ನಿಮ್ಮ ಗಂಡ ಸೋಂಬೇರಿ ಅಂತ ನಿಮಗೆ ಅನಿಸಿದ್ಯಾ? ಹಾಗಾದ್ರೆ ಈ ರಾಶಿಯವರೇ ಇರಬೇಕು!
ಪತ್ನಿ ಇದ್ದಾಗಂತೂ ಮನೆಯ ಕೆಲಸಕಾರ್ಯಗಳ ಬಗ್ಗೆ ತಲೆಯನ್ನೇ ಹಾಕುವುದಿಲ್ಲ. ಇಂತಹ ಸೋಮಾರಿ ಗಂಡಸರನ್ನು ಈ ರಾಶಿಗಳಲ್ಲಿ ನೋಡಬಹುದು.
ತನ್ನ ಗಂಡನಷ್ಟು ದೊಡ್ಡ ಸೋಮಾರಿ ಬೇರೊಬ್ಬರಿಲ್ಲ ಎಂದು ಮಹಿಳೆಯರಿಗೆ ಅನಿಸುತ್ತಿರುತ್ತದೆ. “ತಮ್ಮ ಪತಿಯಷ್ಟು ಸುಖವಾಗಿರುವವರು ಯಾರೂ ಇಲ್ಲ, ಎಲ್ಲ ಕೆಲಸ-ಕಾರ್ಯಗಳನ್ನೂ ತಾನೇ ನೋಡಿಕೊಳ್ಳುತ್ತೇನೆ. ಸಕಲ ಜವಾಬ್ದಾರಿ ತನ್ನದೇ ಆಗಿರುವಾಗ ಪತಿಗೆ ಕೇವಲ ತಿಂದುಂಡುಕೊಂಡು, ಆರಾಮಾಗಿ ದುಡಿದು ಹಾಕುವುದೊಂದೇ ಕೆಲಸ’ ಎನ್ನುವ ಭಾವನೆ ಸಾಕಷ್ಟು ಮಹಿಳೆಯರಲ್ಲಿ ಬೇರೂರಿರುತ್ತದೆ. ಇದು ಬಹಳಷ್ಟು ಮಟ್ಟಿಗೆ ನಿಜವೂ ಹೌದು. ಮನೆಯ ಸಕಲ ಆಗುಹೋಗುಗಳನ್ನೂ ನೋಡಿಕೊಂಡು, ಪತಿ-ಮಕ್ಕಳ ದೇಖರೇಖಿಯನ್ನೂ ನೋಡಿಕೊಂಡು, ಆರ್ಥಿಕವಾಗಿಯೂ ಕೊಡುಗೆ ನೀಡುವ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಮ್ಮ ಕುಟುಂಬಗಳಲ್ಲಿ ಮಹಿಳೆಯರಿಗೆ ಹೋಲಿಕೆ ಮಾಡಿದರೆ ಪುರುಷರಿಗೆ ಜವಾಬ್ದಾರಿ ಕಡಿಮೆ. ಯಜಮಾನನ ಸ್ಥಾನ ಗಳಿಸಿದರೂ ಮಹಿಳೆಯ ಕೊಡುಗೆ ಇಲ್ಲದೆ ಆ ಸ್ಥಾನಕ್ಕೆ ಬೆಲೆ ಇಲ್ಲ. ಪುರುಷರಿಗೆ ದುಡಿದು ಹಾಕುವುದೊಂದೇ ಜವಾಬ್ದಾರಿ, ಉಳಿದುದೆಲ್ಲ ಮಹಿಳೆಯರ ಕೆಲಸ ಎನ್ನುವ ನಂಬಿಕೆಯ ಪರಿಣಾಮವೋ ಏನೋ, ಮನೆಯ ಕೆಲಸ ಕಾರ್ಯಗಳ ವಿಚಾರದಲ್ಲಿ ಪುರುಷರು ಅಪ್ಪಟ ಸೋಮಾರಿಗಳಾಗಿರುವುದು ಎಲ್ಲೆಡೆ ಕಂಡುಬರುತ್ತದೆ. ಅದರಲ್ಲೂ ಕೆಲವು ರಾಶಿಗಳ ಜನ ಭಾರೀ ಸೋಮಾರಿಗಳಾಗಿರುತ್ತಾರೆ. ಕುಳಿತಲ್ಲಿ, ನಿಂತಲ್ಲಿ ಇವರ ಸೇವೆ ಮಾಡುತ್ತಿರಬೇಕಾಗುತ್ತದೆ. ಇಂತಹ ಜನರನ್ನು ನಾಲ್ಕೇ ರಾಶಿಗಳಲ್ಲಿ ನೋಡಬಹುದು.
