Sawan 2023: ಶ್ರಾವಣದಲ್ಲಿ ಹುಟ್ಟಿದವರ ಮೇಲೆ ಸದಾ ಇರಲಿದೆ ಶಿವಕೃಪೆ
ಈ ವರ್ಷ ಜುಲೈ 18ರಿಂದ ಸೆಪ್ಟೆಂಬರ್ 15 ರವರೆಗೆ ಶ್ರಾವಣ ಮಾಸ ಇರಲಿದೆ. ಶ್ರಾವಣ ಮಾಸದಲ್ಲಿ ಶಿವ ಪೂಜೆಗೆ ವಿಶೇಷ ಮಹತ್ವವಿದೆ. ವಿಷ್ಣುವು ಯೋಗನಿದ್ರೆಯಲ್ಲಿರುವ ಈ ಸಂದರ್ಭದಲ್ಲಿ ಮಹಾದೇವನೇ ಜಗತ್ತನ್ನು ಕಾಯುವ ಹೊಣೆ ಹೊತ್ತಿರುತ್ತಾನೆ.
ಈ ವರ್ಷ ಜುಲೈ 18ರಿಂದ ಶ್ರಾವಣ ಮಾಸ ಆರಂಭವಾಗುತ್ತಿದೆ. ಶ್ರಾವಣ ಎಂದರೆ ಹಬ್ಬಗಳ ಮಾಸ. ಶ್ರಾವಣ ಬರುತ್ತಿದ್ದಂತೆ ಜನರ ಮನೆಗಳಲ್ಲಿ ಸಂಭ್ರಮ ಸಡಗರ ಹೆಚ್ಚುತ್ತದೆ. ಶ್ರಾವಣವು ಶಿವನ ಆರಾಧನೆಗೆ ಹೇಳಿ ಮಾಡಿಸಿದ ಮಾಸ. ವಿಷ್ಣುವು ಯೋಗನಿದ್ರೆಯಲ್ಲಿರುವ ಈ ಸಂದರ್ಭದಲ್ಲಿ ಮಹಾದೇವನೇ ಜಗತ್ತನ್ನು ಕಾಯುವ ಹೊಣೆ ಹೊತ್ತಿರುತ್ತಾನೆ. ಹಾಗಾಗಿ, ಈ ಇಡೀ ತಿಂಗಳಲ್ಲಿ ಶಿವನು ತಾಯಿ ಪಾರ್ವತಿಯೊಂದಿಗೆ ಭೂಮಿಯನ್ನು ಸುತ್ತುತ್ತಾನೆ ಎಂದು ನಂಬಲಾಗಿದೆ. ಇದಕ್ಕಾಗಿಯೇ ಶ್ರಾವಣದಲ್ಲಿ ದೇಶದ ಎಲ್ಲ ಶಿವ ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತಿರುತ್ತವೆ.
ಬಪ್ಪ ಮನೆಮನೆಗೆ ಬರುವ ಈ ಮಾಸದಲ್ಲಿ ಮಕ್ಕಳು ಜನಿಸಿದರೆ ಜನ ಸಂತೋಷ ಪಡುತ್ತಾರೆ. ಏಕೆಂದರೆ, ಈ ತಿಂಗಳಲ್ಲಿ ಜನಿಸಿದವರನ್ನು ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಶ್ರಾವಣ ಮಾಸದಲ್ಲಿ ಜನಿಸಿದವರು ಸದಾ ಶಿವನ ಆಶೀರ್ವಾದ ಪಡೆಯುತ್ತಾರೆ. ಶ್ರಾವಣ ಮಾಸದಲ್ಲಿ ಜನಿಸಿದವರ ಬಗ್ಗೆ ಶಿವನು ಏಕೆ ವಿಶೇಷವಾಗಿ ಒಲವು ತೋರುತ್ತಾನೆ ಎಂದು ನೋಡೋಣ.
ಅವರು ಶುದ್ಧ ಹೃದಯವಂತರು
ಶ್ರಾವಣ ಮಾಸದಲ್ಲಿ ಜನಿಸಿದವರು ಹೃದಯದಲ್ಲಿ ತುಂಬಾ ಪರಿಶುದ್ಧರು. ಅವರು ತಮ್ಮ ಹೃದಯದಿಂದ ಪ್ರತಿಯೊಬ್ಬರನ್ನೂ ಪ್ರೀತಿಸುತ್ತಾರೆ, ಅದಕ್ಕೆ ಪ್ರತಿಯಾಗಿ ಅವರನ್ನು ಪ್ರೀತಿಸುವವರ ಸಂಖ್ಯೆಯೂ ತುಂಬಾ ಹೆಚ್ಚಾಗಿರುತ್ತದೆ. ಅಂದ ಹಾಗೆ, ಶ್ರಾವಣ ಮಾಸದಲ್ಲಿ ಜನಿಸಿದವರು ಪ್ರತಿ ಸನ್ನಿವೇಶದಲ್ಲಿ ಭಗವಾನ್ ಶಿವನಂತೆ ತುಂಬಾ ಶಾಂತವಾಗಿರುತ್ತಾರೆ. ಆದರೆ ಅವರು ಕೋಪಗೊಂಡಾಗ ಮಾತ್ರ ಶಿವನಂತೆಯೇ ಅವರನ್ನು ನಿಭಾಯಿಸಲು ಕಷ್ಟವಾಗುತ್ತದೆ.
