ಚಿನ್ನದ ಆಭರಣ ಕಳೆದು ಹೋಗುವುದು, ಸಿಗುವುದು ಇವು ಶುಭವೋ? ಅಶುಭವೋ?
ಪ್ರತಿಯೊಬ್ಬರೂ ಚಿನ್ನದ ಆಭರಣಗಳನ್ನು ಇಷ್ಟಪಡುತ್ತಾರೆ. ಪ್ರತಿಯೊಬ್ಬರೂ ತಮ್ಮ ಬಳಿ ಸಾಕಷ್ಟು ಚಿನ್ನ ಇರಬೇಕು ಎಂದು ಬಯಸುತ್ತಾರೆ. ಆದರೆ ಈ ಅಮೂಲ್ಯವಾದ ಚಿನ್ನವನ್ನು ಕಳೆದುಕೊಳ್ಳುವುದು ಮತ್ತು ಪಡೆಯುವುದು ಶುಭವೇ ಅಥವಾ ಅಶುಭವೇ?. ಜ್ಯೋತಿಷ್ಯ ತಜ್ಞರಿಂದ ಈ ಬಗ್ಗೆ ತಿಳಿಯಿರಿ.
ಸನಾತನ ಧರ್ಮದಲ್ಲಿ ಚಿನ್ನವನ್ನು ಪೂಜ್ಯ ಮತ್ತು ಮುಖ್ಯವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದು ಲಕ್ಷ್ಮಿ ದೇವಿಗೆ (Goddess Lakshmi) ಸಂಬಂಧಿಸಿದೆ ಎಂದು ನಂಬಲಾಗಿದೆ, ಆದ್ದರಿಂದ ಚಿನ್ನವನ್ನು ಯಾವಾಗಲೂ ಶುಭ ಸಮಯದಲ್ಲಿ ಖರೀದಿಸಬೇಕು ಎಂದು ಹೇಳಲಾಗುತ್ತೆ. ಆದರೆ ನಿಮಗೆ ದಾರಿಯಲ್ಲಿ ಚಿನ್ನ ಬಿದ್ದು ಸಿಕ್ಕರೆ ಅದು ಶುಭವೇ ಅಥವಾ ಅಶುಭವೇ? ಹಾಗೇ, ನೀವು ನಿಮ್ಮ ಚಿನ್ನವನ್ನು ಕಳೆದುಕೊಂಡರೆ, ಅದು ಯಾವ ಪರಿಣಾಮ ಬೀರುತ್ತದೆ ಎಂದು ತಿಳಿಯಿರಿ.
ಒಬ್ಬ ವ್ಯಕ್ತಿಯ ಚಿನ್ನ ಕಳೆದು ಹೋದರೆ ಅದು ಅಶುಭ (bad luck). ಕೇತುವಿನ ಬಲವಾದ ಯೋಗ, ಶನಿಯ ಯೋಗ ಮತ್ತು ರಾಹುವಿನ ಯೋಗವೂ ರೂಪುಗೊಂಡಾಗ ಇದು ಸಂಭವಿಸುತ್ತೆ. ಚಿನ್ನವನ್ನು ಕಳೆದುಕೊಳ್ಳುವಲ್ಲಿ ಮೂರು ಗ್ರಹಗಳ ಮೊತ್ತವಿದೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಚಿನ್ನವನ್ನು ಕಳ್ಳಸಾಗಣೆ ಮಾಡುವವರಿಗೆ, ರಾಹು, ಕೇತು ಮತ್ತು ಶನಿಯ ಯೋಗವೂ ಇದೆ. ಯಾರಾದರೂ ಚಿನ್ನವನ್ನು ಕಳೆದುಕೊಂಡರೆ, ಅವರ ಕೇತು ಪ್ರತಿಕೂಲ, ರಾಹು ಪ್ರತಿಕೂಲ ಮತ್ತು ಶನಿ ಕೂಡ ಪ್ರತಿಕೂಲವಾಗಿರುತ್ತದೆ ಎನ್ನಲಾಗುವುದು.
