ಇವರು ಬೆಕ್ಕು-ನಾಯಿಯಂತೆ ಕಚ್ಚಾಡೋ ಗಂಡ-ಹೆಂಡತಿ; ಇದು ಯಾವ ರಾಶಿಯವರ ದೋಷ ಗೊತ್ತಾ?

ದಾಂಪತ್ಯ ಜೀವನ ಬಂಡಿ ಸರಾಗವಾಗಿ ಸಾಗಬೇಕೆಂದರೆ ರಾಶಿಗಳ ಹೊಂದಾಣಿಕೆಯೂ ಮುಖ್ಯ. ಅದಕ್ಕಾಗಿಯೇ ವಿವಾಹಕ್ಕೂ ಮುನ್ನ ರಾಶಿ ಹೊಂದಾಣಿಕೆ ಮಾಡಲಾಗುತ್ತದೆ. ಕೆಲವು ದಂಪತಿಗಳ ನಡವಳಿಕೆ ಮತ್ತು ಕೆಲವು ಗುಣಗಳಿಂದಾಗಿ ಸಂಬಂಧಗಳಲ್ಲಿ ಬಿರುಕು ಮೂಡುತ್ತದೆ. ಕೆಲವರು ಪರಸ್ಪರ ಯಾವಾಗಲೂ ಜಗಳ ಆಡುತ್ತಾ ಇರುತ್ತಾರೆ. ಅಂತಹ ರಾಶಿಚಕ್ರಗಳು ಯಾವುವು?

These zodiac signs generally have DIFFICULT marriages suh

ದಾಂಪತ್ಯ ಜೀವನ ಬಂಡಿ ಸರಾಗವಾಗಿ ಸಾಗಬೇಕೆಂದರೆ ರಾಶಿಗಳ ಹೊಂದಾಣಿಕೆಯೂ ಮುಖ್ಯ. ಅದಕ್ಕಾಗಿಯೇ ವಿವಾಹ (marriage) ಕ್ಕೂ ಮುನ್ನ ರಾಶಿ ಹೊಂದಾಣಿಕೆ ಮಾಡಲಾಗುತ್ತದೆ. ಕೆಲವು ದಂಪತಿಗಳ ನಡವಳಿಕೆ ಮತ್ತು ಕೆಲವು ಗುಣಗಳಿಂದಾಗಿ ಸಂಬಂಧಗಳಲ್ಲಿ ಬಿರುಕು ಮೂಡುತ್ತದೆ. ಕೆಲವರು ಪರಸ್ಪರ ಯಾವಾಗಲೂ ಜಗಳ ಆಡುತ್ತಾ ಇರುತ್ತಾರೆ. ಅಂತಹ ರಾಶಿಚಕ್ರ (Zodiac) ಗಳು ಯಾವುವು? ಇಲ್ಲಿದೆ ಮಾಹಿತಿ...

ಪ್ರೀತಿ ಅಥವಾ ದಾಂಪತ್ಯ ಜೀವನದಲ್ಲಿ ನಂಬಿಕೆ, ವಿಶ್ವಾಸ  (confidence) ಹಾಗೂ ಕಾಳಜಿ ಅತೀ ಮುಖ್ಯ. ಪತಿ, ಪತ್ನಿಯರಿಬ್ಬರ ಕುಂಡಲಿಯಲ್ಲಿ ಗ್ರಹಗಳ ಸ್ಥಾನ ಮತ್ತು ರಾಶಿಚಿಹ್ನೆಗಳು ಅವರ ವೈವಾಹಿಕ ಜೀವನ ಎಷ್ಟು ಸಂತೋಷವಾಗಿರುತ್ತದೆ ಎನ್ನುವುದನ್ನು ನಿರ್ಧರಿಸುತ್ತದೆ. ರಾಶಿ ಹೊಂದಾಣಿಕೆ ಆಗದಿದ್ದರೆ ದಾಂಪತ್ಯ (marriage) ದಲ್ಲಿ ಬರೀ ಕಲಹ ಉಂಟಾಗುತ್ತದೆ. ಅಂತಹ ರಾಶಿಚಕ್ರಗಳ ಡಿಟೇಲ್ಸ್ ಇಲ್ಲಿದೆ.

 

ಮೇಷ ರಾಶಿ (ಮೇಷ ರಾಶಿ) 

ಮೇಷ ರಾಶಿಯ ವ್ಯಕ್ತಿಗಳು ಸ್ವತಂತ್ರ  (independent)  ವಾಗಿ ಇರಲು ಇಷ್ಟ ಪಡುತ್ತಾರೆ. ಈ ಗುಣ ಕೆಲವೊಮ್ಮೆ ವೈವಾಹಿಕ ಜೀವನದಲ್ಲಿ ಕಲಹಕ್ಕೆ ಕಾರಣವಾಗಬಹುದು. ಏಕೆಂದರೆ ಅವರ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಾಗ ಅವರು ಅಸಹನೆಗೆ ಒಳಗಾಗಬಹುದು. ಇದು ಸಮಸ್ಯೆ (problem) ಗೆ ಕಾರಣವಾಗುತ್ತದೆ.

 

ವೃಷಭ (Taurus) 

ವೃಷಭ ರಾಶಿಯವರು ಹೆಚ್ಚು ಮೊಂಡುತನ ಹೊಂದಿರುತ್ತಾರೆ. ಇವರ ನಿಷ್ಠಾವಂತ 9faithful) ರು. ಆದರೆ ಕೋಪವನ್ನು ನಿಯಂತ್ರಣ ಮಾಡಿಕೊಳ್ಳಲ್ಲ. ಇದರಿಂದ ದಾಂಪತ್ಯ ಜೀವನದಲ್ಲಿ ಕಲಹ ಶುರುವಾಗುತ್ತದೆ. ಪತಿ ಹಾಗೂ ಪತ್ನಿಯರಲ್ಲಿ ಪರಸ್ಪರ ವಿಭಿನ್ನ ಅಭಿಪ್ರಾಯ (opinion) ಗಳನ್ನು ಎದುರಿಸಿದಾಗ ಈ ಸಮಸ್ಯೆ ಬರಲಿದೆ.

