Asianet Suvarna News Asianet Suvarna News

Worshipping Shani: ಶನಿಯನ್ನು ಪೂಜಿಸುವಾಗ ಹೀಗೆ ಮಾಡಿದ್ರೆ ಅಪಾಯ ತಪ್ಪಿದ್ದಲ್ಲ!

ಮಹಿಳೆಯರು ಶನಿಯನ್ನು ಆರಾಧಿಸುವಾಗ ವಿಶೇಷವಾಗಿ ಗಮನಿಸಬೇಕಾದ ಕೆಲ ನಿಯಮಗಳಿವೆ..ಅಷ್ಟೇ ಅಲ್ಲ, ಯಾರೇ ಆಗಲಿ ಶನಿಯನ್ನು ಪೂಜಿಸುವಾಗ ಕೆಲ ವಿಷಯಗಳನ್ನು ತಿಳಿದಿರಬೇಕು.  ಅವೇನು ಎಂದು ತಿಳಿದಿದ್ದೀರಾ? 

Women should keep this in mind while worshiping Shani Dev skr
Author
First Published Dec 5, 2022, 11:05 AM IST

ಶನಿ ನ್ಯಾಯದ ದೇವರು. ಶನಿವಾರದಂದು ಅವನನ್ನು ಪೂಜಿಸುವುದರಿಂದ, ವ್ಯಕ್ತಿಯು ಶನಿಯ ಮಹಾದಶಾ, ಧೈಯಾ ಮತ್ತು ಸಾಡೇಸಾತಿಯಿಂದ ಮುಕ್ತಿಯ ಮಾರ್ಗವನ್ನು ಪಡೆಯುತ್ತಾನೆ. ಶನಿಯನ್ನು ಕ್ರೂರ ಗ್ರಹವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಅವನನ್ನು ಪೂಜಿಸುವಲ್ಲಿ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರು, ಶನಿದೇವನ ಪೂಜೆ ಮಾಡುವಾಗ ವಿಶೇಷ ಕಾಳಜಿ ವಹಿಸಬೇಕು. ಶನಿ ಆರಾಧನೆಯ ನಿಯಮಗಳನ್ನು ತಿಳಿಯೋಣ..

  • ಮಹಿಳೆಯರು ಶನಿದೇವನ ವಿಗ್ರಹ(Idol of Shani dev)ವನ್ನು ಮುಟ್ಟಬಾರದು ಅಥವಾ ಎಣ್ಣೆಯನ್ನು ಅರ್ಪಿಸಬಾರದು. ಧರ್ಮಗ್ರಂಥಗಳಲ್ಲಿ ಮಹಿಳೆಯರು ಇದನ್ನು ಮಾಡುವುದು ಅಶುಭವೆಂದು ಪರಿಗಣಿಸಲಾಗಿದೆ. ಈ ಕಾರಣದಿಂದಾಗಿ, ನೀವು ಶನಿ ದೇವನ ಕೋಪವನ್ನು ಎದುರಿಸಬೇಕಾಗಬಹುದು.
  • ಪೂಜೆ ಮಾಡುವಾಗ ಮಹಿಳೆಯರು ಶನಿ ದೇವರನ್ನು ನೇರವಾಗಿ ನೋಡಬಾರದು. ನಿಮ್ಮ ಕಣ್ಣುಗಳನ್ನು ಕೆಳಗೆ ಇರಿಸಿ ಪೂಜೆ ಮಾಡಿ. ಶನಿಯ ದೃಷ್ಟಿಯನ್ನು ನೇರ ಎದುರಿಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಹಾಗೆ ಮಾಡುವುದರಿಂದ ಕೆಟ್ಟ ಪರಿಣಾಮಗಳಿಗೆ ಕಾರಣವಾಗಬಹುದು.

