ಈ ರಾಶಿಗಳ ಜನರಿಗೆ ಬ್ರೇಕಪ್‌ ಆದ್ಮೇಲೂ ಎಕ್ಸ್‌ ಬಗ್ಗೆ ಭಾರೀ ಪ್ರೀತಿ, ಕಾಳಜಿ

ಸಂಬಂಧವೊಂದರಿಂದ ದೂರವಾಗುವುದು ಸುಲಭವಲ್ಲ. ಅದೊಂದು ಕಹಿ ಅನುಭವ. ಆದರೆ, ಆ ಕಹಿ ಅನುಭವದ ಬಳಿಕವೂ ಅನೇಕರು ಮಾಜಿ ಸಂಗಾತಿಯೊಂದಿಗೆ ಸ್ನೇಹ ಹೊಂದಿರುತ್ತಾರೆ. ಅವರ ಬಗ್ಗೆ ಕಾಳಜಿ, ಬದ್ಧತೆ, ಜವಾಬ್ದಾರಿ ತೋರುತ್ತಾರೆ. ಈ ಗುಣ ಮೂರೇ ರಾಶಿಗಳ ಜನರಲ್ಲಿ ಕಂಡುಬರುತ್ತದೆ. 
 

These zodiac signs feel responsible for their ex

ಪ್ರೀತಿ-ಪ್ರೇಮದ ಬಾಂಧವ್ಯ ಎಷ್ಟು ಸಹಜವೋ ದೂರವಾಗುವುದು ಕೂಡ ಇತ್ತೀಚೆಗೆ ಅಷ್ಟೇ ಸಹಜವಾಗುತ್ತಿದೆ. ಚಿಕ್ಕದೊಂದು ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗದ ಮಂದಿ ಕೆಲವೇ ದಿನಗಳಲ್ಲಿ ಸಂಬಂಧದಿಂದ ಬ್ರೇಕಪ್‌ ಮಾಡಿಕೊಳ್ಳುತ್ತಾರೆ. ವಿವಾಹವಾದರೂ ವಿಚ್ಛೇದನಕ್ಕೆ ಮುಂದಾಗುತ್ತಾರೆ. ಪ್ರತ್ಯೇಕವಾಗಿ ನೋಡಿದರೆ ಇಬ್ಬರಲ್ಲೂ ಏನೂ ಸಮಸ್ಯೆ ಇಲ್ಲ, ಜತೆಯಲ್ಲೇ ಇರಬಹುದಲ್ಲ ಎಂದು ಅನ್ನಿಸಬಹುದು. ಆದರೆ, ಇಬ್ಬರ ನಡುವೆ ಇರಬೇಕಾದ ಆ ಪ್ರೀತಿ, ಗೌರವ ಹಾಗೂ ಹೊಂದಾಣಿಕೆ ಇಲ್ಲದಿರುವುದೇ ದೂರ ಆಗುವುದಕ್ಕೆ ಇರುವ ಮುಖ್ಯ ಕಾರಣ. ಎಷ್ಟೋ ವರ್ಷಗಳ ಕಾಲ ಡೇಟ್‌ ಮಾಡಿದ ಬಳಿಕ ಮದುವೆಯಾದರೂ ಆ ಬಳಿಕ ದೂರವಾಗುವವರಿದ್ದಾರೆ. ಖ್ಯಾತ ನಟಿ ಸಮಂತಾ ರುತ್‌ ಪ್ರಭು ಹಾಗೂ ನಾಗಚೈತನ್ಯ ಅವರದ್ದು ಇಂಥದ್ದೇ ಪ್ರಕರಣ ಎನ್ನಬಹುದು. ಹಾಗೆಯೇ, ದೂರವಾದ ಬಳಿಕವೂ ಪರಸ್ಪರದ ಸ್ನೇಹದಿಂದ ಇರುವವರಿದ್ದಾರೆ. ಕೆಲವರು ಅವರನ್ನು ನೆನಪಿಸಿಕೊಳ್ಳಲೂ ಇಷ್ಟಪಡದೆ ಇರಬಹುದು. ಕೆಲವರು ಇನ್ನೂ ಅವರೊಂದಿಗೆ ಅಟ್ಯಾಚ್‌ ಮೆಂಟ್‌ ಹೊಂದಿರುವ ಫೀಲಿಂಗ್‌ ನಲ್ಲೇ ಹಲವಾರು ವರ್ಷಗಳನ್ನು ಕಳೆಯಬಹುದು. ಇದೆಲ್ಲ ಅವರವರ ಮನಸ್ಥಿತಿಗೆ ಸಂಬಂಧಪಟ್ಟ ವಿಚಾರ. ಹಾಗೆಯೇ ಕೆಲವರು ಸಂಗಾತಿಯಿಂದ ದೂರವಾದ ಮೇಲೂ ಅವರ ಬಗ್ಗೆ ಜವಾಬ್ದಾರಿ ತೋರಬಹುದು. ಇದು ಅವರವರ ರಾಶಿಯನ್ನು ಅವಲಂಭಿಸಿದೆ.

