Asianet Suvarna News Asianet Suvarna News

Positive Zodiac Signs: ಯಾವಾಗಲೂ ಸಕಾರಾತ್ಮಕ ಯೋಚನೆ ಮಾಡುವ ರಾಶಿಗಳಿವು

ಜೀವನದಲ್ಲಿ ಎಲ್ಲ ಕಾಲಕ್ಕೂ ಉತ್ತಮ ಚಿಂತನೆಯನ್ನೇ ಮಾಡುತ್ತಿರುವುದು ಯಾರಿಗೂ ಸಾಧ್ಯವಿಲ್ಲದ ವಿಚಾರ. ಆದರೆ, ಕಷ್ಟದ ಸಮಯದಲ್ಲಿ ದೃಢ ನಿಶ್ಚಯದಿಂದ ಉದ್ದೇಶಪೂರ್ವಕವಾಗಿ ಉತ್ತಮ ಚಿಂತನೆ ಮಾಡುತ್ತ, ಪರಿಸ್ಥಿತಿಯನ್ನು ಒಪ್ಪಿಕೊಂಡು, ಥ್ಯಾಂಕ್ ಪುಲ್ ಆಗಿರಲು ಈ ಕೆಲವು ರಾಶಿಗಳ ಜನರಿಗೆ ಮಾತ್ರ ಸಾಧ್ಯ.

these zodiac Signs  see the positivity in things
Author
First Published Jun 8, 2023, 2:15 PM IST | Last Updated Jun 8, 2023, 2:15 PM IST

ಸವಾಲುಗಳಿಲ್ಲದ ಬದುಕು ಬದುಕಲ್ಲ. ಬದುಕಿನ ಪ್ರತೀ ಹಂತದಲ್ಲೂ ಒಂದಿಲ್ಲೊಂದು ಸವಾಲುಗಳು ಇದ್ದೇ ಇರುತ್ತವೆ. ಅವುಗಳನ್ನು ಎದುರಿಸದೇ ಮುಂದಕ್ಕೆ ಸಾಗಲಾಗುವುದಿಲ್ಲ. ಅವುಗಳನ್ನು ಎದುರಿಸಬೇಕೆಂದರೆ ನೆಗೆಟಿವ್ ಭಾವನೆಗಳಲ್ಲಿ ಮುಳುಗಿದ್ದರೆ ಸಾಧ್ಯವಿಲ್ಲ. ಧನಾತ್ಮಕವಾಗಿ ಯೋಚಿಸಿ ಕಾರ್ಯಪ್ರವೃತ್ತರಾಗಬೇಕಾಗುತ್ತದೆ. ಆದರೆ, ಇದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಕಷ್ಟದ ಸನ್ನಿವೇಶಗಳಲ್ಲಿ ದುಗುಡ ಪಡುವವರೇ ಹೆಚ್ಚು. ಆದರೆ, ಕೆಲವೇ ಕೆಲವು ರಾಶಿಗಳ ಜನರಲ್ಲಿ ಮಾತ್ರ ಸಕಾರಾತ್ಮಕವಾಗಿ ಕಾರ್ಯಪ್ರವೃತ್ತರಾಗುವ ಧೋರಣೆ ಕಂಡುಬರುತ್ತದೆ. ಅಲ್ಲದೆ, ಇವರು ಯಾವುದೇ ಪರಿಸ್ಥಿತಿಯನ್ನು ಧನಾತ್ಮಕವಾಗಿ ನೋಡುವ ಮೂಲಕ ಸಮಸ್ಯೆಯಿದ್ದರೂ ಅದನ್ನು ನಿಭಾಯಿಸುತ್ತಾರೆ. ಅರ್ಧ ತುಂಬಿರುವ ನೀರಿನ ಗ್ಲಾಸ್ ಅನ್ನು ಇವರಿಗೆ ನೀಡಿದರೆ, ಅರ್ಧ ಖಾಲಿಯಿದೆ ಎನ್ನುವುದಿಲ್ಲ, ಬದಲಿಗೆ, ಅರ್ಧ ತುಂಬಿದೆ ಎನ್ನುವ ದೃಷ್ಟಿಕೋನ ಹೊಂದಿರುತ್ತಾರೆ. ಸದಾಕಾಲ ಸಕಾರಾತ್ಮಕವಾಗಿಯೇ ಚಿಂತನೆ ಮಾಡಿಕೊಂಡಿರಲು ಯಾರಿಗೂ ಸಾಧ್ಯವಿಲ್ಲ. ಕಾಲಕಾಲಕ್ಕೆ ಏರಿಳಿತ ಸಹಜ. ಹಾಗೆಯೇ, ಒಮ್ಮೊಮ್ಮೆ ಇವರೂ ಕುಗ್ಗುತ್ತಾರೆ. ಆದರೆ, ಕಷ್ಟದ ಸನ್ನಿವೇಶಗಳಲ್ಲಿ ಉದ್ದೇಶಪೂರ್ವಕವಾಗಿ ತಮ್ಮನ್ನು ತಾವು ಕುಗ್ಗದಂತೆ ನೋಡಿಕೊಳ್ಳುವ ಗುಣ ಇವರಲ್ಲಿರುತ್ತದೆ. ತಾವೇನು ಹೊಂದಿದ್ದೇವೆಯೋ ಅದರ ಬಗ್ಗೆ ಕೃತಜ್ಞತೆ ಹೊಂದಿರುತ್ತಾರೆ. 

