Asianet Suvarna News Asianet Suvarna News

Garuda Purana: ಈ 4 ವಿಷಯಗಳು ಮನುಷ್ಯನ ಅವನತಿಗೆ ಕಾರಣವಾಗಬಹುದು, ಎಚ್ಚರ!

ಮನುಷ್ಯನ ಅವನತಿಗೆ ಕಾರಣವಾಗುವ ಆತನ ಸ್ವಭಾವಗಳು, ಹವ್ಯಾಸಗಳು ಯಾವೆಲ್ಲ ಎಂಬುದನ್ನು ವಿಷ್ಣುವು ಗರುಡ ಪುರಾಣದಲ್ಲಿ ತಿಳಿಸಿದ್ದಾನೆ. ಈ ಗುಣಗಳಿಂದ ದೂರವಿದ್ದಷ್ಟೂ ಜೀವನದಲ್ಲಿ ಯಶಸ್ಸು, ಸಂತೋಷ ನಿಮ್ಮದಾಗುತ್ತದೆ. 

These 4 things can cause the downfall of man know what Garuda Purana says skr
Author
First Published Dec 5, 2022, 12:04 PM IST

ಗರುಡ ಪುರಾಣವು ಸನಾತನ ಧರ್ಮದ 18 ಮಹಾಪುರಾಣಗಳಲ್ಲಿ ಒಂದಾಗಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ವ್ಯಕ್ತಿಯ ಮರಣದ ನಂತರ ಗರುಡ ಪುರಾಣವನ್ನು ಪಠಿಸಲಾಗುತ್ತದೆ. ವ್ಯಕ್ತಿಯ ಮರಣದ ನಂತರ ಏನಾಗುತ್ತದೆ ಎಂಬುದನ್ನು ಗರುಡ ಪುರಾಣದಲ್ಲಿ ವಿಷ್ಣುವು ತನ್ನ ವಾಹನ ಗರುಡನಿಗೆ ವಿವರಿಸಿದ್ದಾನೆ. ಅದರಂತೆ,  ಹಸಿವು ಮತ್ತು ಬಾಯಾರಿಕೆಯಿಂದ ಬಳಲುತ್ತಿರುವ ಆತ್ಮವು 47 ದಿನಗಳ ಕಾಲ ನಿರಂತರವಾಗಿ ನಡೆಯುವ ಮೂಲಕ ಯಮಲೋಕವನ್ನು ತಲುಪುತ್ತದೆ. ಒಬ್ಬ ವ್ಯಕ್ತಿಯ ಮರಣದ ನಂತರ ಅವನ ಆತ್ಮವು ಆ ಮನೆಯಲ್ಲಿ 13 ದಿನಗಳವರೆಗೆ ಇರುತ್ತದೆ ಮತ್ತು ಆ ಆತ್ಮಕ್ಕೆ ಗರುಡ ಪುರಾಣವನ್ನು ಹೇಳಲಾಗುತ್ತದೆ.

ಗರುಡ ಪುರಾಣ(Garuda Puran)ದ ಪ್ರಕಾರ, ಮನುಷ್ಯನ ಕೆಲವು ಅಭ್ಯಾಸಗಳು ಅವನನ್ನು ಅವನತಿಯತ್ತ ಕೊಂಡೊಯ್ಯುತ್ತವೆ. ಈ ಅಭ್ಯಾಸಗಳನ್ನು ಸಮಯಕ್ಕೆ ಬಿಡದಿದ್ದರೆ, ವ್ಯಕ್ತಿಯು ಬಡತನದ ಕಡೆಗೆ ಚಲಿಸಲು ಪ್ರಾರಂಭಿಸುತ್ತಾನೆ. ಸ್ವಲ್ಪ ಸಮಯದಲ್ಲೇ ಅವನು ತನ್ನದೆಲ್ಲವನ್ನೂ ಕಳೆದುಕೊಳ್ಳುತ್ತಾನೆ. ಕನಿಷ್ಠ ಪಕ್ಷ ತಾನು ಸಂಪಾದಿಸಿದ ಜನರನ್ನು ಕಳೆದುಕೊಂಡು ತನ್ನ ಗುಣಗಳಿಗಾಗಿ ಪಶ್ಚಾತ್ತಾಪ ಪಡುವ ಸ್ಥಿತಿಗೆ ತಲುಪುತ್ತಾನೆ. ವಿಷ್ಣುವು ಗರುಡ ಪುರಾಣದಲ್ಲಿ ಹೇಳಿರುವ ಮನುಷ್ಯನ ಅವನತಿಗೆ ಕಾರಣವಾಗುವ ಅಂಥ ಅಭ್ಯಾಸಗಳು ಯಾವೆಲ್ಲ ನೋಡೋಣ..