ಹೌದು, ಸಾಮಾನ್ಯವಾಗಿ ಸಂಗಾತಿಗಳು (Partners) ಪರಸ್ಪರ ಅನುಮತಿ ಮೇಲೆ ದೂರವಾಗುತ್ತಾರೆ. ಆದರೆ, ಕೆಲವರು ಮಾತ್ರ ಆ ಸಂಬಂಧದಿಂದ (Relationship) ಸಂಪೂರ್ಣವಾಗಿ ಆಚೆ ಬರಬಲ್ಲರು. ಕೆಲವರು ಮಾಜಿ ಸಂಗಾತಿಯ ಜತೆಗಿನ ಬಾಂಧವ್ಯವನ್ನು ಮರೆಯಲು ಸಾಧ್ಯವಾಗದೆ ಅವರ ಬಗ್ಗೆ ಜವಾಬ್ದಾರಿ ತೋರಬಹುದು. ಬದ್ಧತೆ (Commitment) ಉಳಿಸಿಕೊಳ್ಳಬಹುದು. ಅಂತಹ ಮೂರು ರಾಶಿಗಳನ್ನು (Zodiac Signs) ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗುರುತಿಸಲಾಗಿದೆ. 

•    ವೃಶ್ಚಿಕ (Scorpio)
ವೃಶ್ಚಿಕ ರಾಶಿಯವರು ಸಾಮಾನ್ಯವಾಗಿ ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಆದರೆ, ಒಮ್ಮೆ ನೀವು ವೃಶ್ಚಿಕ ರಾಶಿಯವರ ಬದುಕನ್ನು ಪ್ರವೇಶಿಸಿದರೆ ನೀವು ಅವರಿಂದ ದೂರವಾಗುವ ಯೋಚನೆಯನ್ನೇ ಮಾಡುವುದಿಲ್ಲ. ಒಂದೊಮ್ಮೆ ದೂರವಾದರೂ ಅವರು ನಿಮ್ಮ ಬಗ್ಗೆ ಕಾಳಜಿ (Care) ತೋರುತ್ತಾರೆ. ಬದ್ಧತೆ ವ್ಯಕ್ತಪಡಿಸುತ್ತಾರೆ ಹಾಗೂ ನಿಮ್ಮ ಕುರಿತು ತಮ್ಮ ಜವಾಬ್ದಾರಿ (Responsible) ಇದೆ ಎನ್ನುವಂತೆ ವರ್ತಿಸುತ್ತಾರೆ. ಮಾಜಿ ಸಂಗಾತಿಯ ಜತೆಗೆ ಸ್ನೇಹಿತರಂತೆ (Friend) ಇರುತ್ತಾರೆ. ಹಿಂದಿನ ದಿನಗಳ ಆಪ್ತತೆಯನ್ನು ಸುಲಭವಾಗಿ ಮರೆಯುವುದಿಲ್ಲ. ಇವರ ಗಿವಿಂಗ್‌ ನೇಚರ್‌ (Giving Nature) ಅನ್ನು ತುಂಬ ಜನ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಬಹುದು. ಮಾಜಿ (Ex) ಸಂಗಾತಿ ಇವರ ಕಾರು ಬಳಕೆ ಮಾಡಲು, ಇವರ ಹಣದಿಂದ ಖರೀದಿ ಮಾಡಲು ಬೇಸರ ಪಡುವುದಿಲ್ಲ, ಅಷ್ಟು ಸ್ನೇಹದಿಂದ ಇರುತ್ತಾರೆ.

