ತಪ್ಪು ಸಮಯದಲ್ಲಿ ಈ ಕಾರ್ಯಗಳ ಮಾಡಿದರೆ ಭಾರೀ ನಷ್ಟ!

Astrology Tips in Kannada: ಹಿಂದೂ ಸಂಸ್ಕೃತಿಯಲ್ಲಿ ಪ್ರತಿ ಆಚರಣೆಗೂ ವಿಶೇಷ ಮಹತ್ವವಿದೆ. ಅವುಗಳಿಗೆ ನೀತಿ – ನಿಯಮಗಳನ್ನು ಮಾಡಲಾಗಿರುತ್ತದೆ. ಮುಂಜಾನೆ ಎದ್ದು ಹೊಸ್ತಿಲಿಗೆ ರಂಗವಲ್ಲಿ ಹಾಕುವುದನ್ನು ಆ ಸಮಯದಲ್ಲಿಯೇ ಮಾಡಬೇಕು. ಅದನ್ನು ಮಧ್ಯಾಹ್ನ ಮಾಡಿದರೆ ಕೆಡುಕು ಉಂಟಾಗುತ್ತದೆ. ಹೀಗೆ ಯಾವ ಆಚರಣೆಯಿಂದ ಏನಾಗುತ್ತದೆ ಎಂಬುದನ್ನು ತಿಳಿಯುವುದು ಮುಖ್ಯವಾಗುತ್ತದೆ. ಹಾಗಾಗಿ ಗರುಡಪುರಾಣದಲ್ಲಿ ತಿಳಿಸಿದ ಈ ಕೆಲವು ನಿಯಮಗಳ ಬಗ್ಗೆ ತಿಳಿಯೋಣ... 

Do not do these things on wrong time...

ಹಿಂದೂ ಧರ್ಮದಲ್ಲಿ ಎಲ್ಲ ಆಚರಣೆಗಳಿಗೂ (Ritual) ವಿಶೇಷವಾದ ಮಹತ್ವವಿದೆ. ನಿತ್ಯವೂ ಬೆಳಗ್ಗೆ ಎದ್ದಾಗಿನಿಂದ ರಾತ್ರಿ (night ) ಮಲಗುವವರೆಗೆ ಅನೇಕ ಉತ್ತಮವಾದ ನಿಯಮಗಳನ್ನು (Rules) ಗರುಡ ಪುರಾಣದಲ್ಲಿ (Garuda purana ) ತಿಳಿಸಿಕೊಡಲಾಗಿದೆ. ಅಷ್ಟೇ ಅಲ್ಲದೆ ನಮ್ಮ ಶಾಸ್ತ್ರ ಪುರಾಣಗಳನ್ನು ಅವುಗಳ ಬಗ್ಗೆ ಉಲ್ಲೇಖವಿದೆ. ಹಾಗಾಗಿ ಯಾವ ಕೆಲಸಗಳನ್ನು ಯಾವ ಸಮಯಕ್ಕೆ (Time) ಮಾಡಬೇಕೋ ಆ ಸಮಯದಲ್ಲಿಯೇ ಮಾಡಬೇಕು. ಅದು ಶುಭಕಾರ್ಯವೇ (Good) ಆದರೂ ಸಮಯ ತಪ್ಪಿದರೆ, ಅದರಿಂದ ನಷ್ಟ (Loss) ಸಂಭವಿಸುತ್ತದೆ.

ಧರ್ಮ ಶಾಸ್ತ್ರದಲ್ಲಿ ಗರುಡ ಪುರಾಣಕ್ಕೆ ವಿಶೇಷವಾದ ಸ್ಥಾನವಿದೆ. ಗರುಡ ಪುರಾಣದಲ್ಲಿ ಜನ್ಮದಿಂದ (Birth) ಆರಂಭಿಸಿ ಮೃತ್ಯುವರೆಗಿನ ವಿವರಣೆ ಇದೆ. ಇದರ ಜೊತೆಗೆ ಮೃತ್ಯುವಿನ (Death)  ನಂತರ ಆತ್ಮದ ಚಲನೆಯ ಬಗ್ಗೆಯೂ ಸಹ ಎಲ್ಲ ವಿಚಾರಗಳನ್ನು ತಿಳಿಸಿಕೊಡಲಾಗಿದೆ. ಕುಟುಂಬದಲ್ಲಿ (Family) ಯಾರದ್ದಾದರೂ ಮೃತ್ಯು ಸಂಭವಿಸಿದರೆ ಆ ಸಮಯದಲ್ಲಿ ಗರುಡ ಪುರಾಣವನ್ನು ಓದುವ ಪರಿಪಾಠವಿದೆ. ಅಷ್ಟೇ ಅಲ್ಲದೆ ಅದರಲ್ಲಿ ತಿಳಿಸಿದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಗರುಡ ಪುರಾಣದಲ್ಲಿ ಜನ್ಮ ಮೃತ್ಯು ಮತ್ತು ಆತ್ಮಗಳ (Soul ) ಬಗ್ಗೆ ಹೇಳಿರುವುದರ ಜೊತೆಗೆ ಸುಖ (Happiness) ಮತ್ತು ಸಮೃದ್ಧ ಜೀವನವನ್ನು (Life) ನಡೆಸುವ ಬಗೆಯನ್ನು ಸಹ ತಿಳಿಸಿದ್ದಾರೆ. ಮಾಡುವ ಕಾರ್ಯ ಶುಭವೇ ಆದರೂ ಅದನ್ನು ಸಮಯಕ್ಕೆ ಸರಿಯಾಗಿ ಮಾಡಬೇಕು ಎಂಬುದರ ಬಗ್ಗೆ ಗರುಡ ಪುರಾಣದಲ್ಲಿ ಸವಿವರವಾಗಿ ತಿಳಿಸಿದ್ದಾರೆ. ಅವುಗಳ ಬಗ್ಗೆ ತಿಳಿಯೋಣ.

