Asianet Suvarna News Asianet Suvarna News

ಚಾಣಕ್ಯ ನೀತಿ: ಯಶಸ್ಸು ಬೇಕಂದ್ರೆ ಈ ಮಾತುಗಳನ್ನು ಮರೆಯಬೇಡಿ!

ಜೀವನದಲ್ಲಿ ಯಶಸ್ಸು ಬೇಕೆಂದರೆ ಏನು ಮಾಡಬೇಕು, ಯಶಸ್ಸಿನ ಗುಟ್ಟುಗಳೇನು ಎಂಬುದು ಆಚಾರ್ಯ ಚಾಣಕ್ಯ ಅವರ ಈ ಐದು ಪದ್ಯಗಳಲ್ಲಿ ಅಡಕವಾಗಿವೆ.

The secret of lifes success is hidden in these 5 verses of Chanakya skr
Author
Bangalore, First Published Jul 6, 2022, 11:46 AM IST | Last Updated Jul 6, 2022, 11:46 AM IST

ಚಾಣಕ್ಯ ನೀತಿ(Chanakya Neeti)ಯ ಪ್ರಕಾರ, ಪ್ರತಿಯೊಬ್ಬ ಮನುಷ್ಯನು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಬಯಸುತ್ತಾನೆ. ಸುಖ, ಸಮೃದ್ಧಿ, ಸಂಪತ್ತು ಮತ್ತು ವೈಭವದ ಅಧಿದೇವತೆಯಾದ ಲಕ್ಷ್ಮಿಯ ಆಶೀರ್ವಾದ ತಮ್ಮ ಮೇಲೆ ಸದಾ ಇರಲಿ ಎಂಬುದು ಎಲ್ಲರ ಆಶಯ. ಭಾರತದ ಅತ್ಯುತ್ತಮ ವಿದ್ವಾಂಸರಲ್ಲಿ ಒಬ್ಬರಾಗಿ ಚಾಣಕ್ಯರನ್ನು ಪರಿಗಣಿಸಲಾಗಿದೆ. ಆಚಾರ್ಯ ಚಾಣಕ್ಯ(Acharya Chanakya)ರ ಚಾಣಕ್ಯ ನೀತಿಯ ಈ ಶ್ಲೋಕಗಳು ಬಹಳ ಮುಖ್ಯವಾದುದು. ಅವು ಜೀವನದಲ್ಲಿ ಯಶಸ್ಸು ಪಡೆಯುವುದು ಹೇಗೆಂದು ತಿಳಿಸುತ್ತವೆ. 

ಅಧಿತ್ಯೇದಂ ಯಥಾ ಶಾಸ್ತ್ರಂ ನರೋ ಜಾನಾತಿ ಸತ್ತಮಾಃ ।
ಈ ಉಪದೇಶಗಳು ಪ್ರಸಿದ್ಧವಾಗಿವೆ.

ಚಾಣಕ್ಯ ನೀತಿಯ ಈ ಶ್ಲೋಕವು ಶಾಸ್ತ್ರಗಳ ನಿಯಮಗಳನ್ನು ನಿರಂತರವಾಗಿ ಅಭ್ಯಾಸ ಮಾಡುವ ಮೂಲಕ ಶಿಕ್ಷಣವನ್ನು ಪಡೆಯುವವನು ಸರಿ, ತಪ್ಪು ಮತ್ತು ಶುಭ ಕಾರ್ಯಗಳ ಜ್ಞಾನವನ್ನು ಪಡೆಯುತ್ತಾನೆ. ಅಂಥ ವ್ಯಕ್ತಿಯು ಅತ್ಯುತ್ತಮ ಜ್ಞಾನವನ್ನು ಹೊಂದಿರುತ್ತಾನೆ. ಅಂದರೆ, ಅಂಥ ಜನರು ಜ್ಞಾನದ ಮುಖೇನ ಜೀವನದಲ್ಲಿ ಅಪಾರ ಯಶಸ್ಸನ್ನು ಸಾಧಿಸುತ್ತಾರೆ.

ಪದುಷ್ಟಭಾರ್ಯಾ ಶತಂ ಮಿತ್ರಾ ಭೃತ್ಯಷ್ಟೋತ್ತರದಯಃ ।
ಸುರ್ಪೇ ಚ್ ಗೃಹೇ ವಾಸೋ ಮೃತ್ರೇವ ನಹಿ ಸಂದೇಹ ।।

ಚಾಣಕ್ಯ ನೀತಿಯ ಈ ಶ್ಲೋಕವು ದುಷ್ಟ ಹೆಂಡತಿ, ಸುಳ್ಳು ಸ್ನೇಹಿತ, ಮೋಸದ ಸೇವಕ ಮತ್ತು ಹಾವಿನೊಂದಿಗೆ ಎಂದಿಗೂ ಬದುಕಬಾರದು. ಇದು ಸಾವನ್ನು ಅಪ್ಪಿಕೊಳ್ಳುವಂತೆಯೇ ಇರುತ್ತದೆ ಎಂದು ಹೇಳುತ್ತದೆ.

ದಾಂಪತ್ಯ ಜಗಳ ನಿವಾರಿಸುವ ಜೊತೆಗೆ ಐಶಾರಾಮಿ ಜೀವನ ತಂದುಕೊಡುವ ಬಳೆಗಳು!