ಒಳ್ಳೇತನವನ್ನು ನಂಬಿ ಮೋಸ ಹೋಗುವ ರಾಶಿಗಳಿವು

•    ಮೇಷ (Aries)
ಮೇಷ ರಾಶಿಯವರು ಸಿಕ್ಕಾಪಟ್ಟೆ ಸ್ನೇಹಜೀವಿಗಳು (Friendly). ಜೀವನದ (Life) ಪ್ರತಿ ಅಂಶವನ್ನೂ ಪ್ರೀತಿಸುತ್ತಾರೆ. ಹೀಗಾಗಿ, ಇವರಿಗೆ ಮಾಜಿ ಸಂಗಾತಿಯೊಂದಿಗೆ ಮುನಿಸಿಕೊಂಡಿರಲು ಸಾಧ್ಯವಿಲ್ಲ. ಮಾಜಿಯೊಂದಿಗೆ ಸ್ನೇಹಿತರಾಗಿರಲು ಇಷ್ಟಪಡುತ್ತಾರೆ. ಸಂಗಾತಿಯೊಂದಿಗೆ ಆಳವಾದ ಬಂಧ ಹೊಂದಿರುವುದು ಇದಕ್ಕೆ ಕಾರಣ. ತಮ್ಮ ಹಾಲಿ ಸಂಗಾತಿಗಿಂತಲೂ ಹೆಚ್ಚು ಕಾಳಜಿಯನ್ನು ಮಾಜಿ ಬಗ್ಗೆ ತೋರಿಸಬಹುದು. ಹೀಗಾಗಿ, ಇವರ ಹಾಲಿ ಸಂಗಾತಿಗೆ ಇವರ ಬಗ್ಗೆ ನಂಬಿಕೆ ಮೂಡುವುದಿಲ್ಲ. ಅನಿಶ್ಚಿತತೆ (Insecure) ಕಾಡುವುದು ಹೆಚ್ಚು. ಏಕೆಂದರೆ, ಇವು ಭಾವನಾತ್ಮಕವಾಗಿ ಮಾಜಿ ಸಂಗಾತಿಯನ್ನೇ ಬೆಂಬಲಿಸುತ್ತಾರೆ. 

•    ಸಿಂಹ (Leo)
ತಮ್ಮ ಸಂಗಾತಿಯನ್ನು ಹೊಗಳುತ್ತ (Pamper) ಖುಷಿಯಾಗಿಡುವುದು ಸಿಂಹ ರಾಶಿಯವರ ಅಭ್ಯಾಸ. ಅಗ್ನಿ ತತ್ವದ ಈ ರಾಶಿಯವರು ಬ್ರೇಕಪ್‌ (Breakup) ಆದ ಬಳಿಕವೂ ಮಾಜಿಯೊಂದಿಗೆ ಮಾತನಾಡಲು ಇಷ್ಟಪಡುತ್ತಾರೆ. ಅವರ ಸುತ್ತಮುತ್ತಲೇ ಇರಲು ಬಯಸುತ್ತಾರೆ. ಹಾಲಿ ಸಂಗಾತಿಯನ್ನೂ ನಿರ್ಲಕ್ಷಿಸಿ ಮಾಜಿ ಜತೆಗೆ ಓಡಾಡಬಹುದು. ಇವರ ಈ ಗುಣದಿಂದಾಗಿ ಸಿಂಹ ರಾಶಿಯವರ ಜೀವನದಲ್ಲಿ ಸಿಕ್ಕಾಪಟ್ಟೆ ಡ್ರಾಮಾಗಳು (Drama) ತುಂಬಿಬಿಡುತ್ತವೆ. ತಾವೇ ಎಚ್ಚರಿಕೆ ವಹಿಸದಿದ್ದರೆ ಇವರು ಹಾಲಿ ಸಂಗಾತಿಗೆ ಭಾರೀ ಬೇಸರ ಉಂಟು ಮಾಡುತ್ತಾರೆ.

ಯಮ ಸಾವಿನ ದೇವರಾಗಿದ್ದು ಹೇಗೆ?

Latest Videos
Follow Us:
Download App:
  • android
  • ios