ಜ್ಯೋತಿಷ್ಯದ ಪ್ರಕಾರ ಈ ಜೂನ್‌ ತಿಂಗಳಿನಲ್ಲಿ ಪ್ರತಿಯೊಬ್ಬ ಜಾತಕನಲ್ಲೂ ಅನೇಕ ಬದಲಾವಣೆಗಳು ಆಗಲು ಸಾಧ್ಯ. ಯಾಕೆಂದರೆ ಈ ತಿಂಗಳಲ್ಲಿ ಎರಡು ಗ್ರಹಣಗಳು ಸಂಭವಿಸಲಿದೆ. ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ ಜೂನ್‌ ತಿಂಗಳು ನಾಲ್ಕು ರಾಶಿಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡುವುದು. ಕಳೆದ ಎರಡು ತಿಂಗಳಿನಲ್ಲಿ ನೀವು ಸಾಕಷ್ಟು ತೊಂದರೆಗಳನ್ನು ಅನುಭವಿಸಿರಬಹುದು. ಈ ಸಂಕಷ್ಟಗಳನ್ನು ದೂರ ಮಾಡುವ ತಿಂಗಳು ಇದಾಗಿದೆ. ಆ ನಾಲ್ಕು ರಾಶಿಚಕ್ರಗಳು ಯಾವುವು ಮತ್ತೆ ಈ ರಾಶಿಯವರಿಗೆ ಏನಾಗುತ್ತದೆ ಎನ್ನುವುದನ್ನು ತಿಳಿಯೋಣ.

ಮಿಥುನ ರಾಶಿ
 ಗ್ರಹಗಳ ರಾಜನಾದ ಸೂರ್ಯನು ನಿಮ್ಮ ರಾಶಿಯನ್ನು ಪ್ರವೇಶಿಸಲಿದ್ದಾನೆ. ರಾಶಿ ಚಕ್ರದ ಅಧಿಪತಿಯು ನಿಮ್ಮ ರಾಶಿಯಲ್ಲಿಯೇ ಸ್ಥಿತನಾಗಿರುವುದರ ಜೊತೆಗೆ ಸೂರ್ಯ ಮತ್ತು ರಾಹುವು ಮಿಥುನ ರಾಶಿಯಲ್ಲಿ ತ್ರಿವಳಿ ಯೋಗವನ್ನು ರಚಿಸುತ್ತಾನೆ. ಇದರಿಂದಾಗಿ ನಿಮ್ಮ ಬುದ್ಧಿವಂತಿಕೆ ಮತ್ತು ಆಲೋಚನಾ ವಿಧಾನವು ಬದಲಾಗುತ್ತದೆ. ಇದರಿಂದ ಒಳ್ಳೆಯ ಫಲಿತಾಂಶವನ್ನು ನೀವು ಪಡೆಯುವಿರಿ. ಇದರೊಂದಿಗೆ ಈ ತಿಂಗಳಲ್ಲಿ ನಿಮ್ಮದೇ ರಾಶಿಚಕ್ರದಲ್ಲಿ ಸೂರ್ಯಗ್ರಹಣವು ಸಂಭವಿಸಲಿದೆ. ಆದ್ದರಿಂದ ತಿಂಗಳ ಕೊನೆಯಲ್ಲಿ ಜಾಗರೂಕರಾಗಿರಬೇಕು. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಮಾತಿನ ಮೇಲೆ ಹಿಡಿತವಿದ್ದರೆ ಒಳ್ಳೆಯದು. ನಿಮ್ಮ ಜೀವನದಲ್ಲಿ ಹೊಸ ಭರವಸೆಯ ಬೆಳಕು ಮೂಡಬಹುದು. ಸಾಕಷ್ಟು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುವಿರಿ. ಕಚೇರಿ ಹಾಗೂ ಕುಟುಂಬ ಎರಡೂ ಕಡೆಯೂ ಯಶಸ್ವೀ ಜೀವನ ನಡೆಸುತ್ತೀರಿ.

ಕಟಕ, ಸಿಂಹ, ಕನ್ಯಾ ರಾಶಿಯವರ ಅದೃಷ್ಟ ಹೀಗಿದೆ ನೋಡಿ! 

​ತುಲಾ ರಾಶಿ
ಈ ತಿಂಗಳಲ್ಲಿ ನಿಮ್ಮ ರಾಶಿಯ ಅಧಿಪತಿಯಾದ ಶುಕ್ರನು ವಕ್ರಗತಿಯನ್ನು ಹೊಂದುತ್ತಾನೆ. ಶುಕ್ರನ ವೇಗವು ಬದಲಾಗುವುದರಿಂದ ನಿಮ್ಮ ಸ್ಥಿತಿಯೂ ಬದಲಾಗುತ್ತದೆ. ಜೂನ್‌ ತಿಂಗಳು ನಿಮಗೆ ವೃತ್ತಿಜೀವನದ ದೃಷ್ಟಿಯಿಂದ ಉತ್ತಮವಾಗಿದೆ. ಸಮಯ ಸಾಕಷ್ಟು ಅನುಕೂಲಕರವಾಗಿದ್ದು ನಿಮ್ಮ ಆಶಯಗಳು ಈಡೇರುತ್ತವೆ. ವೃತ್ತಿಜೀವನದಲ್ಲಿ ಕೆಲವೊಂದು ಸಮಸ್ಯೆಗಳನ್ನೂ ಎದುರಿಸಬಹುದು ಆದರೂ ಯಾವುದೇ ಅಪಾಯದ ಸೂಚನೆಯಿಲ್ಲ. ಕಳೆದ ಹಲವಾರು ತಿಂಗಳುಗಳಿಂದ ನೀವು ಪಡುತ್ತಿರುವ ಪರಿಶ್ರಮ ನಿಮಗೆ ಫಲ ತಂದುಕೊಡಲಿದೆ. ಓಡಾಟದ ಜೊತೆಗೆ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ. 