ಆಪ್ತಾರ್ಥೇ ಧನಂ ರಕ್ಖೇದ್ದರಾನ್ ರಕ್ಷೇಧ್ನೈರಪಿ ।
ನಾತ್ಮಾನಂ ನಿರಂತರಂ ರಕ್ಖೇದ್ದರೈರ್ಪಿ ಧನೈರ್ಪಿ ।

ಚಾಣಕ್ಯ ನೀತಿಯ ಪ್ರಕಾರ, ಬರಲಿರುವ ತೊಂದರೆಗಳನ್ನು ತಪ್ಪಿಸಲು ಹಣವನ್ನು ಉಳಿಸಬೇಕು. ಸಂಪತ್ತನ್ನು ತ್ಯಾಗ ಮಾಡಿಯಾದರೂ ಪತ್ನಿಯನ್ನು ರಕ್ಷಿಸಬೇಕು. ಆದರೆ ಆತ್ಮದ ರಕ್ಷಣೆಯ ವಿಷಯಕ್ಕೆ ಬಂದರೆ, ಅವನು ಸಂಪತ್ತು ಮತ್ತು ಹೆಂಡತಿ ಎರಡನ್ನೂ ಅತ್ಯಲ್ಪವೆಂದು ಪರಿಗಣಿಸಬೇಕು.

ಯಸ್ಮಿನ್ ದೇಶೇ ನ ಸಮ್ನೋ ನ ವೃತ್ತಾರ್ಣಾ ಚ ಬಾನ್ಧವಃ ॥
ನ ಚ ವಿಧಾಗ್ ಮೋಕ್ಷಪಸ್ತಿ ವಾಸಸ್ತಸ್ತ್ರ್ ನ ಕಾರ್ಯೇತ್

ಚಾಣಕ್ಯ ನೀತಿಯ ಈ ಶ್ಲೋಕವು ಗೌರವವಿಲ್ಲದ ದೇಶದಲ್ಲಿ ಬದುಕಬಾರದು ಎಂದು ಹೇಳಲು ಪ್ರಯತ್ನಿಸುತ್ತದೆ. ಉದ್ಯೋಗಾವಕಾಶಗಳಿಲ್ಲದ ಜಾಗದಿಂದ ಹೊರ ಹೋಗಬೇಕು. ನಿಮಗೆ ಸ್ನೇಹಿತರಿಲ್ಲದಿದ್ದರೂ ಮನುಷ್ಯರು ಅಲ್ಲಿ ವಾಸಿಸಬಾರದು. ಜ್ಞಾನವಿಲ್ಲದ ಸ್ಥಳವನ್ನು ಸಹ ತ್ಯಜಿಸಬೇಕು ಎಂಬುದು ಈ ಶ್ಲೋಕಾರ್ಥವಾಗಿದೆ.

ಜಾನಿಯಾತ್ ಪ್ರೇಶಣೇ ಬೃತ್ಯಾರ್ನೂ  ಬಾಂಧವಾನ್ ವ್ಯಸನಾಗಮೇ
ಮಿತ್ರಾ ಚಾಪ್ತಿಕಾಲೇ ತು ಭಾರ್ಯಾನ್ ಚ ವಿಭಾಕ್ಷಯೇ ॥

ಚಾಣಕ್ಯ ನೀತಿಯ ಈ ಶ್ಲೋಕದ ಪ್ರಕಾರ, ಕೆಟ್ಟ ಸಮಯ ಬಂದಾಗ ಸೇವಕನ ಪರೀಕ್ಷೆಯನ್ನು ಮಾಡಲಾಗುತ್ತದೆ. ಸಂಬಂಧಿಕರು ತೊಂದರೆಯಲ್ಲಿದ್ದಾಗ ಅವರನ್ನು ಪರೀಕ್ಷಿಸಲಾಗುತ್ತದೆ. ಬಿಕ್ಕಟ್ಟಿನ ಸಮಯದಲ್ಲಿ ಸ್ನೇಹಿತರನ್ನು ಪರೀಕ್ಷಿಸಲಾಗುತ್ತದೆ. ಆಪತ್ತು ಬಂದಾಗ ಹೆಂಡತಿಯನ್ನು ಪರೀಕ್ಷಿಸಲಾಗುತ್ತದೆ.

ಇನ್ನೈದು ದಿನದಲ್ಲಿ ಚಾತುರ್ಮಾಸ ಆರಂಭ, ನೀವೇನು ಮಾಡಬೇಕು?

ಕಹ್ ಕಾಲಾ ಕಹಿ ಮಿತ್ರಾನಿ ಕೊ ದೇಸಾ ಕೌ ವ್ಯಯಾಗಮೌ
ಕಶ್ಚಾಹಂ ಕಾ ಕ ಮೇ ಸಕ್ತಿರೀತಿ ಸಿಂತ್ಯಾ ಮುಹುರ್ಮುಹು॥

ಈ ಕೆಳಗಿನವುಗಳನ್ನು ಮತ್ತೆ ಮತ್ತೆ ಪರಿಗಣಿಸಿ: ಸರಿಯಾದ ಸಮಯ, ಸರಿಯಾದ ಸ್ನೇಹಿತರು, ಸರಿಯಾದ ಸ್ಥಳ, ಸರಿಯಾದ ಆದಾಯದ ವಿಧಾನಗಳು, ಸರಿಯಾದ ಖರ್ಚು ಮಾಡುವ ವಿಧಾನಗಳು ಮತ್ತು ನಿಮ್ಮ ಶಕ್ತಿಯನ್ನು ಯಾರಿಂದ ಪಡೆಯುತ್ತೀರಿ ಎಂಬುದನ್ನು ಸದಾ ಪುನರ್ವಿಮರ್ಶೆಗೆ ಹಾಕಬೇಕು ಎನ್ನುತ್ತಾರೆ ಚಾಣಕ್ಯ.

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios