ವಿಚಿತ್ರ, ತಿಕ್ಕಲು ಅನಿಸ್ಕೊಂಡ್ರೂ ಯಾರ ಅಂದಾಜಿಗೂ ಸಿಗೋ ರಾಶಿಯವರಲ್ಲಿ ಇವರು!
ನಿಮ್ಮ ಸ್ನೇಹಿತರು, ಕುಟುಂಬದ ಸದಸ್ಯರ ಬಗ್ಗೆ ನಿಮಗೊಂದು ಅಂದಾಜಿರುತ್ತದೆ. ಇವರು ಹೀಗೆ ಎಂದು ಊಹಿಸಲು ಸಾಧ್ಯವಾಗುತ್ತದೆ. ಆದರೆ, ಕೆಲ ಜನರನ್ನು ಮಾತ್ರ ನಿರ್ದಿಷ್ಟವಾಗಿ ಅಂದಾಜಿಸಲು ಸಾಧ್ಯವಾಗುವುದಿಲ್ಲ. ಅನಿರೀಕ್ಷಿತ ವರ್ತನೆ, ನಿರ್ಧಾರಗಳನ್ನು ಕೈಗೊಳ್ಳುವ ಇಂಥವರನ್ನು ಕೆಲವು ರಾಶಿಗಳಲ್ಲಿ ಮಾತ್ರ ಕಾಣಬಹುದು.
ಕೆಲವು ವ್ಯಕ್ತಿಗಳನ್ನು ಅಂದಾಜಿಸುವುದು ಕಷ್ಟವಾಗುತ್ತದೆ. ಯಾವುದೋ ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಅವರು ಹೀಗೆ ವರ್ತಿಸಬಹುದು ಎಂದು ನೀವು ಅಂದಾಜಿಸಿದ್ದರೆ ಅವರು ಅದಕ್ಕೆ ಭಾರೀ ವ್ಯತಿರಿಕ್ತವಾಗಿ ನಡೆದುಕೊಳ್ಳಬಹುದು. ಯಾವುದೋ ವಿಚಾರಕ್ಕೆ ಅವರ ಪ್ರತಿಕ್ರಿಯೆ ನೀವು ನಿರೀಕ್ಷಿರದ ರೀತಿಯಲ್ಲಿ ವ್ಯಕ್ತವಾಗಬಹುದು. ಒಟ್ಟಿನಲ್ಲಿ ಯಾರದೇ ಅಳತೆಗೆ ಸಿಲುಕುವುದು ಇವರ ಜಾಯಮಾನವಲ್ಲ. ಇಂತಹ ವ್ಯಕ್ತಿಗಳು ಬುದ್ಧಿವಂತರೂ ಆಗಿರಬಹುದು, ಎಲ್ಲೋ ಸ್ವಲ್ಪ ತಿಕ್ಕಲು ಎಂದೂ ಅನಿಸಿಕೊಳ್ಳಬಹುದು. ಆದರೆ, ಇವರು ಮಾತ್ರ ತಮ್ಮ ಗುಣವನ್ನು ಎಂದಿಗೂ ಬಿಡುವುದಿಲ್ಲ. ಏಕೆಂದರೆ, ಇವರ ಈ ಗುಣದ ಹಿಂದೆ ಬ್ರಹ್ಮಾಂಡದ ಶಕ್ತಿಯ ಪ್ರಭಾವ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಶಿಚಕ್ರದ ಪೈಕಿ 6 ರಾಶಿಗಳ ಜನರಲ್ಲಿ ಮಾತ್ರ ಅನೂಹ್ಯ ವರ್ತನೆ, ಸ್ವಭಾವ ಕಾಣಬಹುದು.