• ವೃಷಭ (Taurus)
ವೃಷಭ ರಾಶಿ (Bull) ಗೂಳಿಯ ಸಂಕೇತ. ಪುರುಷರನ್ನು (Male) ಪತಿಯಾಗಿ ಸ್ವೀಕರಿಸುವ ಮುನ್ನ ಇವರ ಬಗ್ಗೆ ಒಂದು ಮಾತನ್ನು ತಿಳಿದಿಟ್ಟುಕೊಳ್ಳುವುದು ಉತ್ತಮ. ಇವರು ಕಂಫರ್ಟ್ (Comfort) ಗೆ ಆದ್ಯತೆ ನೀಡುತ್ತಾರೆ. ಸಾವಧಾನದಿಂದ (Slow) ಕೆಲಸ ಮಾಡುವುದು ಇವರ ಗುಣ. ಮನೆಯ ಕೆಲಸಗಳ ಕುರಿತು ಸಿಕ್ಕಾಪಟ್ಟೆ ಬೇಸರ, ಅನಾದರ ಹೊಂದಿರುತ್ತಾರೆ. ಮನೆಯಲ್ಲಿ ರಿಲ್ಯಾಕ್ಸ್ (Relax) ಮಾಡುವುದೆಂದರೆ ಇವರಿಗೆ ಭಾರೀ ಹಿತ ನೀಡುವ ಸಂಗತಿ. ಆದರೆ, ಸಂಬಂಧದಲ್ಲಿ (Relation) ಅತೀವ ಬದ್ಧತೆ, ಪ್ರೀತಿ (Love) ಹೊಂದಿರುತ್ತಾರೆ.
ವಿಚಿತ್ರ, ತಿಕ್ಕಲು ಅನಿಸ್ಕೊಂಡ್ರೂ ಯಾರ ಅಂದಾಜಿಗೂ ಸಿಗೋ ರಾಶಿಯವರಲ್ಲಿ ಇವರು!
• ಸಿಂಹ (Leo)
ವರ್ಚಸ್ಸು ಹೊಂದಿರುವ ಸಿಂಹ ರಾಶಿಯ ಜನ ಸಿಕ್ಕಾಪಟ್ಟೆ ಆತ್ಮವಿಶ್ವಾಸಿಗಳು. ಸಮಾಜದಲ್ಲಿ ಗುರುತಿಸಿಕೊಳ್ಳಲು ಬಯಸುತ್ತಾರೆ. ನಾಲ್ಕು ಜನರ ನಡುವೆ ಇವರಲ್ಲಿ ಭಾರೀ ಎನರ್ಜಿ (Energy) ಇರುತ್ತದೆ. ಆದರೆ, ಇದೇ ಎನರ್ಜಿ ಮನೆಯ ಕೆಲಸ-ಕಾರ್ಯಗಳ (Household Chores) ಮಟ್ಟಿಗೆ ಇರುವುದಿಲ್ಲ. ಎಲ್ಲರ ಕೇಂದ್ರಬಿಂದುವಾಗುವ, ಜೀವನವನ್ನು ಗ್ರ್ಯಾಂಡ್ (Grand) ಆಗಿ ನೋಡುವ ದೃಷ್ಟಿಯಿಂದಾಗಿ ಮನೆಯ ಕೆಲಸಗಳಿಗೆ ಆದ್ಯತೆ ನೀಡುವುದಿಲ್ಲ. ಎಲ್ಲವನ್ನೂ ಪತ್ನಿಯೇ (Wife) ಮಾಡಿಕೊಡಬೇಕು. ಸಾಕಷ್ಟು ದುಡಿಯುವ ಪುರುಷರಾಗಿದ್ದರಂತೂ ಈ ವಿಚಾರದಲ್ಲಿ ಭಾರೀ ಅಸಡ್ಡೆ ಹೊಂದಿರುತ್ತಾರೆ. ಮನೆಯಲ್ಲಿ ಮಲಗಿ, ಕೂತು ಕಾಲ ಕಳೆಯುತ್ತಾರೆ.
