ಜೂನ್‌ನಲ್ಲಿ ಐದು ಗ್ರಹ ಸಂಕ್ರಮಣ; ಎಲ್ಲ ರಾಶಿಗಳ ಮೇಲೂ ಪರಿಣಾಮ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಗ್ರಹದ ಸಂಕ್ರಮಣವು ವ್ಯಕ್ತಿಯ ಜೀವನದ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ. ಈ ಪರಿಣಾಮಗಳು ಶುಭ ಮತ್ತು ಅಶುಭ ಎರಡೂ ಆಗಿರಬಹುದು. ಜೂನ್‌ನಲ್ಲಿ ಯಾವ ಗ್ರಹಗಳು ರಾಶಿಚಕ್ರವನ್ನು ಬದಲಾಯಿಸಲಿವೆ ಎಂದು ತಿಳಿಯೋಣ.
ಜ್ಯೋತಿಷ್ಯ(astrology)ದಲ್ಲಿ, ಗ್ರಹಗಳ ರಾಶಿ ಬದಲಾವಣೆ ಅಥವಾ ಯಾವುದೇ ರೀತಿಯ ಚಲನೆ(transit)ಗೆ ವಿಶೇಷ ಮಹತ್ವವಿದೆ. ಏಕೆಂದರೆ, ಒಂದು ಗ್ರಹವು ರಾಶಿಚಕ್ರ(zodiac sign)ವನ್ನು ಬದಲಾಯಿಸಿದಾಗ, ಅದರ ಪರಿಣಾಮ ಎಲ್ಲಾ 1 2 ರಾಶಿಗಳ ಜನರ ಜೀವನದ ಮೇಲೆ ಕಾಣಬಹುದು. ಇದು ಒಳ್ಳೆಯ ಅಥವಾ ಕೆಟ್ಟ ಯಾವುದೇ ರೀತಿಯ ಪರಿಣಾಮವನ್ನು ಬೀರಬಹುದು. ವರ್ಷದ ಆರನೇ ತಿಂಗಳು ಜೂನ್‌ನಲ್ಲಿ ಪ್ರಾರಂಭವಾಗಲಿದೆ. ಈ ತಿಂಗಳಲ್ಲಿ ಕೆಲವು ಗ್ರಹಗಳು ರಾಶಿಚಕ್ರವನ್ನು ಬದಲಾಯಿಸಲಿವೆ. ಜೂನ್(June)ನಲ್ಲಿ ಯಾವ ಗ್ರಹಗಳು ರಾಶಿಚಕ್ರವನ್ನು ಬದಲಾಯಿಸಲಿವೆ ಎಂದು ತಿಳಿಯೋಣ.
ಬರಲಿರುವ ಜೂನ್ ತಿಂಗಳಲ್ಲಿ 5 ಗ್ರಹಗಳು ರಾಶಿಚಕ್ರವನ್ನು ಬದಲಾಯಿಸಲಿವೆ. ಆ ಐದು ಗ್ರಹಗಳು ಯಾವೆಲ್ಲ ನೋಡೋಣ.
ಮಂಗಳನ ರಾಶಿ ಪರಿವರ್ತನೆ(Mars Transit)- ಜೂನ್ 2, 2022
ಜೂನ್ 2ರಂದು, ಮಂಗಳ ಗ್ರಹವು ಮಿಥುನದಿಂದ ಕರ್ಕಾಟಕ ರಾಶಿಗೆ ಚಲಿಸಲಿದೆ. ಜ್ಯೋತಿಷ್ಯದಲ್ಲಿ, ಮಂಗಳ ಗ್ರಹವನ್ನು ಕಠಿಣ ಪರಿಶ್ರಮ, ಶೌರ್ಯ, ಶಕ್ತಿ, ಧೈರ್ಯ ಮತ್ತು ಶಕ್ತಿಯ ಅಂಶವೆಂದು ಪರಿಗಣಿಸಲಾಗಿದೆ. ಮಂಗಳನ ಈ ಚಲನೆಯು ಹಲವು ರಾಶಿಗಳಿಗೆ ಶುಭ ಉಂಟು ಮಾಡಲಿದೆ.