ಡ್ರಗ್ ಅಡಿಕ್ಷನ್‌ಗೆ ರಾಹು ಕಾರಣ; ಈ ಪರಿಹಾರಗಳು ನಿಮ್ಮನ್ನು ಬಚಾವ್ ಮಾಡಬಲ್ಲವು!
ಉತ್ತಮ ನಿರ್ವಹಣಾ ಕೌಶಲ್ಯ
ಈ ತಿಂಗಳಲ್ಲಿ ಜನಿಸಿದವರು ಉತ್ತಮ ನಿರ್ವಹಣೆಯ ಕೌಶಲ್ಯವನ್ನು ಹೊಂದಿರುತ್ತಾರೆ. ಈ ಜನರು ಒಮ್ಮೆ ಏನನ್ನಾದರೂ ಮಾಡಲು ಮನಸ್ಸು ಮಾಡಿದರೆ, ಅವರು ಕೆಲಸವನ್ನು ಪೂರ್ಣಗೊಳಿಸದ ತನಕ ಅವರು ವಿಶ್ರಾಂತಿ ಪಡೆಯುವುದಿಲ್ಲ.
ಶಿವನ ಕೃಪೆ ಸದಾ ಅವರ ಮೇಲಿರುತ್ತದೆ..
ಶ್ರಾವಣ ಮಾಸದಲ್ಲಿ ಜನಿಸಿದವರು ಅದೃಷ್ಟವಂತರು. ಏಕೆಂದರೆ ಅವರ ಮೇಲೆ ಶಿವನ ಆಶೀರ್ವಾದ ಸದಾ ಇರುತ್ತದೆ. ಅವರ ಹೃದಯದ ಶುದ್ಧತೆಯ ಕಾರಣ ಅವರು ತಮ್ಮ ನಿರ್ಧಾರಗಳನ್ನು ಹೃದಯದಿಂದ ತೆಗೆದುಕೊಳ್ಳುತ್ತಾರೆ. ಈ ಕಾರಣಕ್ಕಾಗಿ ಅನೇಕ ಬಾರಿ ಅವರು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇದರಿಂದಾಗಿ ಅವರು ಅನೇಕ ಬಾರಿ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಆದರೆ, ಶಿವನು ಮಾತ್ರ ಎಂಥ ಸನ್ನಿವೇಶದಲ್ಲೂ ಅವರ ಕೈ ಬಿಡುವುದಿಲ್ಲ.
ಸಂಬಂಧಗಳಲ್ಲಿ ಪ್ರಾಮಾಣಿಕತೆ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶ್ರಾವಣದಲ್ಲಿ ಜನಿಸಿದವರು ಬೇಗನೆ ಪ್ರೀತಿಯಲ್ಲಿ ಬೀಳುವುದಿಲ್ಲ. ಆದರೆ ಅವರು ಯಾರನ್ನಾದರೂ ಇಷ್ಟಪಟ್ಟರೆ, ಅವರು ಪ್ರಾಮಾಣಿಕವಾಗಿ ಆ ಸಂಬಂಧಕ್ಕೆ ತಮ್ಮನ್ನು ತಾವು ಒಪ್ಪಿಸುತ್ತಾರೆ. ಅವರು ತಮ್ಮ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ.
ಅವರು ಈ ಕ್ಷೇತ್ರಗಳಲ್ಲಿ ಯಶಸ್ಸನ್ನು ಕಾಣುತ್ತಾರೆ..
ಶ್ರಾವಣದಲ್ಲಿ ಜನಿಸಿದ ಜನರು ಮುಖ್ಯವಾಗಿ ವ್ಯಾಪಾರ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಭಗವಾನ್ ಶಿವನ ಕೃಪೆಯಿಂದ ಅವರ ಆರ್ಥಿಕ ಸ್ಥಿತಿಯೂ ಹೆಚ್ಚಿನ ಸಮಯ ಉತ್ತಮವಾಗಿರುತ್ತದೆ. ಅವರು ಜೀವನದಲ್ಲಿ ಯಾವುದಕ್ಕೂ ಹೆಚ್ಚು ಚಿಂತಿಸಬೇಕಾಗಿಲ್ಲ ಮತ್ತು ಸಂತೋಷ ಮತ್ತು ಸಮೃದ್ಧ ಜೀವನವನ್ನು ನಡೆಸುತ್ತಾರೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಬೆಳ್ಳಿ ರಥ ಸೇವೆ ಆರಂಭ: ಉಘೇ.. ಉಘೇ.. ಮಾದಪ್ಪ
ಸಂಕ್ಷಿಪ್ತವಾಗಿ ಹೇಳುವುದಾದರೆ, ಶ್ರಾವಣ ಮಾಸದಲ್ಲಿ ಜನಿಸಿದ ಜನರು ಭಗವಾನ್ ಶಿವನ ಸ್ವಭಾವ ಮತ್ತು ಬುದ್ಧಿವಂತಿಕೆಗೆ ಬಹಳ ಹತ್ತಿರವಾಗಿದ್ದಾರೆ. ಇದರಿಂದ ಶಿವನು ಅವರ ಕಡೆಗೆ ವಿಶೇಷವಾಗಿ ಒಲವು ತೋರುತ್ತಾನೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.