• ಧನು (Sagittarius)
ಸಾಹಸಿ ವ್ಯಕ್ತಿತ್ವ ಹೊಂದಿರುವ ಧನು ರಾಶಿಯ ಪುರುಷರು ಸೋಮಾರಿಯಾಗಿರಬಹುದು (Lazy) ಎಂದರೆ ಅಚ್ಚರಿಯಾಗಬಹುದು. ಆದರೆ, ಇವರಲ್ಲಿ ಸೋಮಾರಿಯ ಗುಣವೂ ಅಡಗಿರುತ್ತದೆ. ಮನೆಯ ಕೆಲಸಗಳ ವಿಚಾರದಲ್ಲಿ ಮಾರುದೂರ ಇರುತ್ತಾರೆ. ಸದಾಕಾಲ ಪ್ರವಾಸ, ಅನ್ವೇಷಣೆ, ಹೊಸದರ ಬಯಕೆ ಹೊಂದಿದ್ದು, ಮನೆಯ ಕೆಲಸಗಳು ಇವರಿಗೆ ಬೋರೆನಿಸುತ್ತವೆ. ಮನೆಯ ಜವಾಬ್ದಾರಿಗಳನ್ನು (Responsibility) ನಿರ್ವಹಿಸದೇ ಹೋದರೂ ಸಂಗಾತಿಯ (Partner) ಕುರಿತು ಆದರ ಹೊಂದಿರುತ್ತಾರೆ. ತಕ್ಷಣ ಏನಾದರೂ ಮಾಡುವ, ವಿನೋದ ಗುಣದಿಂದಾಗಿ ಸಂಗಾತಿಗೆ ಬೇಸರ ಮೂಡಿಸುವುದಿಲ್ಲ.
ಮಂಗಳ ಫೆಬ್ರವರಿ 5 ರವರೆಗೆ ಧನುದಲ್ಲಿ, ಈ' ರಾಶಿಗೆ ಸಂಪತ್ತು, ಮದುವೆ ಭಾಗ್ಯ
• ಮೀನ (Pisces)
ಕನಸುಗಾರರಾಗಿರುವ (Dream) ಮೀನ ರಾಶಿಯ ಜನ ಕನಸು, ಕಲ್ಪನೆಗಳಲ್ಲೇ ಕಳೆದು ಹೋಗುತ್ತಾರೆ. ಸಿಕ್ಕಾಪಟ್ಟೆ ಕ್ರಿಯಾಶೀಲತೆ (Creativity) ಇವರಲ್ಲಿರುತ್ತದೆ. ಸಹಾನುಭೂತಿ ತುಂಬಿದ ಮನಸ್ಸನ್ನು ಹೊಂದಿರುತ್ತಾರೆ. ಆದರೆ, ಮನೆಯಲ್ಲಿ ಕಲ್ಪನಾಶೀಲರಾಗಿದ್ದು, ಮನೆಯ ಕೆಲಸ ಕಾರ್ಯಗಳನ್ನು ನಿಭಾಯಿಸಲು ಸೋಲುತ್ತಾರೆ. ಆದರೆ, ಕೆಲಸಗಳನ್ನು (Works) ಮಾಡಬಾರದು ಎನ್ನುವ ಧೋರಣೆ ಹೊಂದಿರುವುದಿಲ್ಲ, ಅನಾದರವೂ ಇರುವುದಿಲ್ಲ. ಸೂಕ್ತ ರೀತಿಯಲ್ಲಿ ಇವರನ್ನು ಕೆಲಸಕ್ಕೆ ತೊಡಗಿಸುವುದು ಮುಖ್ಯವಾಗುತ್ತದೆ.