ವ್ಯಾಪಾರದಲ್ಲಿ ಸಕ್ಸಸ್ ಆಗಬೇಕೆಂದರೆ ಪಾಲಿಸಿ ಈ Vastu ಸೂತ್ರ!
Vastu Shastra Tips: ವಾಸ್ತು ನಿಯಮಗಳನ್ನು ಅನುಸರಿಸುವುದರಿಂದ ವ್ಯಾಪಾರ ಮತ್ತು ಉದ್ಯೋಗದಲ್ಲಿ ಅಂದುಕೊಂಡ ಯಶಸ್ಸನ್ನು ಪಡೆಯಬಹುದಾಗಿದೆ. ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವ ಕೆಲವು ಸರಳ ಉಪಾಯಗಳನ್ನು ಅಳವಡಿಸಿಕೊಳ್ಳುವುದು ಉತ್ತಮ. ಹಾಗಾದರೆ ಉದ್ಯೋಗ ಮತ್ತು ವ್ಯಾಪಾರದಲ್ಲಿ (Business and Commerce) ಯಶಸ್ಸನ್ನು ಪಡೆಯಲು ವಾಸ್ತುಶಾಸ್ತ್ರದಲ್ಲಿ ಹೇಳಿರುವ ಕೆಲ ನಿಯಮಗಳ ಪಾಲನೆ ಬಗ್ಗೆ ತಿಳಿಯೋಣ...
ಪ್ರತಿಯೊಬ್ಬರಿಗೂ ವೃತ್ತಿಜೀವನದಲ್ಲಿ (Life) ಯಶಸ್ಸು (Success) ಪಡೆಯಬೇಕೆಂಬ ಬಯಕೆ ಇದ್ದೆ ಇರುತ್ತದೆ. ವ್ಯಾಪಾರದಲ್ಲಿ ಲಾಭ (Profit) ಪಡೆಯುವ ಇಚ್ಛೆ ಪ್ರತಿ ವ್ಯಾಪಾರಿಗಳಿಗೂ ಇರುತ್ತದೆ. ಹೆಚ್ಚು ಹಣಗಳಿಸಬೇಕು, ಲಾಭದಲ್ಲಿ ವ್ಯಾಪಾರವನ್ನು ನಡೆಸಬೇಕೆಂದು ಹಗಲಿರುಳು ಶ್ರಮಿಸುತ್ತಾರೆ. ಅಷ್ಟಾದರೂ ಅಂದುಕೊಂಡಂತೆ ವ್ಯಾಪಾರವಾಗುವುದಿಲ್ಲ ಹಣ (Money) ಕೈ ಸೇರುವುದಿಲ್ಲ, ಲಾಭವಂತೂ ದೂರದ ಮಾತಾಗಿರುತ್ತದೆ. ಹಾಗಿದ್ದಾಗ ವಾಸ್ತುದೋಷದ ಬಗ್ಗೆ ಗಮನಹರಿಸಬೇಕು. ವಾಸ್ತು ದೋಷ ನಿವಾರಣೆ ಮಾಡಿಕೊಂಡರೆ ಎಲ್ಲ ಕೆಲಸಗಳು ಸುಸೂತ್ರವಾಗಿ ಸಾಗುತ್ತವೆ.
ಕಛೇರಿ, ವ್ಯಾಪಾರದ ಸ್ಥಳ ವಾಸ್ತುಪ್ರಕಾರ ಇದ್ದಾಗ ಈ ಸಮಸ್ಯೆಗಳು ಕಾಡುವುದಿಲ್ಲ. ವ್ಯಾಪಾರದಲ್ಲಿ ಲಾಭ ಉದ್ಯೋಗದಲ್ಲಿ ಬಡ್ತಿ ಪಡೆಯಬಹುದಾಗಿರುತ್ತದೆ. ಕೆಲಸ ಮಾಡುವ ಸ್ಥಳವು ವಾಸ್ತು (Vastu) ಪ್ರಕಾರ ಸರಿಯಾದ ದಿಕ್ಕಿನಲ್ಲಿ ಇದ್ದರೆ ಲಾಭ ಗಳಿಸಲು ಸಾಧ್ಯ ಎಂದು ಹೇಳಲಾಗುತ್ತದೆ. ಕೆಲಸ ಮಾಡುವ ಸ್ಥಳದಲ್ಲಿ ವಾಸ್ತು ದೋಷವಿದ್ದರೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಕೆಲಸದಲ್ಲಿ ಯಶಸ್ಸು ಸಾಧಿಸುವುದು ಅಸಾಧ್ಯವಾಗುತ್ತದೆ. ಹಾಗಾಗಿ ವಾಸ್ತು ನಿಯಮಗಳನ್ನು ಪಾಲಿಸಿದರೆ ಯಶಸ್ಸು ನಿಶ್ಚಿತ. ಹಾಗಾಗಿ ವಾಸ್ತುಶಾಸ್ತ್ರದಲ್ಲಿ ಪಾಲಿಸಬಹುದಾದ ನಿಯಮಗಳ ಬಗ್ಗೆ ತಿಳಿಯೋಣ...
