ಭವಿಷ್ಯ ರೂಪಿಸ್ಕೊಳ್ಳೋದಷ್ಟೇ ಅಲ್ಲ, ಮೊದ್ಲೇ ಗ್ರಹಿಸೋ ತಾಕತ್ತೂ ಈ ಮೂರೇ ರಾಶಿಗಳಲ್ಲಿರುತ್ತೆ!
ಕೆಲವು ರಾಶಿಗಳ ಜನರು ತಮ್ಮ ಭವಿಷ್ಯವನ್ನು ತಾವು ನಿರ್ಮಿಸಿಕೊಳ್ಳುತ್ತಾರೆ, ಅತ್ಯಂತ ಸ್ಪಷ್ಟವಾಗಿ ಮುಂದೆ ಎದುರಾಗುವ ದಿನಗಳನ್ನು ಅಂದಾಜಿಸುತ್ತಾರೆ. ಅಷ್ಟೇ ಅಲ್ಲ, ತಮ್ಮ ಆಂತರಿಕ ಸಾಮರ್ಥ್ಯವನ್ನು ನೆಚ್ಚಿಕೊಂಡು ಎಂತಹ ಬದಲಾವಣೆಗೆ ಒಳಗಾದರೂ ಮತ್ತದೇ ತಾಕತ್ತಿನಿಂದ ಮೇಲೆದ್ದು ನಿಲ್ಲುತ್ತಾರೆ. ಇಂತಹ ಶಕ್ತಿ ಕೇವಲ ಮೂರು ರಾಶಿಗಳ ಜನರಲ್ಲಿ ಮಾತ್ರ ಕಂಡುಬರುತ್ತದೆ.
ಭವಿಷ್ಯದಲ್ಲಿ ಏನಾಗುತ್ತದೆ ಎನ್ನುವುದು ಭಾರೀ ಕುತೂಹಲಕಾರಿ ಸಂಗತಿ. ಹಾಗೆಯೇ ಅದು ಅಷ್ಟೇ ಅಸ್ಪಷ್ಟವೂ ಹೌದು. ನಿರ್ದಿಷ್ಟವಾಗಿ ಹೀಗೆಯೇ ಸಂಭವಿಸುತ್ತದೆ ಎಂದು ಹೇಳಲು ಬಹುಶಃ ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ, ಭವಿಷ್ಯವೊಂದು ಅಸ್ಪಷ್ಟವಾದ ಸಂಗತಿಯಾಗಿದೆ. ಅಷ್ಟಕ್ಕೂ ಮುಂದೇನು ನಡೆಯುತ್ತದೆ ಎನ್ನುವುದು ತಿಳಿದುಹೋದರೆ ಬದುಕಿನ ಸ್ವಾರಸ್ಯವೇನು ಉಳಿಯುತ್ತದೆ? ಆದರೂ ಈ ನಿಟ್ಟಿನಲ್ಲಿ ಪ್ರಯತ್ನವಂತೂ ಇದ್ದೇ ಇದೆ. ಸಾಮಾನ್ಯವಾಗಿ ಬಹಳಷ್ಟು ಜನ ಜೀವನದಲ್ಲಿ ಏನಾದರೂ ಸಮಸ್ಯೆ ಉಂಟಾದಾಗ, ಮಹತ್ವದ ನಿರ್ಧಾರ ಕೈಗೊಳ್ಳುವ ಸಮಯದಲ್ಲಿ ಜ್ಯೋತಿಷ್ಯದ ನೆರವು ಪಡೆಯುತ್ತಾರೆ. ಅದರಿಂದ ನೆರವಾಗುವುದು ಅನುಭವಕ್ಕೆ ಬರುವ ವಿಚಾರ. ಆದರೆ, ಇವರು ಹಾಗಲ್ಲ, ತಮ್ಮ ಭವಿಷ್ಯವನ್ನು ತಾವೇ ನಿರ್ಮಿಸಿಕೊಳ್ಳುತ್ತಾರೆ. ಎಲ್ಲರಿಗೂ ಇದು ಅನ್ವಯವಾಗುವ ಮಾತೇ ಆದರೂ ಕೆಲವು ರಾಶಿಗಳ ಜನ ಮಾತ್ರ ತಮ್ಮ ಭವಿಷ್ಯವನ್ನು ಅತ್ಯಂತ ಸ್ಪಷ್ಟವಾಗಿ ರೂಪಿಸಿಕೊಳ್ಳಬಲ್ಲರು ಹಾಗೂ ಅಂದಾಜಿಸಬಲ್ಲರು. ಅಂಥದ್ದೊಂದು ಶಕ್ತಿ ಇವರಲ್ಲಿರುತ್ತದೆ. ತಮ್ಮ ಜೀವನವನ್ನು ಇವರು ಕರಾರುವಕ್ಕಾಗಿ ಮುಂಗಾಣುತ್ತಾರೆ. ಹನ್ನೆರಡು ರಾಶಿಚಕ್ರದ ಪೈಕಿ ಕೇವಲ ಮೂರು ರಾಶಿಗಳ ಜನರಲ್ಲಿ ಇಂಥ ಸಾಮರ್ಥ್ಯವಿರುತ್ತದೆ.
