ಹಣ ಯಾರಿಗೆ ಬೇಡ? ಆದರೆ ಎಲ್ಲರಿಗೂ ಲಕ್ಷ್ಮಿದೇವಿ ಅನುಗ್ರಹಿಸುವುದಿಲ್ಲ. ಅದೃಷ್ಟವಂತರನ್ನು ಗುರುತಿಸಲು ಜ್ಯೋತಿಷ್ಯದಲ್ಲಿ ಕೆಲವು ಚಿಹ್ನೆಗಳಿವೆ. ಅವುಗಳಾವುವು? ಲಕ್ಷ್ಮಿಯ ಅನುಗ್ರಹಕ್ಕೆ ನೀವು ಪಾತ್ರರಾಗುತ್ತೀರಿ ಎಂಬುದನ್ನು ತಿಳಿಸುವ ಚಿಹ್ನೆಗಳು ಯಾವುವು?
ಹಣ ಯಾರಿಗೆ ಬೇಡ? ಎಲ್ಲರಿಗೂ ಬೇಕು. ಚಿನ್ನದ ಬಟ್ಟಲಲ್ಲೇ ಊಟ ಮಾಡುವ ಕುಬೇರ ಕೂಡ ಹಣವನ್ನು ಬೇಡ ಅನ್ನುವುದಿಲ್ಲ. ಆದರೆ ಎಲ್ಲರಿಗೂ ಲಕ್ಷ್ಮಿದೇವಿ ಅನುಗ್ರಹ ಮಾಡುವುದಿಲ್ಲ. ಲಕ್ಷಾಂತರ ಜನರಲ್ಲಿ ಯಾರೋ ಒಬ್ಬ ಅದೃಷ್ಟಶಾಲಿಗೆ ಲಕ್ಷ್ಮಿದೇವಿ ಒಲಿಯುತ್ತಾಳೆ. ನೀವು ಅದೃಷ್ಟಶಾಲಿಯೋ ಅಲ್ಲವೋ ಹೇಗೆ ಗೊತ್ತಾಗುತ್ತದೆ? ಅದಕ್ಕಂತಲೇ ಕೆಲವು ಚಿಹ್ನೆಗಳನ್ನು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಮುಂಜಾನೆ ಎದ್ದಾಗ, ಕನಸಿನಲ್ಲಿ, ರಾತ್ರಿ ಮಲಗುವ ಮುನ್ನ, ಓಡಾಡುವಾಗ- ಹೀಗೆ ಆಗಾಗ ನೀವು ಈ ಸೂಚನೆಳನ್ನು ಗಮನಿಸಬಹುದು. ಲಕ್ಷ್ಮಿದೇವಿಯನ್ನು ಒಲಿಸಲು ಸೂಕ್ತ ನಡೆಗಳನ್ನೂಅನುಸರಿಸಬಹುದು. ಹಾಗಾದರೆ ಲಕ್ಷ್ಮಿಯ ಅನುಗ್ರಹಕ್ಕೆ ನೀವು ಪಾತ್ರರಾಗುತ್ತೀರಿ ಎಂಬುದನ್ನು ತಿಳಿಸುವ ಚಿಹ್ನೆಗಳು ಯಾವುವುದು? ಇಲ್ಲಿದೆ ನೋಡಿ.
ಗೂಬೆಯ ದರ್ಶನ
ಗೂಬೆಯ ದರ್ಶನ ಎಲ್ಲೇ ಆಗಲಿ ಶುಭವೇ ಆಗಿದೆ. ಅದು ನಿಮ್ಮ ಮನೆಯ ಮುಂದಿನ ತೋಟದಲ್ಲಾಗಲೀ, ಅಥವಾ ಯಾರೋ ಸಾಕಿದ್ದಾಗಲೀ, ಅಥವಾ ಅದು ನಿಮ್ಮ ಕನಸಿನಲ್ಲಿಯೇ ಬರಲಿ, ಅದು ಶುಭ. ಗೂಬೆ ಅವಲಕ್ಷಣವಲ್ಲ, ಅದನ್ನು ಹಾಗೆಂದುಕೊಂಡು ದೂರ ಮಾಡಬೇಡಿ. ಅದು ಲಕ್ಷ್ಮಿ ದೇವಿಯ ವಾಹನ ಕೂಡ.
ಕಬ್ಬು, ತಾವರೆ ಹೂವಿನ ದರ್ಶನ
ನೀವು ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಮುಂದೆ ಕಬ್ಬು ಅಥವಾ ತಾವರೆ ಹೂವು ಕಂಡರೆ ಅದು ಸಂಪತ್ತಿನ ಆಗಮನದ ಸಂಕೇತ. ಯಾಕೆಂದರೆ ಕಮಲದ ಹೂವು ಲಕ್ಷ್ಮಿದೇವಿಯ ಪೀಠ. ಲಕ್ಷ್ಮಿಯ ಪೂಜೆಯಲ್ಲಿ ಕಮಲದ ಹೂ ಬೇಕೇ ಬೇಕು. ದೇವಿಯ ಪೂಜೆಯ ಸಂದರ್ಭದಲ್ಲಿ ಒಂದು ತಾವರೆ ಹೂವನ್ನು ಸಮರ್ಪಿಸಿದರೂ ಆಕೆ ಪ್ರಸನ್ನಳಾಗುತ್ತಾಳೆ. ಇದಲ್ಲದೆ, ನವಿಲುಗಳು, ತೆಂಗಿನ ಕಾಯಿ, ಹೂವುಗಳು ಅಥವಾ ಹೂವಿನ ಹಾರಗಳನ್ನು ಕಾಣುವುದು ಸಹ ಶುಭ ಸಂಕೇತ ಎಂದು ಹೇಳಲಾಗುತ್ತದೆ.
