ಮಳೆಗಾಲ ಅಂದ್ರೆ ಇಷ್ಟ ಪಡೋ ನಾಲ್ಕು ರಾಶಿಗಳಿವು..
ಮಳೆಗಾಲ ಎಂದರೆ ಹಲವರ ಮೂಡ್ ಕೂಡಾ ಮೋಡ ಕವಿದ ವಾತಾವರಣದಂತೆ ಡಲ್ ಆಗುತ್ತದೆ. ಆದರೆ, ಈ ನಾಲ್ಕು ರಾಶಿಯವರ ಮೂಡ್ ಮಾತ್ರ ಗರಿ ಬಿಚ್ಚಿ ಕುಣಿವ ನವಿಲಿನಂತೆ ಉತ್ಸಾಹ ಪಡೆದುಕೊಳ್ಳುತ್ತದೆ.
ಮಳೆಗಾಲವು ಪ್ರಕೃತಿಯು ಸಾಮರಸ್ಯ ಮತ್ತು ಸಮತೋಲನವನ್ನು ಸೃಷ್ಟಿಸುವ ಸಮಯವಾಗಿದೆ. ಮಳೆಗಾಲ ಆರಂಭದ ಒಂದೆರಡು ದಿನ ಖುಷಿ ಬಿಟ್ಟರೆ ಹೆಚ್ಚಿನವರಿಗೆ ಆಮೇಲೆ ಮನಸ್ಸೆಲ್ಲ ಮೋಡ ಕವಿದ ವಾತಾವರಣವೇ.. ಹಾಳು ಮಳೆ, ಯಾವಾಗ ನಿಲ್ಲುತ್ತೋ ಎಂದು ಬೈಕೊಳ್ಳುವವರೇ ಹೆಚ್ಚು. ಯಾವ ಕೆಲಸಗಳೂ ಆಗದೆ ಕಂಗಾಲಾಗುವವರೇ ಹೆಚ್ಚು. ಕೂದಲು ಹಾಳಾಗುತ್ತಿದೆ, ಮನೆ ಸೋರುತ್ತಿದೆ, ಬಟ್ಟೆ ಕೆಸರಾಗುತ್ತಿದೆ, ಒಗೆದ ಬಟ್ಟೆ ಒಣಗುತ್ತಿಲ್ಲ.. ಮಕ್ಕಳಿಗೆ ಹುಷಾರಿಲ್ಲ.. ಎಲ್ಲ ಕಡೆ ಪಾಚಿ ಕಟ್ಟುತ್ತಿದೆ.. ಗೋಡೆ ಹಾಳಾಗುತ್ತಿದೆ.. ಸಮಸ್ಯೆ ಒಂದೆರಡಲ್ಲ..
ಆದರೆ, ಕೆಲವೇ ಕೆಲವು ಮಂದಿ ಮಾತ್ರ ಮಳೆಗಾಲವನ್ನು ಇನ್ನಿಲ್ಲದಂತೆ ಅನುಭವಿಸುತ್ತಾರೆ. ಈ ಕಾಲ ಅವರೊಳಗೆ ಉತ್ಸಾಹದ ಬುಗ್ಗೆ ಸೃಷ್ಟಿಸುತ್ತದೆ. ಅವರು ಈ ಸಮಯದಲ್ಲಿ ಬೇರೆಲ್ಲ ಕಾಲಗಳಿಗಿಂತ ಹೆಚ್ಚು ಖುಷಿಯಿಂದಲೂ, ಉತ್ಸಾಹದಿಂದಲೂ ಇರುತ್ತಾರೆ. ಅವರಿಗೆ ಮಳೆಗಾಲವೆಂದರೆ ಎಲೆಗಳ ಮೇಲಿನ ಸಣ್ಣ ಹನಿಗಳು, ಭೂಮಿಯ ಪರಿಮಳ, ಕೂದಲನ್ನು ಹಾರಿಸುವ ತಂಗಾಳಿ, ತುಂಬಿ ಹರಿವ ನದಿ, ರೊಮ್ಯಾಂಟಿಕ್ ವೆದರ್, ಬಿಸಿಬಿಸಿ ಬಜ್ಜಿ.. ಮಾನ್ಸೂನ್ ಬಗ್ಗೆ ಎಲ್ಲವೂ ಪ್ರೀತಿ! ಹಾಗೆ ಮಳೆಗಾಲ ಬಂದರೆ ಸಂತೋಷ ಅನುಭವಿಸುವವರು, ಈ ಋತುವನ್ನು ಪೂರ್ಣವಾಗಿ ಪ್ರೀತಿಸುವ ಮತ್ತು ಆನಂದಿಸುವವರು ಸಾಮಾನ್ಯವಾಗಿ ನಾಲ್ಕು ರಾಶಿಗಳಿಗೆ ಸೇರಿರುತ್ತಾರೆ.
ಹೌದು, ನಿರ್ದಿಷ್ಟ ಋತುವಿನೊಂದಿಗೆ ನಿಮ್ಮ ರಾಶಿ ಚಕ್ರದ ವೈಬ್‌ಗಳು ಉತ್ತಮವಾಗಿರಲು ವಿವಿಧ ಕಾರಣಗಳಿರಬಹುದು. ಈಗ ಮಾನ್ಸೂನನ್ನು ಆನಂದಿಸುವ 4 ರಾಶಿಚಕ್ರ ಚಿಹ್ನೆಗಳು ಯಾವುವು ನೋಡೋಣ.
ಕೈಗೆ ರಕ್ಷೆ ಕ್ಟಟುವಾಗ ತಪ್ಪಿಯೂ ಈ ತಪ್ಪುಗಳನ್ನು ಮಾಡ್ಬೇಡಿ..