ಕೋಣೆಯ ಆಕಾರ (Shape):
ವಾಸ್ತುಶಾಸ್ತ್ರದಲ್ಲಿ ಪ್ರತಿ ಸಣ್ಣ ವಿಷಯವೂ ಮುಖ್ಯವಾಗುತ್ತದೆ. ಉದ್ಯೋಗದಲ್ಲಿ ಯಶಸ್ಸು ಮತ್ತು ವ್ಯಾಪಾರದಲ್ಲಿ ಲಾಭ ಸಿಗಬೇಕೆಂದರೆ ಕೆಲಸ ಮಾಡುವ ಸ್ಥಳದ ಆಕಾರ ಮುಖ್ಯ ಪಾತ್ರವನ್ನು ವಹಿಸುತ್ತದೆ. ಕೆಲಸ ಮಾಡುವ ಸ್ಥಳವು ಚೌಕ ಅಥವಾ ಆಯತಾಕಾರದಲ್ಲಿ ಇರಬೇಕು. ಒಂದೊಮ್ಮೆ ಹಾಗೆ ಇಲ್ಲವಾದರೆ ಕೂರುವ ಮೇಜಿನ ಆಕಾರ ಚೌಕವಾಗಿರಬೇಕು. ಅದೂ ಸಾಧ್ಯವಾಗದಿದ್ದಲ್ಲಿ ಚೌಕ ಆಕಾರದಲ್ಲಿರುವ ಮ್ಯಾಟನ್ನು ಕೆಲಸ ಮಾಡಲು ಕೂರುವ ಸ್ಥಳದಲ್ಲಿ ಹಾಕಿಕೊಳ್ಳಬೇಕು.
ದಿಕ್ಕಿನ ಪ್ರಾಮುಖ್ಯತೆ (Direction) :
ಯಾವುದೇ ಕೆಲಸವಾದರೂ ಸರಿ... ದಿಕ್ಕಿಗೆ ಪ್ರಾಮುಖ್ಯತೆ ಇದ್ದೇ ಇರುತ್ತದೆ. ಉದ್ಯೋಗ ಅಥವಾ ವ್ಯಾಪಾರ ಮಾಡುವ ಸ್ಥಳದಲ್ಲಿ ಕುಳಿತುಕೊಳ್ಳುವ ದಿಕ್ಕು ಸಹ ಮುಖ್ಯವಾಗುತ್ತದೆ. ಅಷ್ಟೇ ಅಲ್ಲದೆ ಮೇಜನ್ನು (Table) ಯಾವ ದಿಕ್ಕಿಗೆ ಮುಖಮಾಡಿ ಇಟ್ಟಿದ್ದೇವೆ ಎಂಬುದು ಸಹ ಗಣನೆಗೆ ಬರುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಕೆಲಸ ಮಾಡುವ ಸ್ಥಳದಲ್ಲಿ ನೈರುತ್ಯ ದಿಕ್ಕಿನ ಕಡೆ (Towards South-West) ಕುಳಿತುಕೊಳ್ಳುವುದು ಒಳ್ಳೆಯದು. ಅಷ್ಟೆ ಅಲ್ಲದೆ ಕುಳಿತುಕೊಳ್ಳುವಾಗ ವ್ಯಕ್ತಿಯು ಉತ್ತರ ಅಥವಾ ಪೂರ್ವ ದಿಕ್ಕಿಗೆ (East) ಮುಖಮಾಡಿ ಕುಳಿತುಕೊಳ್ಳುವುದು ಉತ್ತಮ.