•    ವೃಷಭ (Taurus)
ವೃಷಭ ರಾಶಿಯ ಜನರಲ್ಲಿ ಕೃತಜ್ಞತಾ (Gratitude) ಭಾವ ಸಾಕಷ್ಟಿರುತ್ತದೆ. ದಿನನಿತ್ಯ ತಾವು ಅನುಭವಿಸುವ ಘಟನೆಗಳಲ್ಲಿಯೇ ಥ್ಯಾಂಕ್ ಫುಲ್ (Thankful) ಆಗಿರುವುದಕ್ಕೆ ಕಾರಣ ಹುಡುಕುತ್ತಾರೆ. ವಿಷಯ ಸಣ್ಣದಾಗಿರಲಿ, ದೊಡ್ಡದಾಗಿರಲಿ, ಥ್ಯಾಂಕ್ಸ್ ಹೇಳಲು ಮರೆಯುವುದಿಲ್ಲ. ಅದೃಷ್ಟಕ್ಕೆ (Fortune) ತಲೆಬಾಗುತ್ತಾರೆ. ಒಂದೊಮ್ಮೆ ಇವರ ಗ್ಲಾಸು ಸಂಪೂರ್ಣ ಖಾಲಿಯಾಗಿ ಹೊಸದಾಗಿ ತುಂಬಿಸುವಂತಿದ್ದರೂ ಸಕಾರಾತ್ಮಕ (Positive) ದೃಷ್ಟಿಕೋನವನ್ನು ಕಳೆದುಕೊಳ್ಳುವುದಿಲ್ಲ. ಜೀವನವನ್ನು ಸವಾಲಾಗಿ (Challenge) ನೋಡದೆ ಅವಕಾಶವನ್ನಾಗಿ ನೋಡುವುದು ಇವರ ದೊಡ್ಡ ಗುಣ. 

ಈ 5 ರಾಶಿಗಳ ಜನರು ಸಂಬಂಧಗಳನ್ನು ಹೂವಿನಂತೆ ಪ್ರೀತಿಸುತ್ತಾರೆ... ನಿಮ್ಮ ರಾಶಿ ಯಾವುದು?

•    ಮೇಷ (Aries)
ಉತ್ತಮವಾಗಿ ಜೀವಿಸುವ ಧೋರಣೆ ಹೊಂದಿರುವ ಮೇಷ ರಾಶಿಯ ಜನ ಪ್ರತಿದಿನ ತಮ್ಮ ಗುರಿಗಳನ್ನು (Target) ನಿಗದಿಪಡಿಸಿಕೊಳ್ಳುತ್ತ ಕಾರ್ಯಪ್ರವೃತ್ತರಾಗುತ್ತಾರೆ. ಪ್ರತಿನಿತ್ಯ ಏಳುವಾಗಲೇ ತಮ್ಮ ಕೆಲಸದ ಬಗ್ಗೆ ಯೋಚಿಸುತ್ತ ಮಗ್ನರಾಗುವುದು ಇವರ ಪ್ರವೃತ್ತಿ. ಮೇಷ ರಾಶಿಯ ಜನ ಆಶಾವಾದದ (Optimistic) ದೃಷ್ಟಿಕೋನ ಹೊಂದಿದ್ದರೆ ಯಾವುದೇ ಸಮಸ್ಯೆಗೆ ಪರಿಹಾರ (Solution) ಹುಡುಕುವಲ್ಲಿ ಮುಂದಿರುತ್ತಾರೆ. ಯಾವುದೇ ಸನ್ನಿವೇಶವನ್ನು ಚೆನ್ನಾಗಿ ನಿಭಾಯಿಸುವ ಬಗ್ಗೆ ತಮ್ಮ ಮೇಲೆ ತಮಗೆ ಅಪಾರ ನಂಬಿಕೆ ಇರುತ್ತದೆ. ಕಾರ್ಯಶೀಲರಾಗುವುದು (Action Orient) ಇವರ ಹುಟ್ಟುಗುಣ. ಉತ್ತಮ ವಿಚಾರಗಳ ಮೇಲೆ ಮಾತ್ರ ಇವರು ಗಮನ ನೀಡುವುದು ಉತ್ತಮ.

