ಮನಸ್ತಾಪಗಳ ಬೇಗ ಮರೆಯುವ ಮುದ್ದು ಮನಸಿನ ರಾಶಿಗಳಿವು

ವ್ಯಕ್ತಿಯ ಸ್ವಭಾವವನ್ನು ರಾಶಿಚಕ್ರಗಳ ಆಧಾರದ ಮೇಲೆ ತಿಳಿಯಬಹುದಾಗಿದೆ. ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಕೆಲವು ರಾಶಿಯ ವ್ಯಕ್ತಿಗಳು ಎಷ್ಟೇ ಕೋಪಿಸಿಕೊಂಡರೂ, ಜಗಳವಾಡಿದರೂ ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಅಂತಹ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.
 

These zodiac signs Forget all arguments quickly

ಹನ್ನೆರಡು ರಾಶಿಗಳಲ್ಲಿ ಪ್ರತಿ ರಾಶಿಗೂ (Zodiac) ವಿಶೇಷವಾದ ಗುಣ ಸ್ವಭಾವಗಳು (Nature) ಇರುತ್ತವೆ. ವ್ಯಕ್ತಿಯ ರಾಶಿಯ ಆಧಾರದ ಮೇಲೆ ಸ್ವಭಾವ ಮತ್ತು ವ್ಯಕ್ತಿತ್ವವನ್ನು (Personality) ಅಂದಾಜಿಸಬಹುದಾಗಿದೆ. ಕೆಲವು ರಾಶಿಯ ವ್ಯಕ್ತಿಗಳು ತುಂಬ ಒರಟಾದ ಸ್ವಭಾವವನ್ನು ಹೊಂದಿದ್ದು, ಮಾತು ಮಾತಿಗೂ ಜಗಳ ಕಲಹಗಳಲ್ಲಿ ತೊಡಗಿಕೊಳ್ಳುವವರು ಆಗಿರುತ್ತಾರೆ. ಹಾಗೆ ಇನ್ನೂ ಕೆಲವು ರಾಶಿಯವರು ತುಂಬ ಮೃದು ಸ್ವಭಾವವನ್ನು ಹೊಂದಿದ್ದು, ಯಾವುದೇ ವಾದ ವಿವಾದಕ್ಕೆ ಇಳಿಯದವರಾಗಿರುತ್ತಾರೆ. ಆದರೆ, ಕೆಲವೊಮ್ಮೆ ಎದುರಿಗೆ ಒರಟಾಗಿ ಕಂಡರೂ ಮನಸ್ಸಿನಲ್ಲಿ ಮೃದುತನವನ್ನು ಹೊಂದಿರುವವರು ಇರುತ್ತಾರೆ. ಅಂತಹ ರಾಶಿಯವರು ಎಷ್ಟೇ ಜಗಳವಾಡಲಿ ಒರಟಾಗಿ ಮಾತನಾಡಲಿ ಅವುಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ, ಬೇಗ ಮರೆತು ಮೊದಲಿನಂತೆಯೇ ನಡೆದುಕೊಳ್ಳುವ ಸ್ವಭಾವವನ್ನು ಹೊಂದಿರುತ್ತಾರೆ. ಜಗಳ ಮನಸ್ತಾಪಗಳನ್ನು ಮನಸ್ಸಿನಲ್ಲಿಟ್ಟುಕೊಂಡೇ ಸಾಧಿಸುವ ವ್ಯಕ್ತಿಗಳಲ್ಲಿ, ಅವೆಲ್ಲವನ್ನು ಮರೆಯುವ ವ್ಯಕ್ತಿಗಳು ವಿಶೇಷವಾಗಿ ಕಾಣುತ್ತಾರೆ. ಹೌದು. ಜಗಳ, ಮನಸ್ತಾಪ ಮತ್ತು ಕ್ಲೇಶಗಳನ್ನು ಮರೆತು, ಎಲ್ಲರೊಂದಿಗೆ ಸ್ನೇಹದಿಂದ ಇರುವ ರಾಶಿಗಳು ಯಾವುವು ಮತ್ತು ಅಂತಹ ರಾಶಿಗಳ ಬಗ್ಗೆ ತಿಳಿಯೋಣ...

ಇದನ್ನು ಓದಿ : ವ್ಯಾಪಾರದಲ್ಲಿ ಸಕ್ಸಸ್ ಆಗಬೇಕೆಂದರೆ ಪಾಲಿಸಿ ಈ Vastu ಸೂತ್ರ!