 

ಮಿಥುನ (Gemini) 

ಮಿಥುನ ರಾಶಿಯವರು ಕುತೂಹಲಕಾರಿಗಳು. ಹಾಗೂ ಹೊಂದಿಕೊಳ್ಳಬಲ್ಲವರು ಮತ್ತು ಸಂವಹನಶೀಲ (Communicative) ರು. ಆದಾಗ್ಯೂ ಅವರ ದ್ವಂದ್ವ ವಿಚಾರ ಹಾಗೂ ಕೋಪದಿಂದ ಮನೆಯಲ್ಲಿ ಜಗಳ ಉಂಟಾಗುತ್ತದೆ. ಇದರಿಂದ ತಮ್ಮ ಸಂಗಾತಿ ಜತೆ ಅವರು ಕಿರಿಕಿರಿ ಮಾಡಿಕೊಳ್ಳುತ್ತಾರೆ.

 

Sawan 2023: ಶ್ರಾವಣದಲ್ಲಿ ಹುಟ್ಟಿದವರ ಮೇಲೆ ಸದಾ ಇರಲಿದೆ ಶಿವಕೃಪೆ

 

ಸಿಂಹ ರಾಶಿ (Leo) 

ಸಿಂಹ ರಾಶಿಯವರು ಆತ್ಮವಿಶ್ವಾಸಿ (Confident) ಗಳು. ಅವರು ತಮ್ಮ ಮೆಚ್ಚುಗೆಯನ್ನು ಸದಾ ಬಯಸುತ್ತಾರೆ. ಅವರ ನೋಟ ಮತ್ತು ಔದಾರ್ಯವು ಅವರನ್ನು ಉತ್ತಮ ಸಂಗಾತಿ ಆಗಿ ಮಾಡುತ್ತದೆ. ಆದರೆ ಇದು ಕೆಲವೊಮ್ಮೆ ಅತಿಯಾದಾಗ ದಾಂಪತ್ಯದಲ್ಲಿ ಜಗಳ ಶುರು ಆಗುತ್ತದೆ. ಇಬ್ಬರ ನಡುವೆ ಅಸಮತೋಲನ (Imbalance) ವನ್ನು ಉಂಟುಮಾಡುತ್ತದೆ.

 

ವೃಶ್ಚಿಕ ರಾಶಿ (Scorpio) 

ವೃಶ್ಚಿಕ ರಾಶಿಯವರು ತುಂಬಾ ರಹಸ್ಯ ಮತ್ತು ಆಳವಾದ ಭಾವನಾತ್ಮಕ  (Emotional) ವ್ಯಕ್ತಿಗಳು. ಇವರ ತಮ್ಮ ಸಂಗಾತಿ ಜತೆ ನಿಷ್ಠೆಯಿಂದ ಇರುತ್ತಾರೆ. ಇವರಲ್ಲಿ ಅಸೂಯೆ ಮತ್ತು ದ್ವೇಷವನ್ನು ಹಿಡಿದಿಟ್ಟುಕೊಳ್ಳುವ ಗುಣ ಇದೆ. ಇದರಿಂದ ಗಂಡ-ಹೆಂಡತಿ ನಡುವೆ ಕಲಹ ಉಂಟಾಗಲಿದೆ. ಇದು ದಾಂಪತ್ಯ ಬಿರುಕಿಗೆ ಕಾರಣ ಆಗಬಹುದು. 

 

ಧನು ರಾಶಿ

ಧನು ರಾಶಿಯವರು ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಜೀವಿಗಳು. ಸ್ವಾತಂತ್ರ್ಯ ಮತ್ತು ಸಾಹಸಕ್ಕಾಗಿ ಪ್ರೀತಿ (love) ಯನ್ನು ಗೌರವಿಸುತ್ತಾರೆ. ಅವರು ಬದ್ಧತೆಗಾಗಿ ಹೋರಾಡುತ್ತಾರೆ. ಇದು ಕೆಲವೊಮ್ಮೆ ಜಗಳಕ್ಕೆ ಕಾರಣ ಆಗುತ್ತದೆ. ಇವರ ವೈವಾಹಿಕ ಜೀವನವು ಸಾಮಾನ್ಯವಾಗಿ ಚೆನ್ನಾಗಿರುತ್ತದೆ. ಆದರೆ ತಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಾಗ ಜಗಳ  (fight) ಶುರು ಆಗುತ್ತದೆ.

ಕರ್ಕಾಟಕ (cancer) , ಕನ್ಯಾ, ತುಲಾ, ಮಕರ, ಕುಂಭ ಮತ್ತು ಮೀನ ರಾಶಿ (Pisces) ಯವರಿಗೆ ಈ ವಿಚಾರದಲ್ಲಿ ಸಮಸ್ಯೆಗಳಿರಬಹುದು. ಆದರೆ ತಮ್ಮ ಸಂಗಾತಿಯೊಂದಿಗೆ ಸ್ವಲ್ಪ ಸಮತೋಲಿತವಾಗಿರಲು ಅದನ್ನು ಹೇಗೆ ನಿಭಾಯಿಸಬೇಕೆಂದು ಅವರಿಗೆ ತಿಳಿದಿದೆ.

Latest Videos
Follow Us:
Download App:
  • android
  • ios