Saturn Transit: ಶನಿಯ ರಾಶಿ ಪರಿವರ್ತನೆಯಿಂದ ಈ ಎಂಟು ರಾಶಿಗಳ ಮೇಲೆ ಅಗಾಧ ಪರಿಣಾಮ
ಏಪ್ರಿಲ್ ಹಾಗೂ ಜುಲೈನಲ್ಲಿ ಶನಿ ಗ್ರಹ ರಾಶಿ ಪರಿವರ್ತನೆ ಹೊಂದಲಿದೆ. ಇದರ ಪರಿಣಾಮಗಳು 8 ರಾಶಿಗಳ ಮೇಲೆ ಅಗಾಧವಾಗಿ ಕಾಣಿಸಿಕೊಳ್ಳಲಿವೆ. ಯಾವ ರಾಶಿಗೆ ಒಳ್ಳೆಯದಾಗಲಿದೆ, ಯಾವುದಕ್ಕೆ ಕೆಟ್ಟದಾಗಲಿದೆ ನೋಡಿ.
ಪ್ರತಿಯೊಬ್ಬರೂ ಗ್ರಹದ ಚಲನೆಯಿಂದ ತಮ್ಮ ಬಾಳಿನಲ್ಲಿ ಒಳಿತಾಗಲಿ ಎಂದು ಬಯಸುತ್ತಾರೆ. ಆದರೆ, ಗ್ರಹ ಚಲನೆಯ ಪರಿಣಾವು ಜೀವನದ ಒಂದೊಂದು ಹಂತದಲ್ಲಿ ಒಂದೊಂದು ರಾಶಿಯ ಮೇಲೆ ಒಂದೊಂದು ರೀತಿ ಇರುತ್ತದೆ. ಸಾಮಾನ್ಯವಾಗಿ ಶನಿ, ಶುಕ್ರ ಹಾಗೂ ಗುರು ಗ್ರಹದ ಪರಿವರ್ತನೆಯಿಂದ ರಾಶಿಗಳ ಮೇಲೆ ಹೆಚ್ಚಿನ ಪರಿಣಾಮಗಳು ಉಂಟಾಗುತ್ತವೆ.
ಶನಿಯ ವಿಷಯಕ್ಕೆ ಬಂದರೆ ಮೊದಲೇ ಅತಿ ನಿಧಾನವಾಗಿ ಚಲಿಸುವ ಗ್ರಹ. ಈ ವರ್ಷ ಎರಡು ಬಾರಿ ಶನಿಯು ರಾಶಿ ಬದಲಿಸಲಿದ್ದಾನೆ(Saturn Transit). ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ಎರಡೂವರೆ ವರ್ಷಕ್ಕೊಮ್ಮೆ ರಾಶಿಯನ್ನು ಬದಲಾಯಿಸುತ್ತಾನೆ. ಆದರೆ ಈ ವರ್ಷ ಆತನ ಹಿಮ್ಮುಖ ಚಲನೆಯೂ ಇರುವ ಕಾರಣದಿಂದ ಎರಡು ಬಾರಿ ಪರಿವರ್ತನೆ ಹೊಂದಲಿದ್ದಾನೆ. ಈಗ ತನ್ನ ಸ್ವಂತ ರಾಶಿಯಾದ ಕುಂಭಕ್ಕೆ 30 ವರ್ಷಗಳ ಬಳಿಕ ಮರಳುತ್ತಿದ್ದಾನೆ.
ಇದರಿಂದ ಎಂಟು ರಾಶಿಗಳ ಮೇಲೆ ಅಗಾಧ ಪರಿಣಾಮಗಳಾಗಲಿವೆ. ಕೆಲವಕ್ಕೆ ಒಳಿತಾದರೆ ಮತ್ತೆ ಕೆಲವಕ್ಕೆ ಅಡೆ ತಡೆ, ಕಷ್ಟ ನಷ್ಟಗಳು ಹೆಚ್ಚಬಹುದು. ಈ ಶನಿ ಪರಿವರ್ತನೆ ಯಾವಾಗ ಆಗಲಿದೆ, ಅದರಿಂದ ಯಾವ ರಾಶಿಯವರ ಮೇಲೆ ಏನು ಪರಿಣಾಮಗಳಾಗುತ್ತವೆ ನೋಡೋಣ.
2022 ಈ ರಾಶಿಯ ಹುಡುಗಿಯರಿಗೆ ಸಖತ್ Lucky Year
ಕುಂಭಕ್ಕೆ ಆಗಮನ
ಈ ವರ್ಷ ಏಪ್ರಿಲ್ 29ರಂದು ಶನಿಯು ಮಕರ(Capricorn)ವನ್ನು ತೊರೆದು ಕುಂಭ(Aquarius) ರಾಶಿಗೆ ಆಗಮಿಸುತ್ತಿದ್ದಾನೆ. ಇದು ಶನಿಯ ಸ್ವಂತ ರಾಶಿಯಾಗಿದ್ದು, ಬರೋಬ್ಬರಿ 30 ವರ್ಷಗಳ ಬಳಿಕ ಶನಿಯು ಈ ರಾಶಿಗೆ ಮತ್ತೆ ಬರುತ್ತಿದ್ದಾನೆ. ಶನಿಯು ಕುಂಭಕ್ಕೆ ಬರುತ್ತಿದ್ದಂತೆಯೇ ಕಟಕ ಹಾಗೂ ವೃಶ್ಚಿಕ ರಾಶಿಯ ಜನರಿಗೆ ಶನಿ ಧೈಯ್ಯ ಶುರುವಾಗುತ್ತದೆ. ಅಂದರೆ ಮೇಯಿಂದ ಜುಲೈ 12ರವರೆಗೆ ಹೆಚ್ಚು ಕಷ್ಟ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಶನಿಯ ಕೆಟ್ಟ ದೃಷ್ಟಿಗೆ ಪಾತ್ರರಾಗಬೇಕಾಗುತ್ತದೆ. ಈ ಸಂದರ್ಭದಲ್ಲಿ ಅಂದುಕೊಂಡ ಕಾರ್ಯಗಳಾವುದೂ ಆಗದೆ ಕಂಗಾಲಾಗಬಹುದು.
