Financial success by date of birth: ನಿಮ್ಮ ಜನ್ಮಸಂಖ್ಯೆ ನಿಮ್ಮ ಸಂಪತ್ತಿನ ರಹಸ್ಯವೇ?
ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ಮೂಲಾಂಕಗಳನ್ನು ಹೊಂದಿರುವ ಜನರು ಆರ್ಥಿಕವಾಗಿ ಶೀಘ್ರವಾಗಿ ಸಬಲರಾಗುತ್ತಾರೆ. 1, 3, 5, 6, ಮತ್ತು 8ನೇ ಮೂಲಾಂಕದವರು ತಮ್ಮ ನಾಯಕತ್ವ, ಸಮಯಪ್ರಜ್ಞೆ, ಮತ್ತು ಕಠಿಣ ಪರಿಶ್ರಮದಂತಹ ಗುಣಗಳಿಂದ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸಂಪತ್ತನ್ನು ಗಳಿಸುತ್ತಾರೆ.

ಸಂಖ್ಯಾಶಾಸ್ತ್ರ
ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿಯೊಂದು ಸಂಖ್ಯೆ ತನ್ನದೇ ಆದ ಅದಮ್ಯ ಶಕ್ತಿಯನ್ನು ಹೊಂದಿರುತ್ತದೆ. ಕೆಲವು ಸಂಖ್ಯೆ ಅಥವಾ ಮೂಲಾಂಕ ಹೊಂದಿರುವ ಜನರು ಆರ್ಥಿಕ ಸಬಲರಾಗಿರುತ್ತಾರೆ. ಈ ಮೂಲಾಂಕ ದಿನದಂದು ಜನಿಸಿದವರು ತುಂಬಾ ಕ್ರಿಯಾಶೀಲರಾಗಿದ್ದು, ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರು ಎಂದಿಗೂ ಅದೃಷ್ಟವನ್ನು ನಂಬಿ ಕುಳಿತುಕೊಳ್ಳುವುದಿಲ್ಲ. ಯಾವ ಮೂಲಾಂಕದವರು ಶೀಘ್ರವಾಗಿ ಆರ್ಥಿಕ ಪರಿಸ್ಥಿತಿ ಸಾಧಿಸುತ್ತಾರೆ ಎಂಬುದರ ಮಾಹಿತಿ ಇಲ್ಲಿದೆ.
ಮೂಲ ಸಂಖ್ಯೆ 1 (1, 10, 19, 28)
1ನೇ ಮೂಲಾಂಕದಲ್ಲಿ ಜನಿಸಿದವರು ಹುಟ್ಟಿನಿಂದಲೇ ನಾಯಕತ್ವ ಗುಣವನ್ನು ಹೊಂದಿರುತ್ತಾರೆ. ಯಾವುದೇ ಕೆಲಸದಲ್ಲಿಯೂ ನಿರ್ಭೀತರಾಗಿರುವ ಇವರು, ಹಣ ಸಂಪಾದಿಸುವಲ್ಲಿ ನಿಪುಣರಾಗಿರುತ್ತಾರೆ. ಅವಕಾಶಗಳಿಗಾಗಿ ಕಾಯುವ ಬದಲಾಗಿ ಅದನ್ನು ಹುಡುಕುವ ಪ್ರಯತ್ನದಲ್ಲಿರುತ್ತಾರೆ. ಈ ಮೂಲಕ ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳುತ್ತಾರೆ.
1ನೇ ಮೂಲಾಂಕದವರ ಪ್ರಮುಖ ಲಕ್ಷಣಗಳು
ತಮ್ಮ ಕೆಲಸದ ಮೇಲೆ ಅಚಲವಾದ ನಂಬಿಕೆ ಹೊಂದಿರುತ್ತಾರೆ.
ನಿರ್ಧಾರ ತೆಗೆದುಕೊಳ್ಳುವ ಗುಣ ಹೊಂದಿರುತ್ತಾರೆ.
ಸ್ಥಾನ ಮತ್ತು ಅಧಿಕಾರ ಶೀಘ್ರವಾಗಿ ಪಡೆದುಕೊಳ್ಳುತ್ತಾರೆ.
ವ್ಯವಹಾರ, ನಿರ್ವಹಣೆ, ಮಾಧ್ಯಮ ಮತ್ತು ರಾಜಕೀಯದಲ್ಲಿಯೂ ಗುರುತಿಸಿಕೊಳ್ಳುತ್ತಾರೆ.