ಕರ್ಕಾಟಕ ರಾಶಿ(Cancer)
ಕರ್ಕಾಟಕವು ನೀರಿನ ಚಿಹ್ನೆ ಮತ್ತು ಮಳೆಯ ಆಡಳಿತಗಾರ. ನೀವು ಮಳೆಗಾಲದಲ್ಲಿ ಕೆಲವೊಮ್ಮೆ ಸ್ವಲ್ಪ ನಿದ್ದೆ ಅಥವಾ ದುಃಖವನ್ನು ಅನುಭವಿಸಬಹುದು, ಆದರೆ ಇದು ನಿಮ್ಮ ತಾಯಿಯ ಪ್ರವೃತ್ತಿಯು ಬಲವಾಗಿರುವ ಸಮಯವಾಗಿದೆ ಮತ್ತು ನಿಮ್ಮ ಜೀವನದಲ್ಲಿ ನೀವು ಹೆಚ್ಚು ಉತ್ಪಾದಕರಾಗಿರುತ್ತೀರಿ. ಮಳೆಗಾಲದಲ್ಲಿಯೇ ನಿಮ್ಮ ಸಾಮರ್ಥ್ಯ ಹೆಚ್ಚಾಗುವುದು. ಭಾವನಾತ್ಮಕ ಸ್ವಭಾವದವರಾದ ಇವರದು ಕವಿ ಮನಸ್ಸು.. ಮಳೆಗಾಲದಲ್ಲಿ ಹೆಚ್ಚು ಆರ್ಧ್ರವಾಗುತ್ತದೆ.
ವೃಷಭ ರಾಶಿ(Taurus)
ಈ ಋತುವು ಬೇಸಿಗೆಯ ಅಂತ್ಯ ಮತ್ತು ಚಳಿಗಾಲದ ಋತುವಿಗಾಗಿ ನಿಧಾನವಾಗಿ ತಣ್ಣಗಾಗುವ ನಡುವಿನ ಸಂತೋಷದ ಮಾಧ್ಯಮವಾಗಿ ವೃಷಭ ರಾಶಿಯವರಿಗೆ ಕಾಣಿಸುತ್ತದೆ. ನೀವು ಬಹುಶಃ ಮಳೆಗಾಲದಲ್ಲಿ ವೃಷಭ ರಾಶಿಯನ್ನು ಅವರ ಮನೆಯೊಳಗೆ ಕಿಟಕಿಯ ಬಳಿ ಕುಳಿತು ಪುಸ್ತಕ ಓದುವುದನ್ನು ಕಾಣಬಹುದು.
ಮಿಥುನ ರಾಶಿ(Gemini)
ನೀವು ತಮಾಷೆಯವರು, ಅವಕಾಶವಾದಿಗಳು ಮತ್ತು ಸ್ವಯಂಪ್ರೇರಿತರು. ಆದ್ದರಿಂದ ನೀವು ಗಾಳಿಯೊಂದಿಗೆ ಚೆನ್ನಾಗಿ ಕಂಪಿಸುತ್ತೀರಿ. ಮಿಥುನ ರಾಶಿಯವರು ಮಳೆಯನ್ನು ಮೆಚ್ಚಿಕೊಳ್ಳುತ್ತಾರೆ. ಈ ಸಮಯ ಅವರು ಒಳಾಂಗಣ ಹಾಗೂ ಹೊರಾಂಗಣದಲ್ಲಿರುವುದೆರಡನ್ನೂ ಎಂಜಾಯ್ ಮಾಡುತ್ತಾರೆ. ಮಳೆಗಾಲದಲ್ಲಿ ಮನೆಯೊಳಗೆ ಕುಟುಂಬದೊಡನೆ ಕುಳಿತು ಕುರುಕಲು ತಿಂಡಿ ತಿನ್ನುವುದೂ ಇವರಿಗಿಷ್ಟ, ಮಾನ್ಸೂನ್ ಟ್ರಾವೆಲಿಂಗ್ ಕೂಡಾ ಇವರಿಗಿಷ್ಟ.
ಮಲೈಕಾ- ಅರ್ಜುನ್ ಜೋಡಿಯ ರಾಶಿ ಹೊಂದಾಣಿಕೆ ಹೇಗಿದೆ? ಎಷ್ಟು ಕಾಲ ನಡೆಯುತ್ತೆ ಇವರ ಸಂಬಂಧ?
ತುಲಾ ರಾಶಿ(Libra)
ನೀವು ಜೀವನದಲ್ಲಿ ಸಮತೋಲನ ಮತ್ತು ಉತ್ಸಾಹವನ್ನು ಬಯಸುತ್ತೀರಿ. ಅದಕ್ಕಾಗಿಯೇ ಎಲೆಗಳು ಹಸಿರು ಬಣ್ಣಕ್ಕೆ ತಿರುಗಲು ಪ್ರಾರಂಭಿಸುವ ಸಮಯವನ್ನು ನೀವು ಆನಂದಿಸಬಹುದು ಮತ್ತು ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಕೃತಿ ಸಾಮರಸ್ಯದಿಂದ ಕೆಲಸ ಮಾಡಲು ಪ್ರಾರಂಭಿಸುವುದು ನಿಮ್ಮಲ್ಲಿಯೂ ಉತ್ಸಾಹ ತರುತ್ತದೆ. ಹೆಚ್ಚು ಬಿಸಿಯೂ ಅಲ್ಲದ, ತೀರಾ ಚಳಿಯೂ ಅಲ್ಲದ ಸಮತೋಲಿತ ವಾತಾವರಣವಾಗಿ ಮಳೆಗಾಲವನ್ನು ನೋಡುತ್ತಾರೆ ಇವರು.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.