•    ಧನು (Sagittarius)
ಜೀವನವೊಂದು ಆಶೀರ್ವಾದ (Blessing) ಎನ್ನುವುದು ಇವರ ಭಾವನೆ. ಕೇವಲ ನೆಗೆಟಿವ್ (Negative) ಬಗ್ಗೆ ಗಮನ ಕೊಡದ ಇವರು ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕಿಸುವ ಕುರಿತು ಯೋಚಿಸುತ್ತಾರೆ. ಯಾವುದೇ ಸನ್ನಿವೇಶ ಎದುರಾದಾಗಲೂ ಅದನ್ನು ಒಪ್ಪಿಕೊಳ್ಳುವುದು (Acceptance), ಅದರಲ್ಲಿರುವ ಒಳಿತಿನ ಬಗ್ಗೆ ಯೋಚಿಸುವುದು, ಅವಕಾಶವನ್ನಾಗಿ (Opportunity) ಸ್ವೀಕರಿಸುವುದು ಇವರಲ್ಲಿರುವ ದೊಡ್ಡ ಗುಣ. ಖುಷಿಯಾಗಿರುವುದು, ಶ್ರಮಪಡುವುದು ಹುಟ್ಟುಗುಣ. ಯಾವುದೇ ಸನ್ನಿವೇಶವನ್ನೂ “ಇದ್ಯಾಕೆ ಬಂತು’ ಎಂದು ಶಪಿಸುವುದಿಲ್ಲ. ಸ್ಥಿರವಾಗಿ (Resilient) ಜೀವನದ ಸವಾಲುಗಳನ್ನು ಎದುರಿಸುತ್ತಾರೆ.

ಈ ರಾಶಿಗಳ ಮೇಲೆ ಸದಾ ಇರುತ್ತೆ ಕುಬೇರ ಕೃಪೆ; ಎಂದಿಗೂ ಸಂಪತ್ತಿನ ಕೊರತೆ ಇರೋಲ್ಲ!

•    ವೃಶ್ಚಿಕ (Scorpio)
ಆಶಾವಾದದಿಂದ ಅವಕಾಶಗಳು ಸೃಷ್ಟಿಯಾದರೆ, ನಿರಾಶಾವಾದದಿಂದ ಅವಕಾಶಗಳು ಕಳೆದುಹೋಗುತ್ತವೆ ಎನ್ನುವುದು ಇವರ ವಿಚಾರ. ಹೀಗಾಗಿ, ಧನಾತ್ಮಕ ವಿಚಾರಗಳ ಬಗ್ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಅರ್ಧ ಗ್ಲಾಸ್ (Half Glass) ಖಾಲಿ ಇದ್ದರೂ ಕೃತಜ್ಞರಾಗಿರುತ್ತಾರೆ. ಆಶಾವಾದದಿಂದ ನಿರೀಕ್ಷೆ ಮಾಡುತ್ತಾರೆ. ತಾವು ಕುಗ್ಗಿದಂತೆ ಭಾಸವಾದಾಗ (Low Down) ಹೆಚ್ಚಿನ ನಿರೀಕ್ಷೆ ಮಾಡದರೆ ನೈಜವೆನಿಸುವಂತಹ ಗುರಿಗಳನ್ನು ಮಾತ್ರವೇ ಹೊಂದುತ್ತಾರೆ. ತಾವು ಎದುರಿಸುವ ಕಷ್ಟಗಳನ್ನು ವಿಭಿನ್ನವಾಗಿ ಎದುರಿಸುವುದು ಇವರ ಶೈಲಿ. ಎಲ್ಲವನ್ನೂ ನಿಯಂತ್ರಿಸುವುದು (Control) ತಮ್ಮಿಂದ ಸಾಧ್ಯವಿಲ್ಲ ಎನ್ನುವ ಅರಿವು ಹೊಂದಿದ್ದು, ಪರಿಸ್ಥಿತಿಯನ್ನು (Situation) ಒಪ್ಪಿಕೊಳ್ಳುತ್ತಾರೆ. 

Latest Videos
Follow Us:
Download App:
  • android
  • ios