ಶುಭ ಕಾರ್ಯವೂ ಅಶುಭವಾಗೋದು ಯಾವಾಗ?  
ಗರುಡ ಪುರಾಣ ಹೇಳಿರುವ ಪ್ರಕಾರ ಉತ್ತಮ ಕಾರ್ಯಗಳನ್ನು ಸರಿಯಾದ ಸಮಯಕ್ಕೆ ಮಾಡಬೇಕು. ಅದೇ ಕೆಲಸವನ್ನು ತಪ್ಪು ಸಮಯದಲ್ಲಿ (Wrong time ) ಮಾಡಿದರೆ ಶುಭ ಕಾರ್ಯ ಅಶುಭವಾಗಿ ಪರಿಣಮಿಸುತ್ತದೆ. ಇದರಿಂದ ಅಶುಭ ಫಲ (Bad effect ) ದೊರೆಯುತ್ತದೆ. ಅಂದರೆ ಬಡತನ (Poverty), ರೋಗ - ರುಜಿನಗಳು (Diseases) ಮಾನಸಿಕ ಅಸ್ವಸ್ಥತೆ (Mental Health) ಹೀಗೆ ಮುಂತಾದ ಸಮಸ್ಯೆಗಳು ಕಾಡಲಾರಂಭಿಸುತ್ತದೆ. ಹಾಗಾಗಿ ಇವುಗಳಿಂದ ಪಾರಾಗಬೇಕೆಂದರೆ ಶಾಸ್ತ್ರ ಹೇಳಿದ ಪ್ರಕಾರವೇ ಆಯಾ ಕೆಲಸವನ್ನೇ ಆಯಾ ಸಮಯಕ್ಕೆ ಸರಿಯಾಗಿ ಮಾಡಬೇಕು.

ತುಳಸಿಗೆ ದೀಪ (Tulasi ): 
ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದು (Planting) ಅದರ ಸೇವೆ ಮಾಡುವುದು ಮತ್ತು ಅದಕ್ಕೆ  ಪೂಜೆ ಸಲ್ಲಿಸುವುದು (Pooja) ಉತ್ತಮ ಕಾರ್ಯವಾಗಿದೆ. ಅಷ್ಟೇ ಅಲ್ಲದೆ ತುಳಸಿ ಗಿಡಕ್ಕೆ ಪೂಜೆ ಸಲ್ಲಿಸುವುದು ಮತ್ತು ನೀರು ಹಾಕುವುದು ಸಹ ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಆದರೆ, ಅದಕ್ಕೂ ಒಂದು ನಿಯಮವಿದೆ ಮತ್ತು ಸಮಯವಿದೆ. ಸಂಜೆಯ ಹೊತ್ತು (Evening time) ತುಳಸಿಗೆ ನೀರು (Water) ಹಾಕುವುದು ಮತ್ತು ತುಳಸಿಯನ್ನು ಕೀಳುವುದು (Plucking) ಮಾಡಬಾರದು. ಸಂಜೆಯ ಹೊತ್ತು ತುಳಸಿ ಮುಂದೆ ದೀಪ ಹಚ್ಚಿಡಬೇಕು (Lightning). ದೀಪ ಆರಿದ ನಂತರ ಅದನ್ನು ತೆಗೆದಿಡಬೇಕು. ತುಳಸಿಗೆ ನೀರು ಹಾಕಿ ಅದನ್ನು ಮುಟ್ಟುವುದರಿಂದ ಪರಿವಾರಕ್ಕೆ ಸಂಕಷ್ಟ (Difficulties) ಎದುರಾಗುತ್ತದೆ ಎಂದು ಹೇಳಲಾಗುತ್ತದೆ. 

ಇದನ್ನು ಓದಿ: ಕೆಟ್ಟ ದೃಷ್ಟಿ ಬಿದ್ದರೆ ಹೀಗೆ ಪರಿಹಾರ ಮಾಡಿಕೊಳ್ಳಿ..!