ಈ ಅಭ್ಯಾಸಗಳಿಂದ ದೂರವಿರಿ
ಅಹಂ(Ego):
ಗರುಡ ಪುರಾಣದ ಪ್ರಕಾರ ಜೀವನದಲ್ಲಿ ಯಾವತ್ತೂ ಯಾವುದರ ಬಗ್ಗೆಯೂ ಅಹಂಕಾರ ಪಡಬಾರದು. ಅಹಂಕಾರವು ಬುದ್ಧಿಯನ್ನು ಕೆಡಿಸುತ್ತದೆ. ಒಬ್ಬ ವ್ಯಕ್ತಿ ಸಮಾಜದಿಂದ ಹಿಂದೆ ಸರಿಯುತ್ತಾನೆ. ಅಂಥ ವ್ಯಕ್ತಿಯು ಯಾರನ್ನೂ ಒಪ್ಪುವುದಿಲ್ಲ. ಇಂದಿನ ಯುಗದಲ್ಲಿ ಜನರು ಸಂಪತ್ತು, ಭೂಮಿ, ಬಂಗಲೆ, ದುಬಾರಿ ಕಾರು ಹೀಗೆ ಅನೇಕ ವಿಷಯಗಳ ಬಗ್ಗೆ ಹೆಮ್ಮೆ ಪಡುತ್ತಾರೆ. ಕೆಲವರಿಗೆ ಸುಂದರವಾಗಿ ಕಾಣುವ ಅಹಂ ಇದ್ದರೆ, ಇನ್ನು ಕೆಲವರಿಗೆ ಏನೂ ಕೊರತೆ ಇಲ್ಲ ಎಂಬ ಅಹಂಕಾರವಿರುತ್ತದೆ. ಇವೆಲ್ಲದರ ಬಗ್ಗೆ ಹೆಮ್ಮೆ ಪಡುವುದು ಸಮಸ್ಯೆಯಲ್ಲ, ಆದರೆ ಅಹಂಕಾರಕ್ಕೆ ತಿರುಗಿದರೆ ಅವನತಿ ಶುರುವಾಗುತ್ತದೆ.

Worshipping Shani: ಶನಿಯನ್ನು ಪೂಜಿಸುವಾಗ ಹೀಗೆ ಮಾಡಿದ್ರೆ ಅಪಾಯ ತಪ್ಪಿದ್ದಲ್ಲ!

ದುರಾಸೆ(Greed): ಯಾವುದಕ್ಕೂ ದುರಾಸೆ ಬಹಳ ಕೆಟ್ಟ ಅಭ್ಯಾಸ. ದುರಾಸೆಯು ಮನುಷ್ಯನನ್ನು ಕೆಳಕ್ಕೆ ಎಳೆಯುತ್ತದೆ. ದುರಾಸೆಯು ಸಂತೋಷದ ಜೀವನವನ್ನು ನಾಶಪಡಿಸುತ್ತದೆ. ದುರಾಸೆಯುಳ್ಳವನು ಶ್ರಮಜೀವಿಯಲ್ಲ. ಕಷ್ಟಪಟ್ಟು ದುಡಿಯುವ ಬದಲು, ಅವರು ತಪ್ಪು ದಾರಿ ಹಿಡಿಯುತ್ತಾರೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ವ್ಯಕ್ತಿಯು ಎಂದಿಗೂ ಜೀವನದ ಸಂತೋಷವನ್ನು ಆನಂದಿಸಲು ಸಾಧ್ಯವಿಲ್ಲ. ಇದ್ದುದರಲ್ಲಿ ತೃಪ್ತಿ ಪಡುವುದನ್ನು ಕಲಿಯಬೇಕು. ದುರಾಸೆ ಇದ್ದಾಗ ನಮ್ಮ ಬಳಿ ಎಲ್ಲವೂ ಇದ್ದರೂ ಅವೆಲ್ಲವೂ ತುಚ್ಛವಾಗಿ ಕಾಣಿಸಲಾರಂಭಿಸುತ್ತದೆ. ಎಷ್ಟೇ ಒಳ್ಳೆಯದು ನಮಗೆ ದಕ್ಕಿದರೂ ಸಂತೋಷ, ನೆಮ್ಮದಿ ಸಿಗುವುದಿಲ್ಲ. 

