Asianet Suvarna News Asianet Suvarna News

ನೀವು ಹಾಕಿಸಿಕೊಳ್ಳುವ ಟ್ಯಾಟೂನಲ್ಲೇ ಅಡಗಿರುತ್ತಾ ನಿಮ್ಮ ಜನ್ಮರಾಶಿಯ ರಹಸ್ಯ?

ನೀವು ಯಾವ ಚಿತ್ರ, ವಿನ್ಯಾಸ ಅಥವಾ ಕೋಟ್‌ ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದರಲ್ಲಿ ನಿಮ್ಮ ಜನ್ಮರಾಶಿ ಯಾವುದು ಎಂಬ ವಿಚಾರವೂ ಅಡಗಿರುತ್ತದಂತೆ. ನಿಮ್ಮ ರಾಶಿಚಕ್ರದ ಚಿಹ್ನೆಯನ್ನು ಆಧರಿಸಿ ನೀವು ಪರಿಗಣಿಸಬಹುದಾದ ಟ್ಯಾಟೂಗಳು ಇಲ್ಲಿವೆ.

 

which tattoo you can put according to your zodiac
Author
First Published Dec 20, 2022, 3:01 PM IST

ಮೇಷ ರಾಶಿ (Aries)
ದಾಳಿ ಮಾಡಲು ಕೋಡು ಮಸೆಯುತ್ತಿರುವ ಗೂಳಿ, ಹೆಡೆ ಎತ್ತಿದ ಹಾವು ಮುಂತಾದ ಟ್ಯಾಟೂ ನೋಡಿದರೆ ಮೇಷ ರಾಶಿಯವರು ಎಂಬುದು ಖಚಿತ. ಇವರು ಆತ್ಮವಿಶ್ವಾಸಿಗಳು, ಧೈರ್ಯಶಾಲಿ, ಭಾವೋದ್ರಿಕ್ತರು ಮತ್ತು ಹೆಚ್ಚು ಸಾಹಸಮಯ ವ್ಯಕ್ತಿಗಳು. ಅದನ್ನು ಸಾಬೀತುಪಡಿಸಲು ಇವರು ಎದ್ದು ಕಾಣುವ ಹಚ್ಚೆಗಳತ್ತ ಆಕರ್ಷಿತರಾಗುತ್ತಾರೆ. ಅವರ ವ್ಯಕ್ತಿತ್ವವನ್ನು ಅದರಲ್ಲಿ ಪ್ರದರ್ಶಿಸುತ್ತಾರೆ. ಇವರ ಕ್ರಿಯೆಯ ಗ್ರಹ ಮಂಗಳ. ಇದು ಕ್ರಿಯೆ, ಗೆಲುವು ಮತ್ತು ಪರಿಶ್ರಮವನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಕೈಗಳು ಅಥವಾ ಕಾಲುಗಳಂತಹ ದೇಹದ ಪ್ರಮುಖ ಭಾಗದಲ್ಲಿ ಹಚ್ಚೆ ಹಾಕಿಸಿಕೊಳ್ಳುತ್ತಾರೆ.

ವೃಷಭ ರಾಶಿ (Taurus)
ಹೃದಯ, ಹೂವು, ಬಳ್ಳಿ ಮತಿತರ ಸಣ್ಣ ಚಿಹ್ನೆಗಳು ಇವರ ಉತ್ತಮ ಆಯ್ಕೆಗಳು. ಇವರು ಪ್ರೀತಿಯ ಗ್ರಹವಾದ ಶುಕ್ರದಿಂದ ಆಳಲ್ಪಡುತ್ತಾರೆ. ಇವರು ಇಂದ್ರಿಯ ಕೇಂದ್ರಿತ ಮತ್ತು ನಾಜೂಕಾದ ವ್ಯಕ್ತಿಗಳು. ಆದ್ದರಿಂದ ಅವರ ಹಚ್ಚೆಗಳು ಸರಳ ಮತ್ತು ಕಲಾತ್ಮಕವಾಗಿ ಆಹ್ಲಾದಕರವಾಗಿರುತ್ತವೆ. ಅದರೊಳಗೆ ಬುದ್ಧಿವಂತ ಅರ್ಥವೂ ಹುದುಗಿರಬಹುದು. ಆದರೆ ಅದನ್ನು ಅವರೇ ವಿವರಿಸಬೇಕಷ್ಟೆ. ತೋಳುಗಳ ಮೇಲೆ, ಕತ್ತಿನ ಹಿಂಭಾಗದಲ್ಲಿ ಸಾಮಾನ್ಯವಾಗಿ ಟ್ಯಾಟೂ ಹಾಕಿಸಿಕೊಳ್ಳಬಹುದು.

story of Mirabai: ಮದುವೆಯಾದರೂ ಪತಿಯನ್ನು ಒಪ್ಪಿಕೊಳ್ಳದ ಮೀರಾ!

