ಮೇಷ ರಾಶಿಯ ಅಧಿಪತಿ ಗ್ರಹವಾದ ಮಂಗಳ ಗ್ರಹವು ಇದೇ ಡಿಸೆಂಬರ್ 24ರಂದು ರಾಶಿ ಪರಿವರ್ತನೆ ಮಾಡಲಿದೆ. ಮೀನ ರಾಶಿಯಿಂದ ಸ್ವರಾಶಿಯಾದ ಮೇಷ ರಾಶಿಗೆ ಪ್ರವೇಶಿಸಲಿದೆ. ಮೇಷ ಮತ್ತು ವೃಶ್ಚಿಕ ರಾಶಿಯ ಅಧಿಪತಿಯಾದ ಮಂಗಳ ಗ್ರಹವು ಕಟಕ ರಾಶಿಯಲ್ಲಿ ನೀಚ ಸ್ಥಿತಿಯಲ್ಲಿ ಹಾಗೂ ಮಕರ ರಾಶಿಯಲ್ಲಿ ಉಚ್ಛ ಸ್ಥಿತಿಯಲ್ಲಿರುವ ಗ್ರಹವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ ಗ್ರಹದ ಈ ಗೋಚಾರವು ಕೆಲವು ರಾಶಿಯವರಿಗೆ ಲಾಭವನ್ನು ಉಂಟುಮಾಡಿದರೆ, ಮತ್ತೆ ಕೆಲವು ರಾಶಿಯವರಿಗೆ ಸಮಸ್ಯೆಯನ್ನು ತಂದೊಡ್ಡುತ್ತದೆ. ಹಾಗಾದರೆ ಮಂಗಳ ಗ್ರಹದ ಈ ರಾಶಿ ಪರಿವರ್ತನೆಯು ಯಾವ್ಯಾವ ರಾಶಿಯವರಿಗೆ ಯಾವ ಫಲವನ್ನುಂಟು ಮಾಡುತ್ತದೆ? ಎಂಬುದನ್ನು ತಿಳಿಯೋಣ...

ಮೇಷ ರಾಶಿ
ಮೇಷ ರಾಶಿಯವರು ಅಂದುಕೊಂಡದ್ದು ಈಡೇರುವ ಸಮಯ ಇದಾಗಿರುತ್ತದೆ. ಈ ರಾಶಿಯವರಿಗೆ ಸಫಲತೆ ದೊರಕಲಿದೆ. ಮಂಗಳ ಗ್ರಹದ ಈ ರಾಶಿ ಪರಿವರ್ತನೆಯು ಆರ್ಥಿಕ ಲಾಭವನ್ನುಂಟು ಮಾಡುತ್ತದೆ. ಪ್ರೇಮ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಏರು-ಪೇರುಗಳನ್ನು ಎದುರಿಸಬೇಕಾಗುತ್ತದೆ ಎಂದ ಹೇಳಲಾಗುತ್ತದೆ.

ಇದನ್ನು ಓದಿ: ಶನಿ ಸಾಡೇಸಾತ್‌ನಿಂದ ಸಂಕಷ್ಟಕ್ಕೀಡಾಗಿದ್ದರೆ ಹೀಗೆ ಮಾಡಿ.

ವೃಷಭ ರಾಶಿ
ಮಂಗಳನ ರಾಶಿ ಪರಿವರ್ತನೆಯಿಂದ ಈ ರಾಶಿಯವರು ವಾಹನ ಅಥವಾ ಜಮೀನನ್ನು ಖರೀದಿಸುವ ಯೋಗವಿರುತ್ತದೆ. ಕಾರ್ಯಕ್ಷೇತ್ರದಲ್ಲಿ ವಿವಾದಗಳು ಉಂಟಾಗಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಮಂಗಳ ಗ್ರಹದ ಈ ರಾಶಿ ಪರಿವರ್ತನೆಯು ಅತ್ಯಂತ ಶುಭವನ್ನುಂಟು ಮಾಡುತ್ತದೆಂದು ಹೇಳಲಾಗುತ್ತದೆ.  ಆದಾಯ ಹೆಚ್ಚುವುದಲ್ಲದೆ, ಕೆಲಸದಲ್ಲಿ ಸಫಲತೆ ದೊರೆಯಲಿದೆ. ಹೊಸ ವ್ಯಕ್ತಿಗಳ ಪರಿಚಯವು ಯಶಸ್ಸಿಗೆ ದಾರಿ ಮಾಡಿಕೊಡುವುದಲ್ಲದೆ, ಸಮಾಜದಲ್ಲಿ ಗೌರವ ಹೆಚ್ಚಲಿದೆ.

ಕಟಕ ರಾಶಿ
ಕಟಕ ರಾಶಿಯವರಿಗೆ ಮಂಗಳ ಗ್ರಹದ ರಾಶಿ ಪರಿವರ್ತನೆಯು ಶುಭ ಫಲವನ್ನು ನೀಡಲಿದೆ. ಈ ಪರಿವರ್ತನೆಯಿಂದ ಆದಾಯ ಹೆಚ್ಚುವ ಸಂಭವವಿದೆ. ಅಷ್ಟೇ ಅಲ್ಲದೆ ಸಾಮರ್ಥ್ಯವೂ ಹೆಚ್ಚಲಿದೆ.

ಸಿಂಹ ರಾಶಿ
ಈ ರಾಶಿಯವರಿಗೆ ಪರಿಶ್ರಮದ  ಸಂಪೂರ್ಣ ಫಲ ದೊರೆಯಲಿದೆ. ಇದರ ಜೊತೆಗೆ ಆರ್ಥಿಕ ಸ್ಥಿತಿಯು ಉತ್ತಮವಾಗಲಿದೆ.