ಬಡತನ ಬರಲು ಇದೇ ಕಾರಣ 
ಸಂಜೆ ಸೂರ್ಯಾಸ್ತದ (Sunset ) ಸಮಯದಲ್ಲಿ ಮತ್ತು ಸೂರ್ಯಾಸ್ತದ ನಂತರ ಮನೆಯಲ್ಲಿ ಕಸ ಗುಡಿಸಬಾರದು. ಹಾಗೆ ಮಾಡುವುದರಿಂದ ಲಕ್ಷ್ಮೀದೇವಿ ಕೋಪಗೊಳ್ಳುತ್ತಾಳೆ. ಇದರಿಂದ ಮನೆಗೆ ಬಡತನ ಉಂಟಾಗುತ್ತದೆ. ಹಾಗಾಗಿ ಸಂಜೆ ಹತ್ತು ಕಸ ಗುಡಿಸುವಾಗ ಸಮಯದ ಬಗ್ಗೆ ಗಮನವಿರಬೇಕು.

ಈ ದಿನ ಇದನ್ನು ಮಾಡಬೇಡಿ 
ಮಂಗಳವಾರ, ಗುರುವಾರ ಮತ್ತು ಶನಿವಾರ ಕೂದಲು ಕತ್ತರಿಸುವುದು, ಉಗುರು ಕತ್ತರಿಸುವುದನ್ನು ಮಾಡಬಾರದು. ಇದರಿಂದ ಕುಟುಂಬದವರಿಗೆ ಸಂಕಷ್ಟ ಉಂಟಾಗುತ್ತದೆ. ಹಾಗಾಗಿ ಈ ಕೆಲಸಗಳಿಗೆ ಭಾನುವಾರ, ಸೋಮವಾರ, ಬುಧವಾರ ಮತ್ತು ಶುಕ್ರವಾರ ಒಳ್ಳೆಯದೆಂದು ಹೇಳಲಾಗುತ್ತದೆ. 

ಸಂಜೆ ಹೊತ್ತು ಇದನ್ನು ಯಾರಿಗೂ ಕೊಡಬೇಡಿ
ಸಂಜೆಯ ಹೊತ್ತು ಹಾಲು, ಮೊಸರು, ಉಪ್ಪು ಮತ್ತು ಹುಳಿ ಪದಾರ್ಥಗಳನ್ನು ಯಾರಿಗೂ ದಾನವಾಗಿ ನೀಡಬಾರದು. ಹೀಗೆ ಮಾಡುವುದರಿಂದ ಲಕ್ಷ್ಮಿ ಮನೆಯಿಂದ ಹೊರಟು ಹೋಗುತ್ತಾಳೆ ಎಂದು ಶಾಸ್ತ್ರ ಹೇಳುತ್ತದೆ. ಹಾಗಾಗಿ ಸಂಜೆ ಹೊತ್ತು ಈ ವಸ್ತುಗಳನ್ನು ಇತರರಿಗೆ ಕೊಡಬಾರದು. 

ಇದನ್ನು ಓದಿ: ಆಂಜನೇಯನ ಈ ಫೋಟೋ ಮನೆಯಲ್ಲಿದ್ದರೆ ಜಗಳ ಜಾಸ್ತಿ

ಗರುಡ ಪುರಾಣದಲ್ಲಿ ಈ ಎಲ್ಲ ನಿಯಮಗಳನ್ನು ತಿಳಿಸಿಕೊಟ್ಟಿದ್ದಾರೆ. ಇದರಂತೆಯೇ ಮಾಡುವ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಿದರೆ ಪೂರ್ಣ ಫಲ ಪ್ರಾಪ್ತಿ ಸಾಧ್ಯವಿದೆ. ಅಲ್ಲದೆ ಬೆಳಗ್ಗೆ ಮಾಡುವ ಕೆಲಸವನ್ನು ಮಧ್ಯಾಹ್ನ, ಮಧ್ಯಾಹ್ನ ಮಾಡುವ ಕೆಲಸವನ್ನು ಸಾಯಂಕಾಲ ಹೀಗೆ ಸಮಯಕ್ಕೆ ಸರಿಯಾಗಿ ಮಾಡದೆ ತಪ್ಪು ಸಮಯದಲ್ಲಿ (Time) ಮಾಡಿದರೆ ಅದರಿಂದ ಉಂಟಾಗುವ ದೋಷದಿಂದ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಗರುಡ ಪುರಾಣದಲ್ಲಿ ತಿಳಿಸಿದ ನಿಯಮಗಳ ಪಾಲನೆಯಿಂದ ಸುಖ ಮತ್ತು ಸಮೃದ್ಧ ಜೀವನ ಸಾಧ್ಯವಿದೆ.

Latest Videos
Follow Us:
Download App:
  • android
  • ios