Asianet Suvarna News Asianet Suvarna News

Plants and Zodiac: ಲಕ್ ಕೊರತೆನಾ? 2023ರಲ್ಲಿ ರಾಶಿಗೆ ತಕ್ಕ ಗಿಡ ಬೆಳೆಸಿ ಲಕ್ ಗಳಿಸಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ಗಿಡ – ಮರಗಳು ಕೂಡ ನಮ್ಮ ಅದೃಷ್ಟ ಬದಲಿಸಬಲ್ಲವು ಎನ್ನಲಾಗಿದೆ. ಅನೇಕ ಬಾರಿ ಗ್ರಹಗಳ ದೋಷದಿಂದ ನಮ್ಮ ಏಳ್ಗೆ ಸಾಧ್ಯವಾಗುವುದಿಲ್ಲ. ಅಂಥ ಸಂದರ್ಭದಲ್ಲಿ ರಾಶಿಗೆ ತಕ್ಕಂತೆ ಗಿಡ ಬೆಳೆಸಿ ನಾವು ಶುಭ ಫಲ ಪಡೆಯಬಹುದು.  
 

grow plants according to zodiac sign to get lucky in new year 2023
Author
First Published Dec 7, 2022, 11:11 AM IST

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಪ್ರತಿಯೊಬ್ಬ ವ್ಯಕ್ತಿಯೂ ಗಿಡ – ಮರಗಳನ್ನು ನಡೆಬೇಕು. ಪರಿಸರ ಪ್ರೇಮಿಗಳು ಮಾತ್ರವಲ್ಲ ಜ್ಯೋತಿಷ್ಯದಲ್ಲೂ ಗಿಡ- ಮರಗಳನ್ನು ಬೆಳೆಸುವ ಬಗ್ಗೆ ಸಾಕಷ್ಟು ಮಾಹಿತಿ ಇದೆ. ಧರ್ಮ ಗ್ರಂಥಗಳಲ್ಲಿ ಗಿಡ - ಮರವನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ. ಸುಖ, ಸಂತೋಷಕ್ಕಾಗಿ ಪ್ರತಿಯೊಬ್ಬರೂ ಗಿಡ ಬೆಳೆಸಬೇಕೆಂದು ಗ್ರಂಥಗಳಲ್ಲಿ ಹೇಳಲಾಗಿದೆ. 

ರಾಶಿಗೆ ತಕ್ಕಂತೆ ಮರ (Tree) ಗಳನ್ನು ನೆಡುವುದರಿಂದ ಸಾಕಷ್ಟು ಲಾಭವಿದೆ. ಗ್ರಹ (Planet ) ದೋಷಗಳಿಗೆ ಇದ್ರಿಂದ ಪರಿಹಾರ ಸಿಗುತ್ತದೆ.  ಜೀವನ (Life) ದಲ್ಲಿ ಹೊಸ ಸಾಧನೆಗೆ ಇದು ಸಹಾಯ ಮಾಡುತ್ತದೆ. 2022 ಕಳೆದು ಹೊಸ ವರ್ಷ ಬರ್ತಿದೆ. ಹೊಸ ವರ್ಷದಲ್ಲಿ ಪ್ರಗತಿ ಸಾಧಿಸಬೇಕು, ಸಮಸ್ಯೆಗಳೆಲ್ಲ ದೂರವಾಗಬೇಕು, ಶುಭ ಫಲ ಸಿಗಬೇಕು ಎನ್ನುವವರು 2023ರಲ್ಲಿ ರಾಶಿಗೆ ತಕ್ಕಂತೆ ಗಿಡ ಬೆಳೆಸಿ. ನಾವಿಂದು ಯಾವ ರಾಶಿಯವರು ಯಾವ ಗಿಡ ನೆಡಬೇಕು ಎಂದು ತಿಳಿಸುತ್ತೇವೆ.  