ಕೊಡಗು: ಬೈಗುಳದ ಹಬ್ಬ, ಕಾಡಿನ ಮಕ್ಕಳು ಆಚರಣೆ ಮಾಡುವ ವಿಶಿಷ್ಟ ಹಬ್ಬ
ಜೂನ್ 3 ರಂದು ಬುಧ ಹಿಮ್ಮುಖ ಚಲನೆ(Mercury retrograde)
ಜೂನ್ 2ರಂದು ಮಂಗಳ ಗ್ರಹದ ರಾಶಿ ಬದಲಾವಣೆಯ ನಂತರ, ಬುಧ ಗ್ರಹವು ಜೂನ್ 3ರಂದು ಹಿಮ್ಮುಖ ಚಲನೆ ಆರಂಭಿಸಲಿದೆ. ಜೂನ್ 3ರಂದು ಬುಧ ಗ್ರಹವು ವೃಷಭ ರಾಶಿಯಲ್ಲಿ ಹಿಮ್ಮುಖ ಚಲನೆ ಆರಂಭಿಸಲಿದೆ. ಯಾವುದೇ ಗ್ರಹವು ಹಿಮ್ಮುಖವಾದಾಗ, ನೇರವಾಗಿ ಚಲಿಸುವ ಬದಲು, ಅದು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತದೆ. ವ್ಯಕ್ತಿಯ ಜಾತಕದಲ್ಲಿ ಬುಧ ಗ್ರಹವು ಬಲವಾಗಿದ್ದರೆ, ವ್ಯಕ್ತಿಯು ಶಿಕ್ಷಣ, ವೃತ್ತಿ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿಯನ್ನು ಪಡೆಯುತ್ತಾನೆ. ಜಾತಕದಲ್ಲಿ, ಬುಧ ಗ್ರಹವನ್ನು ಮಾತು, ಬುದ್ಧಿವಂತಿಕೆ, ವಿವೇಚನೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಅಂಶವೆಂದು ಪರಿಗಣಿಸಲಾಗುತ್ತದೆ.
ಜೂನ್ 15ರಂದು ಸೂರ್ಯ ಸಂಕ್ರಮಣ(Sun Transit)
ಜೂನ್ 15ರಂದು, ಸೂರ್ಯ ಸಂಕ್ರಮಣ ನಡೆಯಲಿದೆ. ಈ ಸಮಯದಲ್ಲಿ, ಸೂರ್ಯನು ವೃಷಭ ರಾಶಿಯಿಂದ ಮಿಥುನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ಬಲವಾದ ಸೂರ್ಯನನ್ನು ಹೊಂದಿರುವ ವ್ಯಕ್ತಿಯು ಗೌರವ ಮತ್ತು ಖ್ಯಾತಿಯನ್ನು ಪಡೆಯುತ್ತಾನೆ. ಅದೇ ಸಮಯದಲ್ಲಿ, ಸೂರ್ಯನು ದುರ್ಬಲವಾಗಿದ್ದಾಗ, ವ್ಯಕ್ತಿಯ ಆರೋಗ್ಯ, ಪ್ರತಿಷ್ಠೆ ಮತ್ತು ಪ್ರಕಾಶಮಾನತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ನೀವು ಈ ರಾಶಿಯವರಾದರೆ ದುಡ್ಡು ಉಳಿಸೋ ಜಾಯಮಾನವಲ್ಲ ಬಿಡಿ!
ಜೂನ್ 20ರಂದು ಗುರು ಗೋಚಾರ(Jupiter Transit)
ಜೂನ್ 20ರಂದು, ಗುರುವು ಕುಂಭ ರಾಶಿಯಲ್ಲಿ ಹಿಮ್ಮುಖ ಮಾಡಲಿದೆ. ಗುರು ಗ್ರಹವನ್ನು ಸಂಪತ್ತು, ವೈಭವ, ವೈವಾಹಿಕ ಜೀವನ, ಮಕ್ಕಳು ಮತ್ತು ಶಿಕ್ಷಣ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗುತ್ತದೆ. ಗುರುವು ಜಾತಕದಲ್ಲಿ ಬಲವಾಗಿದ್ದಾಗ, ವ್ಯಕ್ತಿಯು ಎಲ್ಲ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುತ್ತಾನೆ.
ಶುಕ್ರ ಸಂಕ್ರಮಣ(Venus Transit), ಜೂನ್ 22
ಶುಕ್ರವು ಜೂನ್ 22ರಂದು ಕರ್ಕಾಟಕ ರಾಶಿಯಲ್ಲಿ ಸಾಗಲಿದೆ. ಈ ಅವಧಿಯಲ್ಲಿ, ಶುಕ್ರ ಗ್ರಹವು ಮಿಥುನ ರಾಶಿಯಿಂದ ಕರ್ಕಾಟಕ ರಾಶಿಯನ್ನು ಪ್ರವೇಶಿಸುತ್ತದೆ. ಶುಕ್ರ ಗ್ರಹವನ್ನು ಭೌತಿಕ ಆನಂದದ ಅಂಶವೆಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಶುಕ್ರ ದುರ್ಬಲವಾಗಿದ್ದರೆ, ವ್ಯಕ್ತಿಯು ಆರ್ಥಿಕ ಬಿಕ್ಕಟ್ಟನ್ನು ಅನುಭವಿಸುತ್ತಾನೆ. ಅದೇ ಸಮಯದಲ್ಲಿ, ಶುಕ್ರ ಗ್ರಹವು ಬಲವಾಗಿದ್ದಾಗ, ವ್ಯಕ್ತಿಯು ಸಂತೋಷ, ಸಂಪತ್ತು ಮತ್ತು ಖ್ಯಾತಿಯ ಹೆಚ್ಚಳವನ್ನು ಪಡೆಯುತ್ತಾನೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.