ಮೇಷ (Aries)
ರಾಶಿಚಕ್ರದ ಮೊದಲ ರಾಶಿಯಾಗಿರುವ ಮೇಷದ ಜನರಲ್ಲಿ ಭಯ (Fear) ಎನ್ನುವುದೇ ಇರುವುದಿಲ್ಲ. ಎಲ್ಲ ವಿಚಾರಗಳಲ್ಲೂ ನಿರ್ಭೀತರಾಗಿ ಮುನ್ನುಗ್ಗುವುದು ಇವರ ಸ್ವಭಾವ. ಹೀಗಾಗಿಯೇ, ಇವರ ವರ್ತನೆ (Behaviour) ಬಹಳಷ್ಟು ಬಾರಿ ದುಡುಕಿನಿಂದ ಕೂಡಿರುತ್ತದೆ. ಎರಡನೇ ಯೋಚನೆಗೆ ಅವಕಾಶವಿಲ್ಲದಂತೆ ನಿರ್ಧಾರಗಳನ್ನು ಕೈಗೊಂಡುಬಿಡುತ್ತಾರೆ. ಅದುವರೆಗೆ ಅರಿವೇ ಇಲ್ಲದ ಕಾರ್ಯಕ್ಕೂ ಭಯವಿಲ್ಲದೆ ಕೈ ಹಾಕುತ್ತಾರೆ. ನಿರ್ದಿಷ್ಟ ಮಾದರಿಯಲ್ಲಿ ಊಹಿಸಲು ಸಾಧ್ಯವಿಲ್ಲದ ಜನ ಇವರಾಗಿರುತ್ತಾರೆ. ಏಕಾಏಕಿ ಏನು ಬೇಕಿದ್ದರೂ ಪ್ಲಾನ್ ಮಾಡುತ್ತಾರೆ.
ಪ್ರೀತಿ, ಮಮಕಾರ ತೋರೋ ಅಮ್ಮ, ಬೈತಾಳೆ, ಮಕ್ಕಳು ಏನ್ ಮಾಡಿದ್ರೂ ಬೆನ್ನಿಗಿರ್ತಾಳೆ; ಅಮ್ಮನೆಂದ್ರೆ ವೈವಿಧ್ಯ!
• ಮಿಥುನ (Gemini)
ಅವಳಿಗಳನ್ನು ಜತೆಯಾಗಿ ಹೊಂದಿರುವ ಮಿಥುನ ರಾಶಿ, ದ್ವಂದ್ವಕ್ಕೆ (Dual) ಹೆಸರು. ಒಮ್ಮೆ ಹೀಗೆ, ಒಮ್ಮೆ ಹಾಗೆ ವರ್ತಿಸುತ್ತಾರೆ. ದೀಪವೊಂದು ಟಕ್ ಎಂದು ಬೆಳಗಿದಂತೆ ಇವರ ಮೂಡ್ (Mood) ಬದಲಾಗುತ್ತದೆ. ಒಮ್ಮೆ ಜನಜಂಗುಳಿಯಲ್ಲಿ ಪಾರ್ಟಿ ಮಾಡಲು ಇಷ್ಟಪಟ್ಟರೆ, ಮರುಕ್ಷಣ ಏಕಾಂಗಿ ಭಾವನೆಯಲ್ಲಿ ತೊಳಲಾಡುತ್ತಾರೆ. ಮಿಥುನ ರಾಶಿಯ ಜನ ಅನಿರೀಕ್ಷಿತವೊಂದನ್ನೇ ಇಷ್ಟಪಡುತ್ತಾರೆ ಎನಿಸುವಷ್ಟು ಅನಿರೀಕ್ಷಿತ ವರ್ತನೆ ತೋರುತ್ತಾರೆ. ನಿರ್ಧಾರಗಳನ್ನು ಏಕಾಏಕಿ ಬದಲಾಯಿಸಬಲ್ಲರು.
• ಸಿಂಹ (Leo)
ರಾಜಪ್ರಭುತ್ವದಂತಹ ಧೋರಣೆಯಿಂದಾಗಿ ಸಿಂಹ ರಾಶಿಯ ಜನ ಕೂಡ ಅಂದಾಜಿಗೆ (Prediction) ಸಿಗುವುದಿಲ್ಲ. ಆತ್ಮವಿಶ್ವಾಸದಿಂದ ಕೂಡಿರುವ ಇವರು ಯಾವುದೇ ಸನ್ನಿವೇಶಗಳನ್ನು ಎದುರಿಸಬಲ್ಲರು. ಅವುಗಳನ್ನು ತಮ್ಮದೇ ದೃಷ್ಟಿಕೋನದಿಂದ ಪರಿಶೀಲಿಸಬಲ್ಲರು. ಸಾಮಾನ್ಯ ಸನ್ನಿವೇಶವನ್ನೂ ಸಹ ಅದ್ದೂರಿಯಾಗಿ ಪರಿವರ್ತಿಸಬಲ್ಲರು. ಅದು ಸಿಂಹ ರಾಶಿಯವರ ವರ್ಚಸ್ಸು. ಭಾವನೆಗಳ ಏರಿಳಿತವೂ ಇರುವುದರಿಂದ ಇವರ ಮನಸ್ಥಿತಿಯನ್ನು ಅಂದಾಜಿಸುವುದು ಸಾಧ್ಯವಾಗುವುದಿಲ್ಲ.