ರಾಶಿಗೆ ಅನುಗುಣವಾಗಿ ಗಿಡ ಬೆಳೆಸಿ :  

ಮೇಷ ರಾಶಿ : ಮೇಷ ರಾಶಿಯ ಜನರು ಈವನದಲ್ಲಿ ಸುಖ, ಸಮೃದ್ಧಿ ಬಯಸಿದ್ದರೆ ನೆಲ್ಲಿಕಾಯಿ ಗಿಡಗಳನ್ನು ನೆಡಬೇಕು. ಕೆಂಪು ಬಣ್ಣದ ಹೂವು ಅಥವಾ ಹಣ್ಣುಗಳಿರುವ ಸಸ್ಯವನ್ನು ನೆಡಬೇಕು. ಗ್ರಹ ದೋಷ ನಿವಾರಣೆಗೂ ಇದು ನೆರವಾಗುತ್ತದೆ.

Yearly Horoscope 2023: ಹೊಸ ವರ್ಷ ಸಿಂಹ ರಾಶಿಗೆ 50 -50

ವೃಷಭ ರಾಶಿ : ಇನ್ನು ವೃಷಭ ರಾಶಿಯವರು 2023ರಲ್ಲಿ ಬಿಳಿ ಬಣ್ಣದ ಹೂವುಗಳು ಮತ್ತು ಹಣ್ಣುಗಳನ್ನು ಬಿಡುವ ಗಿಡವನ್ನು ಬೆಳೆಸಿ. ನೇರಳೆ ಹಣ್ಣಿನ ಗಿಡವನ್ನು ಬೆಳೆಸುವುದು ಕೂಡ ಮಂಗಳಕರ.

ಮಿಥುನ ರಾಶಿ : ಮಿಥುನ ರಾಶಿಯ ಅಧಿಪತಿ ಬುಧನಾಗಿರುವ ಕಾರಣ ಈ ರಾಶಿಯವರು ಬಿದಿರಿನ ಗಿಡ ನೆಡುವುದು ಒಳ್ಳೆಯದು.  ನೀವು ತುಳಸಿ ಗಿಡವನ್ನು ಕೂಡ ಬೆಳೆಸಬಹುದು. ಇದು ನಿಮ್ಮ ಜೀವನದ ಅದೃಷ್ಟವನ್ನು ಬದಲಿಸುತ್ತದೆ.

ಕರ್ಕ ರಾಶಿ : ಕರ್ಕ ರಾಶಿಯವರ ಅದಿಪತಿ ಚಂದ್ರನಾಗಿದ್ದಾನೆ. ಈ ರಾಶಿಯವರು ತುಳಸಿ, ಬೇವು, ನೆಲ್ಲಿಕಾಯಿಯಂತಹ ಔಷಧೀಯ ಗುಣಗಳಿರುವ ಗಿಡಗಳನ್ನು ನೆಡುವುದು ಶುಭ. ಅಶ್ವತ್ಥ ಗಿಡವನ್ನು ಕೂಡ ನೆಟ್ಟು ಅದರ ಆರೈಕೆ ಮಾಡಬಹುದು. ಇದ್ರಿಂದ ಶುಭ ಫಲ ನಿಮ್ಮದಾಗುತ್ತದೆ. 

ಸಿಂಹ ರಾಶಿ : 2023ರಲ್ಲಿ ಸಿಂಗಹ ರಾಶಿಯವರು ಆಲದ ಗಿಡ, ಹಲಸಿನ ಗಿಡ, ಅಂಜೂರದ ಗಿಡವನ್ನು ನೆಟ್ಟರೆ ಅದು ತುಂಬಾ ಮಂಗಳಕರ. ಸಿಂಹ ರಾಶಿಯವರ ಅಧಿಪತಿ ಸೂರ್ಯನಾಗಿರುವ ಕಾರಣ ಅವರು ಈ ಗಿಡ ಬೆಳೆಸಿದ್ರೆ ಉತ್ತಮ ಫಲಿತಾಂಶ ಪಡೆಯುತ್ತಾರೆ.