ಮಕರ (Capricorn)
ಮಕರ ರಾಶಿಯವರನ್ನು ಹಣೆಬರಹದ (Destiny) ಶಿಲ್ಪಿ ಎಂದು ಕರೆಯಬಹುದು. ಏಕೆಂದರೆ, ಮಕರ ರಾಶಿಯ ಜನ ಅತ್ಯಂತ ದೃಢವಾದ (Strong) ಉದ್ದೇಶ ಹಾಗೂ ಸ್ಪಷ್ಟ ಯೋಜನೆ ಹೊಂದಿರುತ್ತಾರೆ. ಮಕರ ರಾಶಿಯು ಶನಿಯ ಅಧಿಪತ್ಯ ಹೊಂದಿದ್ದು, ಇದು ಶಿಸ್ತು ಮತ್ತು ಜವಾಬ್ದಾರಿಯನ್ನು ಪ್ರತಿನಿಧಿಸುತ್ತದೆ.
ಚಿನ್ನದ ಆಭರಣ ಕಳೆದು ಹೋಗುವುದು, ಸಿಗುವುದು ಇವು ಶುಭವೋ? ಅಶುಭವೋ?
ಈ ರಾಶಿಯಲ್ಲಿ ಜನಿಸಿರುವ ಜನ ತಮ್ಮ ಹಣೆಬರಹವನ್ನು ತಾವೇ ಬರೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಅಂಥದ್ದೊಂದು ವಿಶಿಷ್ಟ ಸಾಮರ್ಥ್ಯ (Capacity) ಇವರಲ್ಲಿರುತ್ತದೆ. ತಮ್ಮ ಜೀವನದ ನಿಲುವಿನಲ್ಲಿ ಸೂಕ್ತ ಪದ್ಧತಿ, ಸವಾಲುಗಳನ್ನು ಎದುರಿಸಲು ಬೇಕಾದ ಕೌಶಲಗಳನ್ನು ಅಳವಡಿಸಿಕೊಂಡಿರುತ್ತಾರೆ. ಭವಿಷ್ಯದ (Future) ಬಗ್ಗೆ ಅತ್ಯಂತ ಸ್ಪಷ್ಟತೆ ಹೊಂದಿದ್ದು, ಕಾರ್ಯತಂತ್ರದ ನಿರ್ಧಾರಗಳು ಮತ್ತು ಕುಂದದ ಬದ್ಧತೆಯಿಂದ ಅದನ್ನು ಪೂರೈಸಿಕೊಳ್ಳುತ್ತಾರೆ.