ಕುಬೇರ ಪ್ರತಿಮೆ (Lord Kubera)
ಕಾರ್ಯಸ್ಥಳದಲ್ಲಿ ಕುಳಿತುಕೊಳ್ಳುವ ಜಾಗದಲ್ಲಿ ಗ್ಲೋಬ್ (Globe) ಅನ್ನು ಇಟ್ಟುಕೊಳ್ಳಬೇಕು. ಇದರಿಂದ ಕೆಲಸಕ್ಕೆ ಎದುರಾಗುತ್ತಿರುವ ತೊಂದರೆ ತಾಪತ್ರಯಗಳು (Problem) ದೂರವಾಗುತ್ತವೆ. ಅಷ್ಟೇ ಅಲ್ಲದೆ ಕೆಲಸ ಮಾಡುವ ಸ್ಥಳದಲ್ಲಿ ಉತ್ತರ ದಿಕ್ಕಿಗೆ (North ) ಕುಬೇರ ದೇವರ ಪ್ರತಿಮೆಯನ್ನು ಇಡುವುದರಿಂದ ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎನ್ನುವ ನಂಬಿಕೆ ಇದೆ . ಅಷ್ಟೇ ಅಲ್ಲದೆ ಇದರಿಂದ ಆರ್ಥಿಕ (Economic) ಸಮಸ್ಯೆಗಳು ನಿವಾರಣೆಯಾಗಿ ಸಫಲತೆ ದೊರಕುತ್ತದೆ.
ಓಡುತ್ತಿರುವ ಕುದುರೆಗಳ ಭಾವಚಿತ್ರ (Running horse)
ಕೆಲಸ ಮಾಡುವ ಸ್ಥಳದಲ್ಲಿ ಕೆಲವು ಮುಖ್ಯವಾದ ಭಾವಚಿತ್ರಗಳನ್ನು ಹಾಕಿಕೊಳ್ಳುವುದರಿಂದ ಕೆಲಸದಲ್ಲಿ ಯಶಸ್ಸು (Success) ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತದೆ. ಕೆಲವು ಭಾವಚಿತ್ರಗಳು ಸಕಾರಾತ್ಮಕ ಪ್ರಭಾವವನ್ನು ಬೀರುವುದರಿಂದ ವ್ಯಾಪಾರದಲ್ಲಿ (Business) ಯಶಸ್ಸು ಸಿಗುತ್ತದೆ ಎಂದು ಹೇಳಲಾಗುತ್ತದೆ. ಓಡುವ ಕುದುರೆಗಳ ಭಾವಚಿತ್ರವನ್ನು ಇದರಿಂದ ಕೆಲಸ ಮಾಡುವ ವ್ಯಕ್ತಿಗೆ ಸಕಾರಾತ್ಮಕ ಶಕ್ತಿ ಲಭಿಸುವುದಲ್ಲದೇ, ನಕಾರಾತ್ಮಕ ಶಕ್ತಿಯ (Negative energy) ಪ್ರಭಾವಗಳು ಪರಿಣಾಮ ಬೀರುವುದಿಲ್ಲ. ಅಷ್ಟೇ ಅಲ್ಲದೆ ಭಾವಚಿತ್ರದಲ್ಲಿ ಕುದುರೆಗಳು ಒಳಮುಖವಾಗಿ ಓಡುತ್ತಿರುವ ಚಿತ್ರವನ್ನು ಬಳಸಬೇಕು. ಇದರಿಂದ ಕೆಲಸದ ಗತಿ ವೇಗವನ್ನು ಪಡೆದುಕೊಳ್ಳುತ್ತದೆ.
ಇದನ್ನು ಓದಿ: ಈ ಸಂಕೇತಗಳು ಸಿಕ್ಕಿದ್ರೆ ಶುಭದ ಸೂಚನೆ ಎಂದು ತಿಳಿಯಿರಿ!