ಕನ್ಯಾ ರಾಶಿ : ಕನ್ಯಾ ರಾಶಿಯ ಜನರು ಮಲ್ಲಿಗೆ, ಆಲದ ಗಿಡ, ಬಿದಿರು ಮತ್ತು ಬಳ್ಳಿ ಗಿಡಗಳನ್ನು ನೆಟ್ಟರೆ ಒಳ್ಳೆಯದು. ಇದ್ರಿಂದ ಮನೆಯಲ್ಲಿ ಸಂಪತ್ತು ಮತ್ತು ಧಾನ್ಯ ಹೆಚ್ಚಾಗುತ್ತದೆ.

ತುಲಾ ರಾಶಿ : ತುಲಾ ರಾಶಿಯವರು ಪಾಲಾಶ ಗಿಡವನ್ನು ಬೆಳೆಸಬೇಕು. ಇದ್ರಿಂದ ಮನೆಯಲ್ಲಿ ಎಂದೂ ಹಣದ ಕೊರತೆ ಎದುರಾಗುವುದಿಲ್ಲ.  

ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರ  ಅಧಿಪತಿ ಮಂಗಳ ಗ್ರಹವಾಗಿದೆ. ಮಂಗಳ ಗ್ರಹ ಶುಭ ಫಲ ನೀಡಬೇಕು ಎನ್ನುವ ವೃಶ್ಚಿಕ ರಾಶಿಯ ಜನರು ಕೆಂಪು ಬಣ್ಣದ ಹೂವುಗಳು ಮತ್ತು ಹಣ್ಣುಗಳ ಸಸ್ಯಗಳನ್ನು ಬೆಳೆಸಬೇಕು. 

ಧನು ರಾಶಿ : ಧನು ರಾಶಿಯ ಅಧಿಪತಿ ಗುರು. ಈ ರಾಶಿಯ ಜನರು ರಾಳ ( ಅಂಟಿನ ಗಿಡ) ಮತ್ತು ಹಲಸಿನ ಸಸಿಗಳನ್ನು ನೆಡಬೇಕು. ಇದು ಧನು ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡಲು ಸಹಕಾರಿಯಾಗುತ್ತದೆ. 

ಮಕರ ರಾಶಿ :  ಮಕರ ರಾಶಿಯ ಅಧಿಪತಿ ಶನಿಯಾಗಿದ್ದಾನೆ.  ಶನಿದೇವನ ಆಶೀರ್ವಾದ ಪಡೆಯಲು ಮಕರ ರಾಶಿಯ ಜನರು 2023ರಲ್ಲಿ ಶಮಿ, ಹಲಸು,  ಶಾಲ ಗಿಡವನ್ನು ಬೆಳೆಸಿದ್ರೆ ಒಳ್ಳೆಯದು.

ಕುಂಭ ರಾಶಿ :  ಮಕರ ರಾಶಿಯಂತೆ ಕುಂಭ ರಾಶಿಯ ಅಧಿಪತಿ ಶನಿಯಾಗಿದ್ದಾನೆ. ಹಾಗಾಗಿ ಕುಂಭ ರಾಶಿಯವರು ಮಂದಾರ, ಕದಂಬ ಮುಂತಾದ ಗಿಡಗಳನ್ನು ನೆಡಬೇಕು. ಇದ್ರಿಂದ ಶನಿಯ ಕೃಪೆಗೆ ನೀವು ಪಾತ್ರರಾಗಬಹುದು.

New Year 2023: ಹೊಸ ವರ್ಷದಲ್ಲಿ ಈ 5 ರಾಶಿಗಳಿಗೆ ಆಸ್ತಿ ಮಾಡುವ ಅದೃಷ್ಟ

ಮೀನ ರಾಶಿ : ಮೀನ ರಾಶಿಯವರು ಹಳದಿ ಬಣ್ಣದ ಹಣ್ಣು ಮತ್ತು ಹೂವು ಬಿಡುವ ಗಿಡಗಳನ್ನು  ಬೆಳೆಸಬೇಕು. ನೀವು ಮಾವಿನ ಗಿಡವನ್ನು ಬೆಳೆಸಬಹುದು.
 

Follow Us:
Download App:
  • android
  • ios