ಮಿಥುನ ರಾಶಿ (Gemini)
ಎರಡು ಪಕ್ಷಿಗಳು, ಗಂಡಭೇರುಂಡ, ಎರಡು ಮರಗಳು ಮುಂತಾದ ಚಿಹ್ನೆಗಳು ಇವರ ಬೆನ್ನು, ತೋಳು ಅಥವಾ ಕುತ್ತಿಗೆಯ ಮೇಲೆ ಇರಬಹುದು. ಅವಳಿ ಜನ್ಮರಾಶಿಯ ಟ್ಯಾಟೂ ಚಿಹ್ನೆಯು ಆತ್ಮವಿಶ್ವಾಸವನ್ನು ತೋರಿಸುತ್ತದೆ. ಇವರ ಮನಸ್ಸು ಯಾವಾಗಲೂ ತಾಜಾ ಆಲೋಚನೆಗಳನ್ನು ಹೊಂದಿರುತ್ತದೆ. ಮತ್ತು ಹಲವಾರು ಸಾಧ್ಯತೆಗಳನ್ನು ಹೊಂದಿರುತ್ತದೆ. ಇದು ಕೇವಲ ಒಂದು ಹಚ್ಚೆಯ ಆಯ್ಕೆಯನ್ನು ಸವಾಲಾಗಿ ಮಾಡುತ್ತದೆ. ಕೆಲವು ಜೆಮಿನಿಗಳು ಅಕ್ಷರಶಃ ಎರಡು ಮುಖಗಳ ಟ್ಯಾಟೂ ಹಾಕಬಹುದು. ಇದು ಹೊಂದಾಣಿಕೆಯನ್ನು ಪ್ರತಿನಿಧಿಸುತ್ತದೆ. ಇವರು ತಮ್ಮ ತೀಕ್ಷ್ಣವಾದ ಸಂವಹನ ಕೌಶಲ್ಯಗಳಿಗೆ ಹೆಸರುವಾಸಿ. ಇವರು ತಮ್ಮ ನೆಚ್ಚಿನ ಚಿತ್ರಗಳನ್ನು ತಮ್ಮ ದೇಹದ ಮೇಲೆ ಹಾಕಲು ಆಯ್ಕೆ ಮಾಡಬಹುದು.

ಕಟಕ ರಾಶಿ (cancer)
ಕಟಕ ರಾಶಿಯವರು ಹೆಚ್ಚಾಗಿ ತಮ್ಮ ಮನೆ ಮತ್ತು ಕುಟುಂಬ ಆಧಾರಿತರಾಗಿರುತ್ತಾರೆ. ಆದ್ದರಿಂದ ಕುಟುಂಬದ, ಮಕ್ಕಳು ಅಥವಾ ಒಡಹುಟ್ಟಿದವರ ಹೆಸರುಗಳು, ಅಥವಾ ಅವರ ಊರಿನ ಸ್ಥಳ, ಪೂರ್ವಜರ ಮನೆ ಪಟ್ಟಣ, ಇದನ್ನೆಲ್ಲ ಹಚ್ಚೆ ಹಾಕಿಸಿಕೊಳ್ಳಬಹುದು. ಇವರು ಮಿಲಿಟರಿ ವ್ಯವಸ್ಥೆ, ದೇಶಭಕ್ತಿಯನ್ನು ಇಷ್ಟಪಡುತ್ತಾರೆ. ಆದ್ದರಿಂದ ಅವರು ಮಿಲಿಟರಿ ಚಿಹ್ನೆಗಳು ಅಥವಾ ದೇಶಭಕ್ತಿಯ ಚಿತ್ರಗಳಿಗೆ ಆಕರ್ಷಿತರಾಗಬಹುದು.

