Astrology and dreams : ಬೆಳಗಿನ ಜಾವ ಬೀಳೋ ಕನಸುಗಳು ನಿಜವಾಗ್ತಾವಾ?
ಸ್ವಪ್ನ ಶಾಸ್ತ್ರದಲ್ಲಿ ಕನಸಿಗೆ ಇರುವ ಅರ್ಥವನ್ನು ತಿಳಿಸಲಾಗಿದೆ. ನಿತ್ಯದ ಯಾವ ಅವಧಿಯಲ್ಲಿ ಬಿದ್ದ ಕನಸು ಏನನ್ನು ಸೂಚಿಸುತ್ತದೆ, ಅದಕ್ಕಿರುವ ಅರ್ಥವೇನು ಎಂಬುದರ ಬಗ್ಗೆ ಸಹ ಇದರಲ್ಲಿ ತಿಳಿಸಲಾಗಿದೆ. ಹಾಗಾಗಿ ಯಾವ ಸಮಯದಲ್ಲಿ ಬಿದ್ದ ಕನಸು ನಿಜವಾಗುತ್ತದೆ ಎಂಬುದನ್ನು ತಿಳಿಯೋಣ..
ಕನಸಿನ (Dream) ಬಗ್ಗೆ ತಿಳಿಸುವ ಸ್ವಪ್ನ ಶಾಸ್ತ್ರವು (Swapna shastra) ಜ್ಯೋತಿಷ್ಯ ಶಾಸ್ತ್ರದ (Astrology) ಭಾಗವಾಗಿದೆ. ಬೆಳಗಿನ ಜಾವದಲ್ಲಿ ಬೀಳುವ ಕನಸು ನನಸಾಗುತ್ತದೆ (real) ಎಂದು ಹೇಳುವುದನ್ನು ಕೇಳಿರುತ್ತೇವೆ. ಆದರೆ ರಾತ್ರಿ (Night) ಬಿದ್ದ ಕನಸು, ಬೆಳಗಿನ ಹೊತ್ತು ಮಲಗಿದ್ದಾಗ ಬೀಳುವ ಕನಸಿಗೂ ಅರ್ಥವಿದೆ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ. ಪ್ರತಿ ಕನಸಿಗೂ ಒಂದಲ್ಲ ಒಂದು ಅರ್ಥವಿರುತ್ತದೆ ಎನ್ನುವುದರ ಜೊತೆಗೆ ಅವುಗಳು ಯಾವ ಸಮಯದಲ್ಲಿ ಬೀಳುತ್ತವೆ ಎಂಬುದು ಸಹ ಅಷ್ಟೇ ಮುಖ್ಯವಾಗುತ್ತವೆ.
ಹೌದು. ದಿನ ಹಾಗೂ ರಾತ್ರಿಯ ಬೇರೆ ಬೇರೆ ಸಮಯದಲ್ಲಿ (Timings) ಬೀಳುವ ಕನಸುಗಳು ನೀಡುವ ಸೂಚನೆಗಳ (Instructions) ಬಗ್ಗೆ ತಿಳಿಯೋಣ.
ನಮ್ಮ ಸುಪ್ತಾವಸ್ಥೆಯಲ್ಲಿ ಅಂದರೆ ಮಲಗಿದ್ದಾಗ (Sleep) ಕನಸು ಬೀಳುತ್ತದೆ. ಕನಸುಗಳು ಭವಿಷ್ಯದ (Future) ವಿಚಾರಗಳ ಬಗ್ಗೆ ಸೂಚನೆಯನ್ನು ನೀಡುತ್ತವೆ. ಸ್ವಪ್ನ ಶಾಸ್ತ್ರದಲ್ಲಿ ಎಲ್ಲಾ ರೀತಿಯ ಶುಭ (Good) ಅಶುಭ (Bad) ಕನಸುಗಳು ನೀಡುವ ಸಂಕೇತದ ಬಗ್ಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಕೇವಲ ಬೆಳಗಿನ ಜಾವದಲ್ಲಿ ಬೀಳುವ ಕನಸುಗಳಷ್ಟೇ ನಿಜವಾಗುವುದಿಲ್ಲ ಮತ್ತು ಭವಿಷ್ಯ ವಿಚಾರಗಳ ಸಂಕೇತಗಳಾಗಿರುವುದಿಲ್ಲ. ರಾತ್ರಿ ಬೀಳುವ ಕನಸು ಸಹ ಹಲವಾರು ಸಂಕೇತಗಳನ್ನು ಸೂಚಿಸುತ್ತದೆ. ಹಾಗಾದರೆ ಆ ಸಂಕೇತಗಳ ಬಗ್ಗೆ ತಿಳಿಯೋಣ...
ಇದನ್ನು ಓದಿ: Mental Illness And Astrology: ಡಿಪ್ರೆಶನ್, ಆತ್ಮಹತ್ಯೆಗಳಿಗೆ ಈ ಗ್ರಹಗಳು ಕಾರಣ!