ಮೀನ (Pisces)
ಮೀನ ರಾಶಿಯ ಜನರನ್ನು ಅಂತಃದೃಷ್ಟಿಯುಳ್ಳ ದಾರ್ಶನಿಕರು (Intuitive Visionary) ಎಂದು ಬಣ್ಣಿಸಲಾಗುತ್ತದೆ. ಇಡೀ ರಾಶಿಚಕ್ರದ ಪೈಕಿ ಅತ್ಯಂತ ಕನಸುಗಾರ (Dream) ರಾಶಿ (Sign) ಎನಿಸಿರುವ ಮೀನ ರಾಶಿ ನೆಪ್ಚೂನ್ ಅಧಿಪತ್ಯಕ್ಕೆ ಒಳಪಟ್ಟಿದೆ. ಇದು ಅಂತಃಪ್ರಜ್ಞೆ ಮತ್ತು ಕಲ್ಪನೆಯನ್ನು (Imagination) ಪ್ರತಿನಿಧಿಸುತ್ತದೆ. ಆಧ್ಯಾತ್ಮಿಕತೆಯೊಂದಿಗೆ ಆಳವಾದ ಬಾಂಧವ್ಯ ಹೊಂದಿರುತ್ತಾರೆ. ತಮ್ಮ ಜೀವನದಲ್ಲಿ ಮುಂದೆ ಎದುರಾಗುವ ಏರಿಳಿತಗಳನ್ನು ಬಹಳ ಸ್ಪಷ್ಟವಾಗಿ ಸೆನ್ಸ್ (Sense) ಮಾಡುತ್ತಾರೆ. ಜೀವನದ ತಿರುವುಗಳು ಮೊದಲೇ ಇವರ ಅರಿವಿಗೆ ಬರುತ್ತವೆ. ಇವರು ತಮ್ಮ ಆಂತರ್ಯದ ದನಿಗೆ ಯಾವತ್ತೂ ಕಿವಿಗೊಡಬೇಕು. ಕ್ರಿಯಾಶೀಲ (Creativity) ಸ್ಫೂರ್ತಿಯಿಂದ ಮುನ್ನಡೆಯಬೇಕು. ಕಲಾತ್ಮಕ ಅಭಿವ್ಯಕ್ತಿ, ಭಾವನಾತ್ಮಕ ಪರಿಪೂರ್ಣತೆ, ಆಧ್ಯಾತ್ಮಿಕ ಬೆಳವಣಿಗೆಯೊಂದಿಗೆ ಇವರು ತಮ್ಮ ಭವಿಷ್ಯದ ಬಗ್ಗೆ ಅರಿವು ಹೊಂದಿರುತ್ತಾರೆ ಎನ್ನುವುದು ಅಚ್ಚರಿಯ ಸಂಗತಿ.
ಸಾವಿಗೆ ಹತ್ತಿರವಾದ ವ್ಯಕ್ತಿಗೆ ಸಿಗುತ್ತೆ ಈ ಸಂಕೇತ!
ವೃಶ್ಚಿಕ (Scorpio)
ವೃಶ್ಚಿಕ ರಾಶಿಯ ಜನರನ್ನು ನಿಗೂಢ ಪರಿವರ್ತನೆಕಾರರು ಎಂದು ಹೇಳಬಹುದು. ಇವರು ಪರಿವರ್ತನೆ (Transformation), ಮರುಹುಟ್ಟನ್ನು ಪ್ರತಿನಿಧಿಸುವ ಪ್ಲೂಟೋ ಗ್ರಹವನ್ನು ಅಧಿಪತಿಯನ್ನಾಗಿ ಹೊಂದಿದ್ದಾರೆ. ಇದು ಶಕ್ತಿ ಮತ್ತು ಪುನರುತ್ಪಾದನೆಯನ್ನು ಸಹ ಪ್ರತಿನಿಧಿಸುತ್ತದೆ. ವೃಶ್ಚಿಕ ರಾಶಿಯ ಜನ ತಮ್ಮ ಜೀವನದಲ್ಲಿ ಬಹಳಷ್ಟು ಖಾಸಗಿ ವಿಕಾಸ ಮತ್ತು ಪರಿವರ್ತನೆ ತರಬಲ್ಲ ಸರಣಿ ಸರಣಿ ಘಟನಾವಳಿಗಳನ್ನು ಎದುರಿಸುತ್ತಾರೆ. ಬಹಳಷ್ಟು ಬದಲಾವಣೆಗಳಿಗೆ (Changes) ಒಳಗಾಗುತ್ತಲೇ ಇರುತ್ತಾರೆ. ತಮ್ಮ ಆಂತರಿಕ ಸ್ಥೈರ್ಯವನ್ನು ನೆಚ್ಚಿಕೊಂಡು ಬದಲಾವಣೆಗಳನ್ನು ಸ್ವೀಕರಿಸಿದರೆ, ಎಷ್ಟು ಬಾರಿ ಧೂಳೀಪಟವಾದರೂ ಮತ್ತೆ ಅದೇ ಶಕ್ತಿಯಿಂದ ಹೊಮ್ಮುವ ತಾಕತ್ತು ಇವರಲ್ಲಿರುತ್ತದೆ. ಹಿಂದಿನಕ್ಕಿಂತ ಹೆಚ್ಚು ಸ್ಥಿರವಾಗಿ ಮೇಲೆದ್ದು ನಿಲ್ಲುತ್ತಾರೆ.