Personality Trait: ಬುಧವಾರ ಹುಟ್ಟಿದವರು ಹೀಗಿರ್ತಾರೆ..
ಮೀನ(Pisces)ಕ್ಕೆ ಸಾಡೇ ಸಾತಿ
ಅದೇ ಸಂದರ್ಭದಲ್ಲಿ ಶನಿಯ ಸಾಡೇ ಸಾತಿ ಮೀನ ರಾಶಿಗೆ ಶುರುವಾಗಲಿದೆ. ಅಂದರೆ ಏಳೂವರೆ ವರ್ಷಗಳ ಕಷ್ಟದ ಸಮಯ ಆರಂಭವಾಗಲಿದೆ. ಇದೇ ಸಂದರ್ಭದಲ್ಲಿ ಧನಸ್ಸಿಗೆ ಸಾಡೇಸಾತಿ ಮುಗಿದು ಒಳ್ಳೆಯ ದಿನಗಳು ಆರಂಭವಾಗಲಿವೆ. ಶನಿಯ ಈ ರಾಶಿ ಪರಿವರ್ತನೆಯಿಂದ ಕುಂಭ ರಾಶಿಯವರಿಗೆ ಬಹಳ ಒಳಿತಾಗಲಿದೆ. ಸಾಡೇಸಾತಿಯ ಎರಡನೇ ಹಂತವಾದ ಇದು ಅದೃಷ್ಟದ ಕಾಲ ಎಂದೇ ಹೇಳಬಹುದು. ಶನಿಯ ಕೃಪಾಕಟಾಕ್ಷ ಸಿಕ್ಕಿ ಕೈ ಹಾಕಿದಲ್ಲೆಲ್ಲ ಯಶಸ್ಸು ದೊರೆಯುವುದು. ಮಕರಕ್ಕೆ ಮೂರನೇ ಹಂತದ ಸಾಡೇಸಾತಿ ಅಂದರೆ ಕೊನೆಯ ಎರಡೂವರೆ ವರ್ಷಗಳು ಶುರುವಾಗಲಿವೆ. ಮಿಥುನ, ತುಲಾ ಹಾಗೂ ಧನು(Sagittarius) ರಾಶಿಗೆ ಶನಿ ಧೈಯ್ಯ ಮುಗಿದು ಸಮಾಧಾನದ ನಿಟ್ಟುಸಿರು ಬಿಡುವಂತಾಗುತ್ತದೆ. ಈ ಸಮಯದಲ್ಲಿ ಬಹಳಷ್ಟು ಒಳಿತುಗಳನ್ನುಈ ರಾಶಿಯವರು ನೋಡುವರು.
ಮತ್ತೆ ಮಕರಕ್ಕೆ
12 ಜುಲೈಯಂದು ಶನಿಯು ಮತ್ತೆ ಹಿಮ್ಮುಖ(retrograde) ಚಲನೆಯಲ್ಲಿ ಮಕರಕ್ಕೆ ಮರಳಲಿದ್ದಾನೆ. ಈ ಸಂದರ್ಭ ಮತ್ತೆ ಮಿಥುನ, ತುಲಾ ಹಾಗೂ ಧನು ರಾಶಿಯವರು ಸಮಸ್ಯೆ ಎದುರಿಸಬೇಕಾಗಬಹುದು. ಶನಿಯು ಇದೇ ಸ್ಥಿತಿಯಲ್ಲಿ 2023ರ ಜನವರಿ 17ರವರೆಗೂ ಇರಲಿದ್ದಾನೆ. ಆದರೆ, ಈ ಸಂದರ್ಭ ಮೀನ, ಕಟಕ ಹಾಗೂ ವೃಶ್ಚಿಕ ರಾಶಿಯವರಿಗೆ ಶನಿಯ ಕೆಟ್ಟ ದೃಷ್ಟಿಯಿಂದ ವಿರಾಮ ಸಿಕ್ಕಿ ಸಮಾಧಾನದ ನಿಟ್ಟುಸಿರು ಬಿಡುವಂತಾಗಲಿದೆ. ಒಟ್ಟಾರೆಯಾಗಿ ಶನಿಯ ಅರ್ಧಾರ್ಧ(half n half) ಮತ್ತು ಧೈಯ(dhaiya)ವನ್ನು ಎದುರಿಸುತ್ತಿರುವ ಮಕರ, ಕುಂಭ, ತುಲಾ, ಮಿಥುನ, ಧನು ರಾಶಿಗಳು ಮಧ್ಯೆ ಎರಡು ತಿಂಗಳ ಬ್ರೇಕ್ ಹೊರತು ಪಡಿಸಿದರೆ ವರ್ಷವೆಲ್ಲ ಶನಿಯ ಕೋಪವನ್ನು ಎದುರಿಸಬೇಕಾಗುತ್ತದೆ.