ಅಸಹಾಯಕರ ಶೋಷಣೆ(Exploiting the poor): ಗರುಡ ಪುರಾಣದ ಪ್ರಕಾರ ಜೀವನದಲ್ಲಿ ಯಾವುದೇ ಬಡ, ಅಸಹಾಯಕರನ್ನು ಶೋಷಣೆ ಮಾಡಬಾರದು. ಅಂಥವರ ಮನೆಯಲ್ಲಿ ತಾಯಿ ಲಕ್ಷ್ಮಿ ಹೆಚ್ಚು ದಿನ ಇರುವುದಿಲ್ಲ. ಮೊದಲೇ ನೊಂದವರನ್ನು ಮತ್ತಷ್ಟು ನೋಯಿಸುವುದು ಕ್ರೂರ ಮನಸ್ಥಿತಿಯಾಗಿದೆ. ಅದನ್ನು ಮನುಷ್ಯತ್ವ ಇಲ್ಲದವರು ನಡೆದುಕೊಳ್ಳುವ ರೀತಿ. ಹಾಗೊಂದು ವೇಳೆ ನಡೆದುಕೊಂಡರೆ ಅಂಥ ವ್ಯಕ್ತಿಯ ಅವನತಿಯ ದಿನಗಳು ಹತ್ತಿರದಲ್ಲಿವೆ ಎಂದೇ ಅರ್ಥ. 

Yearly Horoscope 2023: ಕರ್ಕಾಟಕ ರಾಶಿಯ ಜನರಿಗೆ ಹೆಚ್ಚು ಏರಿಳಿತಗಳಿಲ್ಲದ ವರ್ಷ 2023

ಕೊಳಕು ಬಟ್ಟೆಗಳನ್ನು ಧರಿಸುವುದು(Wearing dirty cloths): ಗರುಡ ಪುರಾಣವು ಶುದ್ಧವಾದ ಬಟ್ಟೆಗಳನ್ನು ಧರಿಸುವುದನ್ನು ಒತ್ತಿ ಹೇಳುತ್ತದೆ. ಅನೇಕ ಜನರು ಕೊಳಕು ಬಟ್ಟೆಗಳನ್ನು ಧರಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಗರುಡ ಪುರಾಣದ ಪ್ರಕಾರ, ಯಾರು ಕೊಳಕು ಬಟ್ಟೆಗಳನ್ನು ಧರಿಸುತ್ತಾರೋ, ಪ್ರತಿನಿತ್ಯ ಸ್ನಾನ ಮಾಡುವುದಿಲ್ಲವೋ ಮತ್ತು ತಮ್ಮ ಉಗುರುಗಳನ್ನು ಕೊಳಕು ಮಾಡಿಕೊಂಡಿರುತ್ತಾರೋ, ಅವರು ಲಕ್ಷ್ಮಿ ದೇವಿಯ ಕೋಪವನ್ನು ಎದುರಿಸುತ್ತಾರೆ. ಸ್ವಚ್ಛತೆ ಇಲ್ಲದಿದ್ದಲ್ಲಿ ಬಡತನ ಆವರಿಸುತ್ತದೆ. 

Follow Us:
Download App:
  • android
  • ios