ಕಠಿಣ ಪರಿಶ್ರಮದಿಂದ ಗುರುತಿಸಿಕೊಳ್ಳುತ್ತಾರೆ.
ಮೂಲ ಸಂಖ್ಯೆ 3 (3,12,21,30)
3 ನೇ ಸಂಖ್ಯೆಯನ್ನು ಹೊಂದಿರುವರು ಸಹ ಅತ್ಯಂತ ಸೂಕ್ಷ್ಮವಾದ ಸಮಯಪ್ರಜ್ಞೆ ಹೊಂದಿದ್ದು, ಎಲ್ಲಾ ಕಡೆಯೂ ಸಂಪರ್ಕವನ್ನು ಹೊಂದಿರುತ್ತಾರೆ. ಎಲ್ಲಾ ಮೂಲಗಳಿಂದಲೂ ತಮಗೆ ಬೇಕಾದ ವಿಷಯಗಳನ್ನು ಪಡೆದುಕೊಳ್ಳುವ ಸಾಮರ್ಥ್ಯ ಇವರಿಗಿರುತ್ತದೆ. ಈ ಲಕ್ಷಣ ಇವರನ್ನು ಕಡಿಮೆ ಸಮಯದಲ್ಲಿ ಶ್ರೀಮಂತರನ್ನಾಗಿ ಮಾಡುತ್ತದೆ.
3ನೇ ಮೂಲಾಂಕದವರ ಪ್ರಮುಖ ಲಕ್ಷಣಗಳು
ಸಮಯಕ್ಕೆ ಸರಿಯಾದ ವ್ಯಕ್ತಿಗಳನ್ನು ಇವರು ಸಂಪರ್ಕಿಸುತ್ತಾರೆ
ಸೂಕ್ತ ಸಮಯಕ್ಕೆ ಜಾಣ್ಮೆಯ ನಿರ್ಧಾರ
ಸಮಯವನ್ನು ತನ್ನ ಅನುಕೂಲಕ್ಕೆ ಲಾಭದಾಯಕವಾಗಿ ಬಳಸಿಕೊಳ್ಳುವ ಗುಣ
ಆದಾಯ ಹೆಚ್ಚಳವಾಗುವ ಸಣ್ಣ ಮೂಲವನ್ನು ಸಹ ಬಳಕೆ ಮಾಡೋದು
ಮೂಲ ಸಂಖ್ಯೆ 5 (5,14,23)
ಸಂಖ್ಯಾಶಾಸ್ತ್ರದಲ್ಲಿ, 5ನೇ ಸಂಖ್ಯೆಯನ್ನು ಹಣ ಮಾಡುವ ಅಂಕಿ ಎಂದು ಪರಿಗಣಿಸಲಾಗುತ್ತದೆ. ಈ ಮೂಲಾಂಕದವರು ಸ್ಥಿರವಾದ ಹಣದ ಹರಿವನ್ನು ತರುವ ಮೂರು ವಿಶೇಷ ಗುಣಗಳನ್ನು ಹೊಂದಿರುತ್ತದೆ. ಐದು ಮೂಲಾಂಕದವರನ್ನು ಲಕ್ಷ್ಮೀ ಪುತ್ರರೆಂದು ಪರಿಗಣಿಸಲಾಗುತ್ತದೆ.
5ನೇ ಮೂಲಾಂಕದವರ ಪ್ರಮುಖ ಲಕ್ಷಣಗಳು
ಯಾವುದೇ ರೀತಿಯ ಅಪಾಯವನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಈ ಧೈರ್ಯದಿಂದಲೇ ಶ್ರೀಮಂತರಾಗುತ್ತಾರೆ
ಮಾರುಕಟ್ಟೆಯ ಬಗ್ಗೆ ಉತ್ತಮ ತಿಳುವಳಿಕೆ ಹೊಂದಿರುತ್ತಾರೆ
ಬದಲಾಗುತ್ತಿರುವ ವಿಷಯಗಳೊಂದಿಗೆ ಬದಲಾಗುತ್ತಾರೆ. ಬದಲಾವಣೆ ಮೂಲಕ ಆದಾಯದ ಹೊಸ ಮೂಲಗಳನ್ನು ಸೃಷ್ಟಿಸಿಕೊಳ್ಳುತ್ತಾರೆ.
ಹಣಕಾಸು, ವ್ಯಾಪಾರ, ಮಾರ್ಕೆಟಿಂಗ್, ಮಾರಾಟ ಮತ್ತು ವ್ಯವಹಾರಗಳಲ್ಲಿ ತ್ವರಿತವಾಗಿ ಹಣ ಗಳಿಸುತ್ತಾರೆ.
ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಜನರೊಂದಿಗೆ ನಿಕಟವಾದ ಸಂಪರ್ಕ ಹೊಂದಿರುತ್ತಾರೆ.
ಮೂಲ ಸಂಖ್ಯೆ 6 (6,15,24)
ಸಂಖ್ಯಾಶಾಸ್ತ್ರದ ಪ್ರಕಾರ, ಹಣ ಗಳಿಸುವ ವಿಷಯಕ್ಕೆ ಬಂದಾಗ, ಸಂಖ್ಯೆ 6 ಇರುವವರು ಕಠಿಣ ಪರಿಶ್ರಮದ ಗುಣವನ್ನು ಹೊಂದಿರುತ್ತಾರೆ. ಈ ಗುಣದಿಂದಲೇ ಸಮಾಜದಲ್ಲಿ ಗುರುತಿಸಿಕೊಂಡು ಜೊತೆಗೆ ಇತರರ ಮೇಲೆ ಪ್ರಭಾವ ಬೀರುತ್ತಾರೆ. ಮೂಲಾಂಕ 6ರ ಜನರು ಎಂದಿಗೂ ಶಾರ್ಟ್‌ಕಟ್ ಮೇಲೆ ನಂಬಿಕೆ ಇರಿಸಲ್ಲ.
6ನೇ ಮೂಲಾಂಕದವರ ಪ್ರಮುಖ ಲಕ್ಷಣಗಳು
ಸೃಜನಶೀಲ ಆದಾಯದ ಮೂಲಗಳನ್ನು ಹೊಂದಿರುತ್ತಾರೆ.
ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಪಡೆದುಕೊಳ್ಳುತ್ತಾರೆ
ಜನರ ಮೇಲೆ ಉತ್ತಮ ಪ್ರಭಾವ ಬೀರುತ್ತಾರೆ
ರಿಯಲ್ ಎಸ್ಟೇಟ್, ಕಲೆ, ಫ್ಯಾಷನ್, ಮಾಧ್ಯಮ ಮತ್ತು ವಿನ್ಯಾಸ ಕ್ಷೇತ್ರಗಳಲ್ಲಿ ಅಪಾರ ಯಶಸ್ಸನ್ನು ಕಾಣುವ ಸಾಧ್ಯತೆಯಿದೆ.
ಹಣವು ಬಹಳ ಸುಲಭವಾಗಿ ಬರುತ್ತದೆ.
ಮೂಲ ಸಂಖ್ಯೆ 8 (8,17,26)
ಸಂಖ್ಯಾಶಾಸ್ತ್ರದ ಪ್ರಕಾರ, 8 ನೇ ಸಂಖ್ಯೆಯನ್ನು ಹೊಂದಿರುವವರು ವೇಗವಾಗಿ ಗಳಿಸುವ ವರ್ಗಕ್ಕೆ ಸೇರುವುದಿಲ್ಲ, ಆದರೆ ಅವರು ತಮ್ಮ ಗುರಿಗಳ ಮೇಲೆ ಗಮನಹರಿಸಿರುತ್ತಾರೆ. ಈ ಒಂದು ಗುಣದಿಂದ 8ನೇ ಮೂಲಾಂಕದವರು ಗಮನಾರ್ಹ ಗಳಿಕೆಯ ಬೆಳವಣಿಗೆಯನ್ನು ಸಾಧಿಸಬಹುದು.
8ನೇ ಮೂಲಾಂಕದವರ ಪ್ರಮುಖ ಲಕ್ಷಣಗಳು
28-35 ವರ್ಷಗಳ ನಂತರ ಆದಾಯದಲ್ಲಿ ಹೆಚ್ಚಳ
ಕಠಿಣ ಪರಿಶ್ರಮ ಮತ್ತು ಶಿಸ್ತಿನ ಮೂಲಕ ಒಬ್ಬರು ಉತ್ತಮ ಯಶಸ್ಸನ್ನು ಸಾಧಿಸಬಹುದು.
ದೀರ್ಘಾವಧಿಯಲ್ಲಿ ಹೆಚ್ಚು ಹಣ ಗಳಿಸಿ.
8ನೇ ಮೂಲಾಂಕದವರು ಅತ್ಯಧಿಕ ತಾಳ್ಮೆ ಹೊಂದಿರುತ್ತಾರೆ