ಸಿಂಹ ರಾಶಿ (leo)
ಇವರು ರೋಮಾಂಚಕ, ಭಾವೋದ್ರಿಕ್ತ ಜೀವಿಗಳು. ಇವರಿಗೆ ತಮ್ಮನ್ನು ಖ್ಯಾತಿವಂತರೆಂದು ತೋರಿಸಿಕೊಳ್ಳುವುದು ಇಷ್ಟ. ಇವರ ಹಚ್ಚೆಗಳು ಇವರ ಶಕ್ತಿಯ ಪ್ರದರ್ಶಕವಾಗಿರಬಹುದು. ತಮ್ಮ ದೇಹದ ಮೇಲೆ ತಮ್ಮ ಹೆಸರು, ಅಡ್ಡಹೆಸರು ಅಥವಾ ತಮ್ಮ ಪ್ರಾತಿನಿಧ್ಯವನ್ನು, ತಮ್ಮ ರಾಯಲ್ ಸ್ವಭಾವವನ್ನು ಹಾಕಿಸಿಕೊಳ್ಳಬಹುದು. ಸಿಂಹ ಅಥವಾ ಸಿಂಹಿಣಿ ಕೂಡ ಆಯ್ಕೆಯಾಗಿರಬಹುದು. ಹಾಗೆಯೇ ಕೆಂಪು ಅಥವಾ ಕಿತ್ತಳೆ ಬಣ್ಣಗಳನ್ನು ಹಾಕಿಸಿಕೊಳ್ಳಬಹುದು.

ಕನ್ಯಾ ರಾಶಿ (virgo)
ಇವರು ನಾಚಿಕೆ ಸ್ವಭಾವದವರಾಗಿರುವುದರಿಂದ ಟ್ಯಾಟೂ ಹಾಕಿಸಿಕೊಳ್ಳಲು ಹಿಂಜರಿಯುತ್ತಾರೆ ಅಥವಾ ಹಾಕಿಸಿಕೊಂಡರೂ ಅದನ್ನು ತೋರಿಸಿಕೊಳ್ಳಲಿಕ್ಕಿಲ್ಲ. ರಾಶಿಚಕ್ರದಲ್ಲಿ ಅತ್ಯಂತ ಆಳವಾದ ಯೋಚನೆಯವರು. ಇವರು ಅನೇಕ ಹಚ್ಚೆಗಳನ್ನು ಹೊಂದಿದ್ದರೂ ಅವುಗಳಲ್ಲಿ ಪ್ರತಿಯೊಂದೂ ನಿರ್ದಿಷ್ಟ ಉದ್ದೇಶವನ್ನು ಹೊಂದಿರುತ್ತದೆ. ಅವರ ತೋಳಿನ ಒಳಭಾಗದಲ್ಲಿ, ಅವರ ಮಗುವಿನ ಹೆಸರು, ಅಥವಾ ಅವರ ಕಿವಿಯ ಹಿಂದೆ, ಅರ್ಥವಾಗದ ಸಂಖ್ಯೆ ಅಥವಾ ಹೆಸರು ಇರಬಹುದು. ಇದರಲ್ಲಿ ಆಳವಾದ ಅರ್ಥವಿದ್ದರೂ ಅದನ್ನವರು ಹೇಳಲಿಕ್ಕಿಲ್ಲ.

ತುಲಾ ರಾಶಿ (libra)
ಇವರು ಏನೇ ಮಾಡಿದರೂ ಅದು ಸುಂದರವಾಗಿರುತ್ತದೆ. ತುಲಾ ರಾಶಿಯವರು ಹೂಗಳು ಮತ್ತು ಹಂಸಗಳಂತಹ ಸುಂದರವಾದ ಚಿತ್ರಗಳಿಗೆ ಆಕರ್ಷಿತರಾಗಬಹುದು. ತುಲಾಗಳು ಸಹ ಸಂಬಂಧಗಳ ಕೇಂದ್ರಿತರು. ಪ್ರೇಮಕ್ಕೆ ಬೆಲೆ ಕೊಡುವುದರಿಂದ ಸಂಗಾತಿಯ ಹೆಸರು ಹಾಕಿಸಿಕೊಳ್ಳುತ್ತಾರೆ. ಯಾವ ವಿನ್ಯಾಸವನ್ನು ಆರಿಸಿಕೊಂಡರೂ ಅಂತಿಮವಾಗಿ ಅದು ಕಲಾತ್ಮಕವಾಗಿ- ಆಹ್ಲಾದಕರವಾಗಿರುತ್ತದೆ. ಬಹುಶಃ ಕರ್ಸಿವ್ ಕೈಬರಹ ಅಥವಾ ಗಮನ ಸೆಳೆಯುವ ವಿವರಗಳು ಅದರಲ್ಲಿ ಇರಬಹುದು.