• ವೃಶ್ಚಿಕ (Scorpio)
ನಿಗೂಢತೆಯನ್ನು (Mystery) ಮೈಗೂಡಿಸಿಕೊಂಡಿರುವ ವೃಶ್ಚಿಕ ರಾಶಿಯ ಜನ ಯಾವುದೇ ಸಂವಹನದಲ್ಲಿ ತಮ್ಮ ಬಗ್ಗೆ ಅಥವಾ ತಮ್ಮದಾದ ಗುಟ್ಟು ಬಿಟ್ಟುಕೊಡುವುದಿಲ್ಲ. ಆಳವಾದ ಭಾವನೆಗಳು, ತೀವ್ರತೆ ಹೊಂದಿರುವ ಇವರು ಸಾಮಾನ್ಯ, ಸಹಜ ಮಾತುಕತೆಯನ್ನು ಸಹ ಭಾವನಾತ್ಮಕವಾಗಿ ಪರಿವರ್ತಿಸುತ್ತಾರೆ. ಅವರಿಗೆ ಅಚ್ಚರಿ ನೀಡಲೆಂದು ಏನಾದರೂ ಕೊಟ್ಟುನೋಡಿ. ಅದಾಗಲೇ ಆ ಅನುಭವ ತಮಗೆ ಇರುವಂತೆ ವರ್ತಿಸುತ್ತಾರೆ.
ಅದೃಷ್ಟವಂತರು ತಮ್ಮ ಅಂಗೈಯಲ್ಲಿ ಈ ಚಿಹ್ನೆಯನ್ನು ಹೊಂದಿರುತ್ತಾರೆ
• ಧನು (Sagittarius)
ಅಲೆಮಾರಿತನವನ್ನು (Wanderlust) ಮನಸಾರೆ ಇಷ್ಟಪಡುವ ಧನು ರಾಶಿಯ ಜನ ಅಂದಾಜಿಗೆ ದೊರೆಯುವುದಿಲ್ಲ. ಧನು ರಾಶಿಯ ಜನರೊಂದಿಗೆ ಈ ವೀಕೆಂಡ್ ಕಳೆಯುವ ಕುರಿತು ಪ್ಲಾನ್ ಮಾಡಿದ್ದೀರಿ ಎಂದಾದರೆ, ಮತ್ತೊಮ್ಮೆ ಯೋಚನೆ ಮಾಡಿ. ಏಕೆಂದರೆ, ಅವರು ನಿಮ್ಮ ಕೈಗೆ ಸಿಗುವುದಿಲ್ಲ. ಕೊನೇ ಕ್ಷಣದಲ್ಲಾದರೂ ನಿರ್ಧಾರ ಕೈಗೊಳ್ಳುವ ಮನಸ್ಥಿತಿಯಿಂದಾಗಿ ಅವರು ಬೇರೊಂದು ಪ್ರವಾಸಕ್ಕೆ (Travel) ಹೊರಟುಬಿಡುತ್ತಾರೆ. ನಿಮ್ಮೊಂದಿಗೆ ಧನು ರಾಶಿಯವರಿದ್ದರೆ ಅನೂಹ್ಯ ಅನುಭವ ಗ್ಯಾರೆಂಟಿ.
• ಮೀನ (Pisces)
ಕನಸುಗಾರರಾಗಿರುವ (Dream) ಮೀನ ರಾಶಿಯ ಜನ ಕ್ರಿಯಾಶೀಲತೆಯ ವಿಚಾರದಲ್ಲಿ ಅಂದಾಜಿಗೆ ಸಿಗುವುದಿಲ್ಲ. ಅತ್ಯದ್ಭುತ ಕಲ್ಪನಾಶೀಲರಾಗಿರುವ ಇವರು ಕಲ್ಪನೆಗಳಲ್ಲೇ ಮುಳುಗಿದ್ದು, ದೈನಂದಿನ ಕೆಲಸಕಾರ್ಯಗಳಿಂದ ವಿಮುಖರಾಗಬಹುದು. ಸಾಮಾನ್ಯ ಕಲಾ ಪ್ರದರ್ಶನವೊಂದನ್ನು ಇವರು ಭೂಮಿಯಲ್ಲಿಲ್ಲದ ಅಪೂರ್ವ ಸಂಗತಿಯನ್ನಾಗಿ ನೋಡುತ್ತಾರೆ. ಇವರ ವರ್ತನೆ ಬಹಳಷ್ಟು ಬಾರಿ ವಿಚಿತ್ರ, ತಿಕ್ಕಲುತನದಿಂದ (Whimsical) ಎಂದೂ ಭಾಸವಾಗಬಹುದು.