ಉಪಕರಣಗಳನ್ನು ಇಟ್ಟುಕೊಳ್ಳುವ ದಿಕ್ಕು ಇದಾಗಿರಬೇಕು
ಕಾರ್ಯಕ್ಷೇತ್ರದಲ್ಲಿ ಸಾಮಾನ್ಯವಾಗಿ ಕಂಪ್ಯೂಟರ್ ಬಳಸುವುದರ ಜೊತೆಗೆ ಇನ್ನಿತರೆ ಎಲೆಕ್ಟ್ರಾನಿಕ್ (Electronic) ಉಪಕರಣಗಳನ್ನು ಆಗ್ನೇಯ ದಿಕ್ಕಿಗೆ ಮುಖ ಮಾಡಿ ಇಟ್ಟುಕೊಳ್ಳಬೇಕು.
ದಾಖಲೆಗಳಿರಲಿ (Documents) ಈ ದಿಕ್ಕು
ಕೆಲಸ ಮಾಡುವ ಸ್ಥಳದಲ್ಲಿ ದಾಖಲೆಗಳನ್ನು ಇಡುವ ಕಪಾಟು ದಕ್ಷಿಣ (South) ಅಥವಾ ಪಶ್ಚಿಮ (West) ದಿಕ್ಕಿಗೆ ಇಡುವುದರಿಂದ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ.
ಬಣ್ಣಕ್ಕೂ (Colour) ಕೊಡಿ ಪ್ರಾಮುಖ್ಯತೆ
ಕೆಲಸ ಮಾಡುವ ಸ್ಥಳದಲ್ಲಿ, ಕೇವಲ ಮೇಜು ದಿಕ್ಕು ಅಷ್ಟೇ ಅಲ್ಲದೆ ಬಣ್ಣಕ್ಕೂ ಪ್ರಾಮುಖ್ಯತೆ ನೀಡಬೇಕು. ಕೆಲಸದ ಸ್ಥಳದಲ್ಲಿನ ಗೋಡೆಗೆ ತಿಳಿಯಾದ ಬಣ್ಣ ಬಳಿಯುವುದು ಉತ್ತಮವೆಂದು ಹೇಳಲಾಗುತ್ತದೆ.
ಅಧಿಕಾರಿಗಳ ಕ್ಯಾಬಿನ್‌ಗೆ ಇರಲಿ ಈ ದಿಕ್ಕು (Higher officer cabin)
ಉನ್ನತ ಅಧಿಕಾರಿಗಳ ಕ್ಯಾಬಿನ್ ಈ ದಿಕ್ಕಿನಲ್ಲಿ ಇದ್ದರೆ ಒಳಿತು. ದಕ್ಷಿಣ ಅಥವಾ ಪಶ್ಚಿಮ ದಿಕ್ಕಿಗೆ ಇದ್ದರೆ ಉತ್ತಮ.
ಇದನ್ನು ಓದಿ: Vastu tips: ಮನೆಯಲ್ಲಿ ಪಾಸಿಟಿವ್ ಎನರ್ಜಿಗೆ ದಾಸವಾಳ ಸೂತ್ರ
ಕಾರ್ಯ ಸ್ಥಳಕ್ಕೆ ಸರಳ ವಾಸ್ತು (Simple vastu):
- ಕಚೇರಿಯ ಮುಖ್ಯ ದ್ವಾರದ ಬಳಿ ತಾಮ್ರದ ಸ್ವಸ್ತಿಕ್ ಅನ್ನು ಇಡುವುದು ಒಳ್ಳೆಯದು.
- ಕಚೇರಿಯ ರಿಸೆಪ್ಶನ್ ಬಳಿ ಬ್ಯಾಂಬೂ ಪ್ಲಾಂಟ್ (Bamboo plant) ಇಟ್ಟರೆ ಸಕಾರಾತ್ಮಕ ಶಕ್ತಿ ಹೆಚ್ಚು ಪ್ರವಹಿಸುತ್ತದೆ.
- ರಿಸೆಪ್ಷನ್ ಟೇಬಲ್ ಕೆಳಗೆ ಹಸಿರು (Green) ಬಣ್ಣವನ್ನು ಬಳಿಯುವುದು ಒಳ್ಳೆಯದು.