ಶುಭವಾದ ಶಬ್ದಗಳು
ನಿಮ್ಮ ಕನಸಿನಲ್ಲಿ ದೇವಾಲಯದಲ್ಲಿ ಶಂಖ ಊದುವ, ಗಂಟೆ ಬಾರಿಸುವ, ನಗಾರಿ ಬಾರಿಸುವ, ಭಜನೆಯ ತಾಳಾಥವಾ ಚಕ್ರತಾಳ ನುಡಿಸುವ, ಹಾರ್ಮೋನಿಯಂ ನುಡಿಸುವ, ತಬಲಾ ಬಾರಿಸುವ ಶಬ್ದವನ್ನು ನೀವು ಕೇಳಿದರೆ ಅಥವಾ ಶಂಖವನ್ನು ಊದುವುದನ್ನು ನೋಡಿದರೆ, ನೀವು ಶೀಘ್ರದಲ್ಲೇ ಹಣವನ್ನು ಪಡೆಯಲಿದ್ದೀರಿ ಎಂದು ಸೂಚಿಸುತ್ತದೆ.
ಹಚ್ಚ ಹಸಿರಿನ ನೋಟ
ನಿಮ್ಮ ಕನಸಿನಲ್ಲಿ ಪ್ರತಿ ರಾತ್ರಿ ಹಸಿರು ಉದ್ಯಾನಗಳು ಮತ್ತು ನಿಮ್ಮ ಸುತ್ತಲೂ ಹಸಿರು ಮರಗಳು ಇದ್ದರೆ, ನೀವು ಶೀಘ್ರದಲ್ಲೇ ಹಣವನ್ನು ಪಡೆಯಲಿದ್ದೀರಿ ಎಂದರ್ಥ ಮತ್ತು ಹಸಿರಿನ ಮಧ್ಯೆ ಶಿವ ಅಥವಾ ಶಿವಲಿಂಗವನ್ನು ನೋಡಿದರೆ, ನೀವು ಶೀಘ್ರದಲ್ಲೇ ಶ್ರೀಮಂತರಾಗಲಿದ್ದೀರಿ ಎಂದು ಅದು ಸ್ಪಷ್ಟಪಡಿಸುತ್ತದೆ.
ಶುಭ್ರ ಬಿಳಿಯ ಹಸು
ನೀವು ಮನೆಯಿಂದ ಹೊರಬಂದ ತಕ್ಷಣ ಶುಭ್ರ ಬಿಳಿಯ ಹಸುವನ್ನು ನೋಡಿದರೆ, ಅದನ್ನು ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ, ವಿಶೇಷವಾಗಿ ಬಿಳಿ ಬಣ್ಣದ ಹಸುವನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕಪ್ಪು ಬಣ್ಣದ ಹಸುವನ್ನು ನೋಡುವುದರಿಂದ ಯಾವುದೇ ವಿಶೇಷ ಪ್ರಯೋಜನವಿಲ್ಲ.
ದೆವ್ವಗಳಿಂದ ಪಾರಾಗಲು ಈ ಜಪಮಾಲೆ ಧರಿಸಬೇಕಂತೆ!
ಕುದುರೆ ಅಥವಾ ಆನೆ
ನಿಮ್ಮ ಕನಸಿನಲ್ಲಿ ಕುದುರೆ, ಗೋಧಿ ಅಥವಾ ಆನೆಯನ್ನು ನೋಡಿದರೆ, ಮುಂಬರುವ ಸಮಯದಲ್ಲಿ ನೀವು ಹೆಚ್ಚಿನ ಹಣವನ್ನು ಪಡೆಯಬಹುದು, ತಾಯಿ ಲಕ್ಷ್ಮಿಯ ಅಪಾರ ಆಶೀರ್ವಾದ ನಿಮ್ಮ ಮೇಲಿದೆ ಎಂದು ಅರ್ಥ ಮಾಡಿಕೊಳ್ಳಿ.
ಜೇಬಿನಿಂದ ಹಣ ಬಿದ್ದರೆ
ನೀವು ಹಣದ ವಿಷಯಕ್ಕಾಗಿ ಮನೆಯಿಂದ ಹೊರಗೆ ಹೋಗುತ್ತಿದ್ದರೆ ಮತ್ತು ನಿಮ್ಮ ಜೇಬಿನಿಂದ ಹಣ ಬಿದ್ದರೆ, ನೀವು ಮಾಡುತ್ತಿರುವ ಕೆಲಸವು ಯಶಸ್ವಿಯಾಗಲಿದೆ ಎಂದು ಅದು ಹೇಳುತ್ತದೆ. ಹಣ ಬಿದ್ದು ಹೋಯಿತಲ್ಲಾ ಎಂದು ದುಃಖಿಸಬೇಡಿ. ಅದು ನಿಮಗೆ ಹಲವು ಪಟ್ಟು ಆಗಿ ಮರಳಿ ಬರುತ್ತದೆ.
ತಲೆ ಬಾಚಿದ ಕೂದಲನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಬಿಡಬೇಡಿ; ಮಾಟ ಮಂತ್ರ ಮಾಡುವವರಿಂದ ಎಚ್ಚರ!
