ಸದ್ಗುರು ನೇತೃತ್ವದ ಈಶ ಫೌಂಡೇಶನ್‌ ಇದೀಗ ಉತ್ತರ ಪ್ರದೇಶದ ನೊಯ್ಡಾದಲ್ಲಿರುವ ವಿಮಾನ ನಿಲ್ದಾಣದ ಬಳಿ ಬರೋಬ್ಬರಿ 242 ಅಡಿ ಎತ್ತರದ ಬೃಹತ್‌ ಆದಿಯೋಗಿ ಶಿವನ ಪ್ರತಿಮೆ ಸ್ಥಾಪಿಸಲು ಯೋಜಿಸಿದೆ. 

ನೋಯ್ಡಾ: ಸದ್ಗುರು ನೇತೃತ್ವದ ಈಶ ಫೌಂಡೇಶನ್‌ ಇದೀಗ ಉತ್ತರ ಪ್ರದೇಶದ ನೊಯ್ಡಾದಲ್ಲಿರುವ ವಿಮಾನ ನಿಲ್ದಾಣದ ಬಳಿ ಬರೋಬ್ಬರಿ 242 ಅಡಿ ಎತ್ತರದ ಬೃಹತ್‌ ಆದಿಯೋಗಿ ಶಿವನ ಪ್ರತಿಮೆ ಸ್ಥಾಪಿಸಲು ಯೋಜಿಸಿದೆ. ಈ ಯೋಜನೆಗೆ ಈಗಾಗಲೇ ನಾಗರಿಕ ವಿಮಾನಯಾನ ಸಚಿವಾಲಯವು ತಾತ್ವಿಕ ಅನುಮೋದನೆಯನ್ನು ನೀಡಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿಮೆ ಸ್ಥಾಪನೆ ಅದಕ್ಕೆ ಸಂಬಂಧಿಸಿದ ಇತರ ಸೌಲಭ್ಯಗಳಿಗಾಗಿ ನೋಯ್ಡಾ ಸೆಕ್ಟರ್- 23ಡಿ ಯಲ್ಲಿನ ಅಮರಪುರ್ ಪಾಲಕಾ ಗ್ರಾಮದ ಬಳಿ ಒಟ್ಟು 200 ಎಕರೆ ಭೂಮಿಗಾಗಿ ಇಶಾ ಫೌಂಡೇಶನ್‌, ಸ್ಥಳೀಯ ಯಮುನಾ ಪ್ರಾಧಿಕಾರದ ಬಳಿ ವಿನಂತಿಸಿದೆ. ಸದ್ಯ ಕರ್ನಾಟಕದ ಚಿಕ್ಕಬಳ್ಳಾಪುರ ಮತ್ತು ಕೇರಳದ ಕೊಯಮತ್ತೂರುಗಳಲ್ಲಿ ತಲಾ 1 ಸೇರಿ ಇಶಾ ಫೌಂಡೇಶನ್‌ ಎರಡು ಆದಿಯೋಗಿ ಪ್ರತಿಮೆ ಸ್ಥಾಪಿಸಿದೆ. ಇವು ಸ್ಥಳೀಯವಾಗಿ ಉತ್ತಮ ಪ್ರವಾಸಿ ತಾಣಗಳಾಗಿ ಹೊರಹೊಮ್ಮಿವೆ. ಇವುಗಳ ಬಳಿ ಇಶಾ ನಿರ್ಮಾಣ ಮಾಡಲಿರುವ ಮೂರನೇ ಆದಿಯೋಗಿ ಪ್ರತಿಮೆ ಇದಾಗಿರಲಿದೆ.

ಟೊಪ್ಪಿಗೆ, ಪೇಟವಿಲ್ಲದ ಸದ್ಗುರು ವಾಸುದೇವ್ ನೋಡಿದ್ದೀರಾ? ಇಲ್ಲಿವೆ ನೋಡಿ ಸರಳತೆಯ ಫೊಟೋಗಳು

₹29 ಬೆಲೆಯ 'ಭಾರತ್‌ ಅಕ್ಕಿ' ಮಾರಾಟಕ್ಕೆ ದೇಶಾದ್ಯಂತ ಚಾಲನೆ

ನವದೆಹಲಿ: ಕೇಂದ್ರ ಸರ್ಕಾರದ ಭಾರತ್‌ ಅಕ್ಕಿಗೆ ಸೋಮವಾರ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪಿಯೂಷ್‌ ಗೋಯಲ್‌ ಚಾಲನೆ ನೀಡಿದರು. ಭಾರತ್‌ ಅಕ್ಕಿ ಅಡಿಯಲ್ಲಿ ಕೇಂದ್ರ ಸರ್ಕಾರ ಜನರಿಗೆ ಕೇಜಿಗೆ 29 ರು.ನಂತೆ ಮಾರಾಟ ಮಾಡಲಿದೆ. ಭಾರತ ಆಹಾರ ನಿಗಮ 5 ಲಕ್ಷ ಟನ್‌ ಅಕ್ಕಿ ನೀಡಲಿದ್ದು, ನ್ಯಾಫೆಡ್‌ ಹಾಗೂ ಎನ್‌ಸಿಸಿಎಫ್‌ ಪ್ಯಾಕ್‌ ಮಾಡಿ 5 ಹಾಗೂ 10 ಕೇಜಿ ತೂಕದ ಬ್ಯಾಗಿನಲ್ಲಿ ಕೇಂದ್ರ ಮಾರಲಿದೆ. ಜೊತೆಗೆ 100 ಮೊಬೈಲ್‌ ವಾಹನಗಳಲ್ಲಿ ಮಾರಾಟವಾಗಲಿದೆ.

ಸದ್ಗುರು ಜಗ್ಗಿ ವಾಸುದೇವ್‌ ಬಳಿಗೆ ಸಮಂತಾ ರುತ್‌ ಪ್ರಭು ಪದೆ ಪದೇ ಹೋಗುವುದೇಕೆ?

ಚಾಲನೆ ನೀಡಿ ಮಾತನಾಡಿದ ಗೋಯಲ್‌,‘ ಈ ಹಿಂದೆ ಕೇಂದ್ರ ಸರ್ಕಾರ ಗೋಧಿ, ಕಡಲೆ ಹಾಗೂ ಬೇಳೆ ಮೇಲಿನ ಬೆಲೆಯನ್ನು ನಿಯಂತ್ರಿಸಲು ಭಾರತ್‌ ಅಟ್ಟಾ, ಚನ್ನಾ ಹಾಗೂ ದಾಲ್‌ ಮಾರಾಟ ಮಾಡಿತ್ತು. ಇದು ಯಶಸ್ವಿಯಾದ ಬಳಿಕ ಇದೀಗ ಭಾರತ್‌ ಅಕ್ಕಿ ಮಾರಾಟ ಮಾಡುತ್ತಿದೆ. ಇದರಿಂದಾಗಿ ದೇಶದಲ್ಲಿ ಅಕ್ಕಿಯ ಬೆಲೆ ಇಳಿಕೆಯಾಗಲಿದೆ ಎಂದು ಹೇಳಿದರು.