ಮೇಷ ರಾಶಿ (Aries) : 
ಹನ್ನೆರಡು ರಾಶಿಗಳಲ್ಲಿ  ಮೇಷ ರಾಶಿಯು ಮೊದಲನೇ ರಾಶಿಯಾಗಿದೆ. ಈ ರಾಶಿಯ ವ್ಯಕ್ತಿಗಳಲ್ಲಿ ಸಿಟ್ಟು (Anger ) ಹೆಚ್ಚಿರುತ್ತದೆ. ಆದರೆ ಎಷ್ಟು ಬೇಗ ಸಿಟ್ಟು ಬರುತ್ತದೆಯೋ ಅಷ್ಟೇ ಬೇಗ ಕೋಪ ಶಮನವಾಗುತ್ತದೆ. ಅಷ್ಟೇ ಮೃದು ಮನಸ್ಸನ್ನು ಸಹ ಇವರು ಹೊಂದಿರುತ್ತಾರೆ. ಯಾರ ಮೇಲೂ ಕೆಟ್ಟ ಭಾವನೆಯನ್ನು ಹಾಗೂ ಆದ ಮನಸ್ತಾಪಗಳನ್ನು (Differences) ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಅದೆಲ್ಲವನ್ನು ಬೇಗ ಮರೆತುಬಿಡುತ್ತಾರೆ. ಯಾವುದೇ ವಿಚಾರವಾದರೂ ತಪ್ಪು ಎಂದೆನಿಸಿದರೆ ನೇರವಾಗಿ ಹೇಳಿಬಿಡುತ್ತಾರೆ. ಆದರೆ ಮರುಕ್ಷಣವೇ ಅದನ್ನು ಮರೆತಿರುತ್ತಾರೆ. ಹಾಗಾಗಿ ಯಾವುದೇ ದ್ವೇಷ (Revenge) ಭಾವನೆಯನ್ನು (Emotion) ಮನಸ್ಸಿನಲ್ಲಿ ಇಟ್ಟುಕೊಂಡು  ಸಾಧಿಸುವ ಗುಣ ಇವರದ್ದಲ್ಲ. 
ಈ ವ್ಯಕ್ತಿಗಳು ಜೀವನದಲ್ಲಿ ಕೆಲವು ಆದರ್ಶಗಳನ್ನು ಇಟ್ಟುಕೊಂಡಿರುತ್ತಾರೆ. ಅಷ್ಟೆ ಅಲ್ಲದೆ, ಅದೇ ಮಾರ್ಗದಲ್ಲಿ ನಡೆಯಲು ಸಹ ಬಯಸುತ್ತಾರೆ. ಹಾಗಾಗಿ ಎಂತಹದ್ದೇ ಸಂದರ್ಭ ಬಂದರೂ ತಮ್ಮ ಆದರ್ಶಗಳನ್ನು (Ideal) ಬಿಟ್ಟು ಕೊಡುವುದಿಲ್ಲ. 

ಅವರ ನಡೆಗೆ ಯಾರಾದರೂ ಅಡ್ಡ ಬಂದರೆ ಅದನ್ನು ನೇರವಾಗಿ ಖಂಡಿಸುತ್ತಾರೆ. ಆ ಕ್ಷಣದಲ್ಲಿ ಕೋಪಗೊಳ್ಳುತ್ತಾರೆ. ಆದರೆ ತರುವಾಯ ಅಂಥ ವ್ಯಕ್ತಿಗಳನ್ನು ಜೀವನದಿಂದ ದೂರವೇ ಇಟ್ಟಿರುತ್ತಾರೆ. ಮಾನವೀಯ ಗುಣವನ್ನು ಹೆಚ್ಚಾಗಿ ಹೊಂದಿರುವ ಈ ರಾಶಿಯವರು ತುಂಬಾ ಮೃದು ಮನಸ್ಸಿನವರಾಗಿರುತ್ತಾರೆ.

