಡುತ್ತಾರೆ.

•    ಕರ್ಕಾಟಕ (Cancer)
ದೃಢವಾದ ಬದ್ಧತೆ (Loyelty) ಮತ್ತು ಪರಿಶ್ರಮಕ್ಕೆ ಕರ್ಕಾಟಕ ರಾಶಿಯವರು ಹೆಸರುವಾಸಿ. ಭಾವನೆಗಳ ಬಗ್ಗೆ ಸ್ಪಷ್ಟತೆ ಹೊಂದಿರುತ್ತಾರೆ. ಹಾಗೂ ಭಾವನಾತ್ಮಕ (Sentiment) ವ್ಯಕ್ತಿತ್ವ ಹೊಂದಿರುತ್ತಾರೆ. ಭಾವನಾತ್ಮಕವಾಗಿ ಇವರನ್ನು ವಶಪಡಿಸಿಕೊಳ್ಳುವುದು ಸುಲಭ. ಕೆಲವು ಹಂತಗಳಲ್ಲಿ ಇವರು ತಮ್ಮ ನೈಜವಾದ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಅಸಮರ್ಥರಾಗುತ್ತಾರೆ. ಪ್ರೀತಿಪಾತ್ರರು ಹೇಳಿದಂತೆ ನಡೆಯುತ್ತಾರೆ. ಸಂಬಂಧದ ವೃದ್ಧಿಗೆ (Strengthen) ಕಷ್ಟಪಡುತ್ತಾರೆ. ಸಂಗಾತಿಗೆ ತಮ್ಮ ನೈಜತೆಯನ್ನು ತಿಳಿಯಪಡಿಸುತ್ತಾರೆ. 

ಇದನ್ನೂ ಓದಿ: ಈ ದುರ್ಗುಣ ನಿಮ್ಮ ಹಿಂದಿನ ಜನ್ಮದಿಂದ ಬಂದಿರಬಹುದು! ನಿಮ್ಮ ಜನ್ಮರಾಶಿಗೆ ತಕ್ಕಂತೆ ನೋಡಿ

•    ವೃಶ್ಚಿಕ (Scorpio)
ಒಂದೊಮ್ಮೆ ನೀವು ವೃಶ್ಚಿಕ ರಾಶಿಯವರೊಂದಿಗೆ ಸಂಬಂಧದಲ್ಲಿದ್ದರೆ ಸುಲಭವಾಗಿ ಅವರನ್ನು ಬಿಟ್ಟುಬಿಡಲು ಸಾಧ್ಯವಾಗುವುದಿಲ್ಲ. ಏಕೆಂದರೆ, ಅವರು ಅಷ್ಟರಮಟ್ಟಿಗೆ ಸಂಬಂಧ (Relation) ಉಳಿಸಿಕೊಳ್ಳಲು ಯತ್ನಿಸುತ್ತಾರೆ. ವೃಶ್ಚಿಕ ರಾಶಿಯವರ ಹೃದಯ (Heart) ಗೆಲ್ಲುವುದು ಕಷ್ಟಕರ, ಅವರ ನಂಬಿಕೆ ಗಳಿಸುವುದೂ ಸುಲಭವಲ್ಲ. ಏಕೆಂದರೆ, ಅವರು ಸುಲಭವಾಗಿ ಯಾರನ್ನೂ ನಂಬುವುದಿಲ್ಲ. ಆದರೆ, ಒಮ್ಮೆ ನಂಬಿಕೆ, ಪ್ರೀತಿ ಮೂಡಿದರೆ ಅವರು ನಿಮ್ಮನ್ನು ಬಿಟ್ಟುಕೊಡುವುದಿಲ್ಲ. ಅವರೊಂದಿಗೆ ಸುಮ್ಮನೆ ಡೇಟ್ (Date) ಮಾಡುವ ವಿಚಾರ ಮಾಡುವಂತಿಲ್ಲ, ಸಂಗಾತಿ ಜತೆಗಿನ ಸಂಬಂಧ ವೃದ್ಧಿಸಿಕೊಳ್ಳಲು ಹಾಗೂ ಅದನ್ನು ದೀರ್ಘಕಾಲ ಮುಂದುವರಿಸಲು ಅವರು ದೃಢವಾಗಿ ಯತ್ನಿಸುತ್ತಾರೆ ಹಾಗೂ ಬದ್ಧರಾಗಿರುತ್ತಾರೆ. 

ಇದನ್ನೂ ಓದಿ: VASTU TIPS: ಮನೆಯ ನೆಗೆಟಿವಿಟಿ ದೂರ ಮಾಡಲು ಇದನ್ನ ತಪ್ಪದೇ ಮಾಡಿ

•    ಮಕರ (Capricorn)
ಮಕರ ರಾಶಿಯ ಜನರಿಗೆ ತಮ್ಮ ಸಂಗಾತಿಯ ಬಗ್ಗೆ ಇತರರೊಂದಿಗೆ ಮಾತನಾಡುವುದೆಂದರೆ ಭಾರೀ ಇಷ್ಟವಾದ ವಿಚಾರ. ಸಂಗಾತಿಗೆ ತಮ್ಮೆಲ್ಲ ಪ್ರೀತಿ, ಕರುಣೆ, ಬದ್ಧತೆಯನ್ನು ಧಾರೆ ಎರೆಯುತ್ತಾರೆ. ಇವರ ಸಂಗಾತಿಗೆ ತಾವೊಬ್ಬ ರಾಯಲ್ ಪ್ರಿನ್ಸೆಸ್ (Royal Princess) ಅಥವಾ ಪ್ರಿನ್ಸ್ (Prince) ಎನಿಸಿದರೆ ಅಚ್ಚರಿ ಬೇಡ! ತಮ್ಮ ಸಂಗಾತಿಗೆ ನಿಷ್ಠರಾಗಿರುತ್ತಾರೆ. ಸಂಬಂಧದಲ್ಲಿ ಏನಾದರೂ ಸಂಕಷ್ಟವಾದರೆ ಸುಧಾರಣೆಗೆ ಅಪರಿಮಿತವಾಗಿ ಯತ್ನಿಸುತ್ತಾರೆ. ಕಷ್ಟಕಾಲದಲ್ಲಿ ನಿರಂತರವಾಗಿ ಬೆಂಬಲಕ್ಕೆ (Support) ನಿಂತು ಉತ್ತಮ ಸಂಬಂಧಕ್ಕೆ ಆದ್ಯತೆ ನೀಡುತ್ತಾರೆ. 

Follow Us:
Download App:
  • android
  • ios