ವೃಶ್ಚಿಕ ರಾಶಿ (scorpio)
ವೃಶ್ಚಿಕ ರಾಶಿಯವರು ಎಲ್ಲ ಇದೆ ಅಥವಾ ಏನೂ ಇಲ್ಲ ಎಂಬ ಮನಸ್ಥಿತಿಯವರು. ಈ ರೀತಿಯ ಆಲೋಚನಾ ವಿಧಾನವನ್ನು ಟ್ಯಾಟೂಗೂ ಅನ್ವಯಿಸಬಹುದು. ಕೆಲವೊಮ್ಮೆ ಶೂನ್ಯ ಟ್ಯಾಟೂ ಹೊಂದಿರುತ್ತಾರೆ. ಕೆಲವೊಮ್ಮೆ  ಫೀನಿಕ್ಸ್, ಟ್ರ್ಯಾಗನ್‌ ಥರದ ವಿಶಿಷ್ಟ, ಅತಿರಂಜಿತ ಟ್ಯಾಟೂ ಹಾಕಿಸಿಕೊಳ್ಳಬಹುದು. ತಮ್ಮ ದೇಹದ ಮೇಲೆ ಎದ್ದು ಕಾಣುವಂತೆ ಚೇಳು, ಹದ್ದು ಅಥವಾ ಫೀನಿಕ್ಸ್ ಅನ್ನು ಹಚ್ಚಿಕೊಳ್ಳುತ್ತಾರೆ. ಹಾಗೆಯೇ ತಾವು ಎಲ್ಲಿಂದ ಬಂದವರು, ತಾವು ಯಾರು ಮತ್ತು ಏನಾಗಿದ್ದೇವೆ ಎಂಬುದನ್ನು ನೆನಪಿಸುವ ಚಿಹ್ನೆಗಳನ್ನು ಮುದ್ರಿಸಿಕೊಳ್ಳಬಹುದು.

ಧನು ರಾಶಿ (sagittarius)
ಇವರು ಸ್ಪೂರ್ತಿದಾಯಕ ಪದಗಳು, ಪ್ರೀತಿಯ ಪಕ್ಷಿ ಅಥವಾ ವಿಮಾನವನ್ನು ಚಿತ್ರಿಸಿಕೊಳ್ಳಬಹುದು. ಧನು ರಾಶಿಯವರು ಸಾಮಾನ್ಯವಾಗಿ ಸಾಹಸಮಯ ವ್ಯಕ್ತಿಗಳು. ಈವರು ಪ್ರಯಾಣ ಮತ್ತು ವೈವಿಧ್ಯತೆಗೆ ಸಂಬಂಧಿಸಿದ ಟ್ಯಾಟೂಗಳ ಕಡೆಗೆ ವಾಲಬಹುದು. ಸ್ಪೂರ್ತಿದಾಯಕ ಉಲ್ಲೇಖಗಳು ಅಥವಾ ಅವರ ಮಾತೃಭಾಷೆಗಿಂತ ವಿಭಿನ್ನ ಭಾಷೆಯ ಪದಗಳು, ಅವರ ಅಲೆದಾಡುವಿಕೆಯನ್ನು ಪ್ರತಿನಿಧಿಸುವ ಚಿತ್ರಗಳು, ಧಾರ್ಮಿಕ ಸಂಕೇತಗಳನ್ನು ಸಹ ಅಳವಡಿಸಿಕೊಳ್ಳಬಹುದು.