ಇದನ್ನು ಓದಿ: ಏಕಮುಖಿ ರುದ್ರಾಕ್ಷಿ ಧರಿಸುವುದರಿಂದ ಆಗುವ ಲಾಭಗಳೇನು ಗೊತ್ತಾ..‍! 

ಕನ್ಯಾ ರಾಶಿ
ಮಂಗಳ ಗ್ರಹದ ರಾಶಿ ಪರಿವರ್ತನೆಯು ಕನ್ಯಾ ರಾಶಿಯವರಿಗೆ ಶುಭ ಫಲವನ್ನು ನೀಡಲಿದೆ. ಕಾರ್ಯ ಕ್ಷೇತ್ರದಲ್ಲಿ ಸ್ವಲ್ಪ ಮಟ್ಟಿಗೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸ್ವಾಸ್ಥ್ಯದ ಬಗ್ಗೆ ಸಹ ಕಾಳಜಿ ವಹಿಸುವುದು ಉತ್ತಮ.

ತುಲಾ ರಾಶಿ   
ತುಲಾ ರಾಶಿಯವರಿಗೆ ಮಂಗಳ ಗ್ರಹದ ಈ ಗೋಚಾರವು ಶುಭಫಲವನ್ನು ನೀಡಲಿದೆ. ವ್ಯಾಪರದಲ್ಲಿ ಲಾಭವುಂಟಾಗುತ್ತದೆ. ಉದ್ಯೋಗದಲ್ಲಿರುವವರು ಬಡ್ತಿ ಪಡೆಯುವ ಯೋಗವಿದ್ದು, ಮಂಗಳ ಗ್ರಹದ ರಾಶಿ ಪರಿವರ್ತನೆಯಿಂದ ಆದಾಯವು ಹೆಚ್ಚಲಿದೆ.ವೃಶ್ಚಿಕ ರಾಶಿ
ಮಂಗಳ ಗ್ರಹದ ರಾಶಿ ಪರಿವರ್ತನೆಯಿಂದ ವೃಶ್ಚಿಕ ರಾಶಿಯವರ ಆದಾಯ ಹೆಚ್ಚಲಿದೆ. ಉದ್ಯೋಗ ಲಭಿಸುವ ಯೋಗವು ಸಹ ಉಂಟಾಗಲಿದೆ. ಕುಟುಂಬ ಕಲಹವನ್ನು ಎದುರಿಸುವ ಸಂದರ್ಭ ಬರುವ ಸಾಧ್ಯತೆ ಇದೆ.

ಧನು ರಾಶಿ
ಮಂಗಳ ಗ್ರಹದ ರಾಶಿ ಪರಿವರ್ತನೆಯು ಧನು ರಾಶಿಯವರಿಗೆ ಮಕ್ಕಳ ಕಡೆಯಿಂದ ಲಾಭವನ್ನು ತರುತ್ತದೆ. ಅನಾವಶ್ಯಕ ಖರ್ಚು ಹೆಚ್ಚು ಸಾಧ್ಯತೆ ಇದ್ದು, ಖರ್ಚಿನಲ್ಲಿ ಹಿಡಿತವಿದ್ದರೆ ಉತ್ತಮ.

ಮಕರ ರಾಶಿ
ಮಕರ ರಾಶಿಯವರು ಜಮೀನಿನಲ್ಲಿ ಮನೆ ಕಟ್ಟುವ ಬಗ್ಗೆ ಯೋಚಿಸಿದ್ದರೆ, ಅದನ್ನು ಸದ್ಯಕ್ಕೆ ಮುಂದೂಡುವುದು ಉತ್ತಮ. ಮಂಗಳ ಗ್ರಹದ ರಾಶಿ ಪರಿವರ್ತನೆಯಿಂದ ಕಾರ್ಯ ಕ್ಷೇತ್ರದಲ್ಲಿ ಏರು-ಪೇರುಗಳನ್ನು ಎದುರಿಸಬೇಕಾಗಿ ಬರುತ್ತದೆ. ಜಾಗರೂಕತೆಯಿಂದ ಕಾರ್ಯ ನಿರ್ವಹಿಸಿದರೆ ಉತ್ತಮ.

ಇದನ್ನು ಓದಿ: ವಾಸ್ತು ಶಾಸ್ತ್ರದಂತೆ ಈ ಉಡುಗೊರೆ ಕೊಟ್ಟರೆ ಸಂಬಂಧ ಕೆಡುತ್ತೆ! 

ಕುಂಭ ರಾಶಿ
ಮಂಗಳ ಗ್ರಹದ ರಾಶಿ ಪರಿವರ್ತನೆಯು ಕುಂಭ ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ಅರ್ಧಕ್ಕೆ ನಿಲ್ಲಿಸಿದ ಕೆಲಸಗಳು ಪೂರ್ಣಗೊಳ್ಳುತ್ತವೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ.

ಮೀನ ರಾಶಿ
ಮೀನ ರಾಶಿಯವರಿಗೆ ಮಂಗಳ ಗ್ರಹದ ರಾಶಿ ಪರಿವರ್ತನೆಯು ಮಿಶ್ರ ಪರಿಣಾಮವನ್ನು ನೀಡಲಿದೆ. ಯಶಸ್ಸು ಸಿಗುವ ಯೋಗವಿದೆ. ಹಾಗೆಯೆ ಆರ್ಥಿಕತೆಯ ಮೇಲೆ ಸ್ವಲ್ಪ ಮಟ್ಟಿನ ಒತ್ತಡ ಬರುವ ಸಾಧ್ಯತೆ ಇದ್ದು, ಜಾಗರೂಕರಾಗಿರುವುದು ಉತ್ತಮ.