ಕರ್ಕಾಟಕ ರಾಶಿ (Cancer)
ರಾಶಿಯ ವ್ಯಕ್ತಿಗಳು ಶಾಂತ (Peace) ಸ್ವಭಾವವನ್ನು ಹೊಂದಿರುತ್ತಾರೆ. ಈ ರಾಶಿಯ ವ್ಯಕ್ತಿಗಳು ಎಲ್ಲರ ಬಗ್ಗೆಯೂ ಒಳ್ಳೆಯದನ್ನೇ ಆಲೋಚಿಸುತ್ತಾರೆ. ಈ ವ್ಯಕ್ತಿಗಳು ಕೆಲಸ ಕಾರ್ಯಗಳ ಬಗ್ಗೆಯೇ ಹೆಚ್ಚು ಲಕ್ಷ್ಯವನ್ನು ಇಟ್ಟುಕೊಂಡಿರುತ್ತಾರೆ. ಅಷ್ಟೆ ಅಲ್ಲದೆ ಇತರರಿಗೆ ಒಳ್ಳೆಯದನ್ನು ನಡೆಸುತ್ತಾರೆ ಮತ್ತು ಒಳ್ಳೆಯದನ್ನೇ ಮಾಡುತ್ತಾರೆ. ಈ ವ್ಯಕ್ತಿಗಳು ತಮ್ಮ ಅದೃಷ್ಟವನ್ನು ಪರಿಶ್ರಮದಿಂದಲೇ (Effort ) ಕಂಡುಕೊಳ್ಳುತ್ತಾರೆ. ಹಾಗೆಯೇ ಇತರರು ಕೆಲಸದಲ್ಲಿ ಶ್ರದ್ಧೆ (Dedication) ಹೊಂದಿರಲಿ ಎಂದು ಬಯಸುತ್ತಾರೆ. ಈ ರಾಶಿಯ ವ್ಯಕ್ತಿಗಳು ಮೋಸ (Fraud) ಮಾಡುವುದಾಗಲಿ, ಕಟುವಾಗಿ ಮಾತನಾಡುವುದಾಗಲಿ ಮಾಡುವುದಿಲ್ಲ. ಯಾವುದೇ ವ್ಯಕ್ತಿಗಳು ಇವರಿಗೆ ಇಷ್ಟವಾಗಲಿಲ್ಲವೆಂದರೆ ಅವರಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಅಂಥವರಿಂದ ಏನನ್ನೂ ನಿರೀಕ್ಷಿಸವುದೂ ಇಲ್ಲ. ಆದರೆ ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡುವುದು, ಮೋಸ ಮಾಡುವುದು ಮತ್ತು ಕೆಟ್ಟ ಭಾವನೆಗಳನ್ನು ಇಟ್ಟುಕೊಳ್ಳುವುದು ಈ ರಾಶಿಯ (Zodiac) ವ್ಯಕ್ತಿಗಳ ಆದರ್ಶಕ್ಕೆ ವಿರುದ್ಧವಾಗಿರುತ್ತದೆ. ದುಷ್ಟರಿಂದ ದೂರವಿರು ಎಂಬ ಮಾತಿಗೆ ಬದ್ಧರಾಗಿರುತ್ತಾರೆ.  

ಇದನ್ನು ಓದಿ : Vastu Tips: ಮನೆ ನಿರ್ಮಾಣಕ್ಕೆ ಶುಭ ಮುಹೂರ್ತ ಯಾವುದು ಗೊತ್ತಾ?

ಕನ್ಯಾ ರಾಶಿ (Virgo)
ಈ ರಾಶಿಯ ವ್ಯಕ್ತಿಗಳು ಸಹಾಯಕ್ಕೆ ಎತ್ತಿದ ಕೈ. ಈ ವ್ಯಕ್ತಿಗಳು ತಮ್ಮದೇ ಆದ ಒಂದು ಪ್ರಪಂಚವನ್ನು ಕಟ್ಟಿಕೊಂಡಿರುತ್ತಾರೆ. ಅದರ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ಇತರರ ವಿಚಾರದಲ್ಲಿ ತಲೆ ಹಾಕುವುದಿಲ್ಲ. ಇತರರೊಂದಿಗೆ ನಡೆದ ಜಗಳ (Quarrel ) ಕಲಹಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಈ ರಾಶಿಯ ವ್ಯಕ್ತಿಗಳು ಸೌಮ್ಯ ಸ್ವಭಾವವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳು ನ್ಯಾಯಕ್ಕೆ ಹೆಚ್ಚಿನ ಮಹತ್ವವನ್ನು ಕೊಡುತ್ತಾರೆ. ಅನ್ಯರನ್ನು ಹತ್ತಿರಕ್ಕೆ ಸೇರಿಸುವುದಿಲ್ಲ. ಅಷ್ಟೆ ಅಲ್ಲದೆ ಇತರರಿಂದ ಯಾವುದೇ ರೀತಿಯ ಸಹಾಯವನ್ನು ನಿರೀಕ್ಷಿಸುವುದಿಲ್ಲ. 

Latest Videos
Follow Us:
Download App:
  • android
  • ios