ಮಕರ ರಾಶಿ (capricorn)
ಮಕರ ರಾಶಿಯವರು ತಮ್ಮ ಗುರಿಗಳನ್ನು ತೋರಿಸಲು ಟ್ಯಾಟೂಗಳನ್ನು ಬಳಸುವುದು ಹೆಚ್ಚು. ಇವರು ಜೀವನವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳುವವರು. ಹೀಗಾಗಿ ಇವರಿಗೆ ಟ್ಯಾಟೂಗಳು ಸೃಜನಾತ್ಮಕ ಔಟ್‌ಲೆಟ್ ಅಥವಾ ಅವರು ಅವಲಂಬಿಸಿರುವ ಪ್ರೇರಣೆಯ ಸಂಕೇತವಾಗಿರಬಹುದು. ತಮ್ಮ ಮನಸ್ಸಿನಲ್ಲಿರುವ ಯಾವುದೇ ಚಿಹ್ನೆಯನ್ನು ಹಚ್ಚೆ ಹಾಕಿಸಿಕೊಂಡು ಉತ್ತಮವಾಗಿ ಬದುಕಲು ಪ್ರೇರಣೆ ಪಡೆದುಕೊಳ್ಳುತ್ತಾರೆ. ಡಾಲರ್ ಚಿಹ್ನೆಯಾಗಿರಲಿ, ಯಿನ್ ಮತ್ತು ಯಾಂಗ್ ಚಿಹ್ನೆಯಾಗಿರಲಿ ಅಥವಾ ಸ್ವಸ್ತಿಕವಾಗಲಿ, ಓಂ ಆಗಲಿ ಇರುತ್ತದೆ.

Flirting ಮಾಡೋದರಲ್ಲಿ ಈ zodiac signನ ಜನರು ನಿಸ್ಸೀಮರು!

ಕುಂಭ ರಾಶಿ (aquarius)
ಇವರು ವಿಶಿಷ್ಟ ವಿನ್ಯಾಸವನ್ನು ಆಯ್ಕೆ ಮಾಡುತ್ತಾರೆ. ಎಲ್ಲರೂ ಮಾಡುವ ಆಯ್ಕೆಯನ್ನು ಇವರು ಮಾಡುವುದೇ ಇಲ್ಲ. "ಸಾಂಪ್ರದಾಯಿಕ"ಕ್ಕಿಂತಲೂ ವಿಶಿಷ್ಟತೆಗೇ ಇವರ ಒತ್ತು. ತಾವೇನನ್ನು ಬಯಸುತ್ತೇವೆ ಎಂಬುದನ್ನು ಸ್ಪಷ್ಟಪಡಿಸಿಕೊಂಡೇ ಮುಂದುವರಿಯುವುದು ಹೆಚ್ಚು. ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ತಮ್ಮ ಪಕ್ಕೆಲುಬಿನ ಮೇಲೆ ನಕ್ಷತ್ರಪುಂಜವನ್ನು ಹಚ್ಚೆ ಹಾಕಿಸಿಕೊಳ್ಳಬಹುದು. ಇದು ಅವರ ಪ್ರತ್ಯೇಕತೆಯನ್ನು ಅವರಿಗೆ ನೆನಪಿಸುತ್ತದೆ.  ಧಾರ್ಮಿಕ ಹಚ್ಚೆಗಳಿಗೆ ಇವರು ಮನ ಸೋಲುವುದಿಲ್ಲ.

ಮೀನ ರಾಶಿ (pisces)
ಇವರು ತಮ್ಮ ಸಂಗಾತಿಯ ಹೆಸರು ಅಥವಾ ಮುಖದ ಚಿತ್ರವನ್ನು ಅವರ ತೋಳಿನ ಮೇಲೆ ಹಾಕಿಸಬಹುದು. ಇದಕ್ಕೆ ಅವರದೇ ಆದ ಭಾವನಾತ್ಮಕ ಅರ್ಥವಿರುತ್ತದೆ. ಇವರು ಅತ್ಯಂತ ಇಂದ್ರಿಯಚತುರ ವ್ಯಕ್ತಿಗಳು. ಈ ಕಾರಣದಿಂದಾಗಿ, ಹೆಚ್ಚಾಗಿ ತಮ್ಮ ಸಂಗಾತಿಯ ಹೆಸರನ್ನು ತಮ್ಮ ದೇಹದ ತೀರ ಖಾಸಗಿ ಭಾಗಗಳಲ್ಲೂ ಹಚ್ಚೆ ಹಾಕಿಸಿಕೊಳ್ಳಲು ಇವರು ಹಿಂಜರಿಯಲಾರರು. ಸಮಾಜದಲ್ಲಿ ಸ್ವೀಕಾರಾರ್ಹವಾದುದನ್ನು ನಿರಾಕರಿಸಲು ಇವರು  ಹೆದರುವುದಿಲ್ಲ. ತಮಗೆ ಸರಿ ಎನಿಸಿದ್ದನ್ನೇ ಇವರು ಮಾಡುತ್ತಾರೆ. 

Follow Us:
Download App:
  • android
  • ios