    Yearly Horoscope 2023: ಕರ್ಕಾಟಕ ರಾಶಿಯ ಜನರಿಗೆ ಹೆಚ್ಚು ಏರಿಳಿತಗಳಿಲ್ಲದ ವರ್ಷ 2023
     
  • ಧರ್ಮಗ್ರಂಥಗಳ ಪ್ರಕಾರ, ಶನಿದೇವನ ವಿಗ್ರಹಕ್ಕೆ ಎಣ್ಣೆಯನ್ನು ಅರ್ಪಿಸುವುದನ್ನು ಮಹಿಳೆಯರಿಗೆ ನಿಷೇಧಿಸಲಾಗಿದೆ. ಶನಿಯನ್ನು ಮೆಚ್ಚಿಸಲು, ಮಹಿಳೆಯರು ಅಶ್ವತ್ಥ ಮರ(Peepal tree)ದ ಕೆಳಗೆ ಎಣ್ಣೆ ದೀಪವನ್ನು ಇಡಬಹುದು.
  • ಹಿಂದೂ ಧರ್ಮದಲ್ಲಿ ಪೂರ್ವಾಭಿಮುಖವಾಗಿ ದೇವರನ್ನು ಪೂಜಿಸುವುದು ಸೂಕ್ತ. ಆದರೆ ಶನಿ ದೇವನನ್ನು ಪಶ್ಚಿಮ ದಿಕ್ಕಿನ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಅವರನ್ನು ಈ ದಿಕ್ಕಿಗೆ ಮುಖ ಮಾಡಿ ಪೂಜಿಸಬೇಕು.
  • ಶನಿ ದೇವರ ಪೂಜೆಯಲ್ಲಿ ಕೆಂಪು ಬಣ್ಣದ ಹೂವುಗಳನ್ನು ಬಳಸಬಾರದು. ಧಾರ್ಮಿಕ ನಂಬಿಕೆಗಳ ಪ್ರಕಾರ, ಕೆಂಪು ಬಣ್ಣವು ಮಂಗಳವನ್ನು ಸಂಕೇತಿಸುತ್ತದೆ ಮತ್ತು ಮಂಗಳ ಮತ್ತು ಶನಿಯು ಶತ್ರುಗಳಾಗಿರುವುದರಿಂದ ಈ ಬಣ್ಣದ ಹೂವುಗಳನ್ನು ಶನಿಗೆ ಅರ್ಪಿಸಲಾಗುವುದಿಲ್ಲ. 
  • ಶನಿದೇವನ ಪೂಜೆಯ ಸಮಯದಲ್ಲಿ ತಾಮ್ರದ ಪಾತ್ರೆಗಳನ್ನು ಬಳಸಬಾರದು. ತಾಮ್ರವು ಸೂರ್ಯದೇವನಿಗೆ ಸಂಬಂಧಿಸಿದೆ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಶನಿ ದೇವನು ಅವನ ತಂದೆ ಸೂರ್ಯನೊಂದಿಗೆ ಶತ್ರುತ್ವ ಹೊಂದಿದ್ದಾನೆ. ಶನಿ ದೇವರ ಪೂಜೆಯಲ್ಲಿ ಕಬ್ಬಿಣದ ಪಾತ್ರೆಗಳನ್ನೇ ಯಾವಾಗಲೂ ಬಳಸಬೇಕು.
  • ಶನಿ ದೇವರಿಗೆ ಕಪ್ಪು ವಸ್ತುಗಳು ತುಂಬಾ ಪ್ರಿಯವೆಂದು ನಂಬಲಾಗಿದೆ. ಆದ್ದರಿಂದ ಅವನ ಪೂಜೆಯಲ್ಲಿ ಬಿಳಿ ಎಳ್ಳನ್ನು ಎಂದಿಗೂ ಬಳಸಬಾರದು. ಶನಿ ದೇವರಿಗೆ ಕಪ್ಪು ಎಳ್ಳನ್ನು ಅರ್ಪಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.
  • ಮಹಿಳೆಯರು ಶನಿ ದೇವಸ್ಥಾನದಲ್ಲಿ ಶನಿ ಚಾಲೀಸಾ(Shani Chalisa)ವನ್ನು ಪಠಿಸಬೇಕು. ಶನಿ ದೇವನನ್ನು ಪೂಜಿಸಲು ಇದು ಸರಳ ಮಾರ್ಗವಾಗಿದೆ. ಶನಿಯನ್ನು ನಿಜವಾದ ಮನಸ್ಸಿನಿಂದ ಸ್ಮರಿಸಿದಾಗ, ಪ್ರತಿ ಕಷ್ಟದ ಕ್ಷಣವೂ ದೂರ ಹೋಗುತ್ತದೆ.

    ಸೂರ್ಯನ ಮಕರ ಸಂಕ್ರಮಣ; ಹೊಸ ವರ್ಷಾರಂಭದಲ್ಲಿ 3 ರಾಶಿಗಳಿಗೆ ಹಠಾತ್ ಲಾಭ
     
  • ಶನಿವಾರದಂದು ಮಹಿಳೆಯರಿಗೆ ಸಾಸಿವೆ ಎಣ್ಣೆ, ಕಪ್ಪು ಬಟ್ಟೆ, ಕಪ್ಪು ಬೂಟುಗಳು, ಕಬ್ಬಿಣದ ಪಾತ್ರೆಗಳು, ಕಪ್ಪು ಉಂಡೆ, ಕಪ್ಪು ಎಳ್ಳು ಮುಂತಾದ ಶನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಿ. ಇದು ಶನಿ ದೋಷವನ್ನು ಶಮನಗೊಳಿಸುತ್ತದೆ. ಸಾಡೇಸಾತಿ ಮತ್ತು ಧೈಯಾಗಳ ಅಶುಭ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. 
  • ಮಹಿಳೆಯರ ಜಾತಕದಲ್ಲಿ ಶನಿಯ ಮಹಾದಶಾ ನಡೆಯುತ್ತಿದ್ದರೆ ಶನಿವಾರದಂದು ಅಶ್ವತ್ಥ ಮರದ ಕೆಳಗೆ ಎಣ್ಣೆಯ ದೀಪವನ್ನು ಹಚ್ಚಬೇಕು. ಇದರಿಂದ ಶನಿ ದೋಷ ಶಮನವಾಗುತ್ತದೆ.
  • ಶನಿದೇವನ ಅಶುಭವನ್ನು ಹೋಗಲಾಡಿಸಲು, ಮಹಿಳೆಯರು ಸಾಸಿವೆ ಎಣ್ಣೆಯಲ್ಲಿ ನೆನೆಸಿದ ಬ್ರೆಡ್ ಅಥವಾ ಚಪಾತಿಯನ್ನು ಕಪ್ಪು ನಾಯಿಗೆ ತಿನ್ನಬೇಕು. ಹೀಗೆ ಮಾಡುವುದರಿಂದ ಶನಿಯ ಮಹಾದಶಾ ಬಾಧಿಸುವುದಿಲ್ಲ.
  • ಅಸಹಾಯಕ ವ್ಯಕ್ತಿಗೆ ಸಹಾಯ ಮಾಡುವ ಮೂಲಕ ಶನಿ ದೇವ ಶೀಘ್ರದಲ್ಲೇ ಸಂತಸಗೊಳ್ಳುತ್ತಾನೆ. ಮಹಿಳೆಯರು ಈ ಕ್ರಮಗಳನ್ನು ಕೈಗೊಂಡರೆ ಆರ್ಥಿಕ ಮತ್ತು ದೈಹಿಕ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.
Follow Us:
Download App:
  • android
  • ios