ನಿಜವಾಗುವ ಕನಸುಗಳಿವು : (Dreams that come true)
ಯಾವುದೇ ಅವಧಿಯಲ್ಲಿ ಬಿದ್ದ ಕನಸಾದರೂ ಸರಿ ಅವುಗಳಲ್ಲಿ ಕೆಲವು ನಿಜವಾಗುತ್ತವೆ ಮತ್ತೆ ಕೆಲವು ನಿಜವಾಗುವುದಿಲ್ಲ. ಅಂದರೆ ಕೆಲವು ಕನಸುಗಳು ಫಲ ನೀಡುತ್ತವೆ, ಇನ್ನು ಕೆಲವು ಕನಸುಗಳು ಯಾವುದೇ ಪರಿಣಾಮವನ್ನು (Effects) ಬೀರುವುದಿಲ್ಲ. ಹಾಗಾಗಿ ಕನಸು ಬೀಳುವ ಸಮಯದ ಆಧಾರದ ಮೇಲೆ ಆ ಕನಸು ನಿಜವಾಗುವುದೇ ಇಲ್ಲವೇ ಎಂಬ ಬಗ್ಗೆ ಸ್ವಪ್ನ ಶಾಸ್ತ್ರದಲ್ಲಿ ವಿವರಿಸಲಾಗಿದೆ.
• ರಾತ್ರಿ (Night) 10ರಿಂದ 12 ಗಂಟೆಯ ಅವಧಿಯಲ್ಲಿ ಬಿದ್ದ ಕನಸಿನಿಂದ ಜೀವನದಲ್ಲಿ ಯಾವುದೇ ಪರಿಣಾಮಗಳು ಉಂಟಾಗುವುದಿಲ್ಲ. ಈ ಕನಸುಗಳು ಸಾಮಾನ್ಯವಾಗಿ ದಿನದಲ್ಲಿ (Day) ನಡೆದಿರುವ ಘಟನೆಗಳನ್ನು ಆಧರಿಸಿರುತ್ತವೆ.
• ರಾತ್ರಿ 12 ಗಂಟೆಯಿಂದ 3 ಗಂಟೆಯ ಸಮಯದಲ್ಲಿ ಬಿದ್ದ ಕನಸು ನಿಜವಾಗುವ ಸಂಭವ ಹೆಚ್ಚಿರುತ್ತದೆ. ಈ ಅವಧಿಯಲ್ಲಿ ಬಿದ್ದ ಕನಸು ನಿಜವಾಗಲು ಒಂದು ವರ್ಷದ (Year) ಅವಧಿ ಬೇಕಾಗುತ್ತದೆ ಎಂದು ಹೇಳಲಾಗುತ್ತದೆ.
• ಬ್ರಾಹ್ಮೀ ಮುಹೂರ್ತದಲ್ಲಿ (Brahmi muhurta) ಅಂದರೆ ಬೆಳಗಿನ ಜಾವ 3 ರಿಂದ 5 ಗಂಟೆಯ ಅವಧಿಯಲ್ಲಿ ಬಿದ್ದ ಕನಸು ನಿಜವಾಗುತ್ತದೆ ಎಂದು ಹೇಳಲಾಗುತ್ತದೆ. ಈ ಕನಸುಗಳು (Dream) 1 ರಿಂದ 6 ತಿಂಗಳ ಅವಧಿಯೊಳಗೆ ಫಲಪ್ರದವಾಗುತ್ತವೆ ಎಂದು ಹೇಳಲಾಗುತ್ತದೆ.
• ಹಗಲಿನಲ್ಲಿ ಬಿದ್ದ ಕನಸಿಗೆ ಯಾವುದೇ ಅರ್ಥವಿರುವುದಿಲ್ಲ ಎಂದು ಸ್ವಪ್ನ ಶಾಸ್ತ್ರ ತಿಳಿಸುತ್ತದೆ. ಅಷ್ಟೇ ಅಲ್ಲದೆ ಶಾಸ್ತ್ರದ ಪ್ರಕಾರ ಬೆಳಗಿನ ಸಮಯದಲ್ಲಿ ಮಲಗುವುದು ನಿಷಿದ್ಧವೆಂದು ಹೇಳಲಾಗುತ್ತದೆ.
ಇದನ್ನು ಓದಿ: Personality Traits: ಶುಕ್ರವಾರ ಜನಿಸಿದವರ ವ್ಯಕ್ತಿತ್ವವೇ ಆಕರ್ಷಕ
ಬೆಳಗಿನ ಜಾವದಲ್ಲಿ ಬಿದ್ದ ಕನಸು ನಿಜವಾಗಲು ಕಾರಣವೇನು...?
ಬೆಳಗಿನ ಜಾವದಲ್ಲಿ ವ್ಯಕ್ತಿಯು ತನ್ನ ಆತ್ಮಕ್ಕೆ (Soul) ಹತ್ತಿರವಾಗಿರುತ್ತಾನೆ. ಅಂದರೆ ಸುಪ್ತಾವಸ್ಥೆಗೆ ತಲುಪಿರುತ್ತಾನೆ. ಅಂಥಹ ಸಂದರ್ಭದಲ್ಲಿ ದೈವಿಕ ಶಕ್ತಿಗಳು ಜಾಗೃತವಾಗಿರುತ್ತವೆ. ಆ ಶಕ್ತಿಯ ಪ್ರಭಾವ ಭೂಮಿಯ ಎಲ್ಲ ಜೀವ ಮತ್ತು ನಿರ್ಜೀವ ವಸ್ತುಗಳ ಮೇಲಾಗುತ್ತದೆ. ಹಾಗಾಗಿ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ದೇವರ ಆರಾಧನೆ ಮಾಡಬೇಕೆಂದು ಹೇಳಲಾಗುತ್ತದೆ. ಆದ ಕಾರಣ ಆ ಸಮಯದಲ್ಲಿ ಬಿದ್ದ ಕನಸು ನನಸಾಗುವುದು ಹೆಚ್ಚು ಎಂದು ಸ್ವಪ್ನ ಶಾಸ್ತ್ರ ತಿಳಿಸುತ್ತದೆ.