ನೌಕರಿ ಖಾತರಿ-ಕಿರಿಕಿರಿ ಎಲ್ಲವಕ್ಕೂ ಇಲ್ಲಿ ಉತ್ತರ ಸಿಗುತ್ತೆ ಕಣ್ರೀ! 

​ವೃಷಭ ರಾಶಿ
ಈ ತಿಂಗಳಲ್ಲಿ ನಿಮ್ಮ ರಾಶಿಯ ಅಧಿಪತಿಯಾದ ಶುಕ್ರನ ಚಲನೆಯೂ ಬದಲಾಗುತ್ತದೆ. ಶುಕ್ರನು ಇದೇ ಮನೆಯಲ್ಲಿರುವುದರಿಂದ ನಿಮ್ಮ ಆಸೆ ಮತ್ತು ಹವ್ಯಾಸಗಳು ಪರಿಪೂರ್ಣವಾಗುತ್ತವೆ. ವೃಷಭ ರಾಶಿಯವರಿಗೆ ಈ ತಿಂಗಳು ಆಹ್ಲಾದಕರವಾಗಿರುತ್ತದೆ. ಪ್ರೀತಿಯ ಜೀವನದಲ್ಲಿ ಉತ್ಸಾಹ ಹೆಚ್ಚಾಗುತ್ತದೆ. ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುವುದು. ಕೆಲವು ಒಳ್ಳೆಯ ಸುದ್ದಿಗಳನ್ನು ಈ ತಿಂಗಳಿನಲ್ಲಿ ಕೇಳುವಿರಿ. ಕೆಲವೊಂದು ಅಪೂರ್ಣಗೊಂಡ ಕೆಲಸಗಳನ್ನು ಈ ತಿಂಗಳು ಮುಂದುವರೆಸುವಿರಿ.

ನೀವು ಫ್ಲರ್ಟ್ ಹೌದೋ ಅಲ್ಲವೋ ಅಂತ ನಿಮ್ಮ ರಾಶಿಯೇ ಹೇಳುತ್ತೆ! 

​ಕುಂಭ ರಾಶಿ
ಈ ತಿಂಗಳು ಮಿಥುನ ರಾಶಿಗೆ ಸೂರ್ಯನು ಪ್ರವೇಶಿಸಲಿರುವುದರಿಂದ ನಿಮ್ಮ ರಾಶಿಯಿಂದ ಐದನೇ ಮನೆಯಲ್ಲಿ ಯೋಗ ಉಂಟಾಗಲಿದೆ. ಇದೇ ಮನೆಯಲ್ಲಿ ಬುಧನೂ ಇದ್ದು ನಿಮ್ಮ ಹಣೆಬರಹವನ್ನು ಬಲಪಡಿಸುತ್ತವೆ. ವೃತ್ತಿಜೀವನದಲ್ಲಿ ನಿಮ್ಮ ಕನಸನ್ನು ಈ ತಿಂಗಳು ಪೂರೈಸಬಹುದು. ಮಾನಸಿಕವಾಗಿ ಹಗುರವಾಗಿರುತ್ತೀರಿ. ಯಾವುದೇ ರೀತಿಯ ದೈಹಿಕ ಮತ್ತು ಭಾವನಾತ್ಮಕ ಸಮಸ್ಯೆಗಳು ಇರದು. ವೃತ್ತಿಕ್ಷೇತ್ರದಲ್ಲಿ ನಿಮ್ಮ ಸ್ಥಾನ ಬಲವಾಗಿರುತ್ತದೆ. ಸಹೋದ್ಯೋಗಿಗಳ ಸಹಕಾರವೂ ಸಿಗುವುದು. ಅನೇಕ ಅವಕಾಶಗಳು ಸಿಗುವುದು. ನಿಮ್ಮ ಕಠಿಣ ಪರಿಶ್ರಮವು ಈ ತಿಂಗಳು ಫಲ ನೀಡುತ್ತದೆ. ಈ ಅವಧಿಯಲ್ಲಿ ನೀವು ಅರ್ಧಮ ಶನಿಯಿಂದ ಸ್ವಲ್ಪ ತೊಂದರೆಯನ್ನು ಅನುಭವಿಸುತ್ತಿರಬಹುದು. ಅದು ಕೂಡ ಪರಿಹಾರವಾಗುತ್ತದೆ.