ಚಿನ್ನ ಕಳೆದುಕೊಳ್ಳುವುದರ ಅರ್ಥ: ಚಿನ್ನದ ನಷ್ಟವನ್ನು ಅಶುಭ ಅಂಶವೆಂದು ಪರಿಗಣಿಸಲಾಗುತ್ತದೆ. ಅಂದರೆ ನಿಮ್ಮ ಯಾವುದೇ ಬೆಲೆಬಾಳುವ ವಸ್ತುಗಳು ಕಳೆದು ಹೋಗುವುದು ಅಶುಭ ಅಂಶವಾಗಿದೆ. ಅದರ ಪರಿಣಾಮಗಳು ಹಲವಾರು ರೀತಿಯಲ್ಲಿ ಕಾಡುತ್ತದೆ. ಅಲ್ಲದೇ ನೀವು ಆ ಪರಿಸ್ಥಿತಿಯಲ್ಲಿ ಅನೇಕ ರೀತಿಯ ವಿಪತ್ತುಗಳು, ಬಿಕ್ಕಟ್ಟುಗಳು, ಸಂಕಟಗಳು, ರೋಗಗಳಿಂದ ಬಳಲುವ ಸಾಧ್ಯತೆ ಹೆಚ್ಚಾಗಿರುತ್ತೆ.
ಚಿನ್ನ ಬಿದ್ದು ಸಿಗೋದು ದೊಡ್ಡ ಆಪತ್ತಿನ ಸಂಕೇತವಾಗಿದೆ: ಚಿನ್ನವನ್ನು ಪಡೆಯುವುದು ಅಂದರೆ, ದಾರಿಯಲ್ಲಿ ಹೋಗುವಾಗ ಚಿನ್ನ ಬಿದ್ದು ಸಿಗೋದು ಶುಭವೋ ಅಶುಭವೋ ಎನ್ನುವ ಯೋಚನೆ ನಿಮ್ಮನ್ನು ಕಾಡಬಹುದು ಅಲ್ವಾ? ಚಿನ್ನ ಬಿದ್ದು ಸಿಗೋದು ಅಂದ್ರೆ ಆ ಸಂದರ್ಭದಲ್ಲಿ ಗುರುವಿನ ಯೋಗ ಮತ್ತು ಸೂರ್ಯನ ಯೋಗ ರೂಪುಗೊಳ್ಳುತ್ತದೆ. ಈ ಕಾರಣದಿಂದಾಗಿ, ಚಿನ್ನದ ಆಭರಣಗಳನ್ನು (Gold Jewellery) ಪಡೆಯಲಾಗುತ್ತದೆ. ಈ ಎರಡೂ ಸಂದರ್ಭಗಳನ್ನು ಅಶುಭ ಅಂಶಗಳು ಎಂದು ಪರಿಗಣಿಸಲಾಗುತ್ತದೆ.
ಚಿನ್ನ ಸಿಗೋದು ಒಂದು ದೊಡ್ಡ ಅಪಘಾತವನ್ನು ಸೂಚಿಸುತ್ತದೆ. ರಸ್ತೆಯಲ್ಲಿ ಚಿನ್ನ ಸಿಗೋದು ಅಸಫಲತೆ ಮತ್ತು ದುರ್ಬಲ ಆತ್ಮವಿಶ್ವಾಸದ ಸಂಕೇತವಾಗಿದೆ. ಇಂತಹ ಸಂದರ್ಭದಲ್ಲಿ ಗುರುವಾರ ಬ್ರಾಹ್ಮಣನಿಗೆ ಚಿನ್ನವನ್ನು ದಾನ ಮಾಡುವ ಮೂಲಕ ನಿಮ್ಮ ಮೇಲೆ ಈ ಗ್ರಹಗಳ ಪ್ರಭಾವವನ್ನು ಕಡಿಮೆ ಮಾಡಬಹುದು.